• Home
  • »
  • News
  • »
  • bengaluru-urban
  • »
  • ಮುಸಲ್ಮಾನ ಗೂಂಡಾಗಳಿಂದಲೇ ಕಾರ್ಯಕರ್ತನ ಕೊಲೆ, ಡಿಕೆಶಿ ಹೇಳಿಕೆಯೇ ಇವರಿಗೆ ಕುಮ್ಮಕ್ಕು: Minister KS Eshwarappa

ಮುಸಲ್ಮಾನ ಗೂಂಡಾಗಳಿಂದಲೇ ಕಾರ್ಯಕರ್ತನ ಕೊಲೆ, ಡಿಕೆಶಿ ಹೇಳಿಕೆಯೇ ಇವರಿಗೆ ಕುಮ್ಮಕ್ಕು: Minister KS Eshwarappa

ಮೃತ ಯುವಕ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ

ಮೃತ ಯುವಕ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗದಲ್ಲಿ ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ.  ಕೊಲೆಯಾಗಿರುವ 22 ವರ್ಷದ ಹುಡುಗ ಒಳ್ಳೆಯ ಕಾರ್ಯಕರ್ತ. ಇನ್ನೂ ಮದುವೆ ಕೂಡ ಆಗಿರಲಿಲ್ಲ. ಆತ ತುಂಬಾನೇ ಪ್ರಾಮಾಣಿಕ ಕಾರ್ಯಕರ್ತನಾಗಿದ್ದನು. ನಿನ್ನೆ ಮುಸಲ್ಮಾನ ಗೂಂಡಾಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಮುಂದೆ ಓದಿ ...
  • Share this:

Shivamogga Youth Murder: ಭಾನುವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತನ (Hindu Organization Activist) ಕೊಲೆ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಹಾಕಲಾಗಿದೆ. ರಾತ್ರಿಯಿಂದಲೇ ನಗರದಾದ್ಯಂತ ಪೊಲೀಸರು (Police) ಗಸ್ತು ತಿರುಗುತ್ತಿದ್ದು, ಜನರು ಗುಂಪು ಸೇರದಂತೆ ನೋಡಿಕೊಳ್ಳುತ್ತಿದ್ದಾರೆ. ಮೆಗ್ಗಾನ್ ಆಸ್ಪತ್ರೆ(Hospital)ಯಲ್ಲಿ ಯುವಕನ ಶವ ಇರಿಸಲಾಗಿದೆ. ಇತ್ತ ಕುಟುಂಬಸ್ಥರು ಈ ಹಿಂದೆಯೂ ಮೃತ ಹರ್ಷನ ಕೊಲೆಗೆ ಯತ್ನ ನಡೆದಿತ್ತು. ಆತನನ್ನು ಕೊಲ್ಲಲು 10 ಲಕ್ಷ ರೂ ಸುಪಾರಿ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಇದೀಗ ಸಚಿವ ಕೆ.ಎಸ್.ಈಶ್ವರಪ್ಪ(Minister KS Eshwarapp), ಮುಸಲ್ಮಾನ ಗೂಂಡಾಗಳಿಂದಲೇ ನಮ್ಮ ಕಾರ್ಯಕರ್ತನ ಕೊಲೆಯಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ನೀಡಿರುವ ಪ್ರಚೋದನಕಾರಿ ಹೇಳಿಕೆಯೇ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.


ಮೃತ ಹರ್ಷ ಪ್ರಾಮಾಣಿಕ ಕಾರ್ಯಕರ್ತ


ಶಿವಮೊಗ್ಗದಲ್ಲಿ ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ.  ಕೊಲೆಯಾಗಿರುವ 22 ವರ್ಷದ ಹುಡುಗ ಒಳ್ಳೆಯ ಕಾರ್ಯಕರ್ತ. ಇನ್ನೂ ಮದುವೆ ಕೂಡ ಆಗಿರಲಿಲ್ಲ. ಆತ ತುಂಬಾನೇ ಪ್ರಾಮಾಣಿಕ ಕಾರ್ಯಕರ್ತನಾಗಿದ್ದನು. ನಿನ್ನೆ ಮುಸಲ್ಮಾನ ಗೂಂಡಾಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.


ಡಿಕೆಶಿ ಹೇಳಿಕೆಯೇ ಇವರಿಗೆ ಕುಮ್ಕಕ್ಕು


ಈ ಮೊದಲು ಶಿವಮೊಗ್ಗದಲ್ಲಿ ಮುಸಲ್ಮಾನ ಗೂಂಡಾಗಳು ಎಂದೂ ಬಾಲ ಬಿಚ್ಚಿರಲಿಲ್ಲ. ಆದ್ರೆ  ಕೆಲ ದಿನಗಳ ಹಿಂದೆ ಧ್ವಜ ವಿಚಾರ ಬಂದಾಗ ಸರ್ಕಾರಿ ಕಾಲೇಜು ಮೈದಾನದಲ್ಲಿ ರಾಷ್ಟ್ರಧ್ವಜ ಇಳಿಸಿ, ಭಾಗವಾ ಧ್ವಜ ಏರಿಸಿದ್ದಾರೆ. ಸೂರತ್ ನಿಂದ 50 ಲಕ್ಷ ಕೇಸರಿ ಧ್ವಜ ತಂದು ಹಂಚಿದ್ದಾರೆ. ಆ ಲಾರಿಗಳು ನನಗೆ ಗೊತ್ತು ಎಂದು  ಪ್ರಚೋದನಕಾರಿ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದರು. ಡಿಕೆ ಶಿವಕುಮಾರ್ ಹೇಳಿಕೆಯಿಂದ ಮುಸಲ್ಮಾನ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಂತಾಗಿದೆ.


ಇದನ್ನೂ ಓದಿ:  Shivamogga: ಹಿಂದೂ ಸಂಘಟನೆಗೆ ಸೇರಿದ 21 ವರ್ಷದ ಯುವಕನ ಬರ್ಬರ ಕೊಲೆ; ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ


ಮೃತ ಯುವಕನ ಕುಟುಂಬದ ಜವಾಬ್ದಾರಿ ಸಂಘಟನೆ ತೆಗೆದುಕೊಳ್ಳಲಿದೆ


ಈ ರೀತಿ ಗೂಂಡಾಗಿರಿ ಶಿವಮೊಗ್ಗದಲ್ಲಿ ನಡೆಯಲು ಯಾವುದೇ ಕಾರಣಕ್ಕೂ ನಾವು ಬಿಡಲ್ಲ. ಅದನ್ನ ದಮನ ಮಾಡುತ್ತೇವೆ. ಕೊಲೆಯಾದ ಯುವಕನ ಮನೆಯಲ್ಲಿರುವ ಸಮಸ್ಯೆಗಳು ಏನೇ ಇದ್ರೂ ನಮ್ಮ ಸಂಘಟನೆ ಜವಾಬ್ದಾರಿ ತೆಗೆದುಕೊಳ್ಳಲಾಗುತ್ತದೆ. ಮುಸಲ್ಮಾನ ಗೂಂಡಾಗಳು ಹೊರಗಡೆಯವರು ಅಥವಾ ಒಳಗಡೆಯವರೋ ಎಂಬುವುದು ತನಿಖೆಯಲ್ಲಿ ತಿಳಿದು ಬರಲಿದೆ. ಈ ಸಂಬಂಧ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ನಾನು ಶಿವಮೊಗ್ಗಕ್ಕೆ ತೆರಳುತ್ತೇನೆ ಎಂದು ಹೇಳಿದ್ರು.
ಸಚಿವರದ್ದು ಬಾಲಿಶ ಮತ್ತು ಪ್ರಚೋದನಕಾರಿ ಹೇಳಿಕೆ


ಇನ್ನು ಕೆಎಸ್ ಈಶ್ವರಪ್ಪ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಖಂಡಿಸಿದ್ದಾರೆ.  ಈಶ್ವರಪ್ಪ ಹೇಳಿಕೆ ಖಂಡನೀಯಯಾರು ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ಇನ್ನೂ ವರದಿ ಕೂಡ ಬಂದಿಲ್ಲ. ಅಧಿವೇಶನ ಕೂಡ ನಡೆಯುತ್ತಿದೆ. ಸಚಿವರದ್ದು ಬಾಲಿಶ ಮತ್ತು ಪ್ರಚೋದನಕಾರಿ ಹೇಳಿಕೆ. ಸದನ ನಡೆಯುವಾಗ ಹೇಳಿಕೆ ಕೊಡಬಾರದು ಎಂದು ಹೇಳಿದ್ದಾರೆ.


ಸಚಿವ ಈಶ್ವರಪ್ಪ ದೇಶದ್ರೋಹದ ಆರೋಪ‌ ಕೂಡ ಎದುರಿಸುತ್ತಿದ್ದಾರೆ. ತನಿಖೆ ಬಳಿಕ ಹೇಳಿಕೆ ಕೊಡಬೇಕು. ದೇಶದ್ರೋಹಿಯನ್ನ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಈಶ್ವರಪ್ಪಗೆ ಶಿವಮೊಗ್ಗದಲ್ಲಿ ಅದ್ಧೂರಿ ಸ್ವಾಗತ ಮಾಡುತ್ತಾರೆ. ಇಂತಹ ಮನಸ್ಥಿತಿ ಅವರದ್ದು. ದೇಶದ್ರೋಹ ಆರೋಪ ಎದುರಿಸುತ್ತಿವ ಸಚಿವರಿಗೆ ಅದ್ಧೂರಿ ಸ್ವಾಗತ ನೀಡುತ್ತಾರೆ ಎಂದು ಟೀಕಿಸಿದರು.


ಇದನ್ನೂ ಓದಿ:  Shivamoggaದಲ್ಲಿ ಯುವಕನ ಕೊಲೆ: ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ; ಕುಟುಂಬಸ್ಥರಿಗೆ ಗೃಹ ಸಚಿವರಿಂದ ಸಾಂತ್ವಾನ


ಆರೋಪಿಗಳ ಬಂಧನಕ್ಕೆ ಯು.ಟಿ.ಖಾದರ್ ಆಗ್ರಹ


ಶಿವಮೊಗ್ಗ ಯುವಕನ ಕೊಲೆ ಕುರಿತು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆಯ ಯುವಕನ ಕೊಲೆಯನ್ನ ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ಹಿರಿಯ ನಾಯಕರು, ಗೃಹ ಸಚಿವರು ಇರುವ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದೆ. ಕೊಲೆಗಡುಕರನ್ನ ತಕ್ಷಣ ಪತ್ತೆ ಹಚ್ಚಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಯಾರೋ ಮಾಡಿದ ತಪ್ಪಿಗೆ ಮುಗ್ಧ ಜನರಿಗೆ ಅನ್ಯಾಯ ಆಗಬಾರದು. ಕೂಡಲೇ ಕೊಲೆ ಆರೋಪಿಗಳ ಬಂಧನ ಆಗಬೇಕು ಎಂದು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಇಂಟೆಲಿಜೆನ್ಸ್ ಇದೆ, ಇಂತಹ ಪರಿಸ್ಥಿತಿ ಬಗ್ಗೆ ಮುಂದಾಲೋಚನೆ ಇರಬೇಕು. ಬೇಗ ಆಕ್ಷ್ಯನ್ ತಗೊಬೇಕು. ಇಂತಹ ಘಟನೆ ಆಗಿರೋದು ಅತ್ಯಂತ ದುರಾದೃಷ್ಟಕರ ಎಂದು ಯು.ಟಿ.ಖಾದರ್ ಹೇಳಿದ್ದಾರೆ.

Published by:Mahmadrafik K
First published: