• Home
  • »
  • News
  • »
  • bengaluru-urban
  • »
  • KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?

KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ನೆಚ್ಚಿನ ನಾಯಿಯನ್ನು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸಾಗಿಸಬಹುದೇ? ಹೌದು, ಈ ಕುರಿತು ಸಹ ಕೆಎಸ್​ಆರ್​ಟಿಸಿ ಅಧಿಕೃತ ಮಾಹಿತಿ ನೀಡಿದೆ. 

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ರಾಜ್ಯದ ಮೂಲೆ ಮೂಲೆಗಳಿಗೂ ಪ್ರಯಾಣ ಬೆಳೆಸುವುದಾದರೆ KSRTC ಸೇವೆಯೇ ಅತ್ಯುತ್ತಮ‌. ರಾಜ್ಯ ಮಾತ್ರವಲ್ಲದೇ ಹೊರರಾಜ್ಯಕ್ಕೂ ಆರಾಮದಾಯಕವಾಗಿ ಸಂಚರಿಸಬಹುದು. ಆದರೆ  ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ (KSRTC Bus) ಲಗೇಜ್ ಕೊಂಡೊಯ್ಯುವ ಬಗ್ಗೆ ಇದ್ದ ಗೊಂದಲ, ಅದು ಹೊಂದಿರಬೇಕಾದ ತೂಕ ಇದೆಲ್ಲವುಗಳ ಕುರಿತು ಪ್ರಯಾಣಿಕರಿಗೆ ಸ್ಪಷ್ಟತೆ ಇರಲಿಲ್ಲ. ವಿಮಾನದಲ್ಲಾದರೂ ನಿರ್ದಿಷ್ಟ ತೂಕದವರೆಗೆ ಲಗೇಜ್ ಕೊಂಡೊಯ್ಯುವ (KSRTC Bus Luggage Tickets) ಅವಕಾಶವಿರುತ್ತದೆ‌. ಇದೀಗ ವೈಯಕ್ತಿಕ ಲಗೇಜ್ ತೂಕವನ್ನು ನಿರ್ಧರಿಸಲು KSRTC ಮುಂದಾಗಿದೆ.


    ಎಷ್ಟು ಕೆಜಿಯವರೆಗೆ ಲಗೇಜ್​ನ್ನು ಉಚಿತವಾಗಿ ಒಯ್ಯಬಹುದು?
    ವೈಯಕ್ತಿಕವಾಗಿ ಕೊಂಡೊಯ್ಯುವ ಲಗೇಜ್ ತೂಕ 30 ಕೆಜಿ ಇದ್ದಲ್ಲಿ ಅಂತಹ ಲಗೇಜ್​ಗಳಿಗೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ಬಸ್​ಗಳಲ್ಲಿ ಲಗೇಜ್ ಸಾಗಾಟ ಕುರಿತ ಪರಿಷ್ಕೃತ ಸುತ್ತೋಲೆಯಲ್ಲಿ KSRTC ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ತಿಳಿಸಿದ್ದಾರೆ.


    30 ಕೆಜಿ ಮೀರಿದರೆ?
    ಒಂದು ವೇಳೆ ವೈಯಕ್ತಿಕ ಲಗೇಜ್ ನ ಮಿತಿ 30 ಕೆಜಿ ಮೀರಿದ್ದಲ್ಲಿ, ಅದರ ಮೇಲೆ ನಿಗದಿತ ದರ ವಿಧಿಸಲಾಗುತ್ತದೆ.


    ಇದನ್ನೂ ಓದಿ: Ballari To Bengaluru: ಬಳ್ಳಾರಿಯಿಂದ ಬೆಂಗಳೂರು ಇನ್ನಷ್ಟು ಹತ್ತಿರ!


    ಯಾವೆಲ್ಲ ವಸ್ತುಗಳನ್ನು ಸಾಗಿಸಲು ಇದೆ ಅವಕಾಶ?
    ಬ್ಯಾಗ್, ಸೂಟ್ ಕೇಸ್, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸಣ್ಣದಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಸಾಗಾಟ ಮಾಡಬಹುದಾಗಿದೆ.


    ಇದನ್ನೂ ಓದಿ: Gorehabba: ತಿಪ್ಪೇಗುಂಡಿಯಲ್ಲೇ ದೇಗುಲ, ಮೇಲೆ ಸಗಣಿ ಎರಚೋ ಹಬ್ಬ!


    ನಿಮ್ಮ ನೆಚ್ಚಿನ ನಾಯಿಯನ್ನು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸಾಗಿಸಬಹುದೇ?
    ಹೌದು, ಈ ಕುರಿತು ಸಹ ಕೆಎಸ್​ಆರ್​ಟಿಸಿ ಅಧಿಕೃತ ಮಾಹಿತಿ ನೀಡಿದೆ. ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸಾಕುನಾಯಿಗಳನ್ನು ಸಾಗಿಸಬಹುದು.  ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸಾಕುನಾಯಿ ಸಾಗಾಟಕ್ಕೆ ಫುಲ್ ಟಿಕೆಟ್ ಪಡೆಯಬೇಕು. ಆದರೆ ನಾಯಿಮರಿಯನ್ನು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸಾಗಣೆ ಮಾಡಲು ಅರ್ಧ ಟಿಕೆಟ್ ಪಡೆದರೆ ಸಾಕು ಎಂದು ಕೆಎಸ್​ಆರ್​ಟಿಸಿ ಮಾಹಿತಿಯಲ್ಲಿ ತಿಳಿಸಿದೆ.

    Published by:ಗುರುಗಣೇಶ ಡಬ್ಗುಳಿ
    First published: