• Home
 • »
 • News
 • »
 • bengaluru-urban
 • »
 • Lunar Eclipse 2022: ಬೆಂಗಳೂರಿನ ಜನರೇ ಗಮನಿಸಿ, ಗ್ರಹಣ ವೀಕ್ಷಣೆಗೆ ಇಲ್ಲಿದೆ ಸುಸಜ್ಜಿತ ವ್ಯವಸ್ಥೆ

Lunar Eclipse 2022: ಬೆಂಗಳೂರಿನ ಜನರೇ ಗಮನಿಸಿ, ಗ್ರಹಣ ವೀಕ್ಷಣೆಗೆ ಇಲ್ಲಿದೆ ಸುಸಜ್ಜಿತ ವ್ಯವಸ್ಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru News: ನವೆಂಬರ್ 8ರಂದು ವರ್ಷದ ಕೊನೆಯ ಚಂದ್ರಗ್ರಹಣವು ಸಂಭವಿಸಲಿದೆ. ಸೂರ್ಯಗ್ರಹಣದ 15 ದಿನಗಳೊಳಗೆ ಚಂದ್ರಗ್ರಹಣ ಸಂಭವಿಸುವುದರಿಂದ ಈ ಬಾರಿಯ ಚಂದ್ರಗ್ರಹಣವನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ನವೆಂಬರ್ 8 ರಂದು ಭೂ ಮಂಡಲವು ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿದೆ. ಎರಡು ವಾರಗಳ ಹಿಂದಷ್ಟೇ ಭಾಗಶಃ ಸೂರ್ಯಗ್ರಹಣ ನಡೆದಿತ್ತು. ಇದೀಗ ವರ್ಷದ ಕೊನೆಯ ಗ್ರಹಣ ಸಂಭವಿಸಲಿದೆ. ಸಂಜೆಯಾಗುತ್ತಲೇ ಚಂದ್ರಗ್ರಹಣವಾಗಲಿದೆ. ಕತ್ತಲಾಗುವುದಕ್ಕೂ ಮುನ್ನವೇ ಗ್ರಹಣದ (Lunar Eclipse 2022 Timings) ತೀವ್ರತೆ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಚಂದ್ರಗ್ರಹಣ ಕುರಿತ ಮಾಹಿತಿ, ವೀಕ್ಷಣೆಗೆ ಬೆಂಗಳೂರಿನ ನೆಹರೂ ತಾರಾಲಯ (Nehru Taralaya Bangalore) ಅವಕಾಶ ಕಲ್ಪಿಸಿದೆ‌.


  ಎಷ್ಟೊತ್ತಿಗೆ ಗ್ರಹಣ ದರ್ಶನ?
  ಭಾಗಶಃ ನಡೆಯಲಿರುವ ಚಂದ್ರಗ್ರಹಣವು ಸಂಜೆ 5.49 ರಿಂದ 6.19 ರ ವರೆಗೆ ಗೋಚರಿಸಲಿದೆ.


  ತಾರಾಲಯದಲ್ಲಿ ಕಾರ್ಯಕ್ರಮ
  ಚಂದ್ರಗ್ರಹಣ ಹಿನ್ನೆಲೆ ನೆಹರೂ ತಾರಾಲಯದಲ್ಲಿ ಚಂದ್ರಗ್ರಹಣ ಕುರಿತಾಗಿ ಸಂಜೆ 4 ರಿಂದ 5ರ ವರೆಗೆ ಉಪನ್ಯಾಸ ನಡೆಯಲಿದೆ.


  Jawaharlal Nehru Planetarium
  ಹೀಗೆ ಬನ್ನಿ ಗ್ರಹಣ ನೋಡಿಲು (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಇದರ ಜೊತೆಗೆ 3 ಗಂಟೆಯಿಂದ 5 ಗಂಟೆವರೆಗೆ ಚಂದ್ರಗ್ರಹಣದ ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಲಿದೆ.


  ಯೂಟ್ಯೂಬ್ ನಲ್ಲೂ ನೇರಪ್ರಸಾರ
  ನೆಹರೂ ತಾರಾಲಯಯವು ಚಂದ್ರಗ್ರಹಣ ನೇರ ದೃಶ್ಯಗಳನ್ನು ಸೆರೆ ಹಿಡಿದು ತಮ್ಮ ಅಧಿಕೃತ ಯೂಟ್ಯೂಬ್ ಪೇಜ್ ನಲ್ಲಿ ಪ್ರಕಟಿಸಲಿದೆ. ಆಸಕ್ತರು ನೆಹರೂ ತಾರಾಲಯದ  ಯೂಟ್ಯೂಬ್ ಪೇಜ್ ನೇರಪ್ರಸಾರದ ಮೂಲಕ ನೋಡಬಹುದಾಗಿದೆ. ಯೂಟ್ಯೂಬ್​ನಲ್ಲಿ ಗ್ರಹಣವನ್ನು ಲೈವ್ ಆಗಿ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.
  ಸಂವಾದಕ್ಕೂ ಅವಕಾಶ
  ಚಂದ್ರಗ್ರಹಣ ನೇರಪ್ರಸಾರದ ಬಳಿಕ ಯೂಟ್ಯೂಬ್ ಮೂಲಕ ಪ್ರಶ್ನೋತ್ತರ ಸೆಷನ್ ನಡೆಯಲಿದೆ. ಸಾರ್ವಜನಿಕರು ತಮ್ಮ ಸಂಶಯಗಳನ್ನು ನಿವಾರಿಸಬಹುದಾಗಿದೆ.


  ಹೆಚ್ಚಿನ ಮಾಹಿತಿಗಾಗಿ
  ಆಸಕ್ತ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ನೆಹರೂ ತಾರಾಲಯ ಬೆಂಗಳೂರು ಇದರ ಅಧಿಕೃತ ವೆಬ್ ಸೈಟ್  ಅಥವಾ 080-22379725/22266084 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 


  ಇತ್ತೀಚೆಗೆ ಸೂರ್ಯ ಗ್ರಹಣ ಮುಗಿದಿದೆ. ಇದೀಗ 2022 ರ ಕೊನೆಯ ಚಂದ್ರ ಗ್ರಹಣ ಕಾಣಿಸಿಕೊಳ್ಳಲಿದೆ. ಈ ಬಾರಿ ವಿಶೇಷವಾಗಿ ಕೆಂಪಾಗಿ ಕಾಣಿಸಿಕೊಳ್ಳಲಿರುವ ಚಂದ್ರ ಗ್ರಹಣದ ವಿಶೇಷಗಳನ್ನು ತಿಳಿದುಕೊಳ್ಳಬಹುದಾಗಿದೆ.


  ಇದನ್ನೂ ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


  ಕೆಂಪಾಗಿ ಕಾಣಸಿಗಲಿರುವ ಈ ಚಂದ್ರ ಗ್ರಹಣವನ್ನು ಬರೀ ಕಣ್ಣಿನಿಂದ ನೋಡಬಹುದಾಗಿದೆ. ಕಾರ್ತಿಕ ಮಾಸದಲ್ಲಿ ಕಾಣಲಿರುವ ಈ ಚಂದ್ರ ಗ್ರಹಣ ಜನರನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ.


  ಇದನ್ನೂ ಓದಿ: Vande Bharat Express: ಕರ್ನಾಟಕದಲ್ಲೂ ಶುರುವಾಯ್ತು ವಂದೇ ಭಾರತ್ ಪ್ರಾಯೋಗಿಕ ಸಂಚಾರ!


  ನವೆಂಬರ್ 8ರಂದು ವರ್ಷದ ಕೊನೆಯ ಚಂದ್ರಗ್ರಹಣವು ಸಂಭವಿಸಲಿದೆ. ಸೂರ್ಯಗ್ರಹಣದ 15 ದಿನಗಳೊಳಗೆ ಚಂದ್ರಗ್ರಹಣ ಸಂಭವಿಸುವುದರಿಂದ ಈ ಬಾರಿಯ ಚಂದ್ರಗ್ರಹಣವನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: