• Home
  • »
  • News
  • »
  • bengaluru-urban
  • »
  • Vande Bharat Express: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ಇಷ್ಟೆಲ್ಲ ಸಖತ್ತಾಗಿದೆ ಈ ಟ್ರೇನ್

Vande Bharat Express: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ಇಷ್ಟೆಲ್ಲ ಸಖತ್ತಾಗಿದೆ ಈ ಟ್ರೇನ್

ರೈಲಿಗೆ ಚಾಲನೆ ನೀಡಿದ ಮೋದಿ

ರೈಲಿಗೆ ಚಾಲನೆ ನೀಡಿದ ಮೋದಿ

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ವಿಶೇಷತೆ ಏನಂದ್ರೆ ಪೂರ್ಣ ಸಾಮರ್ಥ್ಯದಲ್ಲಿ ಓಡಿಸಿದರೆ, ರೈಲು ಕೇವಲ ಮೂರು ಗಂಟೆಗಳಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತಲುಪಬಹುದಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಭಾರತದ ಐದನೇ ವಂದೇ ಭಾರತ್‌ಗೆ (Vande Bharat Express_ ಚಾಲನೆ ನೀಡಿದ್ದಾರೆ. ಇದು ದಕ್ಷಿಣದ ಮೊದಲ ಸೆಮಿ ಹೈಸ್ಪೀಡ್ ರೈಲಾಗಿದೆ. ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮೈಸೂರು ಮತ್ತು ಚೆನ್ನೈ ನಡುವೆ (Mysuru Bengaluru Chennai Vande Bharat) ಚಲಿಸುತ್ತದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಉದ್ಘಾಟನೆಗೊಂಡು ನಂತರ ಚೆನ್ನೈಗೆ ಆಗಮಿಸಲಿದೆ. ಅದ್ದೂರಿ ಸಮಾರಂಭದಲ್ಲಿ (PM Modi In Bangalore) ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿದೆ.


    ಹೊಸ ವಂದೇ ಭಾರತ್ ರೈಲಿನ ಪ್ರಮುಖ ಅಂಶಗಳು ಇಲ್ಲಿವೆ:


    1) ಚೆನ್ನೈನಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕಾರ್ ಕುರ್ಚಿಗೆ ₹1,200 ಮತ್ತು ಎಕ್ಸಿಕ್ಯೂಟಿವ್ ವರ್ಗಕ್ಕೆ 2,295 ಟಿಕೆಟ್ ಶುಲ್ಕವಿದೆ. ಮೈಸೂರಿನಿಂದ ಚೆನ್ನೈಗೆ ಪ್ರಯಾಣಿಸುವವರು ಕ್ರಮವಾಗಿ ₹ 1,365 ಮತ್ತು ₹ 2,486 ಪಾವತಿಸಬೇಕಾಗುತ್ತದೆ.


    2) ರೈಲು 6 ಗಂಟೆ 30 ನಿಮಿಷಗಳಲ್ಲಿ 500 ಕಿಮೀ ದೂರವನ್ನು ಕ್ರಮಿಸುತ್ತದೆ. ಚೆನ್ನೈ ಮತ್ತು ಮೈಸೂರು- ಕಟಪಾಡಿ ಮತ್ತು ಬೆಂಗಳೂರು ನಡುವೆ ಎರಡು ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ನಿಯಮಿತ ಸಂಚಾರ ಶನಿವಾರದಿಂದ ಪ್ರಾರಂಭವಾಗುತ್ತವೆ.


    3) ಪೂರ್ಣ ಸಾಮರ್ಥ್ಯದಲ್ಲಿ ಓಡಿಸಿದರೆ, ರೈಲು ಕೇವಲ ಮೂರು ಗಂಟೆಗಳಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತಲುಪಬಹುದು ಎಂದು ರೈಲ್ವೆ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.


    4) ರೈಲನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಅಭಿವೃದ್ಧಿಪಡಿಸಿದೆ. ಉತ್ತಮ ವೇಗವರ್ಧನೆ ಮತ್ತು ಅತ್ಯಾಧುನಿಕ ಬ್ರೇಕಿಂಗ್ ಸಿಸ್ಟಮ್‌ನ್ನು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನಲ್ಲಿ ಅಳವಡಿಸಲಾಗಿದೆ.


    5) ಎಲ್ಲಾ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳು, GPS-ಆಧಾರಿತ ಆಡಿಯೋ-ವಿಡಿಯೋ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್‌ಬೋರ್ಡ್ ಹಾಟ್‌ಸ್ಪಾಟ್ ವೈ-ಫೈ ಮತ್ತು ಆರಾಮದಾಯಕ ಆಸನಗಳೊಂದಿಗೆ ಸಜ್ಜುಗೊಂಡಿವೆ.


    6) ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಫೆಬ್ರವರಿ 15, 2019 ರಂದು ನವದೆಹಲಿ-ಕಾನ್ಪುರ-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಫ್ಲ್ಯಾಗ್ ಆಫ್ ಮಾಡಲಾಯಿತು.


    ಇತರ ವಂದೇ ಭಾರತ್​ಗಿಂತ ಸ್ವಲ್ಪ ನಿಧಾನ
    ದೇಶದಲ್ಲಿ ಈಗಾಗಲೇ ಆರಂಭಗೊಂಡಿರುವ ಕೆಲವೇ ಕೆಲವು ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗಿಂತ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್​ಪ್ರೆಸ್ ವೇಗ ಸ್ವಲ್ಪ ನಿಧಾನವಾಗಿದೆ. ಸದ್ಯ ದೇಶದಲ್ಲಿನ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳಲ್ಲಿ ಅತಿ ನಿಧಾನವಾಗಿ ಸಂಚರಿಸುವ ರೈಲು ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ್ದಾಗಿರಲಿದೆ.


    ವಂದೇ ಭಾರತ್ ಎಕ್ಸ್​ಪ್ರೆಸ್ ಸಂಚಾರ ವಿವರ ಹೀಗಿದೆ
    ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ. ವಾರದಲ್ಲಿ ವಾರದಲ್ಲಿ ಒಟ್ಟು 6 ದಿನ ಈ ರೈಲು ಸೇವೆ ಒದಗಿಸಲಿದೆ. ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ- ಈ 6 ದಿನಗಳಂದು ಮಾತ್ರ ವಂದೇ ಭಾರತ್ ಸಂಚರಿಸಲಿದೆ.


    497 ಕಿಮೀ ಇಷ್ಟು ಕಡಿಮೆ ಸಮಯದ ಪ್ರಯಾಣ!
    ಈ ರೈಲು ಚೆನ್ನೈ ಮತ್ತು ಮೈಸೂರು ನಡುವೆ ಒಟ್ಟು 497 ಕಿಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ತಲುಪುತ್ತದೆ. ಗಂಟೆಗೆ ಸರಾಸರಿ 74 ಕಿಮೀ ವೇಗವಾಗಿ ಸಂಚರಿಸುವ ವಂದೇ ಭಾರತ್ ರೈಲು ಬೆಂಗಳೂರು ಸಿಟಿ ಜಂಕ್ಷನ್​ನಲ್ಲಿ ಮಾತ್ರ ನಿಲ್ಲುತ್ತದೆ.


    ಬೆಳಗ್ಗೆ 5:50ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್​ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ಎಕ್ಸ್​ಪ್ರೆಸ್ 10:25ಕ್ಕೆಲ್ಲ ಮೆಜೆಸ್ಟಿಕ್ ತಲುಪುತ್ತದೆ. ಅಲ್ಲಿಂದ 10:30ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆಲ್ಲ ಮೈಸೂರು ರೈಲು ನಿಲ್ದಾಣವನ್ನು ತಲುಪಲಿದೆ. ಈ ರೈಲು ಸುಮಾರು 497 ಕಿ.ಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.

    Published by:ಗುರುಗಣೇಶ ಡಬ್ಗುಳಿ
    First published: