• Home
  • »
  • News
  • »
  • bengaluru-urban
  • »
  • ಬರ್ತಿನಿ ಅಂದಿದ್ದ PM ಮೋದಿ ಬರಲೇ ಇಲ್ಲ.. ಆದರೂ ಬೆಂಗಳೂರಿನ ನಿವಾಸಿಗಳ ಆನಂದಕ್ಕೆ ಪಾರವೇ ಇಲ್ಲ, ಏಕೆ?

ಬರ್ತಿನಿ ಅಂದಿದ್ದ PM ಮೋದಿ ಬರಲೇ ಇಲ್ಲ.. ಆದರೂ ಬೆಂಗಳೂರಿನ ನಿವಾಸಿಗಳ ಆನಂದಕ್ಕೆ ಪಾರವೇ ಇಲ್ಲ, ಏಕೆ?

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಸ್ಥಳೀಯ ನಿವಾಸಿಗಳು ಹಲವಾರು ವರ್ಷಗಳಿಂದ ಉತ್ತಮ ರಸ್ತೆಗಳಿಗಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಆಗೆಲ್ಲಾ ಕ್ಯಾರೇ ಎನ್ನದ ಅಧಿಕಾರಿ ಈಗ ಮೋದಿ ಭೇಟಿ ಹಿನ್ನೆಲೆ ರಸ್ತೆ ಕಾಮಗಾರಿ ಮಾಡಿರೋದಕ್ಕೆ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  • Share this:

ಬೆಂಗಳೂರು: ನಾಳೆ (ಡಿ.6) ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (Ambedkar School of Economics ) ಕಟ್ಟಡ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಗರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಪ್ರಧಾನಿಯವರ ಭೇಟಿಯನ್ನು ಮುಂದೂಡಲಾಗಿದೆ. ಪ್ರಧಾನಿ ಭೇಟಿಯ ನಿರೀಕ್ಷೆಯಲ್ಲಿದ್ದ ಸ್ಥಳೀಯ ನಿವಾಸಿಗಳಿಗೆ ಬೇಸರವಾಗಿಲ್ಲ, ಬದಲಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಅದ್ಯಾಕೆ ಅಂತಿರಾ ಮುಂದೆ ಓದಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ನಾಗರಭಾವಿಯಲ್ಲಿ (Naagarabhaavi) ಮಿಂಚಿನ ವೇಗದಲ್ಲಿ 1.8 ಕಿಮೀ ಉದ್ದರ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ. ಇದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 1.5 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ ಪ್ರಧಾನಿಯವರ ನಿಗದಿತ ಭೇಟಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಇದರಿಂದ ರಸ್ತೆ ಕಾಮಗಾರಿ ಮಾಡಿಸಿದ ಪಾಲಿಕೆಗೆ ಬೇಸರವಾಗಿದೆಯೋನೇ, ಆದರೆ ಸ್ಥಳೀಯರ ನಿವಾಸಿಗಳು ಮಾತ್ರ ಖುಷಿಯಾಗಿದ್ದಾರೆ. ಮೋದಿಗಾಗಿಯಾದರೂ ಬಿಬಿಎಂಪಿ ಇಷ್ಟೊಂದು ಕಡಿಮೆ ಸಮಯದಲ್ಲಿ ರಸ್ತೆ ಕಾಮಗಾರಿ ಮಾಡಿರುವುದು ಸ್ಥಳೀಯರಿಗೆ ನೆಮ್ಮದಿ ತಂದಿದೆ.


ಇಷ್ಟು ದಿನ ಮನವಿ ಮಾಡಿದ್ರೆ ಕ್ಯಾರೇ ಎಂದಿರಲಿಲ್ಲ


ಸ್ಥಳೀಯ ನಿವಾಸಿಗಳು ಹಲವಾರು ವರ್ಷಗಳಿಂದ ಉತ್ತಮ ರಸ್ತೆಗಳಿಗಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಆಗೆಲ್ಲಾ ಕ್ಯಾರೇ ಎನ್ನದ ಅಧಿಕಾರಿ ಈಗ ಮೋದಿ ಭೇಟಿ ಹಿನ್ನೆಲೆ ರಸ್ತೆ ಕಾಮಗಾರಿ ಮಾಡಿರೋದಕ್ಕೆ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಭೇಟಿಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರದಿಂದ ನಮಗೆ ಸಂದೇಶ ಬಂದಿದೆ. ಆದರೆ ಅನಿರ್ದಿಷ್ಟಾವಧಿಗೆ ಏಕೆ ಮುಂದೂಡಲಾಗಿದೆ ಎಂಬುದು ನಮಗೆ ತಿಳಿದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿವೆ.


ಮೋದಿ ಅವರಿಗೆ ಧನ್ಯವಾದ


ಪ್ರಧಾನಮಂತ್ರಿಯವರ ಭೇಟಿಯನ್ನು ರದ್ದುಗೊಳಿಸಿರುವುದನ್ನು ಒಪ್ಪಿಕೊಂಡಿರುವ ಉಪಕುಲಪತಿ ಎನ್‌ಆರ್ ಭಾನುಮೂರ್ತಿ, ಕಾರ್ಯಕ್ರಮವನ್ನು ಮುಂದೂಡಲಾಗಿದೆ ಮತ್ತು ಪರಿಷ್ಕೃತ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ನಾಗರಭಾವಿ ನಿವಾಸಿಗಳು ಹಾಗೂ ಜ್ಞಾನಭಾರತಿ ಸುತ್ತಮುತ್ತಲಿನ ನಿವಾಸಿಗಳು ರಸ್ತೆ ದುರಸ್ತಿ ಕಾಮಗಾರಿಗೆ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. "ಇದು ಪ್ರದೇಶದ ವಿಸ್ತರಣೆಗಳಲ್ಲಿ ಒಂದಾಗಿದೆ, ಇದನ್ನು ವರ್ಷಗಳಿಂದ ನಿರ್ಲಕ್ಷಿಸಲಾಯಿತು. ರಸ್ತೆ ದುರಸ್ತಿಗೆ ಪ್ರಧಾನಿ ಭೇಟಿ ನೀಡಿದ್ದಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ... ವರ್ಷಗಳಲ್ಲಿ ಮಾಡದಿರುವ ಕಾರ್ಯವನ್ನು ಈಗ ಮಾಡಿದ್ದಾರೆ ಎಂದು ನಾಗರಭಾವಿ ನಿವಾಸಿಯೊಬ್ಬರು ಹರ್ಷ ವ್ಯಕ್ತಪಡಿಸಿದರು.


ಹಿಡಿಶಾಪ ಹಾಕ್ತಿದ್ದೆ, ಈಗ ಖುಷಿಯಾಗಿದೆ..


ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು, ನಾನು ಪ್ರತಿನಿತ್ಯ ನಾಗರಭಾವಿಯಿಂದ ಜ್ಞಾನಭಾರತಿ ಕ್ಯಾಂಪಸ್‌ಗೆ ಈ ಮಾರ್ಗದಲ್ಲಿ ಹೋಗುತ್ತೇನೆ. ಕಳೆದ ಕೆಲವು ವರ್ಷಗಳಿಂದ ಹದಗೆಟ್ಟ ರಸ್ತೆಗಳಿಗೆ ಪ್ರತಿ ದಿನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದೆ. ಆದರೆ ಕಳೆದ ಒಂದು ವಾರದಿಂದ ಈ ರಸ್ತೆಯಲ್ಲಿ ಪ್ರಯಾಣಿಸಲು ನನಗೆ ಸಂತೋಷವಾಯಿತು ಎಂದರು.


ಬಿಬಿಎಂಪಿ ಮಾತ್ರ ಹೇಳೋದೇ ಬೇರೆ


ನಿರ್ದಿಷ್ಟ ದುರಸ್ತಿ ಕಾರ್ಯಗಳು ಕೆಲವು ವರ್ಷಗಳಿಂದ ಬಾಕಿ ಉಳಿದಿವೆ. ಇದಕ್ಕಾಗಿ ಒಂದು ವರ್ಷದ ಹಿಂದೆ ಅನುಮೋದನೆಯನ್ನು ಸಹ ನೀಡಲಾಯಿತು. ಆದರೆ ಕಾರಣಾಂತರಗಳಿಂದ ಕೈಗೆತ್ತಿಕೊಂಡಿರಲಿಲ್ಲ. ಪ್ರಧಾನಿ ಭೇಟಿಗಾಗಿ ನಾವು ಮಾಡಿಲ್ಲ. ಪ್ರಧಾನಿಯವರ ಭೇಟಿ ಕಾಕತಾಳೀಯವಾಗಿತ್ತು ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: ಒಂದು ತೆಂಗಿನಕಾಯಿ ಒಡೆದಿದ್ದಕ್ಕೆ ಒಂದೂವರೆ ಕೋಟಿ ವೆಚ್ಚದ ರಸ್ತೆ ಬಿರುಕುಬಿಟ್ಟಿದೆ, ಅದಿನ್ನೆಂಥಾ ಡಬ್ಬಾ ರಸ್ತೆ ಇರ್ಬೇಡ


ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಜ್ಞಾನಭಾರತಿಯಲ್ಲಿ 43 ಎಕರೆ ಪ್ರದೇಶದಲ್ಲಿ ಬೇಸ್ ವಿಶ್ವವಿದ್ಯಾನಿಲಯ ಕ್ಯಾಂಪಸ್ ಇದೆ. ಇದರ ನಿರ್ಮಾಣ ಕಾರ್ಯಕ್ಕೆ ಸುಮಾರು Rs150 ಕೋಟಿ ವೆಚ್ಚ ಮಾಡಲಾಗಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಅನುಗುಣವಾಗಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಮತ್ತು ಇದು 250 ವಿದ್ಯಾರ್ಥಿಗಳನ್ನು ಹೊಂದಿರುವ ಮೂರನೇ ಬ್ಯಾಚ್ ಆಗಿದೆ. 2017 ರಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ಡಾ ಬಿಆರ್ ಅಂಬೇಡ್ಕರ್ ಭವನದಲ್ಲಿ ಬೇಸ್‌ನ ಶೈಕ್ಷಣಿಕ ಅವಧಿಗಳನ್ನು ಉದ್ಘಾಟಿಸಿದ್ದರು.

Published by:Kavya V
First published: