Raksha Bandhan: ರಾಶಿ ರಾಶಿ ಕಲರ್​ಫುಲ್ ರಾಖಿ! ಅಬ್ಬಾ, ರಕ್ಷಾಬಂಧನದ ಸಡಗರವೇ!

ರಕ್ಷಾ ಬಂಧನ ಹಬ್ಬ ಆಚರಿಸಿಕೊಳ್ಳಲು, ಶುಭಾಶಯ ವಿನಿಮಯ ಮಾಡಿಕೊಳ್ಳಲು ಎಲ್ಲರೂ ಕಾತರದಿಂದಿದ್ದಾರೆ. ಹಾಗಾಗಿ ಮಾರ್ಕೆಟ್ ನಲ್ಲೂ ರಾಖಿ ಕೊಂಡೊಯ್ಯಲು ತೋರುತ್ತಿರುವ ಕಾತರ ರಕ್ಷಾ ಬಂಧನ ಸಂಭ್ರಮ ಹೇಗಿರಲಿದೆ? ವಿಡಿಯೋ ನೋಡಿ

ರಾಖಿ ಸಡಗರವೇ ಸಡಗರ

"ರಾಖಿ ಸಡಗರವೇ ಸಡಗರ"

 • Share this:
  ಬೆಂಗಳೂರು: ಎಲ್ಲವೂ ಬ್ಯೂಟಿಫುಲ್.. ಎಲ್ಲಾನೂ ಕಲರ್ ಫುಲ್.. ಒಂದೊಂದು ನೋಡ್ತೀದ್ರೂ ಯಾವುದು ತಗೊಳ್ಳಿ ಅನ್ನೋ ಕನ್ ಫ್ಯೂಶನ್.. ರಾಖಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ರೆ, ಇತ್ತ ಮಾರ್ಕೆಟ್ ನಲ್ಲಿ ರಾಖಿ ಕೊಂಡು ಹೋಗೋ ತಂಗಿಯಂದಿರು ಹೆಚ್ಚಾಗಿದ್ದಾರೆ.. ಆದ್ರೆ, ಮಾರ್ಕೆಟ್ ನಲ್ಲಿ ವಿವಿಧ ರಂಗಿನ ರಕ್ಷಾ ಬಂಧನ ಕಾಲಿಟ್ಟಿದ್ದು, ಒಂದು ಇನ್ನೊಂದಕ್ಕಿಂತ ಕಲರ್ ಫುಲ್ ಆಗಿವೆ..

  ರಂಗು ತುಂಬಿದ ರಾಖಿ
  ನಾಳೆ (ಆಗಸ್ಟ್ 11) ನಾಡಿನಾದ್ಯಂತ ರಕ್ಷಾ ಬಂಧನವನ್ನು ಸಹೋದರ-ಸಹೋದರಿಯರು ಆಚರಿಸಿಕೊಳ್ಳಲಿದ್ದಾರೆ. ಪ್ರೀತಿಯ ಅಣ್ಣನಿಗೆ ರಕ್ಷೆಯಾಗಿ ರಕ್ಷಾ ಬಂಧನ ಕಟ್ಟುವ ಖುಷಿಯಲ್ಲಿ ತಂಗಿಯಂದಿರಿದ್ದಾರೆ.

  ಇದನ್ನೂ ಓದಿ: Bengaluru Lalbagh Flower Show: ಲಾಲ್‌‌ಬಾಗಲ್ಲಿ ನಮ್ಮ ಅಪ್ಪು! ನೀವೇ ವಿಡಿಯೋ ನೋಡಿ!

  ಹೀಗಾಗಿ ಮಾರ್ಕೆಟ್ ಗಳಿಗೆ ತೆರಳಿ ಅಣ್ಣನಿಗೆ ಇಷ್ಟವಾಗಬಹುದಾದ ರಾಖಿ ಹುಡುಕಾಟದಲ್ಲಿ ತಂಗಿಯಂದಿರುವ ನಿರತರಾಗಿದ್ಧಾರೆ. ಮಾರ್ಕೆಟ್ ನಲ್ಲೂ ಅಷ್ಟೇ ರಕ್ಷಾ ಬಂಧನಗಳ ರಾಶಿ ಇದ್ದು ಕೊಳ್ಳುವವರ ಆಸಕ್ತಿಯನ್ನ ಅವಲಂಬಿಸಿದೆ.

  ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

  ಡಿಫರೆಂಟ್ ಡಿಸೈನ್, ಡಿಫರೆಂಟ್ ಪ್ರೈಸ್
  ಇನ್ನು ರಂಗು ರಂಗಿನ ರಕ್ಷಾ ಬಂಧನಗಳ ಬೆಲೆ, ಡಿಸೈನ್, ಕಲರ್ ಇದೆಲ್ಲವೂ ಭಿನ್ನ ಭಿನ್ನವಾಗಿದೆ. ಏನೇ ಆಗಲಿ ವರ್ಷಕ್ಕೆ ಒಂದು ಸಲ ಬರೋ ರಕ್ಷಾ ಬಂಧನವನ್ನ ಖುಷಿಯಿಂದ ಆಚರಿಸಿ ಅಣ್ಣಂದಿರಿಂದ ಸೈ ಎನಿಸಿಕೊಳ್ಳೋ ಜೊತೆಗೆ ಗಿಫ್ಟ್ ಪಡೆಯೋ ಕಾತರದಲ್ಲಿ ತಂಗಿಯಂದಿರಿದ್ದಾರೆ....
  Published by:guruganesh bhat
  First published: