Bengaluru News: ಬೆಂಗಳೂರು ಬಾಲಕನಿಗೆ ಭೇಷ್ ಎಂದ ಪ್ರಧಾನಿ ಮೋದಿ!

ಬೆಂಗಳೂರು ಬಾಲಕನ ಕುಟುಂಬ

ಬೆಂಗಳೂರು ಬಾಲಕನ ಕುಟುಂಬ

ಆದಿತ್ಯ ತನ್ನ ವಾರ್ಷಿಕ ಪರೀಕ್ಷೆಗಳು ಮುಗಿದ ಬಳಿಕ ಇಡೀ ವರ್ಷ ಹೆಚ್ಚುಳಿದ ನೋಟ್​ ಬುಕ್​ ಹಾಳೆಗಳನ್ನು ಜೋಡಿಸಿ ಹೊಸ ನೋಟ್​ ಬುಕ್​ನ್ನೇ ಮಾಡುತ್ತಿದ್ದ. ಪ್ರತಿವರ್ಷವೂ ಬಾಲಕ ಆದಿತ್ಯ ಹೆಚ್ಚುಳಿದ ನೋಟ್​ ಬುಕ್​ನ ಹಾಳೆಗಳನ್ನು ವೇಸ್ಟ್ ಆಗಲು ಬಿಡುತ್ತಿರಲಿಲ್ಲ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru News) ಬಾಲಕನೋರ್ವ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಗಮನ ಸೆಳೆದಿದ್ದಾನೆ. 9ನೇ ತರಗತಿಯಲ್ಲಿ ಓದುತ್ತಿರುವ ಬೆಂಗಳೂರು ಬಾಲಕನತ್ತ ಈಗ ಇಡೀ ದೇಶವೇ ತಿರುಗಿ ನೋಡುತ್ತಿದೆ. ಬೆಂಗಳೂರಿನ ಆದಿತ್ಯ ದೀಪಕ್ ಅವಧಾನಿ ಎಂಬ ವಿದ್ಯಾರ್ಥಿಯೇ (Bengaluru News) ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘನೆಗೆ ಪ್ರಾಪ್ತವಾಗಿರೋದು.


    ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಡಿಯೋಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿ ಆದಿತ್ಯನ ಅಪ್ಪ ತನ್ನ ಮಗನ ಕೆಲಸವೊಂದರ ಬಗ್ಗೆ ಟ್ವೀಟ್ ಮಾಡಿದ್ದರು. ಅದೇ ಟ್ವೀಟ್​ನಿಂದ ಈ ಹುಡುಗ ಭಾರೀ ಸದ್ದು ಮಾಡುತ್ತಿದ್ದಾನೆ.




    ಹೆಚ್ಚಾದ ಹಾಳೆಗಳನ್ನ ವೇಸ್ಟ್ ಮಾಡೋದೇ ಇಲ್ಲ!
    ಆದಿತ್ಯ ತನ್ನ ವಾರ್ಷಿಕ ಪರೀಕ್ಷೆಗಳು ಮುಗಿದ ಬಳಿಕ ಇಡೀ ವರ್ಷ ಹೆಚ್ಚುಳಿದ ನೋಟ್​ ಬುಕ್​ ಹಾಳೆಗಳನ್ನು ಜೋಡಿಸಿ ಹೊಸ ನೋಟ್​ ಬುಕ್​ನ್ನೇ ಮಾಡುತ್ತಿದ್ದ. ಪ್ರತಿವರ್ಷವೂ ಬಾಲಕ ಆದಿತ್ಯ ಹೆಚ್ಚುಳಿದ ನೋಟ್​ ಬುಕ್​ನ ಹಾಳೆಗಳನ್ನು ವೇಸ್ಟ್ ಆಗಲು ಬಿಡುತ್ತಿರಲಿಲ್ಲ.


    ಇದನ್ನೂ ಓದಿ: Chinese Food In Bengaluru: ಗಾರ್ಡನ್ ಸಿಟಿಯಲ್ಲಿ ಕಲರ್​ಫುಲ್ ಚೈನೀಸ್ ಫುಡ್ ಧಮಾಕಾ! ಆಹಾ, ಬಾಯಲ್ಲಿ ನೀರೂರುತ್ತೆ


    ಇದನ್ನು ಆದಿತ್ಯನ ಅಪ್ಪ ಟ್ವೀಟ್ ಮಾಡಿದ್ದರು. ಕಾಗದಗಳ ಮರುಬಳಕೆಯ ಮಹತ್ವವನ್ನು ತಿಳಿಸಿದ್ದರು. ಇದೇ ಟ್ವೀಟ್​ನ್ನು ಪ್ರಧಾನಿ ನರೇಂದ್ರ ಮೋದಿ ರೀ ಟ್ವೀಟ್ ಮಾಡಿ ವಿದ್ಯಾರ್ಥಿ ಆದರ್ಶನನ್ನು ಹೊಗಳಿದ್ದಾರೆ.




    ಇದನ್ನೂ ಓದಿ: Bengaluru Airport: ವಿಶ್ವದಲ್ಲೇ ನಂಬರ್ 1 ಸ್ಥಾನಕ್ಕೆ ಲಗ್ಗೆ, ಇದು ಕನ್ನಡಿಗರಿಗೂ ಹೆಮ್ಮೆಯ ವಿಷ್ಯ ಕಣ್ರೀ!


    ನನಗೆ ಭಾರೀ ಹೆಮ್ಮೆ ಆಗ್ತಿದೆ ಎಂಬ ಬಾಲಕ
    ನನ್ನ ತಂದೆಯ ಟ್ವೀಟ್ ಅನ್ನು ಪ್ರಧಾನಿ ಮರು ಟ್ವೀಟ್ ಮಾಡಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ನನಗೆ ನನ್ನ ಬಗ್ಗೆಯೇ ಖುಷಿಯನ್ನೂ ಮೂಡಿಸಿದೆ. ಪ್ರತಿ ಬೇಸಿಗೆಯಲ್ಲಿ ಶಾಲೆ ಮುಗಿದ ನಂತರ, ನನ್ನ ತಾಯಿ ಮತ್ತು ನಾನು ಒಟ್ಟಿಗೆ ಕುಳಿತು ಪ್ರತಿ ನೋಟ್‌ಬುಕ್‌ನಿಂದ ಉಳಿದಿರುವ ಕೆಲವು ಪುಟಗಳಿಂದ ಹೊಸ ನೋಟ್ ಬುಕ್ ಮಾಡುತ್ತೇವೆ ಎಂದು ವಿದ್ಯಾರ್ಥಿ ಆದಿತ್ಯ ತಿಳಿಸಿದ್ದಾನೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು