Bengaluru News: ಬೆಂಗಳೂರಿನ ಸೈನಿಕ ಶಾಲೆಗೆ ಸೇರಬೇಕೆ? ವಿದ್ಯಾರ್ಥಿನಿಯರೇ ಈ ಅವಕಾಶ ಬಿಡಬೇಡಿ

Rashtriya Military School Bengaluru: ಈ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತದ ರಾಷ್ಟ್ರೀಯ ಮಿಲಿಟರಿ ಶಾಲೆಗಳಿಗೆ ಬಾಲಕಿಯರ ಕೆಡೆಟ್‌ಗಳು ಪ್ರವೇಶ ಪಡೆಯಲಿದ್ದಾರೆ. ಅಂದಹಾಗೆ ನಮ್ಮ ಬೆಂಗಳೂರಲ್ಲೂ ಇರುವ ರಾಷ್ಟ್ರೀಯ ಮಿಲಿಟರಿ ಶಾಲೆಗೆ ವಿದ್ಯಾರ್ಥಿನಿಯರು ಪ್ರವೇಶ ಪಡೆಯಬಹುದು. ಆದರೆ ಹೇಗೆ ಅಪ್ಲೈ ಮಾಡೋದು? ಇಲ್ಲಿದೆ ವಿವರ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು, ಕರ್ನಾಟಕದ ಜನರಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ. ಕರ್ನಾಟಕದ ವಿದ್ಯಾರ್ಥಿನಿಯರಿಗಂತೂ ಹೊಸ ಅವಕಾಶವೇ ಓಪನ್ ಆಗುತ್ತಿದೆ. ಅದರಲ್ಲೂ ಸೇನೆ ಸೇರಬೇಕು (Join Indian Army) ಎಂಬ ಇಚ್ಛೆ ಹೊಂದಿರುವ ವಿದ್ಯಾರ್ಥಿನಿಯರು ಇನ್ಮೇಲೆ ತಲೆಬಿಸಿ ಮಾಡಿಕೊಳ್ಳುವ ಕೆಲಸವೇ ಇಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ರಾಷ್ಟ್ರೀಯ ಸೈನಿಕ ಶಾಲೆ (Rashtriya Military School Bengaluru) ಈ ಶೈಕ್ಷಣಿಕ ವರ್ಷದಿಂದ ಮಹಿಳಾ ಕೆಡೆಟ್ಸ್​ಗಳಿಗೆ ಪ್ರವೇಶ ನೀಡಲಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ವೃತ್ತಿಪರ ದೃಷ್ಟಿಕೋನವನ್ನು ಈ ರಾಷ್ಟ್ರೀಯ ಸೈನಿಕ ಶಾಲೆಯು ಒದಗಿಸಲಿದೆ. 

    10 ವರ್ಷ 6 ತಿಂಗಳು ಪೂರೈಸಿದ -12 ವರ್ಷದ ಒಳಗಿನ  ವಿದ್ಯಾರ್ಥಿನಿಯರು ಹುಡುಗಿಯರು ಕೇಂದ್ರೀಕೃತ ಪ್ರವೇಶ ಪರೀಕ್ಷೆಯ ಮೂಲಕ 6 ನೇ ತರಗತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿನಿಯರ ಕೆಡೆಟ್‌ಗಳಿಗಾಗಿ ಆರು ಸೀಟುಗಳು ತೆರೆದಿವೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ಸಂದರ್ಶನಕ್ಕೆ ಹಾಜರಾದವರ ಸಂಖ್ಯೆ ಎಷ್ಟು?
    ರಾಷ್ಟ್ರೀಯ ಸೈನಿಕ ಶಾಲೆಗೆ ಪ್ರವೇಶ ಪಡೆಯಲು 551 ಬಾಲಕಿಯರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರೆ, 372 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಸುಮಾರು 12 ಹುಡುಗಿಯರು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂದರ್ಶನಕ್ಕೆ ಹಾಜರಾಗಿದ್ದರು.

    ರಾಷ್ಟ್ರಪತಿ ರಾಮನಾಥ್ ಕೋವಿಂದ್​ರಿಂದ ಪ್ರಶಂಸೆ
    ಈ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತದ ರಾಷ್ಟ್ರೀಯ ಮಿಲಿಟರಿ ಶಾಲೆಗಳಿಗೆ ಬಾಲಕಿಯರ ಕೆಡೆಟ್‌ಗಳು ಪ್ರವೇಶ ಪಡೆಯಲಿದ್ದಾರೆ. ಈಕುರಿತು ಸ್ವತಃ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಂಗಳೂರಿಗೆ ಭೇಟಿ ನೀಡಿದಾಗ ಮಾಹಿತಿ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಶಾಲೆ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಂಸೆಯನ್ನೂ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: Bidar To Bengaluru: ಬೀದರ್​ ಟು ಬೆಂಗಳೂರು, ಕೇವಲ 1 ಗಂಟೆ 10 ನಿಮಿಷಕ್ಕೆ ಪ್ರಯಾಣಿಸಿ!

    ರಾಷ್ಟ್ರೀಯ ಸೈನಿಕ ಶಾಲೆಗಳ ಉದ್ದೇಶವೇನು?
    ರಾಷ್ಟ್ರೀಯ ಮಿಲಿಟರಿ ಶಾಲೆಗಳು ಆಂಗ್ಲ ಮಾಧ್ಯಮ ವಸತಿ ಸಾರ್ವಜನಿಕ ಶಾಲೆಗಳಾಗಿವೆ. ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕರಿಗಾಗಿ 6ನೇ ತರಗತಿಯಿಂದ 12ನೇ ತರಗತಿವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ರಕ್ಷಣಾ ಸಚಿವಾಲಯವು ರಾಷ್ಟ್ರೀಯ ಸೈನಿಕ ಶಾಲೆಗಳನ್ನು ಸ್ಥಾಪಿಸಿದೆ.

    ಪ್ರವೇಶ ಪರೀಕ್ಷೆ ಪ್ರಕ್ರಿಯೆ ಹೀಗಿರುತ್ತದೆ
    6 ಮತ್ತು 9ನೇ ತರಗತಿಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯು ಡಿಸೆಂಬರ್‌ನಲ್ಲಿ ನಡೆಯುತ್ತದೆ. 6 ನೇ ತರಗತಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಯು 10 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು ಪ್ರವೇಶದ ವರ್ಷದ ಮಾರ್ಚ್ 31 ಕ್ಕೆ 12 ವರ್ಷಕ್ಕಿಂತ ಹೆಚ್ಚಿರಬಾರದು.

    9ನೇ ತರಗತಿ ಪ್ರವೇಶಕ್ಕಾಗಿ ಅಭ್ಯರ್ಥಿಯು 13 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು ಪ್ರವೇಶದ ವರ್ಷದ ಮಾರ್ಚ್ 31 ಕ್ಕೆ 15 ವರ್ಷಕ್ಕಿಂತ ಹೆಚ್ಚಿರಬಾರದು. 6 ಮತ್ತು 9 ತರಗತಿಗಳಿಗೆ ಪ್ರವೇಶವು ಲಭ್ಯವಿರುವ ಖಾಲಿ ಹುದ್ದೆಗಳ ಆಧಾರದ ಮೇಲೆ ಇರುತ್ತದೆ. ಲಿಖಿತ ಪರೀಕ್ಷೆಯ ದಿನಾಂಕವನ್ನು ಯಶಸ್ವಿಯಾಗಿ ನೋಂದಾಯಿಸಲಾದ ಎಲ್ಲಾ ಅಭ್ಯರ್ಥಿಗಳಿಗೆ ನೋಂದಾಯಿತ ಇಮೇಲ್ ಐಡಿಗಳು / ಮೊಬೈಲ್ ಸಂಖ್ಯೆಗಳ ಮೂಲಕ ತಿಳಿಸಲಾಗುತ್ತದೆ.

    Rashtriya Military School Bengaluru ಬೆಂಗಳೂರಿನ ರಾಷ್ಟ್ರೀಯ ಸೈನಿಕ ಶಾಲೆಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಬೆಂಗಳೂರಿನ ರಾಷ್ಟ್ರೀಯ ಸೈನಿಕ ಶಾಲೆಯ ವಿಳಾಸ ಹೀಗಿದೆ: 
    ರಾಷ್ಟ್ರೀಯ ಸೈನಿಕ ಶಾಲೆ
    ನಂ. 250/40, ಮ್ಯೂಸಿಯಂ ರಸ್ತೆ, ಜಾನ್ಸನ್ ಮಾರುಕಟ್ಟೆ ಹತ್ತಿರ, ಬೆಂಗಳೂರು, ಕರ್ನಾಟಕ 560025

    ಸಂಪರ್ಕ ಸಂಖ್ಯೆ: 080-29602555 ಅಥವಾ 080- 25554972

    ಫ್ಯಾಕ್ಸ್ ಮೂಲಕ ಸಂಪರ್ಕಿಸುವುದಾದಲ್ಲಿ: + 91 080- 25308191

    ಇ- ಮೇಲ್ ವಿಳಾಸ: rmsbengaluru@gmail.com

    ಇದನ್ನೂ ಓದಿ: Free Heart Treatment: ಬಡ ಹೃದಯ ರೋಗಿಗಳಿಗೆ ಒಳ್ಳೆ ಸುದ್ದಿ; ಉಚಿತ ಸ್ಟಂಟ್ ಅಳವಡಿಕೆಗೆ ಅವಕಾಶ ಇಲ್ಲಿದೆ

    ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಆಂಧ್ರಪ್ರದೇಶದ ವಿವಿಧ ಶಾಲೆಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಶಾಲೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ರಾಷ್ಟ್ರೀಯ ಸೈನಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡುವ ಮೂಲಕ ವಿದ್ಯಾರ್ಥಿನಿಯರನ್ನು ದೇಶದ ಕುರಿತು ಹೆಚ್ಚು ಪ್ರೇರೇಪಿಸಲಾಗುತ್ತದೆ.
    Published by:guruganesh bhat
    First published: