DK Brothers: ಸಿದ್ದರಾಮೋತ್ಸವ ಬಳಿಕ ಅಖಾಡಕ್ಕಿಳಿದ ಅಣ್ತಮ್ಮಾಸ್! ಒಂದೇ ಕಲ್ಲಿಗೆ 2 ಹಕ್ಕಿ

ಡಿಕೆ ಶಿವಕುಮಾರ್ ಸ್ವಾತಂತ್ರ್ಯ ಅಮೃತ ಮಹೋತ್ಸವ ಹೆಸರಲ್ಲಿ ಬೆಂಗಳೂರಲ್ಲಿ ಬೃಹತ್ ರ್ಯಾಲಿ ನಡೆಸಲು ತೀರ್ಮಾನಿಸಿದ್ದಾರಂತೆ. ಸುಮಾರು 1 ಲಕ್ಷ ಜನರನ್ನಾದರೂ ಸೇರಿಸಿ ಶಕ್ತಿ ಪ್ರದರ್ಶನ ಮಾಡೋದಕ್ಕೆ ಸಿದ್ಧತೆ ನಡೆಸಿದ್ದಾರಂತೆ.

ಸಿದ್ದರಾಮಯ್ಯ ಹುಟ್ಟುಹಬ್ಬದಲ್ಲಿ ಡಿಕೆಶಿ

ಸಿದ್ದರಾಮಯ್ಯ ಹುಟ್ಟುಹಬ್ಬದಲ್ಲಿ ಡಿಕೆಶಿ

  • Share this:
ಬೆಂಗಳೂರು: ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕ (Opposition Party Leader) ಸಿದ್ದರಾಮಯ್ಯ (Siddaramaiah) ಅವರ 75ನೇ ವರ್ಷದ ಹುಟ್ಟುಹಬ್ಬ (Birthday) ಅದ್ಧೂರಿಯಾಗಿ ಮುಗಿದಿದೆ. ಪಕ್ಷದ ಹಲವರ ಅಸಮಾಧಾನದ ನಡುವೆ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ (Siddaramotsava) ಹೆಸರಲ್ಲಿ ಹುಟ್ಟುಹಬ್ಬ ನಡೆದಿದ್ದು, ಬಿಜೆಪಿ ಇದನ್ನು ಚುನಾವಣಾ ರಣೋತ್ಸಾಹ ಅಂತಾನೇ ಭಾವಿಸಿದೆ. ಮತ್ತೊಂದೆಡೆ ಇದು ಸಿದ್ದರಾಮಯ್ಯರ ಶಕ್ತಿ ಪ್ರದರ್ಶನ ಅಂತಾ ವಿಶ್ಲೇಷಿಸಲಾಗಿದೆ. ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ (BJP) ಬೃಹತ್ ಸಮಾವೇಶಕ್ಕೂ ಪ್ಲಾನ್ ನಡೆಸಿದೆ. ಈ ನಡುವೆ ಸಿದ್ದರಾಮೋತ್ಸವದ ಯಶಸ್ಸು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ (DK Shivakumar) ನುಂಗಲಾರದ ತುತ್ತಾಗಿದೆ. ಹಾಗಾಗಿ ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆದು, ತಾವೊಂದು ಬೃಹತ್ ರ್ಯಾಲಿ ನಡೆಸಲು ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.

ಡಿಕೆ ಶಿವಕುಮಾರ್ ಸ್ವಾತಂತ್ರ್ಯ ಅಮೃತ ಮಹೋತ್ಸವ ಹೆಸರಲ್ಲಿ ಬೆಂಗಳೂರಲ್ಲಿ ಬೃಹತ್ ರ್ಯಾಲಿ ನಡೆಸಲು ತೀರ್ಮಾನಿಸಿದ್ದಾರಂತೆ. ಸುಮಾರು 1 ಲಕ್ಷ ಜನರನ್ನಾದರೂ ಸೇರಿಸಿ ಶಕ್ತಿ ಪ್ರದರ್ಶನ ಮಾಡೋದಕ್ಕೆ ಸಿದ್ಧತೆ ನಡೆಸಿದ್ದಾರಂತೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ!

ಸಿದ್ದರಾಮೋತ್ಸವದಲ್ಲಿ ಡಿಕೆಶಿ ಎಲ್ಲಾ ಅಸಮಾಧಾನ ಮರೆತು ಭಾಗಿಯಾದರೂ ಕೂಡ ಅದರ ಬೇಗುದಿ ಒಳಗಿದೆ. ಅದಕ್ಕಾಗಿ ಈಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಡಿಕೆ ಬ್ರದರ್ಸ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಬೆಂಗಳೂರಿನಲ್ಲಿ ಪಾದಯಾತ್ರೆ ಆಯೋಜನೆ ಮಾಡೋದು ಅವರ ಪ್ಲಾನ್ ಆಗಿದೆ.

Siddaramotsava effect Dk Brothers rally plan at Bengaluru BBMP target
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ


ಬೆಂಗಳೂರಿನಲ್ಲಿ ಅಣ್ತಮ್ಮಾಸ್​ ಪಾದಯಾತ್ರೆ!

ಪಾದಯಾತ್ರೆ ನೆಪದಲ್ಲಿ ಪಕ್ಷ ಸಂಘಟನೆ ಮಾಡಲು ನೇರವಾಗಿ ಡಿಕೆ ಬ್ರದರ್ಸ್ ಅಖಾಡಕ್ಕಿಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಚಿಂತಿಸಿದ್ದಾರೆ ಎನ್ನಲಾಗಿದೆ. ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಮುಖ್ಯ ಎಂದು ಸಂದೇಶ ಸಾರುವ ತಂತ್ರಗಾರಿಕೆ ಇದಾಗಿದೆ.

ಸರಣಿ ಸಭೆಯಲ್ಲಿ ಡಿ.ಕೆ. ಬ್ರದರ್ಸ್!

ಇಂದು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್​​ ಸರಣಿ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಶಾಸಕರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್​​ ಅಧಿಕಾರದಲ್ಲಿ ಇಲ್ಲದ ಕ್ಷೇತ್ರಗಳಲ್ಲಿ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಚಿಂತನೆ ನಡೆದಿದೆ.

ಇದನ್ನೂ ಓದಿ: ದಯಮಾಡಿ ಬಿಜೆಪಿ, ಜೆಡಿಎಸ್​ಗೆ ಮತ ಹಾಕಬೇಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಪಾದಯಾತ್ರೆ!

ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಬಸವನಗುಡಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಡಿಕೆ ಬ್ರದರ್ಸ್ ಸಭೆ ಮಾಡಲಿದ್ದು ಈ ಕ್ಷೇತ್ರಗಳಲ್ಲಿ ಮೀಟಿಂಗ್ ಮಾಡಿ, ಅಮೃತ ಮಹೋತ್ಸವ ಪಾದಯಾತ್ರೆಗೆ ಹೆಚ್ಚಿನ ಜನ ಸೇರಿಸುವ ಯೋಚನೆ ಇದಾಗಿದೆ.

Siddaramotsava effect Dk Brothers rally plan at Bengaluru BBMP target
ಡಿ.ಕೆ. ಶಿವಕುಮಾರ್


ಕಾಂಗ್ರೆಸ್​ ಅಧಿಕಾರದಲ್ಲಿ ಇಲ್ಲದ ಕ್ಷೇತ್ರದಲ್ಲಿ ಅಖಾಡಕ್ಕಿಳಿದ್ರೆ, ಈ ಕ್ಷೇತ್ರದಿಂದ ಹೆಚ್ಚಿನ ಜನ ಬರ್ತಾರೆ ಎಂಬ ಲೆಕ್ಕಾಚಾರ ಡಿಕೆಶಿಯದ್ದು. ಒಂದೆಡೆ ಪಾದಯಾತ್ರೆ ಸಕ್ಸಸ್ ಮಾಡಿ, ನಾವು ಪಕ್ಷ ಪೂಜೆ ಮಾಡುವವರು ಎಂಬ ಸಂದೇಶ ರವಾನಿಸೋದು. ಮತ್ತೊಂದೆಡೆ ಕಾಂಗ್ರೆಸ್ ಶಾಸಕರು ಇಲ್ಲದ ಕ್ಷೇತ್ರಗಳಿಗೆ ಲಗ್ಗೆ, ಪಕ್ಷ ಸಂಘಟನೆ ಮಾಡಿ ಮತ್ತಷ್ಟು ಹಿಡಿತ ಹೆಚ್ಚಿಸಿಕೊಳ್ಳುವುದು.

ಇದನ್ನೂ ಓದಿ: ವಕ್ಫ್ ಬೋರ್ಡ್ ಅರ್ಜಿ ವಜಾ; ಈದ್ಗಾ ಮೈದಾನ ಸರ್ಕಾರದ ಆಸ್ತಿ ಎಂದು ಆದೇಶ

ಬಿಬಿಎಂಪಿ ಚುನಾವಣೆ ಮೇಲೆ ಡಿಕೆ ಕಣ್ಣು!

ಬೆಂಗಳೂರಿನಲ್ಲಿ ಕಾಂಗ್ರೆಸ್ ಬಲಪಡಿಸಲು ಡಿಕೆ ಸಹೋದರರು ಸಿದ್ಧತೆ ನಡೆಸ್ತಿದ್ದಾರೆ. ಕಾಂಗ್ರೆಸ್ ಶಾಸಕರಿಲ್ಲದ ಕಡೆ ಪಕ್ಷ ಸಂಘಟನೆ ಮಾಡೋದು ಡಿಕೆ ಪ್ಲಾನ್. ಬಿಬಿಎಂಪಿ ಚುನಾವಣೆಗೂ ಪಕ್ಷ ಬಲಗೊಳ್ಳಬೇಕು. ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೂ ತಯಾರಿ ನಡೆಯಬೇಕು ಅಂತಾ ಕಾರ್ಯಕರ್ತರಿಗೆ ಡಿಕೆ ಹೇಳಿದ್ದಾರೆ.

ನಾಳೆಯೂ ಡಿಕೆ ಬ್ರದರ್ಸ್​ ಸಭೆ

ಡಿಕೆಶಿ ಬೆಂಗಳೂರಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಂಚರಿಸ್ತಿದ್ದಾರೆ. ನಾಳೆ ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಂ, ಯಲಹಂಕ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಸರಣಿ ಸಭೆ ನಡೆಸಲಿದ್ದಾರೆ.
Published by:Thara Kemmara
First published: