Expensive Bengaluru: ವಸತಿ ಪ್ರದೇಶಗಳ ಬೆಲೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 4% ಏರಿಕೆ

ಕೋಟ್ಯಂತರ ಜನಸಂಖ್ಯೆ ಹೊಂದಿರುವ ನಗರದಲ್ಲಿ ಜನ ಹೆಚ್ಚಾದಂತೆ ಸೌಲಭ್ಯಗಳು ಸಹ ಹೆಚ್ಚಾಗುತ್ತಿದೆ ಮತ್ತು ಬೆಲೆ ಏರಿಕೆ ಕೂಡ ರಾಕೆಟ್ ನಂತೆ ಏರುತ್ತಿದೆ. ಬೆಂಗಳೂರಿನಲ್ಲಿ ಮನೆ ಹೊಂದುವ ಬಯಕೆ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಲೇ ಇದೆ.

ಬೆಂಗಳೂರು

ಬೆಂಗಳೂರು

  • Share this:
ದೇಶದಲ್ಲಿ ಬೆಂಗಳೂರು (Bengaluru) ವಾಸಕ್ಕೆ ಯೋಗ್ಯ ನಗರವಾಗಿದ್ದು, ಬೇರೆ ಬೇರೆ ಊರುಗಳಿಂದ ಜನ ಉದ್ಯೋಗ, ವಸತಿ ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ. ಕೋಟ್ಯಂತರ ಜನಸಂಖ್ಯೆ ಹೊಂದಿರುವ ನಗರದಲ್ಲಿ ಜನ ಹೆಚ್ಚಾದಂತೆ ಸೌಲಭ್ಯಗಳು ಸಹ ಹೆಚ್ಚಾಗುತ್ತಿದೆ ಮತ್ತು ಬೆಲೆ ಏರಿಕೆ (Price hike) ಕೂಡ ರಾಕೆಟ್ ನಂತೆ ಏರುತ್ತಿದೆ. ಬೆಂಗಳೂರಿನಲ್ಲಿ ಮನೆ ಹೊಂದುವ ಬಯಕೆ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಲೇ (Expensive) ಇದೆ. ಈ ವರ್ಷ ಕಳೆದ ಮೂರು ವರ್ಷಗಳಲ್ಲಿಯೇ ಒಂದು ಚದರಡಿ ಭೂಮಿ ಬೆಲೆ ಅಧಿಕವಾಗಿದೆ ಎಂದು ವರದಿಯೊಂದು ತಿಳಿಸಿದೆ. ಬೆಂಗಳೂರಿನಲ್ಲಿ ವಸತಿ ಬೆಲೆಗಳು (Housing price) ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 4% ಹೆಚ್ಚಾಗಿದೆ ಎಂದು ವರದಿಯೊಂದು ತಿಳಿಸಿದೆ. 

ಬೆಂಗಳೂರಿನಲ್ಲಿ ವಸತಿ ಬೆಲೆಗಳಲ್ಲಿ 4% ಹೆಚ್ಚಳ
ವಸತಿ ಬೆಲೆಗಳು ಏಪ್ರಿಲ್ ಮತ್ತು ಜೂನ್ ತ್ರೈಮಾಸಿಕದಲ್ಲಿ 4% ಹೆಚ್ಚಾಗಿದೆ ಅಂತ ವರದಿಯೊಂದು ತಿಳಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಬೆಂಗಳೂರಿನ ವಸತಿ ಬೆಲೆಗಳು ಮೂರು ವರ್ಷಗಳ ಗರಿಷ್ಠ ಮಟ್ಟದಲ್ಲಿದ್ದು, ವರ್ಷದಿಂದ ವರ್ಷಕ್ಕೆ ನಾಲ್ಕು ಶೇಕಡಾ ಏರಿಕೆಯಾಗಿದೆ. ಮಾರಾಟವಾಗದ ಮನೆಗಳನ್ನು ಏಳು ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಅತ್ಯಧಿಕ ವೇಗದಲ್ಲಿ ಖರೀದಿಸಲಾಗಿದೆ, ಇದು ಬೇಡಿಕೆಯಲ್ಲಿ ಪುನರುಜ್ಜೀವನವನ್ನು ಸೂಚಿಸುವ ಅಂಕಿಅಂಶವಾಗಿದೆ ಎನ್ನಬಹುದು.

ಬೆಂಗಳೂರಿನಲ್ಲಿ ವಸತಿಗಳ ಚದರ ಅಡಿ ಬೆಲೆ ₹7,848
ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನಿಂದ ಜೂನ್ ತ್ರೈಮಾಸಿಕದಲ್ಲಿ ಬೆಂಗಳೂರಿನಲ್ಲಿ ವಸತಿಗಳ ಚದರ ಅಡಿ ಬೆಲೆಯು ₹7,848 ರಷ್ಟಿದೆ. ಬೆಂಗಳೂರಿನಲ್ಲಿ ವಸತಿ ಬೆಲೆಗಳು ಎರಡನೇ ತ್ರೈಮಾಸಿಕದಲ್ಲಿ ನಾಲ್ಕು ಪ್ರತಿಶತದಷ್ಟು ಏರಿಕೆಯಾಗುವ ಮೂಲಕ ಕೊರೋನಾದ ಮೊದಲಿದ್ದ ಬೇಡಿಕೆಗೆ ಹಿಂದಿರುಗಿದೆ, ಅಲ್ಲದೇ ಕಳೆದ ಮೂರು ವರ್ಷಗಳಲ್ಲಿಯೇ ಇದು ಹೆಚ್ಚಿನ ಬೆಲೆಯಾಗಿದೆ ಎಂದು ವರದಿಯಾಗಿದೆ.

ರಿಯಾಲ್ಟರ್‌ಗಳ ಅಪೆಕ್ಸ್ ಬಾಡಿ ಕ್ರೆಡೈ, ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕೊಲಿಯರ್ಸ್ ಇಂಡಿಯಾ ಮತ್ತು ಡೇಟಾ ವಿಶ್ಲೇಷಣಾ ಸಂಸ್ಥೆ ಲಿಯಾಸಸ್ ಫೊರಾಸ್ ಎಂಟು ಪ್ರಮುಖ ನಗರಗಳಿಗೆ 'ಹೌಸಿಂಗ್ ಪ್ರೈಸ್-ಟ್ರ್ಯಾಕರ್ ವರದಿ 2022' ಅನ್ನು ಹೊರತಂದಿವೆ.

ವರದಿಯು ಬೆಂಗಳೂರು, ದೆಹಲಿ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಪುಣೆ, ಮುಂಬೈ ಮತ್ತು ಅಹಮದಾಬಾದ್ ನಗರಗಳ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಪ್ರವೃತ್ತಿಯನ್ನು ವಿಶ್ಲೇಷಿಸುವ ಅಂಕಿಅಂಶವನ್ನು ಹೊರಡಿಸಿದೆ.

ಇದನ್ನೂ ಓದಿ:  Pushpa: ಪುಷ್ಪ ಸಿನಿಮಾ ರೀತಿಯಲ್ಲೇ ಕೋಲಾರದಲ್ಲಿ ರಕ್ತಚಂದನ ಸಾಗಾಟ! ಹೇಗಿತ್ತು ಆಪರೇಷನ್?

ಎಂಟು ನಗರಗಳಲ್ಲಿ ವಸತಿ ಬೆಲೆಗಳ ಹೆಚ್ಚಳವನ್ನು ವಿವರಿಸುವ ಮಾಹಿತಿ ಈ ಕೆಳಕಂಡಂತಿದೆ.

ನಗರ ವಸತಿ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಳ

  • ದೆಹಲಿ 10 %

  • ಅಹಮದಾಬಾದ್ 9 %

  • ಹೈದರಾಬಾದ್ 8 %

  • ಕೋಲ್ಕತ್ತಾ 8 %

  • ಪುಣೆ 5 %

  • ಬೆಂಗಳೂರು 4 %

  • ಚೆನ್ನೈ 1 %

  • ಮುಂಬೈ 1 %


ಮಾಹಿತಿಯ ಪ್ರಕಾರ, ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅಹಮದಾಬಾದ್‌ನಲ್ಲಿನ ವಸತಿ ಬೆಲೆಗಳು ವರ್ಷದಿಂದ ವರ್ಷಕ್ಕೆ ಪ್ರತಿ ಚದರ ಅಡಿಗೆ ₹ 5,927, ಬೆಂಗಳೂರಲ್ಲಿ ಪ್ರತಿ ಚದರ ಅಡಿಗೆ ₹ 7,848 ಆಗುವ ಮೂಲಕ 4 ಪ್ರತಿಶತದಷ್ಟು ಬೆಲೆ ಏರಿಕೆ ಕಂಡರೆ, ಚೆನ್ನೈ ಕೇವಲ ಒಂದು ಪ್ರತಿ ಚದರ ಅಡಿಗೆ ₹ 7,129 ಕ್ಕೆ ಏರಿಕೆ ಕಂಡಿದೆ.

Prices of residential areas in Bengaluru rise 4 percent in the April June quarter this year
ಸಾಂದರ್ಭಿಕ ಚಿತ್ರ


ಹೈದರಾಬಾದ್‌ನಲ್ಲಿ ವಸತಿ ದರಗಳು ಏಪ್ರಿಲ್-ಜೂನ್‌ನಲ್ಲಿ ಪ್ರತಿ ಚದರ ಅಡಿಗೆ ₹9,218 ರಷ್ಟಿದ್ದು, ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 8% ಹೆಚ್ಚಾಗಿದೆ. ದೆಹಲಿ-ಎನ್‌ಸಿಆರ್ ಪ್ರಾಪರ್ಟಿ ಮಾರುಕಟ್ಟೆಯಲ್ಲಿ ವಸತಿ ಬೆಲೆಗಳು ಪ್ರತಿ ಚದರ ಅಡಿಗೆ ₹7,434 ಕ್ಕೆ ಏರಿದ್ದು 10 ಪ್ರತಿಶತದಷ್ಟು ವಾರ್ಷಿಕ ಹೆಚ್ಚಳವನ್ನು ಕಂಡಿವೆ.

ಇದನ್ನೂ ಓದಿ: Karnataka HC: ಗಂಡ ತನ್ನ ಹೆಂಡತಿ ಜೊತೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಮಾತ್ನಾಡೋದು ಕ್ರೌರ್ಯವಲ್ಲ

ಬೆಂಗಳೂರಿನ ಯಾವ ನಗರಗಳಲ್ಲಿ ಬೆಲೆ ಹೆಚ್ಚಳ?

ಅತ್ತಿಬೆಲೆ ಸರ್ಜಾಪುರ ವಿಲೇಜ್ ಜಂಕ್ಷನ್, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಹಂತ-2, ಆರ್‌ಆರ್ ನಗರ-ಕೆಂಚನಹಳ್ಳಿ ಸೇರಿದಂತೆ ನಗರದ ಹೊರವಲಯ ಮತ್ತು ಹೊರ ದಕ್ಷಿಣ ವಲಯದಲ್ಲಿ ಬೆಲೆಗಳು ಶೇಕಡಾ 4 ರಷ್ಟು ಏರಿಕೆಯಾಗಿವೆ ಮತ್ತು ಹೊರ ಪೂರ್ವ ಪ್ರದೇಶ, ಹೊಸಕೋಟೆ ಗ್ರಾಮ, ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ 1, ಕಾಡುಗೋಡಿ - ಸದರಮಂಗಲ, ಹಳೆ ಮದ್ರಾಸ್ ರಸ್ತೆ - ಆವಲಹಳ್ಳಿ ಮತ್ತು ವೈಟ್‌ಫೀಲ್ಡ್ ರಸ್ತೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಬೆಲೆಗಳು ಶೇಕಡಾ 10 ರಷ್ಟು ಏರಿಕೆಯಾಗಿದೆ.
Published by:Ashwini Prabhu
First published: