• Home
  • »
  • News
  • »
  • bengaluru-urban
  • »
  • JP Naddaಗೆ ಅಭಿನಂದನೆ ಸಲ್ಲಿಸಿ, HDK ಬಳಿ ಟ್ರೈನಿಂಗ್ ತೊಗೊಳೋದಾಗಿ ಹೇಳಿದ DK Shivakumar

JP Naddaಗೆ ಅಭಿನಂದನೆ ಸಲ್ಲಿಸಿ, HDK ಬಳಿ ಟ್ರೈನಿಂಗ್ ತೊಗೊಳೋದಾಗಿ ಹೇಳಿದ DK Shivakumar

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ರಾಜ್ಯಪಾಲರ(Governor)ನ್ನು ಭೇಟಿ ಮಾಡಿ ಈಶ್ವರಪ್ಪರನ್ನ ವಜಾ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಪಾಲರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಡಿಕೆ ಶಿವಕುಮಾರ್ ಹೇಳಿದರು.

  • Share this:

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(KPCC President DK Shivakumar),  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP President J P Nadda) ಅವರಿಗೆ ಅಭಿನಂದನೆ ಸಲ್ಲಿಸಿದರು. ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ಅವರ ಹೇಳಿಕೆ ತಪ್ಪು ಅನ್ನೋದು ಕೊನೆಗೂ ನಡ್ಡಾ ಅವರಿಗೆ ಅರಿವಾಗದೆ. ಬಿಜೆಪಿ ರಾಜ್ಯದ ನಾಯಕರು (Karnataka BJP Leaders) ಈಶ್ವರಪ್ಪ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಈಶ್ವರಪ್ಪರನ್ನು ವಜಾ ಮಾಡಿದರೆ ಬಿಜೆಪಿಗೆ ಗೌರವ ಉಳಿದುಕೊಳ್ಳುತ್ತದೆ. ನಿನ್ನೆ ರಾಜ್ಯಪಾಲರ(Governor)ನ್ನು ಭೇಟಿ ಮಾಡಿ ಈಶ್ವರಪ್ಪರನ್ನ ವಜಾ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಪಾಲರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.


ರಾಷ್ಟ್ರಧ್ವಜಕ್ಕೆ ಅಗೌರವ ಮಾಡಬಾರದು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಬೇಕು ಎಂದರು. ಫೆ. 27 ರಿಂದ ರಾಮನಗರದಿಂದ ಮತ್ತೆ ಪಾದಯಾತ್ರೆ ಆರಂಭ ಆಗುತ್ತದೆ. ಈ ಹೋರಾಟಕ್ಕೆ ಯಾರಾದರೂ ಬರಬಹುದು. ಬಿಜೆಪಿ, ಜೆಡಿಎಸ್ ನಾಯಕರು ಸಹ ಈ ಪಾದಯಾತ್ರೆ ಬರಬಹುದು. ಭಾನುವಾರ ಎಲಾ ಸಂಘ ಸಂಸ್ಥೆಗಳ ಜೊತೆ ಸಭೆ ಇದೆ. ಅವರೂ ಈ ಪಾದಯಾತ್ರೆಗೆ ಬರಬಹುದು ಎಂದು ಎಲ್ಲರನ್ನೂ ಡಿಕೆ ಶಿವಕುಮಾರ್ ಅಹ್ವಾನಿಸಿದರು.


ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಅವರ ಬಳಿ ಟ್ರೈನಿಂಗ್ ತೆಗೆದುಕೊಳ್ಳತ್ತೇನೆ ಎಂದು ತಿರುಗೇಟು ನೀಡಿದರು.


ಈಶ್ವರಪ್ಪ ಹೇಳಿಕೆಗೆ ಜೆ.ಪಿ.ನಡ್ಡಾ ಹೇಳಿದ್ದೇನು?


ಜೆ.ಪಿ.ನಡ್ಡಾ ಅವರು ನಿನ್ನೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಕರ್ನಾಟಕದ ಹಿಜಾಬ್ ಮತ್ತು ಸಚಿವ ಈಶ್ವರಪ್ಪ ಅವರ ಹೇಳಿಕೆ ಕುರಿತು ಪ್ರಶ್ನೆ ಮಾಡಲಾಗಿತ್ತು.  ಕರೆ ಮಾಡಿ ಈಶ್ವರಪ್ಪ ಅವರಿಗೆ ಛೀಮಾರಿ ಹಾಕಿದ್ದೇನೆ. ಇನ್ನು ಪ್ರತಿಪಕ್ಷಗಳೇ ಹಿಜಾಬ್ ವಿವಾದವನ್ನು ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿವೆ ಎಂದು ಆರೋಪಿಸಿದರು.


ಇದನ್ನೂ ಓದಿ:  Actor Chetan: 14 ದಿನ ನ್ಯಾಯಾಂಗ ಬಂಧನ: ನಟ ಚೇತನ್ ವಿರುದ್ಧ ದಾಖಲಾಗಿರುವ FIRನಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ


ನಾವು ರಾಷ್ಟ್ರೀಯ ವಾದಿಗಳು. ಇಂತಹ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಿಕೊಳ್ಳಬಾರದು. ಮಾಧ್ಯಮಗಳ ಮುಂದೆ ಅತ್ಯುತ್ಸಾಹದಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಕಟು ಪದಗಳಲ್ಲಿಯೇ ಹೇಳಿದ್ದೇನೆ. ಆ ಕಟು ಪದಗಳು ಏನು ಎಂಬುದನ್ನು ನಾನು ಹೇಳಲಾರೆ ಎಂದು ತಿಳಿಸಿದರು.


ನಡ್ಡಾ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ


ಇನ್ನು ಜೆಪಿ ನಡ್ಡಾ ಅವರ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ನಡ್ಡಾ ಅವರು ನಮ್ಮ ಪಕ್ಷದ ಅಧ್ಯಕ್ಷರು. ಪಕ್ಷದ ಕಾರ್ಯಕರ್ತನಾಗಿ ಅವರ ಮಾತನ್ನು ಪಾಲಿಸುತ್ತೇನೆ. ಸದನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮತ್ತು ಸಚಿವ ಮಾಧುಸ್ವಾಮಿ (Minister Madhuswamy) ವಿಪಕ್ಷಗಳ ಪ್ರಶ್ನೆಗೆ ಉತ್ತರ ಸಹ ನೀಡಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ:  Hijab Hearing: 8ನೇ ದಿನವೂ ವಾದ-ಪ್ರತಿವಾದ ಆಲಿಸಿದ ಪೀಠ; ನಾಳೆಗೆ ವಿಚಾರಣೆ ಮುಂದೂಡಿಕೆ
Hijab ಪರವಾಗಿ ನೂರು ಜನ ಸಹ ನಿಲ್ಲಲ್ಲ; ಆರ್ ಅಶೋಕ್


ಹಿಜಬ್ ವಿಚಾರದಲ್ಲಿ ಪೋಷಕರು ಶಾಪ ಹಾಕುತ್ತಿದ್ದಾರೆ ಎಂಬ ಯು.ಟಿ ಖಾದರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್​​, ಹಿಜಾಬ್ ಹಾಕುವವರು ಶಾಪ ಹಾಕುತ್ತಿರಬಹುದು. ಹಿಜಾಬ್ ಪರ ಮಾತನಾಡುವವರು ಕೆಲವೇ ಕೆಲವು ಜನ. ಇಡೀ ಕರ್ನಾಟಕದಲ್ಲಿ ಗುಡ್ಡೆ ಹಾಕಿದರು 100 ಜನ ಸಿಗಲ್ಲ. ಹಿಜಾಬ್ ಪರ ಇರುವವರ ಓಟು ಬೇಡ ಸಿಂಪಥಿಯೂ ಬೇಡ. ಅಂಜುಮನ್ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆ. ಹಿಜಾಬ್, ಕೇಸರಿ ಮುಖ್ಯ ಅಲ್ಲ ಅಂತ ಅವರೇ ಕರೆ ಕೊಟ್ಟಿದ್ದಾರೆ. ಬಹಳಷ್ಟು ಮೌಲ್ವಿಗಳು ಹಿಜಾಬ್ ಮುಖ್ಯ ಅಲ್ಲ ಎಂದಿದ್ದಾರೆ. ದೇಶದ ಮಾತು ಕೇಳೋದು ಬಿಟ್ಟು ವಿದೇಶದ ಮಾತು ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

Published by:Mahmadrafik K
First published: