Power Cut: 2 ದಿನ ಸೆಖೆ ಸಹಿಸದೆ ಬೇರೆ ದಾರಿ ಇಲ್ಲ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ಕಡಿತ
ಮೇ 26 ಮತ್ತು ಮೇ 27 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಪೈಕಿ ಉತ್ತರ ವಲಯದ ಹೆಬ್ಬಾಳದ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇಸಗೆಯಲ್ಲಿ ವಿದ್ಯುತ್ ಕಡಿತ (Power Cut) ಜನರನ್ನು ಮತ್ತಷ್ಟು ಹೈರಾಣಾಗಿಸಲಿದೆ. ಬೇಸಿಗೆಯ (Summer) ಸೆಖೆ ಮತ್ತು ಮಳೆಯ ಅವಾಂತರ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಎಸಿ, ಫ್ಯಾನ್ ಇಲ್ಲದೆ ಪರದಾಡುವ ಸ್ಥಿತಿ ಇದೆ. ಇತ್ತ ಆಗಾಗ್ಗೆ ಬರುವ ಮಳೆಯ ಆರ್ಭಟ, ಮರಗಳು ಉರುಳುವುದು, ಲೈನ್ ಗಳು ಕಟ್ ಆಗುವುದು ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.
ಇಂದು ಮತ್ತು ನಾಳೆ ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.
ಮೇ 26 ಮತ್ತು ಮೇ 27 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇಂದು (ಮೇ 26) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:
ಉತ್ತರ ವಲಯ: ವಿಶ್ವೇಶ್ವರಯ್ಯ ಪಾರ್ಕ್ ರಥನ ಆಪ್, ವಿಶ್ವೇಶ್ವರಯ್ಯ ಪಾರ್ಕ್ ರಥನಾ ಆಪ್ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಾಳೆ (ಮೇ 27) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:
ಉತ್ತರ ವಲಯ: ಗಂಗಾ ನಗರ ಮತ್ತು ಆರ್ ಟಿ ನಗರ 2ನೇ ಬ್ಲಾಕ್, ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಪ್ರಿಯತಮೆಯ ಭೇಟಿಗಾಗಿ ಇಡೀ ಗ್ರಾಮವನ್ನೇ ಕತ್ತಲಲ್ಲಿ ಮುಳುಗಿಸುತ್ತಿದ್ದ ಘಟನೆ
ತನ್ನ ಪ್ರಿಯತಮೆಯ ಭೇಟಿಗಾಗಿ ಇಡೀ ಗ್ರಾಮವನ್ನೇ ವ್ಯಕ್ತಿಯೊಬ್ಬ ಕತ್ತಲಲ್ಲಿ ಮುಳುಗಿಸುತ್ತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಪುರ್ನಿಯಾ ಜಿಲ್ಲೆಯ ಗಣೇಶಪುರದ ಜನರು ಪ್ರತಿನಿತ್ಯ ಸಂಜೆ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರು. ಆದರೆ, ಈ ವಿದ್ಯುತ್ ಸಮಸ್ಯೆಗೆ ಕಾರಣ ಒಬ್ಬ ಪ್ರೇಮಿಯಾಗಿದ್ದಾನೆ.
ಗ್ರಾಮದ ಎಲೆಕ್ಟ್ರಿಶಿಯನ್ ಒಬ್ಬ ಅದೇ ಗ್ರಾಮದ ಹುಡುಗಿಯನ್ನು ಪ್ರೀತಿಸುತ್ತಿದ್ದ. ತನ್ನ ಪ್ರೇಯಸಿಯನ್ನು ಖಾಸಗಿಯಾಗಿ ಭೇಟಿಯಾದರೆ ಹಳ್ಳಿಯಲ್ಲಿ ಯಾರ ಕೈಗೆ ಬೇಕಾದರೂ ಸಿಕ್ಕಿ ಬೀಳಬಹುದು ಎಂದು ಆತ ಆಲೋಚಿಸಿದ ಆತನಿಗೆ ಹೊಳೆದಿದ್ದ ಐಡಿಯಾ ಮಾತ್ರ ಸೂಪರ್.
ಮೂರುಗಂಟೆಗಳ ಕಾಲ ಈತ ವಿದ್ಯುತ್ ಕಡಿತ
ತಮ್ಮ ಇಬ್ಬರ ಭೇಟಿಯ ಯಾರ ಕಣ್ಣಿಗೆ ಕಾಣದಂತೆ ಮಾಡಲು ಆತ ಇಡೀ ಗ್ರಾಮವನ್ನೇ ಕತ್ತಲಲ್ಲಿ ಮುಳುಗಿಸುತ್ತಿದ್ದ. ಪ್ರತಿನಿತ್ಯ ಸಂಜೆ ನಿರ್ಧಿಷ್ಟ ಸಮಯದಲ್ಲಿ ಎರಡು ಮೂರುಗಂಟೆಗಳ ಕಾಲ ಈತ ವಿದ್ಯುತ್ ಕಡಿತ ಮಾಡುತ್ತಿದ್ದ.
ಈ ವೇಳೆ ತನ್ನ ನಲೆಯೊಂದಿಗೆ ಸಂಭಾಷಣೆ ನಡೆಸಿ, ಆಕೆಯೊಂದಿಗೆ ನಿರ್ಭಿತಿಯಿಂದ ಕಾಲ ಕಳೆಯುತ್ತಿದ್ದ. ಇತ್ತ ಗ್ರಾಮದಲ್ಲಿ ದಿನನಿತ್ಯ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಜನರಿಗೆ ಕರೆಂಟ್ ಹೋಗುತ್ತಿರುವುದು ವಿಚಿತ್ರವಾಗಿ ಕಂಡಿತು.
ಪಕ್ಕದ ಹಳ್ಳಿಗಳಲ್ಲಿ ದಿನ ನಿತ್ಯ ವಿದ್ಯುತ್ ಇರುವುದು ಅನುಮಾನ
ಕಾರಣ ತಮ್ಮ ಹಳ್ಳಿಯಲ್ಲಿ ಮಾತ್ರ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಪಕ್ಕದ ಹಳ್ಳಿಗಳಲ್ಲಿ ದಿನ ನಿತ್ಯ ವಿದ್ಯುತ್ ಇರುವುದು ಅನುಮಾನ ಮೂಡಿಸಿತು. ಈ ಹಿನ್ನಲೆ ಇದರ ಹಿಂದಿನ ಕಾರಣ ತಿಳಿಯಲು ತನಿಖೆಗೆ ಮುಂದಾದರು.
ಈ ವೇಳೆ ಕರೆಂಟ್ ಕಡಿತಗೊಂಡಾಗ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಇಬ್ಬರು ಇರುವುದು ಪತ್ತೆಯಾಗಿದ್ದು,
ಅದು ಆ ಪ್ರಿಯತಮ- ಪ್ರಿಯತಮೆ ಎಂಬುದು ಅರಿವಾಯಿತು.ಕಡೆಗೆ ಎಲೆಕ್ಟ್ರಿಷಿಯನ್ ಹಿಡಿದು ಥಳಿಸಿದ ಗ್ರಾಮಸ್ಥರು ಕಾರಣ ಕೇಳಿದಾಗ ಅಸಲಿ ವಿಷಯ ಬಹಿರಂಗಗೊಂಡಿದೆ. ತಾವು ತನ್ನ ಪ್ರೇಯಸಿಯನ್ನು ನೋಡಲು ಬಯಸಿದಾಗ ವಿದ್ಯುತ್ ಕಡಿತಗೊಳಿಸುವುದಾಗಿ ತಿಳಿಸಿದ್ದ.