• Home
  • »
  • News
  • »
  • bengaluru-urban
  • »
  • ರಾತ್ರಿ ವೇಳೆ Metro ಕಾಮಗಾರಿಯಿಂದ ನಿವಾಸಿಗಳಿಗೆ ಕಿರಿಕಿರಿ.. ಸಮಸ್ಯೆಗೆ ಸ್ಪಂದಿಸಿದ BMRCL

ರಾತ್ರಿ ವೇಳೆ Metro ಕಾಮಗಾರಿಯಿಂದ ನಿವಾಸಿಗಳಿಗೆ ಕಿರಿಕಿರಿ.. ಸಮಸ್ಯೆಗೆ ಸ್ಪಂದಿಸಿದ BMRCL

ಮೆಟ್ರೋ ಕಾಮಗಾರಿ

ಮೆಟ್ರೋ ಕಾಮಗಾರಿ

ರಾತ್ರಿಯ ವೇಳೆ ನಡೆಯುತ್ತಿದ್ದ ನಮ್ಮ ಮೆಟ್ರೋ ಕಾಮಗಾರಿ ಕೆಲಸವನ್ನು ಕೆಲವೆಡೆ ಸ್ಥಗಿತಗೊಳಿಸಲಾಗಿದೆ. ರಾತ್ರಿ ಪಾಳಿಯ ಕೆಲಸದಿಂದ ರಸ್ತೆ ಮಾರ್ಗದಲ್ಲಿ ವಾಸಿಸುವ ನಿವಾಸಿಗಳಿಗೆ ತೊಂದರೆ ಉಂಟಾಗಿತ್ತು.

  • Share this:

    ಬೆಂಗಳೂರು: ಕೊರೊನಾ ವೈರಸ್ (Corona Virus) ಹಿನ್ನೆಲೆ “ನಮ್ಮ ಮೆಟ್ರೋ” (Namma Metro) ಕಾಮಗಾರಿ (Work) ನಿಧಾನಗತಿಯಲ್ಲಿ ಸಾಗುತ್ತಿತ್ತು. ಹೀಗಾಗಿ ರಾತ್ರಿ (Night) ಹೊತ್ತು ಕೂಡ ಕೆಲಸ ಆರಂಭಿಸಲಾಗಿತ್ತು. ಆದರೆ ಈಗ ರಾತ್ರಿಯ ವೇಳೆ ನಡೆಯುತ್ತಿದ್ದ ಕೆಲಸವನ್ನು ಕೆಲವೆಡೆ ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ತಿಳಿಸಿದ್ದಾರೆ. ರಾತ್ರಿ ಪಾಳಿಯ ಕೆಲಸದಿಂದ ರಸ್ತೆ ಮಾರ್ಗದಲ್ಲಿ ವಾಸಿಸುವ ನಿವಾಸಿಗಳಿಗೆ ತೊಂದರೆ ಉಂಟಾಗಿತ್ತು. ಇದು ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ವಾಸಿಸುವ ನಿವಾಸಿಗಳ ನಿದ್ದೆಗೆಡಿಸಿತ್ತು. ಹೀಗಾಗಿ ನಿವಾಸಿಗಳಿಂದ ದೂರುಗಳನ್ನು ಸ್ವೀಕರಿಸಿದ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರ ನಿದ್ದೆಯ ಮೇಲಾಗುವ ಪರಿಣಾಮವನ್ನು ಬಿಎಂಆರ್‌ಸಿಎಲ್‌ ಅರ್ಥ ಮಾಡಿಕೊಂಡಿದೆ ಎಂದು ಅಂಜುಮ್‌ ಪರ್ವೇಜ್‌ ತಿಳಿಸಿದ್ದಾರೆ.  


    ದೂರು ಸ್ವೀಕರಿಸಿದ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯ ಸ್ಥಗಿತ


    ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಮೆಟ್ರೋ ಹಂತ-II ಗಾಗಿ ಡಿಸೆಂಬರ್ 2024ರ ಪರಿಷ್ಕೃತ ಗಡುವನ್ನು ಪೂರೈಸಲು ರಾತ್ರಿಯ ಕೆಲಸ ಮಾಡಲಾಗುತ್ತಿದ್ದು, ನಿವಾಸಿಗಳಿಂದ ದೂರುಗಳನ್ನು ಸ್ವೀಕರಿಸಿದ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ವಾಸಿಸುವ ನಿವಾಸಿಗಳು ರಾತ್ರಿ 10 ಗಂಟೆಯ ನಂತರ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಬಿಎಂಆರ್ ಸಿಎಲ್‌ಗೆ ಒತ್ತಾಯಿಸಿದ್ದರು. ಕೊನೆಗೂ ಹೊರ ವರ್ತುಲ ರಸ್ತೆಯ ನಿವಾಸಿಗಳ ಒತ್ತಡಕ್ಕೆ ಮಣಿದ ಬಿಎಂಆರ್ ಸಿಎಲ್ ರಾತ್ರಿ ಕೆಲಸವನ್ನು ಸ್ಥಗಿತಗೊಳಿಸಿದೆ.


    ತಡರಾತ್ರಿ ಕಾಮಗಾರಿ ಸ್ಥಗಿತ


    ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರು ಪ್ರದೇಶದ ವಾಸಿಗಳು ಈ ಹಾದಿಯಲ್ಲಿ ನಡೆಯುತ್ತಿರುವ 24 ಗಂಟೆಗಳ ಕೆಲಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಓಆರ್‌ಆರ್‌ ಲೈನ್‌ನ ಪ್ಯಾಕೇಜ್ ಒಂದರ ಅಡಿಯಲ್ಲಿ ಇಲ್ಲಿ ಕೆಲಸ ನಡೆಯುತ್ತಿದೆ. ಈ ಕುರಿತು ಲಿಖಿತ ದೂರು ನೀಡಿದ್ದು, ತಡರಾತ್ರಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಈ ತಿಳಿಸಿದ್ದಾರೆ.


    ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!


    ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್‌


    ಪೈಲಿಂಗ್ ಕೆಲಸದಿಂದ ಉಂಟಾಗುವ ಶಬ್ದವು ಭಯಾನಕವಾಗಿದೆ. ರಗಳಲ್ಲಿ ವಾಹನ ಮತ್ತು ಇತರ ಶಬ್ದಗಳು ಇಲ್ಲದಿರುವುದರಿಂದ ಡೆಸಿಬಲ್ ಮಟ್ಟವು ಹೆಚ್ಚಾಗಿರುತ್ತದೆ. 18.2-ಕಿಮೀ ಓಆರ್‌ಆರ್‌ ಲೈನ್ (ಹಂತ 2 ಎ) ಕೆಆರ್ ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಲೈನ್ ವರೆಗೆ ಸಾಗುತ್ತದೆ. ಈ ಮಾರ್ಗ 13 ನಿಲ್ದಾಣಗಳನ್ನು ಒಳಗೊಂಡಿದೆ. ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ನೀಡಲಾಗಿದೆ.


    ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ


    785 ಕೋಟಿ ರೂ. ವೆಚ್ಚದಲ್ಲಿ ಸಿಲ್ಕ್ ಬೋರ್ಡ್‌ನಿಂದ ಕಾಡುಬೀಸನಹಳ್ಳಿವರೆಗಿನ 9.8 ಕಿ.ಮೀ ಮೊದಲ ಓಟವನ್ನು ನೀಡಲಾಗಿದೆ. ಎರಡನೆಯ ಓಟ ಕೋಡಿಬಿಸನಹಳ್ಳಿಯಿಂದ ಕೆ.ಆರ್.ಪುರಂ ವರೆಗೆ 623 ಕೋಟಿ ರೂ. ವೆಚ್ಚದಲ್ಲಿ ನೀಡಲಾಗಿದೆ.


    ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ ತಗುಲಲಿದೆ. ಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಾಮಗಾರಿ ನಡೆಸಲಿದೆ. ಕೆಆರ್ ಪುರಂ, ಮಹದೇವಪುರ, ಡಿಆರ್‌ಡಿಒ, ಕ್ರೀಡಾ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ-ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್ ನಿಲ್ದಾಣಗಳು ಇರಲಿವೆ.


    ಇದನ್ನೂ ಓದಿ: BMTC, KSRTC ಆಯ್ತು ಈಗ ಮೆಟ್ರೋ ಸರದಿ- ಕಳೆದ ಒಂದು ತಿಂಗಳಿನಿಂದ ಬರೋಬ್ಬರಿ 12 ಕೋಟಿ ನಷ್ಟ


    ಜನರ ಸಮಸ್ಯೆಗೆ ಸ್ಪಂದಿಸಿದ ನಮ್ಮ ಮೆಟ್ರೋ


    ಇನ್ನು ಕೊರೊನಾ ವೈರಸ್ ಆತಂಕ ಮತ್ತು ಸಾವು-ನೋವಿನ ಹಿನ್ನೆಲೆ ನಮ್ಮ ಮೆಟ್ರೋ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿದ್ದವು. ಮೆಟ್ರೋ ಕಾಮಗಾರಿಯಲ್ಲೂ ನಿಧಾನಗತಿ ಮತ್ತು ವಿಳಂಬ ಉಂಟಾಗುತ್ತಿತ್ತು. ಹೀಗಾಗಿ ರಾತ್ರಿ ಪಾಳಿಯಲ್ಲೂ ಕಾಮಗಾರಿ ಕೆಲಸ ನಡೆಸಲು ತೀರ್ಮಾನಿಸಲಾಗಿತ್ತು. ಈಗ ರಾತ್ರಿ ಪಾಳಿಯ ಕೆಲಸದಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಮತ್ತು ರಾತ್ರಿ ಕೆಲಸ ನಡೆಯುವ ಜಾಗದಲ್ಲಿರುವ ನಿವಾಸಿಗಳ ನಿದ್ದೆಗೆ ತೊಂದರೆ ಉಂಟಾಗಿತ್ತು. ಕೆಲಸ ಮಾಡುತ್ತಿರುವ ಶಬ್ಧ ಮಕ್ಕಳು, ಹಿರಿಯ ನಾಗರಿಕರಿಗೆ ತೊಂದರೆ ಉಂಟು ಮಾಡಿತ್ತು. ಈಗ ಮೆಟ್ರೋ ರಾತ್ರಿ ಪಾಳಿ ಕೆಲಸವನ್ನು ದೂರು ಬಂದ ಸ್ಥಳಗಳಲ್ಲಿ ನಿಲ್ಲಿಸಿದ್ದು, ಜನರ ಸಮಸ್ಯೆಗೆ ಸ್ಪಂದಿಸಿದೆ.

    Published by:renukadariyannavar
    First published: