• Home
 • »
 • News
 • »
 • bengaluru-urban
 • »
 • Karunada Habba: ಕನ್ನಡದ ಕಂಪಲ್ಲಿ ಬೆಂಗಳೂರು! ಇದು ನ್ಯೂಸ್ 18 ಕನ್ನಡ ಕರುನಾಡ ಹಬ್ಬದ ಸಂಭ್ರಮ

Karunada Habba: ಕನ್ನಡದ ಕಂಪಲ್ಲಿ ಬೆಂಗಳೂರು! ಇದು ನ್ಯೂಸ್ 18 ಕನ್ನಡ ಕರುನಾಡ ಹಬ್ಬದ ಸಂಭ್ರಮ

ಕಾರ್ಯಕ್ರಮದ ದೃಶ್ಯ

ಕಾರ್ಯಕ್ರಮದ ದೃಶ್ಯ

ಒಟ್ಟಾರೆ ಬೆಂಗಳೂರಿನ ಕನ್ನಡಿಗರು ಒಂದೇ ವೇದಿಕೆಯಲ್ಲಿ ಮೂರು ದಿನಗಳ ಕಾಲ ಕನ್ನಡ ಲೋಕದಲ್ಲಿ ಮಿಂದೆದ್ದರು.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರಲ್ಲಿ ಕನ್ನಡ ಕಲರವ, ಕನ್ನಡದ್ದೇ ಕಂಪು! ಇದು ನ್ಯೂಸ್ 18 ಕನ್ನಡ ಹಮ್ಮಿಕೊಂಡಿದ್ದ ಕರುನಾಡ ಹಬ್ಬದಿಂದ ಸೃಷ್ಟಿಯಾಗಿದ್ದ ಕನ್ನಡ ಲೋಕದ ಅನಾವರಣ! ನ್ಯೂಸ್ 18 ಕನ್ನಡ ಆಯೋಜಿಸಿದ್ದ ಕರುನಾಡ ಹಬ್ಬ ಸಡಗರ ಸಂಭ್ರಮದಿಂದ ಬೆಂಗಳೂರಿನ ಆರ್ ಟಿ ನಗರದ ಹೆಚ್​ಎಂಟಿ ಮೈದಾನದಲ್ಲಿ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ನ್ಯೂಸ್ 18 ವತಿಯಿಂದ (News 18 Kannada) ಗೌರವ ಸಮರ್ಪಣೆ ಮಾಡಲಾಯಿತು. ಡ್ರೋನ್ ರಿಮೋಟ್ ಪ್ರೆಸ್ ಮಾಡುವುದರ ಮೂಲಕ‌ ಕನ್ನಡದ ಬಾವುಟಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಮುಖ್ಯಮಂತ್ರಿಗಳು ನ್ಯೂಸ್ 18 ಕರುನಾಡ ಹಬ್ಬವನ್ನು (News 18 Karunada Habba) ಶ್ಲಾಘಿಸಿದರು.


  ರಾಜಕೀಯ ಕ್ಷೇತ್ರದ ಗಣ್ಯರು, ಸಿನಿಮಾ ಕಲಾವಿದರು ಸೇರಿದಂತೆ ಹಲವರು ಕರುನಾಡ ಹಬ್ಬದ ಸಂಭ್ರಮ ಹೆಚ್ಚಿಸಿದರು.  ಕನ್ನಡದ ಪರಂಪರೆಯನ್ನು ಬಿಂಬಿಸುವ ಉತ್ಸವಕ್ಕೆ ಬೈರತಿ ಸುರೇಶ್ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ನಾಡೋಜ ಕಸಪಾ ಅಧ್ಯಕ್ಷ ಮಹೇಶ್ ಜೋಷಿ ಆಗಮಿಸಿದ್ದರು. ಇಂಧನ ಸಚಿವ ಸುನೀಲ್ ಕುಮಾರ್, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ರಾಜಕೀಯ ಧುರೀಣರು ಭಾಗಿಯಾಗಿದ್ದರು.
  ಚಿನ್ನ ಗೆದ್ದ ಹೆಡ್ ಕ್ಯಾನ್ಸ್​ಟೇಬಲ್
  ಉಲ್ಲಾಸ ಅಗರಬತ್ತಿ ಆಯೋಜಿಸಿದ್ದ ನ್ಯೂಸ್ 18 ಕರುನಾಡ ಹಬ್ಬದಲ್ಲಿ ಚಿನ್ನದ ಬೇಟೆ ಸ್ಪರ್ಧೆ ಕುತೂಹಲದ ಕಣಜವಾಗಿ ಏರ್ಪಟ್ಟಿತ್ತು. ನ್ಯೂಸ್ 18 ನ ಪ್ರಶ್ನೆಗೆ ಉತ್ತರಿಸಿ 1 ಗ್ರಾಂ ಚಿನ್ನಗೆಲ್ಲಿ ಸ್ಪರ್ಧೆಯಲ್ಲಿ ಉದಯ್ ಕುಮಾರ್ ಹೈಗ್ರೌಂಡ್ ಪೋಲಿಸ್ ಠಾಣೆಯ ಹೆಡ್ ಕ್ಯಾನ್ಸ್​ಟೇಬಲ್ ಗೆದ್ದು ಖುಷಿ ವ್ಯಕ್ತಪಡಿಸಿದರು.


  ಕರ್ನಾಟಕ" ಥೀಮ್​ನಲ್ಲಿ ಪುಟಾಣಿಗಳ ಸುಂದರ ಚಿತ್ರ
  ಚಿನ್ನರ ಕಲರವಕ್ಕೂ ನ್ಯೂಸ್ 18 ಕನ್ನಡ ಆಯೋಜಿಸಿದ್ದ ಕರುನಾಡ ಹಬ್ಬ ವೇದಿಕೆ ಒದಗಿಸಿತು. ಕರುನಾಡ ಹಬ್ಬದಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ "ಕರ್ನಾಟಕ" ಥೀಮ್​ನಲ್ಲಿ ಪುಟಾಣಿಗಳು ಬಿಡಿಸಿದ ಚಿತ್ರ ಮನಗೆದ್ದಿತು.
  ಮ್ಯಾಜಿಕ್ ದೀಪ, ಮೈಸೂರು ಚನ್ನಪಟ್ಟಣ ಬೊಂಬೆಗಳು,ಜಾನಪದ ನೃತ್ಯಗಳು‌ ನೋಡುಗರನ್ನ ಸೆಳೆದವು. ಜೋಕರ್ ಜೊತೆ ಮಕ್ಳು ಸ್ಟೆಪ್ ಹಾಕಿ ಫುಲ್ ಮಜಾ ಮಾಡಿದರು.
  ಸಂಭ್ರಮಕ್ಕೆ ಇಲ್ಲಿ ಕೊರತೆಯೇ ಇಲ್ಲ!
  ಎಲ್ಲಾ ಬಗೆಯ ರುಚಿ ರುಚಿ ದೇಸಿ ಆಹಾರ ಮಳಿಗೆಗಳು ಕರುನಾಡ ಹಬ್ಬಕ್ಕೆ ಆಗಮಿಸಿದವರನ್ನು ತೃಪ್ತಿಗೊಳಿಸಿದವು. ಮಕ್ಕಳಿಗೆ ಡ್ರಾಯಿಂಗ್, ರಂಗೋಲಿ, ಕುಕ್ಕಿಂಗ್ ಕಾಂಪಿಟೇಷನ್ ಆಯೋಜನೆ ಮಾಡಲಾಗಿತ್ತು. ವೀರಗಾಸೆ, ನೃತ್ಯ ಕಾರ್ಯಕ್ರಮ, ವಿಶೇಷ ಸಂಗೀತ ಸಂಜೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಒಟ್ಟಾರೆ ಬೆಂಗಳೂರಿನ ಕನ್ನಡಿಗರು ಒಂದೇ ವೇದಿಕೆಯಲ್ಲಿ ಮೂರು ದಿನಗಳ ಕಾಲ ಕನ್ನಡ ಲೋಕದಲ್ಲಿ ಮಿಂದೆದ್ದರು.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು