Registration Scam: ವಂಚನೆಗೊಳಗಾದ ಐಷಾರಾಮಿ ವಾಹನ ಮಾಲೀಕ ಪೊಲೀಸ್​ ಠಾಣೆಗೆ!

ಐಷಾರಾಮಿ ಕಾರು ನೋಂದಣಿ ಹಗರಣದ ತನಿಖೆಯನ್ನು ಲೋಕಾಯುಕ್ತ/ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದರೆ, ಇತ್ತ ಕಡೆ ಸಾರಿಗೆ ಇಲಾಖೆಯಲ್ಲಿ ಅಕ್ರಮ ಐಷಾರಾಮಿ ಕಾರು ನೋದಣಿಗಳು ಪತ್ತೆ ಆಗುತ್ತಲೇ ಇವೆ. ಇದರ ಕುರಿತು ಸಾರಿಗೆ ಇಲಾಖೆಯಿಂದ ನೋಟಿಸ್ ಪಡೆದ ಹಲವಾರು ವಾಹನ ಮಾಲೀಕರು, ಮಧ್ಯವರ್ತಿಗಳು/ಸಾರಿಗೆ ಅಧಿಕಾರಿಗಳಿಂದ ವಂಚನೆಗೊಳಗಾಗಿದ್ದೇವೆ ಎಂದು ಆರೋಪಿಸಿ ಬೆಂಗಳೂರಿನ ಪೊಲೀಸರನ್ನು ಸಂಪರ್ಕಿಸುತ್ತಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಐಷಾರಾಮಿ ಕಾರು ನೋಂದಣಿ ಹಗರಣದ (Luxury car registration scam) ತನಿಖೆಯನ್ನು ಲೋಕಾಯುಕ್ತ/ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದರೆ, ಇತ್ತ ಕಡೆ ಸಾರಿಗೆ ಇಲಾಖೆಯಲ್ಲಿ ಅಕ್ರಮ ಐಷಾರಾಮಿ ಕಾರು ನೋದಣಿಗಳು ಪತ್ತೆ ಆಗುತ್ತಲೇ ಇವೆ. ಇದರ ಕುರಿತು ಸಾರಿಗೆ ಇಲಾಖೆಯಿಂದ ನೋಟಿಸ್ ಪಡೆದ ಹಲವಾರು ವಾಹನ ಮಾಲೀಕರು, ಮಧ್ಯವರ್ತಿಗಳು/ಸಾರಿಗೆ ಅಧಿಕಾರಿಗಳಿಂದ ವಂಚನೆಗೊಳಗಾಗಿದ್ದೇವೆ ಎಂದು ಆರೋಪಿಸಿ ಬೆಂಗಳೂರಿನ ಪೊಲೀಸರನ್ನು (Bengaluru Police) ಸಂಪರ್ಕಿಸುತ್ತಿದ್ದಾರೆ. ಇದರ ಕುರಿತು “ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಅಲ್ಲಿ ಇರುವ ಬೆಂಗಳೂರು ಸೆಂಟ್ರಲ್ ಆರ್‌ಟಿಒ ಸಂಸ್ಥೆಯಲ್ಲಿ ಒಂದರಲ್ಲೇ 200 ಅತ್ಯಾಧುನಿಕ ಕಾರು ಮಾಲೀಕರು (Car Owners) ಸೇರಿದಂತೆ ಸುಮಾರು 500 ವಾಹನಗಳ ಮಾಲೀಕರಿಗೆ ಕೂಡಲೇ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದೇವೆ. ಬಹುಪಾಲು ವಾಹನ ಮಾಲೀಕರು ಮಧ್ಯವರ್ತಿಗಳಿಗೆ ನಗದು (Cash) ಪಾವತಿಸಿದ್ದಾರೆ.

ಬ್ಯಾಂಕ್‌ಗಳ ಮೂಲಕ ಹಣ ಪಾವತಿಸಿದವರು ಈಗ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರನ್ನು ಸಂಪರ್ಕಿಸುತ್ತಿದ್ದಾರೆ. ಎಲ್ಲಾ ಆರ್‌ಟಿಒಗಳ ಗುಂಪನ್ನು ಒಳಗೊಂಡ ಸಿಐಡಿ ತನಿಖೆ ಇನ್ನೂ ಆರಂಭವಾಗಿಲ್ಲದರ ಪರಿಣಾಮ, ಪೊಲೀಸರೇ ಪ್ರತಿಯೊಂದು ದೂರುಗಳ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸುತ್ತಿದ್ದಾರೆ” ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಐಷಾರಾಮಿ ಕಾರು ವಂಚನೆ

“ಈ ಐಷಾರಾಮಿ ಕಾರು ವಂಚನೆ ಆರೋಪದಡಿ ಡೀಲರ್/ಮಧ್ಯವರ್ತಿ ವಿರುದ್ಧ ವಾಹನ ಮಾಲೀಕರು ಮಲ್ಲೇಶ್ವರಂ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಮತ್ತೊಂದು ಕಡೆ 52 ವಾಹನಗಳಿಗೆ ವಂಚನೆ ಮಾಡಿರುವುದಾಗಿ ವಾಹನ ಮಾರಾಟ ಏಜೆಂಟ್ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸಾರಿಗೆ ಇಲಾಖೆ ನೋಟಿಸ್‌ ನೀಡಿದ ಇಬ್ಬರು ವಾಹನ ಮಾಲೀಕರು ಕೋರಮಂಗಲ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ" ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನ ಜನರಿಗೆ ಶುಭಸುದ್ದಿ! ವಿಶೇಷ ರೈಲು ಆರಂಭ

ಇದಕ್ಕೆ “ಕೆಲವು ಹೈ-ಎಂಡ್‌ ವಾಹನ ಮಾಲೀಕರು ನಾವು ವಾಹನ ಮಾರಾಟಗಾರು/ ಏಜೆಂಟ್‌ಗಳಿಂದ ತೀವ್ರವಾಗಿ ಮೋಸ ಹೋಗಿದ್ದೇವೆ ಎಂದು ಪೊಲೀಸ್‌ ಎದುರು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿ ಪ್ರತಿಭಟಿಸಿದ ಎಲ್ಲ ಹೈ-ಎಂಡ್‌ ವಾಹನ ಮಾಲೀಕರು ಸಾರಿಗೆ ಇಲಾಖೆ ಅಧಿಕಾರಿಗಳಿಂದ ನಾವು 'ತೆರಿಗೆ ಪಾವತಿಸಿದ' ರಸೀದಿಗಳನ್ನು ಸ್ವೀಕರಿಸಿದ್ದೇವೆ  ಆದ್ದರಿಂದ ಮತ್ತೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ನಮಗೆ ನೋಟಿಸ್‌ ನೀಡುವ ಅವಶ್ಯಕತೆ ಏನಿತ್ತು? ಎಂದು ವಾಹನ ಮಾಲೀಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾರಿಗೆ ಅಧಿಕಾರಿಗಳು ತೆರಿಗೆ ಕಟ್ಟುವುದಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದು ಅವರ ಪ್ರಶ್ನೆಯನ್ನು ತಳ್ಳಿಹಾಕಿದರು. ರಾಜ್ಯದಾದ್ಯಂತ ಎಲ್ಲಾ ಆರ್‌ಟಿಒಗಳಲ್ಲಿ ಮೂರನೇ ವ್ಯಕ್ತಿಯಿಂದ ಆಗುತ್ತಿರುವ ಈ ಕಾರು ನೋಂದಣಿ ಹಗರಣ ತನಿಖೆ ನಡೆಸಿದ ನಂತರ ಹಗರಣದ ವ್ಯಾಪ್ತಿಯು ಎಲ್ಲ ಕಡೆ ಬಹಿರಂಗಗೊಳ್ಳುತ್ತದೆ" ಎಂದು ಅಧಿಕಾರಿ ಹೇಳಿದ್ದಾರೆ.

ಈ ತನಿಖೆ ಕುರಿತು ಪೋಲಿಸ್‌ ಹೇಳಿದ್ದೇನು?

ಈ ಐಷಾರಾಮಿ ಕಾರು ನೋಂದಣಿ ಹಗರಣ ತನಿಖೆಯಲ್ಲಿ ಈಗಾಗಲೇ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಈ ಹಗರಣದಲ್ಲಿ ದೊಡ್ಡ-ದೊಡ್ಡ ವ್ಯಕ್ತಿಗಳ ಕೈವಾಡ ಇದೆ. ಇದು ಒಂದು ಎಂದಿಗೂ ಬಗೆಹರಿಸಲಾಗದ ದೊಡ್ಡ ಹಗರಣ ಆಗಿದೆ ಎಂದು ಪೋಲಿಸ್‌ ಅಧಿಕಾರಿಗಳು ಹೇಳಿದ್ದಾರೆ. ಮಲ್ಲೇಶ್ವರಂ ಪೋಲಿಸ್‌ ಠಾಣೆಯ ತನಿಖಾ ಅಧಿಕಾರಿಗಳು ಕಾರ್‌ ಡೀಲರ್‌ ಅಜಯ್‌ ಮತ್ತು ಮಾಜಿ ಆರ್‌ಟಿಒ ಸ್ಟಾಪರ್‌ ರವಿಶಂಕರ್‌ ಅವರನ್ನು ಬಂಧಿಸಿದ್ದಾರೆ. ಈ ಐಷಾರಾಮಿ ಕಾರು ನೋಂದಣಿ ಹಗರಣದ ಕುರಿತು ಇದು ಒಂದು ದೊಡ್ಡ ಹಗರಣ ಜಾಲ ಆಗಿದೆ. ಇದನ್ನು ತನಿಖೆ ಮಾಡಲು ನಮಗೆ ಬಹಳಷ್ಟು ಸಮಯ ಬೇಕಾಗಬಹುದು ಎಂದು ಹಿರಿಯ ಪೋಲಿಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:  Bidar: ಮದ್ವೆಗೆ ಒಪ್ಪದ ಪೋಷಕರು, ನೇಣಿಗೆ ಕೊರಳೊಡ್ಡಿದ ಯುವಕ; ವಿಷಯ ಕೇಳಿ ಬಾವಿಗೆ ಹಾರಿದ ಯುವತಿ

ಇದರ ಕುರಿತು ಮಾರ್ಚ್‌ ತಿಂಗಳಿನಲ್ಲಿ ಸಾರಿಗೆ ಇಲಾಖೆ ಮಂತ್ರಿ ಆಗಿರುವ ಬಿ. ಶ್ರೀರಾಮುಲು ಅವರು “ಐಷಾರಾಮಿ ಕಾರು ನೋಂದಣಿ ಹಗರಣದ ತನಿಖೆಯನ್ನು ಸಿಐಡಿ ಗಳಿಗೆ ವಹಿಸಿದ್ದೇವೆ. ಆದರೆ ಅದರ ನಂತರ ಯಾವುದೇ ಉನ್ನತ ವಿಚಾರಗಳು ಬೆಳಕಿಗೆ ಬಂದಿಲ್ಲ” ಎಂದು ಹೇಳಿದರು.
Published by:Ashwini Prabhu
First published: