ಬೆಂಗಳೂರು: ಖುಷಿಖುಷಿಲಿ ನಗ್ತಿರೋ ಪುಟ್ಟ ಪುಟ್ಟ ಪುಟಾಣಿಗಳು, ಮುದ್ದು ಮಕ್ಕಳ ಮುಂದೆ ಜೋಕು, ಹಾಡು ಹಾಡ್ತಾ ರಂಜಿಸ್ತಿರೋ ಇವ್ರು ಯಾವ್ದೇ ಕಾನ್ವೆಂಟ್ ಟೀಚರಲ್ಲ, ಬದಲಿಗೆ ಇಂಜೆಕ್ಷನ್ ಚುಚ್ಚೋ ಡಾಕ್ಟರ್! (Kid's Doctor) ಇಂಜೆಕ್ಷನ್ ಚುಚ್ಚಿದ್ರೂ ನಗುತ್ತಿರೋ ಮುದ್ದು ಪುಟಾಣಿಗಳು! ಹೈಫೈವ್ ಡಾಕ್ಟರ್ ಎಂದೇ ಫೇಮಸ್ ಆಗಿರೋ ಈ ಡಾಕ್ಟರ್ ಇರುವ ಸೂಪರ್ ಸ್ಪೆಷಲ್ ಆಸ್ಪತ್ರೆ ನಮ್ ಬೆಂಗಳೂರಲ್ಲೇ (Bengaluru Hifive Doctor) ಇದೆ!
ಆಸ್ಪತ್ರೆ ಅಂದ್ರೆ ಮಕ್ಕಳಿಗೆ ಭಯ, ಅದ್ರಲ್ಲೂ ಇಂಜೆಕ್ಷನ್ ಚುಚ್ಚೋದು ಅಂದ್ರಂತೂ ಕೇಳೋದೇ ಬೇಡ, ಅಳುನೂ ಶುರುವಾಗಿಬಿಡುತ್ತೆ, ಆದ್ರೆ ಏನ್ಮಾಡೋದು? ಹುಷಾರಿಲ್ದೇ ಇರುವಾಗ ಮಕ್ಕಳನ್ನ ಆಸ್ಪತ್ರೆಗೆ ಕರೆದೊಯ್ಯಲೇಬೇಕಲ್ವೆ? ಆದ್ರೆ ಈ ಆಸ್ಪತ್ರೆ ಅಂದ್ರೆ ಮಕ್ಕಳಿಗೆ ಹೆದರಿಕೆ, ಭಯ ಏನೂ ಇಲ್ಲ, ಮಕ್ಕಳಿಗೆ ತಾವು ಆಸ್ಪತ್ರೆಲಿದ್ದೀವಿ, ಡಾಕ್ಟರ್ ಇಂಜೆಕ್ಷನ್ ಚುಚ್ತಾರೆ ಅಂತ ಅನಿಸದಂತೆ ಈ ಡಾಕ್ಟರ್ ಇಂಜೆಕ್ಷನ್ ಚುಚ್ತಾರೆ. ಮಕ್ಕಳು ನಗು ನಗ್ತಾನೇ ಆಸ್ಪತ್ರೆಯಿಂದ ಮನೆಗೆ ಬರ್ತಾರೆ.
ಎಲ್ಲಿದೆ ಗೊತ್ತಾ ಈ ಆಸ್ಪತ್ರೆ?
ಬೆಂಗಳೂರಿನ HSR ಲೇಔಟ್ನಲ್ಲಿರುವ ಕ್ಲಿನಿಕ್ ಗುಡ್ವಿಲ್ ಚಿಲ್ಡ್ರನ್ಸ್ ಕ್ಲಿನಿಕ್ಕೇ ಹೀಗೆ ಮ್ಯಾಜಿಕ್ ಮಾಡ್ತಿರೋ ಮಕ್ಕಳ ಆಸ್ಪತ್ರೆ, 2012ರಲ್ಲಿ ಈ ಆಸ್ಪತ್ರೆ ಆರಂಭಿಸಿರೋ ಡಾ. ಮುಜಾಹಿದ್ ಹುಸೇನ್ ಅವರ ಬಳಿ ದೂರ ದೂರದಿಂದಲೂ ಪೋಷಕರು ತಮ್ಮ ಮಕ್ಕಳನ್ನ ತರ್ತಾರೆ. ಇವ್ರು ಮಕ್ಕಳ ಜೊತೆ ಆಟಾಡ್ತಾ ಇಂಜೆಕ್ಷನ್ ಕೊಡೋದನ್ನ ನೋಡಿ ಸಮಾಧಾನಪಡ್ತಾರೆ.
ಮಕ್ಕಳ ಚಟುವಟಿಕೆ ನೋಡ್ಕೊಂಡು ಇಂಜೆಕ್ಷನ್!
ಅಷ್ಟಕ್ಕೂ ಮುಜಾಹಿದ್ ಹುಸೇನ್ ಅವರು ಹೇಗೆ ಮಕ್ಕಳು ಅಳದಂತೆ ಇಂಜೆಕ್ಷನ್ ಕೊಡ್ತಾರೆ ಗೊತ್ತಾ? ಮಕ್ಕಳು ತಮ್ಮ ಆಸ್ಪತ್ರೆಗೆ ಬಂದ ತಕ್ಷಣ ಅವರನ್ನ ಸರ್ಯಾಗಿ ಗಮನಿಸ್ತಾರೆ, ಮಕ್ಕಳ ಖುಷಿಯ ಚಟುವಟಿಕೆಗಳನ್ನ ನೋಡ್ಕೊಂಡು ಆಟದ ಸಾಮಾಗ್ರಿಗಳನ್ನ ನೀಡ್ತಾರೆ. ಮಕ್ಕಳ ಮುಂದೆ ಹಾಡ್ತಾರೆ, ಚಿತ್ರ ವಿಚಿತ್ರ ಹಾವಭಾವ ಮಾಡ್ತಾರೆ. ಇಂಜೆಕ್ಷನ್ ಸಿರಿಂಜ್ನ ಮಕ್ಕಳಿಗೆ ತೋರಿಸೋದೂ ಇಲ್ಲ. ಮಕ್ಕಳು ಆಟ ಆಡ್ತಿರೋವಾಗ್ಲೇ ಅರೆಕ್ಷಣದಲ್ಲೇ ಚಕ್ ಅಂತ ಇಂಜೆಕ್ಷನ್ ಚುಚ್ ಬಿಡ್ತಾರೆ. ಮಕ್ಕಳಿಗೆ ಇರುವೆ ಕಚ್ಚಿದಷ್ಟೂ ನೋವಿನ ಫೀಲ್ ಆಗಲ್ಲ!
ಇದನ್ನೂ ಓದಿ: Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಹೀಗಿದೆ ನೋಡಿ
ದೂರ ದೂರದ ಊರುಗಳಿಂದಲೂ ಹುಡುಕಿ ಬರ್ತಾರೆ
ಹೀಗೆ ಚಿಲ್ಡ್ರನ್ ಫ್ರೆಂಡ್ಲಿ ಮಕ್ಕಳ ಆಸ್ಪತ್ರೆ ಮೂಲಕವೇ ಫೇಮಸ್ ಆಗಿದ್ದಾರೆ ಗುಡ್ವಿಲ್ ಚಿಲ್ಡ್ರನ್ಸ್ ಕ್ಲಿನಿಕ್ ನಡೆಸ್ತಿರೋ ಡಾ. ಮುಜಾಹಿದ್ ಹುಸೇನ್. ಇವ್ರ ಆಸ್ಪತ್ರೆ ಎಷ್ಟು ಫೇಮಸ್ ಅಂದ್ರೆ ದೂರದೂರದ ಊರುಗಳಿಂದ್ಲೂ ಮಕ್ಕಳನ್ನ ಕರ್ಕೊಂಡು ಪೋಷಕರು ಇಲ್ಲಿ ಹುಡುಕಿ ಬರ್ತಾರೆ.
ಇದನ್ನೂ ಓದಿ: Uttara Kannada: ಆಟೋ ಸಾರಥಿಯಾಗಿ ಬದುಕು ಕಟ್ಟಿಕೊಂಡ ಮಹಿಳೆ
ಅದ್ರಲ್ಲೂ Instagramನಲ್ಲಿ ನಮ್ಮ ಹೈಫೈವ್ ಡಾಕ್ಟರ್ ಮಕ್ಕಳಿಗೆ ಚಿಕಿತ್ಸೆ ನೀಡೋ ವಿಡಿಯೋಗಳು ವೈರಲ್ ಆಗುತ್ತೆ. ನಿಮ್ಮ ಮಕ್ಕಳಿಗೂ ಅಳದಂತೆ ಚಿಕಿತ್ಸೆ ನೀಡೋಕೆ ಒಮ್ಮೆ ಈ ಹೈಫೈವ್ ಡಾಕ್ಟರ್ ಹತ್ರ ನಿಮ್ಮ ಮುದ್ದು ಪುಟಾಣಿಗಳನ್ನ ತರಬಹುದು ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ