ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ (Parts) ವಿದ್ಯುತ್ ಕಡಿತವಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.
ಜನವರಿ 23 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಪೂರ್ವ ವೈಟ್ಫೀಲ್ಡ್, ಎಫ್ 24 ಪಿಎಂ ಸ್ಟ್ರೀಟ್, ಎಫ್ 29 ಶೋಭಾ ಪರ್ಲ್, ಎಫ್ 14 ಕಾರ್ನೇಡ್, ಎಫ್ 15 ಕಾಮರಾಜ್ ರಸ್ತೆ,
ಎಫ್ 18 ಫುಡ್ ಕಾಂಪ್ಲೆಕ್ಸ್, ಎಫ್ 32 ತಿವಾರಿ ಸ್ವೀಟ್ಸ್, ಎಫ್ 31 ಮೋಟೋರೋಲಾ, ಎಫ್ 10 ಮೇಯೋ ಹಾಲ್ ಅಗ್ನಿಶಾಮಕ ಠಾಣೆ, ಎಫ್ 3 MG ರಸ್ತೆ ಪಬ್, ಎಫ್ 2 ನಿತೀಶ್ ಲೋಗೋಸ್ ಎನ್ ಜಿಇಎಫ್ ಎಸ್ಟೇಟ್ ನಲ್ಲಿ ವಿದ್ಯುತ್ ಕಡಿತವಾಗಲಿದೆ.
ಜನವರಿ 23 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಎಚ್ ಎಸ್ ಆರ್ ಲೇಔಟ್ ನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಸಿದ್ದಾಪುರ, ಹರಿದ್ಸನಹಳ್ಳಿ, ಬನಸಂದ್ರ, ಅಮ್ಮಸಂದ್ರ, ದಾದಿಂಶಿವರ, ದುಂಡ ಲಕ್ಷ್ಮಿ ಲೇಔಟ್,
ಸೌತ್ಸಿಟಿ ಅಪಾರ್ಟ್ಮೆಂಟ್, ಕಮ್ಮನಹಳ್ಳಿ, ಶಾಂತಿನಿಕೇತನ, ದೊಡ್ಡಮ್ಮ ಲೇಔಟ್, ಪಾಂಡುರಂಗನಗರ ಲೇಔಟ್, ಬಿಡಬ್ಯುಎಸ್ಎಸ್ ಬಿ ಕೊತ್ತನೂರು, ಮೋಟಪ್ಪ ಕಾಂಪೌಂಡ್, ಮಹೇಂದ್ರ ಮನೆಗಳು, ಗುಡ್ ಮನೆಗಳು, ಎಸ್12 & ಎಸ್14 ಉಪ ವಿಭಾಗದ ಸುತ್ತಮುತ್ತಲಿನ ಪ್ರದೇಶ.
ಜನವರಿ 24 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ದಕ್ಷಿಣ ಕೆಂಗೇರಿ, ಸೋಮನಹಳ್ಳಿ ಮತ್ತು ಕನಕಪುರ ಲೈನ್ ನಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.
ಜನವರಿ 24 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ದಕ್ಷಿಣ ಜಯನಗರ, ಆರ್ಬಿಐ ಲೇಔಟ್, ಕೊತ್ತನೂರು, ಜೆ.ಪಿ ನಗರ 5 ನೇ ಹಂತ, ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಲೇಔಟ್,
ನೃಪತುಂಗ ನಗರ, ಜಂಬೂಸವಾರೆ ದಿನ್ನೆ, ಚುಂಚುಘಟ್ಟ, ಬ್ರಿಗೇಡ್ ಮಿಲೇನಿಯಂ ಮತ್ತು ಬ್ರಿಗ್ಡ್ ಗಾರ್ಡೇನಿಯಾ ಸುತ್ತಮುತ್ತಲಿನ ಪ್ರದೇಶಗಳು. ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್ ವಿದ್ಯುತ್ ಕಡಿತವಾಗಲಿದೆ.
ಜನವರಿ 24 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಉತ್ತರ ಹೆಬ್ಬಾಳ, ಆರ್ಟಿ ನಗರ, ಗಂಗಾನಗರ, ಚೋಳನಗರ, ಹೊರ ವರ್ತುಲ ರಸ್ತೆ, ಕರಿಯಪ್ಪಲೇಔಟ್, ಆಶಾರ ರಸ್ತೆ, 1ನೇ ಬ್ಲಾಕ್ ಆನಂದ್ ನಗರ,
ಗುಡಪ್ಪ ರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ 1ನೇ ಬ್ಲಾಕ್ ನಂದಿ ದುರ್ಗ, ಜೇಕರಪ್ಪನ ಗಾರ್ಡನ್ ಇತ್ಯಾದಿ. ಮಾರಪ್ಪ ಗಾರ್ಡನ್, ಜೆಸಿ ನಗರ, ಮಿಲ್ಲರ್ಸ್ ರಸ್ತೆ ಇತ್ಯಾದಿ ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.
ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ
ಜನವರಿ 22 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಚಂದ್ರಾಪುರ, ಎಲೆಕ್ಟ್ರಾನಿಕ್ ಸಿಟಿ Ph-1, ನೀಲಾದ್ರಿ ರಸ್ತೆ, ಹೆಬಗೋಡಿ, ವೀರಸಂದ್ರ, ಗೋಲಹಳ್ಳಿ, ಇಎಚ್ ಟಿ ಇನ್ಫೋಸಿಸ್, ಹುಲಿಮಂಗಲ ಸ್ಟೇಷನ್ ಪ್ರದೇಶ, ದೊಮ್ಮಸಂದ್ರ ಉಪಕೇಂದ್ರ ಸುತ್ತಮುತ್ತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ