ಬೆಂಗಳೂರು: ನೀವು ಬೆಂಗಳೂರಿನ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣವನ್ನು (Kempegowda International Airport) ತಲುಪಲು ಪರದಾಡುತ್ತಿದ್ದೀರಾ? ರಸ್ತೆ ಮಧ್ಯೆ ಟ್ರಾಫಿಕ್ (Traffic) ಕಿರಿಕಿರಿಯಿಂದ ಬೇಸತ್ತಿದ್ದೀರಾ? ಈಗ ಈ ಎಲ್ಲಾ ಸಮಸ್ಯೆಗೆ ಗುಡ್ ಬೈ ಹೇಳಿ. ಈಗ ನೀವು ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ್ ನಿಲ್ದಾಣಕ್ಕೆ ಸುಲಭವಾಗಿ ಮತ್ತು ತ್ವರಿತವಾಗಿ ತಲುಪಲು ಬೆಂಗಳೂರು ರೈಲ್ವೆ ವಿಭಾಗ ಹೆಚ್ಚಿನ ರೈಲುಗಳನ್ನು ಬಿಡಲು ತೀರ್ಮಾನಿಸಿದೆ. ಬೆಳ್ಳಂದೂರು ಬಳಿಯ ರೈಲು ಮೇಲ್ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಲು ನಿರ್ಧರಿಸಿದೆ . ಸಂಸದ ಪಿ. ಸಿ. ಮೋಹನ್ ( P.C. Mohan) ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದು, ಅದಕ್ಕೆ ಹೆಚ್ಚಿನ ರೈಲು ಸೇವೆ ಒದಗಿಸುವುದಾಗಿ ರೈಲ್ವೆ ಇಲಾಖೆ ಕೂಡ ಭರವಸೆ ನೀಡಿದೆ.
ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದ ಪಿ. ಸಿ. ಮೋಹನ್ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಲು ಇನ್ನಷ್ಟು ರೈಲುಗಳ ಸೇವೆ ಅಗತ್ಯವಿದೆ. ಹೀಗಾಗಿ ವಿಮಾನ ನಿಲ್ದಾಣದ ಆಡಳಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ರೈಲುಗಳನ್ನು ಬಿಡಿ ಎಂದು ತಿಳಿಸಿದ್ದಾರೆ.
ಕಾರ್ಮೆಲ್ರಾಮ್ ಮತ್ತು ಬೆಳ್ಳಂದೂರು ಮೇಲ್ಸೇತುವೆ ಕಾಮಗಾರಿ ಬಗ್ಗೆ ಮಾಹಿತಿ
ಇನ್ನು ಕಾರ್ಮೆಲ್ರಾಮ್ ಮತ್ತು ಬೆಳ್ಳಂದೂರು ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಅತೀ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಸುಮಾರು 48.16 ಕೋಟಿ ವೆಚ್ಚದಲ್ಲಿ ನಡೆಯುವ ಈ ಕಾಮಗಾರಿಗೆ, ಈ ತಿಂಗಳ ಕೊನೆಯಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಇದೇ ವೇಳೆ ಸಂಸದ ಪಿ. ಸಿ. ಮೋಹನ್ ಅವರಿಗೆ ಮಾಹಿತಿ ನೀಡಿದರು. ಇನ್ನು ಈ ಮೇಲ್ಸೇತುವೆ ನಿರ್ಮಾಣಕ್ಕೆ ಸುಮಾರು 2,465 ಚ.ಮಿ. ಜಮೀನಿನ ಅಗತ್ಯವಿದ್ದು, ಈ ಬಗ್ಗೆ ಬಿಬಿಎಂಪಿಯೊಂದಿಗೆ ಚರ್ಚಿಸಿ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಇತ್ತೀಚಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Metro Pass: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; BMRCLನಿಂದ 5 ದಿನಗಳ ಪಾಸ್ ಬಿಡುಗಡೆ
ಕಾಮಗಾರಿಗೆ ಸಹಕರಿಸಲು ಬಿಬಿಎಂಪಿಗೆ ಸೂಚಿಸುವುದಾಗಿ ಭರವಸೆ
ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಕಿಶೋರ್, ಡಿಆರ್ ಡಿಆರ್ ಎಮ್ ಶ್ಯಾಮ್ ಸಿಂಗ್, ಹೆಚ್ ಎಸ್ ವರ್ಮಾ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಂಸದ ಪಿ. ಸಿ. ಮೋಹನ ಅವರು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ನಾನು ಸ್ಥಳೀಯ ಶಾಸಕರು ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಇನ್ನು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಸಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಕಾರ ನೀಡುವಂತೆ ಸರಕಾರ, ಬಿಬಿಎಂಪಿ ಹಾಗೂ ಬೆಸ್ಕಾಂಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಹೀಗೆ ಹೋಗಬಹುದು (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]
ಪ್ರಯಾಣಿಕರಿಗೆ ಸಿಗಲಿದೆ ಟ್ರಾಫಿಕ್ನಿಂದ ಮುಕ್ತಿ
ಹೌದು ಈಗಾಗಲೇ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಲು ಪ್ರಯಾಣಿಕರು ಟ್ರಾಫಿಕ್ನಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಇತ್ತೀಚಿಗೆ ನಡೆದ ಸಭೆಯಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳು ಹೆಚ್ಚಿನ ರೈಲು ಸೇವೆ ಒದಗಿಸಲು ತೆಗೆದುಕೊಂಡ ತೀರ್ಮಾನ ಪ್ರಯಾಣಿಕರಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಕಾರ್ಮೆಲ್ರಾಮ್ ಮತ್ತು ಬೆಳ್ಳಂದೂರು ಮೇಲ್ಸೇತುವೆ ಪ್ರಾರಂಭವಾದ್ರೆ ಪ್ರಯಾಣಿಕರಿಗೆ ಮತಷ್ಟು ಅನೂಕಲವಾಗುತ್ತದೆ ಅಂತಾರೆ ಪ್ರಯಾಣಿಕರು.
ಒಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ರೈಲು ಸೇವೆ ಒದಗಿಸಲು ಸಂಸದ ಪಿ. ಸಿ. ಮೋಹನ್ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅದರಂತೆ ರೈಲ್ವೆ ಅಧಿಕಾರಿಗಳು ಕೂಡ ರೈಲು ಸೇವೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದು, ಈಗ ಬೆಂಗಳೂರು ಸಿಟಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತುಂಬ ಖುಷಿ ತಂದಿದೆ ಎಂದೆ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ