Guledagudda Khana Notebooks: ಗುಳೇದಗುಡ್ಡ ಖಣದಿಂದ ನೋಟ್​ಬುಕ್! ಏನಿದರ ವಿಶೇಷ? ಎಲ್ಲಿ ಸಿಗುತ್ತೆ?

ರೇಷ್ಮೆ, ಖಾದಿ, ಕೈಮಗ್ಗದಿಂದ ನೋಟ್​ಬುಕ್ ತಯಾರಿಸಿದರೆ!? ಅರೇ ವಾವ್! ಎಂಥಾ ಅದ್ಭುತ ಐಡಿಯಾ ಇದು.. ಹೌದು ಈ ಬಟ್ಟೆಗಳಿಂದಲೇ ನೋಟ್​ಬುಕ್ ತಯಾರಿಸಲಾಗಿದೆ. ನೀವೂ ಈ ನೋಟ್​ಬುಕ್​ಗಳನ್ನು ಖರೀದಿ ಮಾಡಬಹುದು! ಹೇಗಂತಿರಾ? ಮುಂದೆ ಓದಿ

ಗುಳೇದಗುಡ್ಡ ಖಣ ಬಳಸಿ ತಯಾರಿಸಿದ ನೋಟ್​ಬುಕ್

ಗುಳೇದಗುಡ್ಡ ಖಣ ಬಳಸಿ ತಯಾರಿಸಿದ ನೋಟ್​ಬುಕ್

 • Share this:
  ಬಾಗಲಕೋಟೆ: ಗುಳೇದಗುಡ್ಡ ಸೀರೆ ಯಾರಿಗೆ ಗೊತ್ತಿಲ್ಲ ಹೇಳಿ? ಬಹಳ ಹಿಂದಿನಿಂದಲೂ ತನ್ನದೇ ಆದ ವೈಶಿಷ್ಟ್ಯದಿಂದ ಪ್ರಸಿದ್ಧಿಗೆ ಬಂದಿದೆ ಗುಳೇದಗುಡ್ಡದ ಖಣ. ಗುಳೇದಗುಡ್ಡದ ಸೀರೆಯನ್ನೇ (Guledgudda Saree) ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳ ಸಂಖ್ಯೆ ತುಂಬಾನೇ ಇದೆ. ನಮ್ಮ ಕರ್ನಾಟಕ ಅನನ್ಯ ಪರಂಪರೆ ಗುಳೇದಗುಡ್ಡ ಸೀರೆಯ ಉದ್ಯವನ್ನು ಇನ್ನಷ್ಟು ಬೆಳೆಸುವ ಉದ್ದೇಶದಿಂದ ಬಾಗಲಕೋಟೆಯಲ್ಲಿ ಹೊಸ ಪ್ರಯತ್ನವೊಂದು ನಡೆಯುತ್ತಿದೆ. ಜೊತೆಗೆ ಕೋವಿಡ್​ನಿಂದ ಕಷ್ಟದಲ್ಲಿದ್ದ ಪುಸ್ತಕ ಮುದ್ರಣ,  ನೇಕಾರರ ಜೀವನಕ್ಕೂ ದಾರಿ ಸಿಗುತ್ತಿದೆ.  ಹಾಗಿದ್ದರೆ ಗುಳೇದಗುಡ್ಡದ ಖಣವನ್ನು (Guledagudda Khana) ಏನು ಮಾಡಲಾಗುತ್ತಿದೆ? ಹೇಗೆ ಗುಳೇದಗುಡ್ಡ ಸೀರೆಯ ಉದ್ಯಮವನ್ನು ಬೆಳೆಸಲಾಗುತ್ತಿದೆ?  ಇಲ್ಲಿದೆ ನೋಡಿ.

  ಅದು ಕೋವಿಡ್ ಕಾಲ. ಪುಸ್ತಕ ಮುದ್ರಣಾಲಯಗಳಿಗೂ ಸಂಕಷ್ಟದ ಸಮಯ. ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕು ಎಂದೆನಿಸುವಷ್ಟು ದುಸ್ಥಿತಿ. ಆದರೆ ಈ ಸಮಸ್ಯೆಯಿಂದ ಪಾರಾಗಲು ಬೆಂಗಳೂರಿನ ಅಕ್ಷರ ಪ್ರಿಂಟರ್ಸ್ ಮತ್ತು ಹೆಗ್ಗೋಡಿನ ಚರಕ ಸಂಸ್ಥೆ ಹೊಸ ಯೋಚನೆ ಮಾಡಿತು. ನೋಟ್​ಬುಕ್​ಗಳನ್ನು ರೇಷ್ಮೆ-ಖಾದಿ-ಕೈಮಗ್ಗದ ಬಟ್ಟೆಯಿಂದ ಕೈಯಿಂದಲೇ ತಯಾರಿಸುವ ಯೋಜನೆಗೆ ಕೈಹಾಕಿತು. ಇದು ಮುದ್ರಣಾಲಯದ ಎಲ್ಲ ಉದ್ಯೋಗಿಗಳಿಗೂ ಕೆಲಸ ನೀಡಿತಲ್ಲದೇ ಜೀವನವನ್ನೂ ಆರ್ಥಿಕವಾಗಿ ಕುಗ್ಗಿಹೋಗುವ ಅಪಾಯದಿಂದ ಹೊರತಂದಿತು.

  ವಿಶೇಷ ಯೋಜನೆ ರೂಪುಗೊಂಡಿದ್ದು ಹೇಗೆ?
  ಈ ಯೋಜನೆಗೆ ಜೊತೆಯಾದವರು ಚರಕ ಸಂಸ್ಥೆಯ ಹೆಗ್ಗೋಡು ಪ್ರಸನ್ನ ಮತ್ತು ರಮೇಶ್ ಅವರು.  ಗುಳೇದಗುಡ್ಡದ ಖಣದ ಸೀರೆ ನಮ್ಮ ಪರಂಪರೆಯನ್ನು ಬಿಂಬಿಸುವ ಸಾಂಪ್ರದಾಯಿಕ ಬಟ್ಟೆ. ಸಾಂಪ್ರದಾಯಿಕವಾಗಿ ಕುಪ್ಪಸ ಹೊಲಿಯಲು ಬಳಸುವ ಬಟ್ಟೆಯನ್ನು ನೋಟ್​ಬುಕ್​ಗಳ ಕವರ್ ಪೇಜ್​ ಆಗಿ ಬಳಸುವ ವಿಶೇಷ ಯೋಜನೆ ರೂಪುಗೊಂಡಿತು.

  ಹಿರಿಯ ಅಧಿಕಾರಿಗಳು, ಸೆಲೆಬ್ರಿಟಿಗಳಿಂದ ಬೆಂಬಲ
  ರೇಷ್ಮೆ ನೋಟ್​ಬುಕ್ ಕವರ್ ಆಲೋಚನೆಯು ಸಾರ್ವಜನಿಕರ ವ್ಯಾಪಕ ವರ್ಗದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಸೆಲೆಬ್ರಿಟಿಗಳಿಂದ ಹಿರಿಯ ಮಹಿಳಾ ಅಧಿಕಾರಿಗಳು ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿನ ಅಧಿಕಾರಿಗಳು ಸಹ ಅವರ ಕೆಲಸಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ 400 ವರ್ಷಗಳಿಂದ ಗುಳೇದಗುಡ್ಡ ಬಟ್ಟೆ ನೇಯ್ಗೆಯಲ್ಲಿ ತೊಡಗಿಸಿಕೊಂಡಿರುವ ಗುಳೇದಗುಡ್ಡದ ನೇಕಾರರಿಗೆ ಉತ್ತೇಜನ ದೊರೆಯುತ್ತಿದೆ.

  ಈ ಐಡಿಯಾ ಹೊಳೆದದ್ದು ಹೇಗೆ ಗೊತ್ತೇ?
  ಈ ನೋಟ್‌ಬುಕ್‌ಗಳ ಫೊಟೊ, ವಿಡಿಯೋಗಳು ಜೊತೆಗೆ ಅವುಗಳ ತಯಾರಿ ಪ್ರಕ್ರಿಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ನೋಟ್‌ಬುಕ್‌ಗಳು ಮತ್ತು ಗುಳೇದಗುಡ್ಡ ಖಣ ಎರಡೂ ಉದ್ಯಮಗಳಿಗೆ ಉತ್ತೇಜನ ಒದಗಿಸುವಂತಿದೆ.  ಕೈಮಗ್ಗ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಓದಿರುವ ರಮೇಶ್ ಅವರು ಗುಳೇದಗುಡ್ಡ ಸೀರೆಯ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ವಿಸ್ತರಿಸುವ ಮಾರ್ಗಗಳನ್ನು ಹುಡುಕುತ್ತಿದ್ದರಂತೆ. ಆಗ ಅವರಿಗೆ ಹೊಳೆದದ್ದೇ ರೇಷ್ಮೆಬಟ್ಟೆಯನ್ನು ನೋಟ್​ಬುಕ್ ಕವರ್ ಆಗಿ ಬಳಸುವುದು.

  ಮೊದಲು ತಯಾರಾಯ್ತು 300 ನೋಟ್​ಬುಕ್
  ಹೆಗ್ಗೋಡಿನ ರಮೇಶ್ ಅವರ ಬಳಿ 18 ಕೈಮಗ್ಗಗಳಿದ್ದವು. ಅಲ್ಲದೇ ಗುಳೇದಗುಡ್ಡದಲ್ಲಿ 25 ನೇಕಾರರನ್ನು ಕೆಲಸ ಮಾಡುತ್ತಿದ್ದರು ಈ ಸೌಲಭ್ಯವನ್ನು ಬಳಸಿ300 ನೋಟ್‌ಬುಕ್‌ಗಳನ್ನು ತಯಾರಿಸಿ ಮೊದಲು ಆಸಕ್ತ ಗ್ರಾಹಕರಿಗೆ ಮಾರಾಟ ಮಾಡಲಾಯಿತು.

  ಬೆಲೆ ಎಷ್ಟು?
  ಸದ್ಯ ಬೆಂಗಳೂರಿನ ಅಕ್ಷರ ಮುದ್ರಣಾಲಯ ರಷ್ಮೆ-ಖಾದಿ-ಕೈಮಗ್ಗದ ಬಟ್ಟೆ ಬಳಸಿ ಕೈಯಿಂದಲೇ ತಯಾರಿಸಿದ ನೋಟ್​ಬುಕ್​ಗಳನ್ನು ಹೋಲ್​ಸೇಲ್​ ಮಾರಾಟ ಮಾಡುತ್ತಿದೆ. ಒಂದು ನೋಟ್​ಬುಕ್​ಗೆ 150 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಚಿಕ್ಕ ಚಿಕ್ಕ ಪಾಕೆಟ್ ನೋಟ್​ಬುಕ್​ಗಳು ಸಹ ಲಭ್ಯವಿದೆ. ರಮೇಶ್ ಅವರು ವಿವಿಧ ವಸ್ತು ಪ್ರದರ್ಶನಗಳು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಳಿಗೆ ಇಡುತ್ತಿದ್ದಾರೆ. ಈ ಇಬ್ಬರ ಬಳಿಯೂ ವಿಶೇಷ ನೋಟ್​ಬುಕ್​ಗಳನ್ನು ಖರೀದಿ ಮಾಡಬಹುದಾಗಿದೆ.  ಲಭ್ಯವಿರುವ ನೋಟ್​ಬುಕ್ ಬೆಲೆ 300 ರೂ.

  ಸಂಪರ್ಕ ಸಂಖ್ಯೆ: ರಮೇಶ್ - 8867227542 ಈ ನಂಬರ್​ಗೆ ಮೆಸೆಜ್- ಫೋನ್​ ಕಾಲ್ ಮೂಲಕ ಆರ್ಡರ್ ಮಾಡಬಹುದು.
  ಅಥವಾ ಆನ್​ಲೈನ್​ನಲ್ಲಿ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
  ಹೋಲ್​ಸೇಲ್​ನಲ್ಲಿ ಖರೀದಿಗಾಗಿ
   ಬೆಂಗಳೂರಿನ ಅಕ್ಷರ ಪ್ರಿಂಟರ್ಸ್- 080-26624082

  ಬೆಂಗಳೂರಿನ ರಾಗಿ ಕಣದಲ್ಲಿಯೂ ಈ ನೋಟ್​ಬುಕ್​ಗಳನ್ನು ಖರೀದಿಸಬಹುದು

  ಉಡುಗೊರೆ ನೀಡಲು ರೇಷ್ಮೆ ನೋಟ್​ಬುಕ್
  ರೇಷ್ಮೆ ಕವರ್​ನ ನೋಟ್​ಬುಕ್ ಖರೀದಿಸಿದವರು ಹೆಚ್ಚಿನವರು ಸರ್ಕಾರಿ ಅಧಿಕಾರಿಗಳು. ವಸ್ತು ಪ್ರದರ್ಶನವೊಂದರಲ್ಲಿ ಗದಗ ಜಿಲ್ಲೆಯ ಡಿಸಿಎಫ್ ದೀಪಿಕಾ ಗೋಯಲ್ ಬಾಜ್‌ಪೇಯ್, ಜಿಲ್ಲೆಯ ಅಧಿಕಾರಿಗಳಿಗೆ ಉಡುಗೊರೆ ನೀಡಲು 50 ನೋಟ್‌ಬುಕ್‌ಗಳನ್ನು ಖರೀದಿಸಿದ್ದಾರೆ.

  ಇದನ್ನೂ ಓದಿ: Kolhar Curd: ಕೋಲಾರ ಅಲ್ಲ ಕೋಲ್ಹಾರ! ಇಲ್ಲಿಯ ಗಟ್ಟಿ ಮೊಸರ ರುಚಿಗೆ ಮಾರುಹೋಗಿ ಬನ್ನಿ!

  ಬೆಲಾರಸ್​ನಿಂದಲೂ ಬಂತು ಆರ್ಡರ್!
  ಈಗಂತೂ ರೇಷ್ಮೆ ಕವರ್ ನೋಟ್​ಬುಕ್​ಗಳು ವಿದೇಶಗಳಿಗೂ ತಲುಪಿವೆ. ಬೆಲಾರಸ್‌ನ ರಾಜಧಾನಿಯಾದ ಮಿನ್ಸ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ರೇಷ್ಮೆ ಕವರ್​ ಹೊಂದಿರುವ ನೋಟ್​ಬುಕ್​ಗಳನ್ನು ತರಿಸುತ್ತಿದ್ದಾರೆ.

  Akshara Printers Bengaluru ಅಕ್ಷರ ಪ್ರಿಂಟರ್ಸ್​ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]

  ಹೆಚ್ಚಾಗ್ತಿದೆ ಬೇಡಿಕೆ!
  ಪಂಜಾಬ್, ದೆಹಲಿ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಿಂದಲೂ ಪಠ್ಯಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಕಳೆದ 15 ದಿನಗಳಲ್ಲಿ  450 ನೋಟ್‌ಬುಕ್​ಗಳನ್ನು ಮಾರಾಟ ಮಾಡಲಾಗಿದೆ. ಬೃಹತ್ ಆರ್ಡರ್‌ಗಳಿಗೆ ವಿಶೇಷ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. 

  ಇದನ್ನೂ ಓದಿ: Belagavi Jute Bags: ಬೆಳಗಾವಿ ಮಹಿಳೆಯರ ಸೆಣಬಿನ ಬ್ಯಾಗ್​ಗೆ ಅಮೆರಿಕಾ, ಯೂರೋಪ್ ಫಿದಾ!

  ಹೀಗೆ ಹೊಸ ಆಲೋಚನೆಯೊಂದು ಅನನ್ಯ ಸಾಂಪ್ರದಾಯಿಕ ಬಟ್ಟೆಯ ಉದ್ಯಮವನ್ನು ಇನ್ನಷ್ಟು ವಿಸ್ತರಿಸುತ್ತಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ಗುಳೇದಗುಡ್ಡ ಖಣದ ಹೆಸರು ಇನ್ನಷ್ಟು ಹೆಚ್ಚುತ್ತಿದೆ.
  Published by:guruganesh bhat
  First published: