• Home
 • »
 • News
 • »
 • bengaluru-urban
 • »
 • PM Modi In Bengaluru: ಬೆಂಗಳೂರಿಗೆ ಮೋದಿ; ಈ ರೈಲುಗಳು ರದ್ದು, ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

PM Modi In Bengaluru: ಬೆಂಗಳೂರಿಗೆ ಮೋದಿ; ಈ ರೈಲುಗಳು ರದ್ದು, ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನಶತಾಬ್ದಿ, ರಾಜ್ಯರಾಣಿ ಎಕ್ಸ್‌ಪ್ರೆಸ್‌, ವಿಶ್ವಮಾನವ ರೈಲು ಸೇವೆಗಳು ಅಂದಾಜು 2 ತಾಸು ವಿಳಂಬವಾಗಿ ಸೇವೆ ದೊರೆಯುವ ಸಾಧ್ಯತೆಯಿದೆ ಎಂದು ನೈರುತ್ಯ ರೈಲ್ವೇ ಇಲಾಖೆ ಅಧಿಕಾರಿಗಳಿಂದ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರಿಗೆ (PM Modi Visits Bengaluru) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರ್ಯಕ್ರಮದ ಹಿನ್ನೆಲೆ KSR - ಚನ್ನಪಟ್ಟಣ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದುಗೊಳಿಸಲಾಗಿದೆ. ಕಣ್ಣೂರ್ - KSR ಎಕ್ಸ್‌ಪ್ರೆಸ್‌ ರೈಲು ಮೆಜೆಸ್ಟಿಕ್ ಬದಲಿಗೆ ಯಶವಂತಪುರದಲ್ಲೇ ಹಾಲ್ಟ್ ಮಾಡಲಿದೆ. ಅರಸಿಕೆರೆ - KSR, ಕೋಲಾರ - KSR (Demu Express) ರೈಲು ಕೂಡ ರದ್ದುಗೊಂಡಿದೆ. ಮೈಸೂರು - KSR ಎಕ್ಸ್‌ಪ್ರೆಸ್‌ ಮೆಜೆಸ್ಟಿಕ್ ಬದಲು ನಾಯಂಡನಹಳ್ಳಿ ಕಡೆಯ ನಿಲ್ದಾಣವಾಗಿ ಬದಲಾವಣೆ ಮಾಡಲಾಗಿದೆ. KSR - ಹಿಂದೂಪುರ menu express ಇಂದಿನ ಟೇಬಲ್ ಅನುಸರಿಸಿ ರದ್ದಾಗುವ ಸಾಧ್ಯತೆ ಇಂದೆ ಎಂದೆ ಭಾರತೀಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


  ಜನಶತಾಬ್ದಿ, ರಾಜ್ಯರಾಣಿ ಎಕ್ಸ್‌ಪ್ರೆಸ್‌, ವಿಶ್ವಮಾನವ ರೈಲು ಸೇವೆಗಳು ಅಂದಾಜು 2 ತಾಸು ವಿಳಂಬವಾಗಿ ಸೇವೆ ದೊರೆಯುವ ಸಾಧ್ಯತೆಯಿದೆ ಎಂದು ನೈರುತ್ಯ ರೈಲ್ವೇ ಇಲಾಖೆ ಅಧಿಕಾರಿಗಳಿಂದ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.


  KSR - ಚನ್ನಪಟ್ಟಣ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದು
  ಕಾರ್ಯಕ್ರಮದ ಹಿನ್ನೆಲೆ KSR - ಚನ್ನಪಟ್ಟಣ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದುಗೊಳಿಸಲಾಗಿದೆ. ಕಣ್ಣೂರ್ - KSR ಎಕ್ಸ್‌ಪ್ರೆಸ್‌ ರೈಲು ಮೆಜೆಸ್ಟಿಕ್ ಬದಲಿಗೆ ಯಶವಂತಪುರದಲ್ಲೇ ಹಾಲ್ಟ್ ಮಾಡಲಿದೆ. ಅರಸಿಕೆರೆ - KSR, ಕೋಲಾರ - KSR (Demu Express) ರೈಲು ಕೂಡ ರದ್ದುಗೊಂಡಿದೆ. ಮೈಸೂರು - KSR ಎಕ್ಸ್‌ಪ್ರೆಸ್‌ ಮೆಜೆಸ್ಟಿಕ್ ಬದಲು ನಾಯಂಡನಹಳ್ಳಿ ಕಡೆಯ ನಿಲ್ದಾಣವಾಗಿ ಬದಲಾವಣೆ ಮಾಡಲಾಗಿದೆ. KSR - ಹಿಂದೂಪುರ menu express ಇಂದಿನ ಟೇಬಲ್ ಅನುಸರಿಸಿ ರದ್ದಾಗುವ ಸಾಧ್ಯತೆ ಇಂದೆ ಎಂದೆ ಭಾರತೀಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


  ಜನಶತಾಬ್ದಿ, ರಾಜ್ಯರಾಣಿ ಎಕ್ಸ್‌ಪ್ರೆಸ್‌, ವಿಶ್ವಮಾನವ ರೈಲು ಸೇವೆಗಳು ಅಂದಾಜು 2 ತಾಸು ವಿಳಂಬವಾಗಿ ಸೇವೆ ದೊರೆಯುವ ಸಾಧ್ಯತೆಯಿದೆ ಎಂದು ನೈರುತ್ಯ ರೈಲ್ವೇ ಇಲಾಖೆ ಅಧಿಕಾರಿಗಳಿಂದ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.


  ಈ ರಸ್ತೆಗಳಲ್ಲಿ ಸಂಚರಿಸಬೇಡಿ; ಬಂದ್ ಇರುತ್ತೆ
  ಪ್ರಧಾನಿ ನರೇಂದ್ರ ಮೋದಿಯವರು (PM Narendra Modi Bengauru Visit) ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ರಸ್ತೆಗಳಲ್ಲಿ (Bengaluru Traffic) ಸಂಚಾರಿ ಮಾರ್ಗಗಳ ಮಾರ್ಪಾಡು ಮಾಡಲಾಗಿದೆ. ನವೆಂಬರ್ 11ರ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಈ ವಿವಿಧ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರ ಬಂದ್ ಮಾಡಲಾಗಿದೆ. ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ (Mysuru-Bengaluru-Chennai Vande Bharat Express) ಚಾಲನೆ ನೀಡಲಿದ್ದಾರೆ.


  ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.


  ಈ ಮಾರ್ಗಗಳೂ ನಿರ್ಬಂಧ
  ಏರ್ ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ ಬಂದ್ ಆಗಿರಲಿದೆ. ಶೇಷಾದ್ರಿ ರಸ್ತೆಯಲ್ಲಿ - ಮಹಾರಾಣಿ ಬ್ರಿಡ್ಜ್ ನಿಂದ - ರೈಲ್ವೆ ಸ್ಟೇಷನ್ ಪ್ರವೇಶ ದ್ವಾರದವರೆಗೆ, ಕೆ.ಜಿ ರಸ್ತೆಯಲ್ಲಿ - ಶಾಂತಲಾ ಜಂಕ್ಷನ್​ನಿಂದ ಮೈಸೂರು ಬ್ಯಾಂಕ್‌ ಸರ್ಕಲ್​ವರೆಗೆ ಬಂದ್ ಆಗಿರಲಿದೆ.


  ವಾಟಾಳ್ ನಾಗರಾಜ್ ರಸ್ತೆಯಲ್ಲಿ - ಕೋಡೆ ಅಂಡರ್ ಪಾಸ್ ನಿಂದ ಪಿ.ಎಫ್ ವರೆಗೆ, ಇಂಟರ್‌ನ್ಯಾಷನಲ್ ಏ‌ಪೋರ್ಟ್‌ನ ಸುತ್ತ ಮತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.


  ಪರ್ಯಾಯ ಮಾರ್ಗಗಳು ಹೀಗಿವೆ ನೋಡಿ
  ನಿರ್ಬಂಧಿಸಲಾದ ರಸ್ತೆಗಳಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಬೆಂಗಳೂರು ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳು ಹೀಗಿವೆ.


  ಮೈಸೂರು ಬ್ಯಾಂಕ್‌ ವೃತ್ತದಿಂದ ಪ್ಯಾಲೇಸ್ ರಸ್ತೆಗೆ ಬರುವ ವಾಹನ ಸವಾರರು ಕೆ.ಜಿ. ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ.


  ಎಲ್‌ಆರ್‌ಡಿಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸುವವರು ರಾಜಭವನ ರಸ್ತೆ ಮೂಲಕ ಮುಂದೆ ಸಂಚಾರ ಮಾಡಬಹುದಾಗಿದೆ.


  ಇದನ್ನೂ ಓದಿ: Kalaburagi: ಕಣ್ಣಿಗೆ ಕಾಣದ ಹಾವು 600 ಜನರಿಗೆ ಕಚ್ಚಿದೆಯಂತೆ! ಕಲಬುರಗಿಯ ಈ ಗ್ರಾಮದಲ್ಲಿ ತ್ರಿಶಂಕು ಸ್ಥಿತಿ


  ಟ್ರಿಲೈಟ್ ಜಂಕ್ಷನ್ ನಿಂದ ಮೌರ್ಯ ಜಂಕ್ಷನ್ ಮೂಲಕ ಬರುವವರು ರೇಸ್‌ ವ್ಯೂವ್ ಸರ್ಕಲ್‌ನಲ್ಲಿ - ಶಿವಾನಂದ ಸರ್ಕಲ್‌ನಲ್ಲಿ ಎಡತಿರುವು ನೆಹರು ಸರ್ಕಲ್ ಮೂಲಕ ಸಂಚಾರ ಮಾಡಬಹುದಾಗಿದೆ.


  ಕೆಕೆ ರಸ್ತೆ ಮೂಲಕ ವಿಂಡ್ಸ್‌ ಮ್ಯಾನರ್ ವೃತ್ತಕ್ಕೆ ತೆರಳುವ ವಾಹನ ಸವಾರರು ಶಿವಾನಂದ ಸರ್ಕಲ್‌ನಲ್ಲಿ - ನೆಹರು ಸರ್ಕಲ್‌ ಮೂಲಕ ಪ್ರಯಾಣ ಮಾಡಬಹುದಾಗಿದೆ ಸಂಚಾರ ಮಾಡಬಹುದಾಗಿದೆ.


  ಬಿಹೆಚ್‌ ಇಎಲ್ ಸರ್ಕಲ್‌ನಿಂದ ಮೇಕ್ರಿ ಸರ್ಕಲ್ ಕಡೆಗೆ ಬರುವ ವಾಹನ ಸವಾರರು ಸದಾಶಿವನಗರ ಪೊಲೀಸ್ ಠಾಣೆ - ಮಾರಮ್ಮ ಸರ್ಕಲ್ - ಮಾರ್ಗೋಸ ರಸ್ತೆ ಮೂಲಕ‌ ಸಂಚಾರ ಮಾಡಬಹುದಾಗಿದೆ.


  ಭಾಷ್ಯಂ ಸರ್ಕಲ್‌ನಿಂದ ಕಾವೇರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಮಲ್ಲೇಶ್ವರಂ 18ನೇ ಕ್ರಾಸ್ - ಮಾರ್ಗೋಸ ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ.


  ಇದ್ನನೂ ಓದಿ: Vande Bharat vs Shatabdi: ಮೈಸೂರು-ಬೆಂಗಳೂರು-ಚೆನ್ನೈ ಓಡಾಟಕ್ಕೆ ಈ 2 ರೈಲುಗಳೇ ಬೆಸ್ಟ್!


  ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ, ಕಡೆಗೆ ಬರುವ ವಾಹನ ಸವಾರರು ಸಿದ್ದಲಿಂಗಯ್ಯ ವೃತ್ತ - ಆರ್.ಆರ್.ಎಂ.ಆರ್. ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ.


  ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಸಂಚರಿಸಲು‌ ಅವಕಾಶ ನೀಡಲಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: