• Home
 • »
 • News
 • »
 • bengaluru-urban
 • »
 • Bengaluru Traffic: ಬೆಂಗಳೂರಿಗೆ ಮೋದಿ, ಈ ರಸ್ತೆಗಳು ಬಂದ್, ಪರ್ಯಾಯ ಮಾರ್ಗ ಹೀಗಿದೆ

Bengaluru Traffic: ಬೆಂಗಳೂರಿಗೆ ಮೋದಿ, ಈ ರಸ್ತೆಗಳು ಬಂದ್, ಪರ್ಯಾಯ ಮಾರ್ಗ ಹೀಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

PM Narendra Modi Bengaluru Visit: ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರಿ ಮಾರ್ಗಗಳ ಮಾರ್ಪಾಡು ಮಾಡಲಾಗಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi Bengauru Visit) ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ರಸ್ತೆಗಳಲ್ಲಿ (Bengaluru Traffic)  ಸಂಚಾರಿ ಮಾರ್ಗಗಳ ಮಾರ್ಪಾಡು ಮಾಡಲಾಗಿದೆ. ನವೆಂಬರ್ 11ರ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಈ ವಿವಿಧ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರ ಬಂದ್ ಮಾಡಲಾಗಿದೆ. ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ (Mysuru-Bengaluru-Chennai Vande Bharat Express)  ಚಾಲನೆ ನೀಡಲಿದ್ದಾರೆ.


  ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.


  ಈ ಮಾರ್ಗಗಳೂ ನಿರ್ಬಂಧ
  ಏರ್ ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ ಬಂದ್ ಆಗಿರಲಿದೆ. ಶೇಷಾದ್ರಿ ರಸ್ತೆಯಲ್ಲಿ - ಮಹಾರಾಣಿ ಬ್ರಿಡ್ಜ್ ನಿಂದ - ರೈಲ್ವೆ ಸ್ಟೇಷನ್ ಪ್ರವೇಶ ದ್ವಾರದವರೆಗೆ, ಕೆ.ಜಿ ರಸ್ತೆಯಲ್ಲಿ - ಶಾಂತಲಾ ಜಂಕ್ಷನ್​ನಿಂದ ಮೈಸೂರು ಬ್ಯಾಂಕ್‌ ಸರ್ಕಲ್​ವರೆಗೆ ಬಂದ್ ಆಗಿರಲಿದೆ.


  ವಾಟಾಳ್ ನಾಗರಾಜ್ ರಸ್ತೆಯಲ್ಲಿ - ಕೋಡೆ ಅಂಡರ್ ಪಾಸ್ ನಿಂದ ಪಿ.ಎಫ್ ವರೆಗೆ, ಇಂಟರ್‌ನ್ಯಾಷನಲ್ ಏ‌ಪೋರ್ಟ್‌ನ ಸುತ್ತ ಮತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.


  ಪರ್ಯಾಯ ಮಾರ್ಗಗಳು ಹೀಗಿವೆ ನೋಡಿ
  ನಿರ್ಬಂಧಿಸಲಾದ ರಸ್ತೆಗಳಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಬೆಂಗಳೂರು ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳು ಹೀಗಿವೆ.


  ಮೈಸೂರು ಬ್ಯಾಂಕ್‌ ವೃತ್ತದಿಂದ ಪ್ಯಾಲೇಸ್ ರಸ್ತೆಗೆ ಬರುವ ವಾಹನ ಸವಾರರು ಕೆ.ಜಿ. ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ.


  ಎಲ್‌ಆರ್‌ಡಿಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸುವವರು ರಾಜಭವನ ರಸ್ತೆ ಮೂಲಕ ಮುಂದೆ ಸಂಚಾರ ಮಾಡಬಹುದಾಗಿದೆ.


  ಟ್ರಿಲೈಟ್ ಜಂಕ್ಷನ್ ನಿಂದ ಮೌರ್ಯ ಜಂಕ್ಷನ್ ಮೂಲಕ ಬರುವವರು ರೇಸ್‌ ವ್ಯೂವ್ ಸರ್ಕಲ್‌ನಲ್ಲಿ - ಶಿವಾನಂದ ಸರ್ಕಲ್‌ನಲ್ಲಿ ಎಡತಿರುವು ನೆಹರು ಸರ್ಕಲ್ ಮೂಲಕ ಸಂಚಾರ ಮಾಡಬಹುದಾಗಿದೆ.


  ಇದನ್ನೂ ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


  ಕೆಕೆ ರಸ್ತೆ ಮೂಲಕ ವಿಂಡ್ಸ್‌ ಮ್ಯಾನರ್ ವೃತ್ತಕ್ಕೆ ತೆರಳುವ ವಾಹನ ಸವಾರರು ಶಿವಾನಂದ ಸರ್ಕಲ್‌ನಲ್ಲಿ - ನೆಹರು ಸರ್ಕಲ್‌ ಮೂಲಕ ಪ್ರಯಾಣ ಮಾಡಬಹುದಾಗಿದೆ ಸಂಚಾರ ಮಾಡಬಹುದಾಗಿದೆ.


  ಬಿಹೆಚ್‌ ಇಎಲ್ ಸರ್ಕಲ್‌ನಿಂದ ಮೇಕ್ರಿ ಸರ್ಕಲ್ ಕಡೆಗೆ ಬರುವ ವಾಹನ ಸವಾರರು ಸದಾಶಿವನಗರ ಪೊಲೀಸ್ ಠಾಣೆ - ಮಾರಮ್ಮ ಸರ್ಕಲ್ - ಮಾರ್ಗೋಸ ರಸ್ತೆ ಮೂಲಕ‌ ಸಂಚಾರ ಮಾಡಬಹುದಾಗಿದೆ.


  ಭಾಷ್ಯಂ ಸರ್ಕಲ್‌ನಿಂದ ಕಾವೇರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಮಲ್ಲೇಶ್ವರಂ 18ನೇ ಕ್ರಾಸ್ - ಮಾರ್ಗೋಸ ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ.


  ಇದನ್ನೂ ಓದಿ: Bengaluru: ಬೆಂಗಳೂರು ಉದ್ಯಾನ ನಗರಿ ಎಂದು ಮತ್ತೆ ಸಾಬೀತಾಯ್ತು ನೋಡಿ!


  ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ, ಕಡೆಗೆ ಬರುವ ವಾಹನ ಸವಾರರು ಸಿದ್ದಲಿಂಗಯ್ಯ ವೃತ್ತ - ಆರ್.ಆರ್.ಎಂ.ಆರ್. ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ.


  ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಸಂಚರಿಸಲು‌ ಅವಕಾಶ ನೀಡಲಾಗಿದೆ.


  ವಂದೇ ಭಾರತ್​ಗೆ ಚಾಲನೆ
  ನವೆಂಬರ್ 11 ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಹೈಸ್ಪೀಡ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್‌ಎಸ್) ನಿಲ್ದಾಣದಲ್ಲಿ ಒಂದೇ ನಿಲುಗಡೆಯನ್ನು ಹೊಂದಿರುತ್ತದೆ.


  ವಂದೇ ಭಾರತ್ ಎಕ್ಸ್​ಪ್ರೆಸ್ ಸಂಚಾರ ವಿವರ ಹೀಗಿದೆ
  ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ. ವಾರದಲ್ಲಿ ವಾರದಲ್ಲಿ ಒಟ್ಟು 6 ದಿನ ಈ ರೈಲು ಸೇವೆ ಒದಗಿಸಲಿದೆ. ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ- ಈ 6 ದಿನಗಳಂದು ಮಾತ್ರ ವಂದೇ ಭಾರತ್ ಸಂಚರಿಸಲಿದೆ.

  Published by:ಗುರುಗಣೇಶ ಡಬ್ಗುಳಿ
  First published: