ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ರಸ್ತೆ ಗುಂಡಿಗಳು ಯಮರೂಪಿ ಗುಂಡಿಗಳೆಂದೇ(Potholes) ಕುಖ್ಯಾತಿ ಪಡೆದಿವೆ. ರಾಜಧಾನಿಯಲ್ಲಿ ಹತ್ತಾರು ಸಾವು-ನೋವುಗಳಿಗೆ ಕೇವಲ ಈ ಸಣ್ಣ ಗುಂಡಿಗಳೇ ಕಾರಣವಾಗುತ್ತಿವೆ. ಪ್ರತಿದಿನ ನಾಗರೀಕರು ಗುಂಡಿಗಳನ್ನು ದೂಷಿಸುತ್ತಾ ಬಿಬಿಎಂಪಿ(BBMP) ಮತ್ತು ಸರ್ಕಾರಕ್ಕೆ(Government) ಹಿಡಿಶಾಪ ಹಾಕುತ್ತಲೇ ಇರುತ್ತಾರೆ. ಬೆಂಗಳೂರಿನಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸ ಯಾವಾಗಲೂ ಕಾರ್ಯರೂಪದಲ್ಲಿ ಇರುವಂತದ್ದು, ಆದರೂ ಕೂಡ ಈ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ.
ಗುಂಡಿಗಳಿಂದ ತುಂಬಿದ ರಸ್ತೆ ಹಂಚಿಕೊಂಡ ಟ್ವಿಟರ್ ಬಳಕೆದಾರರು
ಪ್ರಯಾಣಿಕರು ಹಲವು ಬಾರಿ ದೂರು ನೀಡಿದರೂ ಬೆಂಗಳೂರಿನಲ್ಲಿ ಗುಂಡಿಗಳ ಹಾವಳಿ ತಪ್ಪುತ್ತಿಲ್ಲ. ಬೆಂಗಳೂರಿನ ಟ್ರಾಫಿಕ್, ರಸ್ತೆ ಗುಂಡಿಗಳ ದುಃಸ್ಥಿತಿಯನ್ನು ತೋರಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತವೆ.
ಅಂತದ್ದೇ ಒಂದು ಕ್ಲಿಪ್ ಅನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಬಿಲಿಯನೇರ್-ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಸಹನಾ ಎಂಬ ಟ್ವಿಟ್ಟರ್ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ರಸ್ತೆ ಗುಂಡಿಗಳ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಇಟ್ಟಿಗೆ, ಕಲ್ಲುಗಳಿಂದ ಮುಚ್ಚುವ ದೃಶ್ಯವನ್ನು ನೋಡಬಹುದಾಗಿದೆ.
https://t.co/SOV7iSRske
Chanasandara slow traffic movement is getting restored.@SplCPTraffic @jointcptraffic @DCPTrEastBCP @acpwfieldtrf @blrcitytraffic pic.twitter.com/E8SsGgE3qf
— WHITEFIELD TRAFFIC PS BTP (@wftrps) December 14, 2022
ಈ ವಿಡಿಯೋವನ್ನು ಹಂಚಿಕೊಂಡ ಟ್ವಿಟ್ಟರ್ ಬಳಕೆದಾರರಾದ ಸಹನಾ ಅವರು ನಗರದ ನಾಗರಿಕ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನ್ನು ಟೀಕಿಸಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂದು ಆರೋಪಿಸಿದ್ದಾರೆ.
'ಇದು ಎಲ್ಲ ದೇಶಗಳಿಗೂ ಮಾದರಿಯಾಗಬೇಕು. ನಮ್ಮ ಸ್ಮಾರ್ಟ್ ಸಿಟಿ ಬೆಂಗಳೂರು ಮಾದರಿಯಾಗಿದೆ. ಬಿಬಿಎಂಪಿ ಎಂದಿಗೂ ಕೆಲಸ ಮಾಡುವುದಿಲ್ಲ ಮತ್ತು ಟ್ರಾಫಿಕ್ ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಾರೆ. ಟ್ರಾಫಿಕ್ ನಿಯಂತ್ರಣ ಕಠಿಣವಾಗಿರುವುದರಲ್ಲಿ ಆಶ್ಚರ್ಯವಿಲ್ಲ' ಎಂದು ಸಹನಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Bengaluru: ಬೆಂಗಳೂರಿನ ಫೇಮಸ್ ಹೋಟೆಲ್ಗಳಿಗೆ ಬೀಗ, ಈ ವಿಚಾರದ ಬಗ್ಗೆ ಇರಲಿ ಗಮನ!
ಕಿರಣ್ ಮಜುಂದಾರ್ ಶಾ ಪ್ರತಿಕ್ರಿಯೆ
ಈ ವಿಡಿಯೋಗೆ ಬಯೋಟೆಕ್ನಾಲಜಿ ಉದ್ಯಮದ ಹಿರಿಯರಾದ ಕಿರಣ್ ಮಜುಂದಾರ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್ ಅನ್ನು ಅವರು ರೀಟ್ವೀಟ್ ಮಾಡಿದ್ದು, 'ಲೋಪಗಳಿಗೆ ಕಾರಣರಾದವರಿಗೆ ಏಕೆ ದಂಡ ವಿಧಿಸುತ್ತಿಲ್ಲ. ಇಂತಹ ಸ್ವೀಕಾರಾರ್ಹವಲ್ಲದ ಲೋಪಗಳಿಗೆ ಕಾರಣರಾದವರಿಗೆ ಬಿಬಿಎಂಪಿ ಕಮಿಷನರ್ ಏಕೆ ದಂಡ ವಿಧಿಸುತ್ತಿಲ್ಲ? ನಗರವು ನಿಜವಾಗಿಯೂ ನರಳುತ್ತಿದೆ' ಎಂದು ಬರೆದಿದ್ದಾರೆ.
Why is @bbmpcommr not penalising those responsible for such unacceptable lapses? City is really suffering https://t.co/3xzpumpQPd
— Kiran Mazumdar-Shaw (@kiranshaw) December 17, 2022
ಸಹನಾ ಅವರ ಪೋಸ್ಟ್ಗೆ ಇನ್ನೂ ಹಲವಾರು ಜನ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರು ಅತ್ಯದ್ಭುತ ನಗರ, ಆದರೆ ಅಲ್ಲಿನ ಮುಖ್ಯ ಸಮಸ್ಯೆಯೇ ರಸ್ತೆ ಗುಂಡಿಗಳು ಮತ್ತು ಟ್ರಾಫಿಕ್. ಅದನ್ನು ಮುಖ್ಯವಾಗಿ ಸರ್ಕಾರ ಮತ್ತು ಬಿಬಿಎಂಪಿ ಮುಕ್ತಗೊಳಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 2 ರಂದು ಕರ್ನಾಟಕ ಹೈಕೋರ್ಟ್, ಬಿಬಿಎಂಪಿ ಮತ್ತು ಅದರ ಗುತ್ತಿಗೆದಾರರು ಕೈಗೊಳ್ಳುತ್ತಿರುವ ಗುಂಡಿಗಳನ್ನು ತುಂಬುವ ಅಥವಾ ದುರಸ್ತಿ ಮಾಡುವ ಕೆಲಸದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹೈಕೋರ್ಟ್ ನಿರ್ದೇಶನ ನೀಡಿತ್ತು.
ನಂತರ ಕೈಗೊಂಡಿರುವ ಗುಂಡಿ ತುಂಬುವ ಕಾಮಗಾರಿಯ ಸ್ಥಿತಿಗತಿ ಕುರಿತು ಪೌರಕಾರ್ಮಿಕರು ಹೈಕೋರ್ಟ್ಗೆ ವರದಿ ಸಲ್ಲಿಸಿದರು. ಗುರುತಿಸಲಾದ 25,032 ಗುಂಡಿಗಳಲ್ಲಿ 13,843 ತುಂಬಲಾಗಿದೆ ಎಂದು ವರದಿ ಸಲ್ಲಿಸಲಾಯಿತು.
ಬೆಂಗಳೂರಿನ ಗುಂಡಿಗಳನ್ನು ಮುಚ್ಚಲು ಸಿವಿಕ್ ಟೆಕ್ ಸ್ಟಾರ್ಟ್ ಅಪ್ ಆಗಿರುವ ʼಪಾಟ್ ಹೋಲ್ ರಾಜʼ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಾಗರಿಕರೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ