Crime News: ಅಲ್ಲಿ ಯುವತಿ ಮೇಲೆ ಅತ್ಯಾಚಾರ, ಇಲ್ಲಿ ಹುಡುಗಿ ಮೇಲೆ ಆ್ಯಸಿಡ್ ಅಟ್ಯಾಕ್! ಬೆಚ್ಚಿಬಿದ್ದ ರಾಜ್ಯದ ಜನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮಹಿಳೆಯರು ಸೇಫಾ ಎನ್ನುವ ಪ್ರಶ್ನೆ ಮತ್ತೊಮ್ಮೆ ಮೂಡಿದೆ. ಯಾದಗಿರಿಯಲ್ಲಿ ಆಟೋ ಚಾಲಕನೊಬ್ಬ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇತ್ತ ಭಗ್ನಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ ಹುಡುಗಿ ಮೇಲೆ ಆ್ಯಸಿಡ್ ಎರಚಿದ್ದಾನೆ.

  • Share this:

ಯಾದಗಿರಿ/ಬೆಂಗಳೂರು: ರಾಜ್ಯ ರಾಜಧಾನಿ (State Capital) ಬೆಂಗಳೂರು (Bengaluru) ಹಾಗೂ ಯಾದಗಿರಿಯಲ್ಲಿ (Yadagiri) ಇಡೀ ದೇಶವೇ ತಲೆತಗ್ಗಿಸುವ ಅಮಾನವೀಯ ಕೃತ್ಯ ನಡೆದಿದೆ. ಯಾದಗಿರಿಯಲ್ಲಿ ಆಟೋ ಚಾಲಕನೊಬ್ಬ (Auto Driver) ಯುವತಿ (Lady) ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲ. ಆತನ ಸ್ನೇಹಿತ (Friend) ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್‌ನಲ್ಲಿ (Mobile) ವಿಡಿಯೋ ರೆಕಾರ್ಡ್ (Video Record) ಮಾಡಿಕೊಂಡಿದ್ದಾನೆ. ಇತ್ತ ಬೆಂಗಳೂರಲ್ಲಿ ಭಗ್ನ ಪ್ರೇಮಿಯೊಬ್ಬ (Lover) ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ್ದಾನೆ. ಈ ಎರಡು ಘಟನೆಗಳಿಂದ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ.


 ಯಾದಗಿರಿಯಲ್ಲಿ ಆಟೋ ಚಾಲಕನಿಂದ ಅತ್ಯಾಚಾರ


ಯಾದಗಿರಿ ಜಿಲ್ಲೆಯಲ್ಲಿ ಆಟೋ ಚಾಲಕನೊಬ್ಬ ಹಾಡಹಗಲೇ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಆಟೋ ಚಾಲಕ ಹನುಮಂತ ಜಿನಕೇರಿ ಎಂಬಾತ ಅತ್ಯಾಚಾರ ಮಾಡಿದ್ದಾನೆ. ಏಪ್ರಿಲ್ 26ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಆಟೋದಲ್ಲಿ ಸ್ನೇಹಿತನನ್ನು ಕೂರಿಸಿಕೊಂಡು ಕೃತ್ಯ


ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿ ಮನೆ ಕೆಲಸ ಮಾಡುತ್ತಿದ್ದಳು. ಅಟೋದಲ್ಲಿ ಯಾದಗಿರಿಗೆ ಎಪ್ರಿಲ್ 26 ರಂದು ಯುವತಿ ತೆರಳುತ್ತಿದ್ದಳು. ಈ ವೇಳೆ ಎಂ.ಹೊಸಳ್ಳಿ ಗ್ರಾಮದ ಅಟೋ ಚಾಲಕ ಹನುಮಂತ ಜಿನಕೇರಿ ಎಂಬಾತ  ಹೊಸಳ್ಳಿ ಗ್ರಾಮದ ಸ್ನೇಹಿತ ನರಸಪ್ಪ ಎಂಬಾತನನ್ನು ಆಟೋದಲ್ಲಿ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಯುವತಿ ಮೇಲೆ ಅತ್ಯಾಚಾರಕ್ಕೆ ಪ್ಲಾನ್ ಮಾಡಿದ್ದಾನೆ.


ಇದನ್ನೂ ಓದಿ: Student Suicide: ಕಾಲೇಜ್‌ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸೂಸೈಡ್! ರೊಚ್ಚಿಗೆದ್ದು ದಾಂಧಲೆ ನಡೆಸಿದ ಸ್ಟೂಡೆಂಟ್ಸ್


ಪಾಳು ಬಿದ್ದ ಮನೆಗೆ ಕರೆದೊಯ್ದು ಮಾನಗೇಡಿ ಕೃತ್ಯ


ಆಟೋ ನಿಲ್ಲಿಸಿ ಅಂತ ಯುವತಿ ಎಂದರೂ ಕೇಳದ ಚಾಲಕ,  ಆಟೋದಲ್ಲಿ ಡೀಸೆಲ್ ಇಲ್ಲ, ಡೀಸೆಲ್ ಹಾಕಿಸಿಕೊಂಡು ಹೊಸ ಬಸ್ ನಿಲ್ದಾಣದ ಕಡೆ ಬಿಡ್ತೀನಿ ಅಂತ ನಂಬಿಸಿದ್ದಾನೆ. ಬಳಿಕ ನಗರದ ಹೊರಭಾಗದ ವರ್ಕನಳ್ಳಿಯ ನಿರ್ಜನ ಪ್ರದೇಶದ ಹಾಳು ಬಿದ್ದ  ಮನೆಯಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.


ಅತ್ಯಾಚಾರದ ದೃಶ್ಯ ರೆಕಾರ್ಡ್ ಮಾಡಿದ ಸ್ನೇಹಿತ


ಯುವತಿ ನಿನ್ನ ಕಾಲಿಗೆ ಬೀಳುತ್ತೇನೆ, ದಯವಿಟ್ಟು ನನ್ನ ಬಿಟ್ಟುಬಿಡು ಅಂತ ಬೇಡಿಕೊಂಡು, ಕಣ್ಣೀರು ಹಾಕಿದ್ದಾಳೆ. ಆದರೆ ಅದಕ್ಕೆ ಕಿವಿಗೊಡದ ಚಾಲಕ ಯುವತಿ ಮೇಲೆ ರೇಪ್ ಮಾಡಿದ್ದಾನೆ. ಬಳಿಕ ಯಾರಿಗೂ ಈ ಬಗ್ಗೆ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಇನ್ನು ಆಟೋ ಚಾಲಕ ಅತ್ಯಾಚಾರ ಮಾಡುತ್ತಿದ್ದರೆ ಆತನ ಸ್ನೇಹಿತ ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.


ಪೊಲೀಸರಿಂದ ಆರೋಪಿ ಬಂಧನ


ಇನ್ನು ಈ ಬಗ್ಗೆ ಯುವತಿ ಚಿಕ್ಕಪ್ಪ  ಯಾದಗಿರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ದೂರು ಪಡೆದ ಪೊಲೀಸರು, ಅತ್ಯಾಚಾರ ವೇಸಗಿದ ಆಟೋ ಚಾಲಕ ಹನುಮಂತ ಹಾಗೂ ಆತನ ಸ್ನೇಹಿತ ನರಸಪ್ಪನನ್ನು ಬಂಧಿಸಿ, ಆಟೋ ಜಪ್ತಿ ಮಾಡಿದ್ದಾರೆ.


ಭಗ್ನ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 24 ವರ್ಷದ ಯವತಿ ಮೇಲೆ ಆ್ಯಸಿಡ್ ಅಟ್ಯಾಕ್ ನಡೆದಿದೆ. ಪ್ರೀತಿಗೆ ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಯೇ ಈ ರೀತಿಯ ಪಾಪದ ಕೃತ್ಯ ಎಸಗಿದ್ದಾನೆ. ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ಎರಚಿದ್ದಾನೆ.


ಇದನ್ನೂ ಓದಿ: Hubballi Riots: ಗಲಭೆ ಪ್ರಕರಣದ ಮುಖ್ಯ ಆರೋಪಿ ನ್ಯಾಯಾಂಗ ವಶಕ್ಕೆ; ಕಟೀಲ್ ವಿರುದ್ಧ ದೂರು


ಪ್ರೀತಿ ನಿರಾಕರಿಸಿದ್ದಕ್ಕೆ ಪಾಪದ ಕೃತ್ಯ

top videos


    ಯುವತಿ ನಾಗೇಶ್‌ನ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆಯೂ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು. ಅದೇ ದ್ವೇಷದಿಂದ ಇಂದು ಆಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬಂದು ಆ್ಯಸಿಡ್ ಎರಚಿ, ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

    First published: