• Home
  • »
  • News
  • »
  • bengaluru-urban
  • »
  • Vidhan Sabha Committees: ಕೋರ್ಟ್​, ಪೊಲೀಸ್ ಇಲ್ಲದೆಯೇ ಸಮಸ್ಯೆಗಳಿಗೆ ಪರಿಹಾರ! ಈ ಸಮಿತಿಗಿದೆ ಇಷ್ಟೊಂದು ಅಧಿಕಾರ

Vidhan Sabha Committees: ಕೋರ್ಟ್​, ಪೊಲೀಸ್ ಇಲ್ಲದೆಯೇ ಸಮಸ್ಯೆಗಳಿಗೆ ಪರಿಹಾರ! ಈ ಸಮಿತಿಗಿದೆ ಇಷ್ಟೊಂದು ಅಧಿಕಾರ

ವಿಧಾನಸಭೆ (ಸಾಂದರ್ಭಿಕ ಚಿತ್ರ)

ವಿಧಾನಸಭೆ (ಸಾಂದರ್ಭಿಕ ಚಿತ್ರ)

ಮೈಯಲ್ಲಿ ಮನಸಲ್ಲಿ ಕೋರ್ಟ್​ಗೆ ಹೋಗುವಷ್ಟು ತ್ರಾಣವಿಲ್ಲ, ಇಡೀ ವರ್ಷ ಕಟಕಟೆಯಲ್ಲಿ ನಿಂತು ವಾದಿಸೋ ಶಕ್ತಿಯಿಲ್ಲ. ಕೈಯಲ್ಲಿ ಹಣವೂ ಇಲ್ಲ, ಇಂಥಾ ಹತ್ತು ಹಲವು ಧರ್ಮ ಸಂಕಟದ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರಿಗೇಳೋಣ ನಮ್ ಪ್ರಾಬ್ಲಮ್ಮು ಅಂತೀರಾ?

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಊರಿಗೆ ರಸ್ತೆ ಸಂಪರ್ಕವಿಲ್ಲ, ಇರೋ ರೋಡಿನಲ್ಲಿ ನಡೆಯೋಕೂ ಆಗಲ್ಲ, ನಿಮ್ಮ ಬಡಾವಣೆಗೆ ನೀರಿನ ಸಂಪರ್ಕ ಇದ್ರೂ ನಲ್ಲಿಯಲ್ಲಿ ನೀರೇ ಬರೋದಿಲ್ಲ, ಅಲ್ಲೆಲ್ಲೋ ಜಾತಿ ನಿಂದನೆ ಮಾಡಲಾಗ್ತಿದೆ, ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಲಾಗಿದೆ. ಯಾರಿಗೇ ಎಷ್ಟೇ ಅರ್ಜಿ ಕೊಟ್ರೂ ಪ್ರಯೋಜನ ಆಗ್ತಿಲ್ಲ, ಪೊಲೀಸರು ಕಂಪ್ಲೇಂಟ್ (Police Complaint) ತಕೊಳ್ತಿಲ್ಲ. ಮೈಯಲ್ಲಿ ಮನಸಲ್ಲಿ ಕೋರ್ಟ್​ಗೆ (Court) ಹೋಗುವಷ್ಟು ತ್ರಾಣವಿಲ್ಲ, ಇಡೀ ವರ್ಷ ಕಟಕಟೆಯಲ್ಲಿ ನಿಂತು ವಾದಿಸೋ ಶಕ್ತಿಯಿಲ್ಲ. ಕೈಯಲ್ಲಿ ಹಣವೂ ಇಲ್ಲ, ಇಂಥಾ ಹತ್ತು ಹಲವು ಧರ್ಮ ಸಂಕಟದ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರಿಗೇಳೋಣ ನಮ್ ಪ್ರಾಬ್ಲಮ್ಮು (Public Problem Solution) ಅಂತೀರಾ? ನಮಗೆ ಹೇಳಿ ಅಂತಿವೆ ಈ ವಿಧಾನಸಭಾ ಸಮಿತಿಗಳು.


    ಹೌದು, ದಿನನಿತ್ಯ ಎದುರಿಸುವ ಪರಸ್ಪರ ಬಗೆಹರಿಯದ, ಕೋರ್ಟ್​ನಲ್ಲಿ ದಾವೆ ಹೂಡಲಾಗದ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸೋಕೆ ಅಂತಾನೆ ಕೆಲವು ಸಮಿತಿಗಳಿವೆ. ಆದ್ರೆ ನಾಗರಿಕರ ಸಮಸ್ಯೆಗಳನ್ನ ಪರಿಹರಿಸೋಕೆ ಹೀಗೆ ಸಮಿತಿಗಳಿವೆ ಎಂಬುದೇ ಬಹುತೇಕರಿಗೆ ತಿಳಿದಿರಲ್ಲ, ಇಂತಹ ಸಮಿತಿಗಳ ಬಗ್ಗೆ ಸಂಕ್ಷಿಪ್ತವಾಗಿ ನಾವು ಮಾಹಿತಿ ಕೊಡ್ತೀವಿ ನೋಡಿ.


    ಈ ಸಮಿತಿಗಳು ಮನಸು ಮಾಡಿದ್ರೆ ಸಮಸ್ಯೆ ಪರಿಹಾರ
    ಶಾಸನಗಳನ್ನ ರೂಪಿಸೋ ಅಧಿಕಾರ ಹೊಂದಿರುವ ವಿಧಾನಸಭೆಯು ಕೆಲವು ಸಮಿತಿಗಳನ್ನು ಹೊಂದಿದೆ. ಈ ಸಮಿತಿಗಳುಮನಸು ಮಾಡಿದರೆ ಸಾರ್ವಜನಿಕರು ಹತ್ತಾರು ಸಂದಿಗ್ಧ ಸಮಸ್ಯೆಗಳಿಗೆ ಈ ಸಮಿತಿಗಳಿಂದ ಚಿಟಿಕೆ ಹೊಡೆದಷ್ಟು ಸಲೀಸಾಗಿ ಪರಿಹಾರ ಪಡೆಯಬಹುದು ಎಂಬ ಮಾಹಿತಿ ಹಲವರಿಗೆ ತಿಳಿದಿಲ್ಲ.


    ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡೂ ತಮ್ಮದೇ ಆದ ಸಮಿತಿಗಳನ್ನು ಹೊಂದಿವೆ. ಜನರು ಎದುರಿಸುವ ಸಮಸ್ಯೆಗಳು, ಆಡಳಿತ, ಕಾನೂನು ರಚನೆಗಳ ಕುರಿತು ಈ ಸಮಿತಿಗಳು ಪರಿಹಾರ ಒದಗಿಸುವ ಜವಾಬ್ದಾರಿ ಹೊಂದಿವೆ.


    ಯಾವೆಲ್ಲ ಸಮಿತಿಗಳಿವೆ?
    ಸಾರ್ವಜನಿಕ ಅರ್ಜಿಗಳು, ಸರ್ಕಾರದ ಭರವಸೆಗಳು, ಎಸ್ಸಿ/ಎಸ್ಟಿಗಳ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಂಥಾಲಯ ಮತ್ತು ಪಂಚಾಯತ್ ರಾಜ್, ಖಾತೆ ಮತ್ತು ಅಂದಾಜು ಸಮಿತಿಗಳನ್ನು ನಮ್ಮ ಕರ್ನಾಟಕ ವಿಧಾನಸಭೆ ಹೊಂದಿದೆ.



    ಇವುಗಳಲ್ಲಿ ಕೆಲವು ಸಮಿತಿಗಳು ಸಾರ್ವಜನಿಕರ ಸಂಕಷ್ಟ ಆಲಿಸುವ ಕೆಲಸ ಮಾಡುತ್ತಿವೆ. SC/ST ಅಥವಾ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಸಮಿತಿಗೆ ನೇರವಾಗಿ ಜನರಿಂದ ದೂರು ದುಮ್ಮಾನ ಆಲಿಸುವ ಅವಕಾಶವಿದೆ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನ ನೇರವಾಗಿ ಪರಿಹರಿಸುವ ಜವಾಬ್ದಾರಿಯನ್ನು ಹೊಂದಿವೆ.


    ಜನರು ಮತ್ತು ಸರ್ಕಾರದ ನಡುವೆ ಮಧ್ಯವರ್ತಿ
    ಜನರು ಮತ್ತು ಸರ್ಕಾರದ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡುವ ಈ ಸಮಿತಿಗಳಿಂದ ಜನಸಾಮಾನ್ಯರು ಕೋರ್ಟ್ ಮೆಟ್ಟಿಲೇರುವ ಎಷ್ಟೋ ಸಂದರ್ಭ ನಿವಾರಿಸುವ ಸಾಮರ್ಥ್ಯ ವಿಧಾನಸಭಾ ಸಮಿತಿಗಳಿಗಿದೆ. ಜನರು ನ್ಯಾಯಾಲಯಗಳಲ್ಲಿ ಎಷ್ಟು ನಂಬಿಕೆ ಇಡುತ್ತಾರೋ ಅಷ್ಟೇ ನಂಬಿಕೆಯನ್ನು ಈ ಸಮಿತಿಗಳನ್ನ ಸಹ ಇಟ್ಟ ಉದಾಹರಣೆಗೂ ನಮ್ಮಲ್ಲಿವೆ.


    ಈ ಸಮಸ್ಯೆಗಳಿಗೆ ಸಿಕ್ಕಿದೆ ಪರಿಹಾರ
    ಬಂಡೇಮಠ ಕೆಎಚ್​ಬಿ ಬಡಾವಣೆಯನ್ನು ಬಿಬಿಎಂಪಿಗೆ ವರ್ಗಾಯಿಸುವುದು, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಗತಿ, ಬಿಡಿಎ ಲೇಔಟ್​ಗಳು, ಬಿಬಿಎಂಪಿ ಪ್ರದೇಶಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಈ ಸಮಿತಿಗಳಿಂದಲೇ ಪರಿಹಾರವಾಗಿವೆ.


    ಸಮಿತಿಗಳಿಗೂ ಇದೆ ಪರಿಮಿತಿ
    ಈ ಸಮಿತಿಗಳಿಗೆ ನೇಮಿಸಲ್ಪಡುವ ಶಾಸಕರು ವಿಧಾನಸಭಾ ಸ್ಪೀಕರ್​ರಿಂದ ನಿರ್ದೇಶನ ಪಡೆಯುತ್ತಾರೆ. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ವಿಷಯಗಳ ಕುರಿತು ಈ ಸಮಿತಿಗಳು ಚರ್ಚೆ, ಪರಿಶೀಲನೆ ಮಾಡಿ ಪರಿಹಾರದ ಮಾರ್ಗ ಸೂಚಿಸಬಹುದು. ವಿಧಾನಸಭಾ ಸಮಿತಿಗಳಿಗ ಅಧಿಕಾರಕ್ಕೂ ಪರಿಮಿತಿಯಿದ್ದರೂ ಇಚ್ಛಾಶಕ್ತಿಯಿದ್ದಲ್ಲಿ ಈ ಸಮಿತಿಗಳು ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು. ಹಿಂದುಳಿದ ವರ್ಗಗಳ ಸಮಿತಿಗೆ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು


    ಈ ಸಮಿತಿಗಳು ಹೆಚ್ಚು ಆ್ಯಕ್ಟಿವ್!
    ಈ ಸಮಿತಿಗಳಲ್ಲಿ ಅರ್ಜಿ ಸಮಿತಿ ಮತ್ತು ಹಿಂದುಳಿದ ವರ್ಗಗಳ ಸಮಿತಿ ಸಾರ್ವಜನಿಕ ಹಿತಾಸಕ್ತಿ ರಕ್ಷಣೆಯಲ್ಲಿ ಅತಿ ಹೆಚ್ಚು ಆ್ಯಕ್ಟಿವ್ ಆಗಿದೆ ಎನ್ನುತ್ತಾರೆ  ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಮಿತಿಯೊಂದರ ಹಿರಿಯ ಅಧಿಕಾರಿ. 


    ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ ಇಲಾಖೆಯ ಅಧಿಕೃತ ಜಾಲತಾಣ ವೀಕ್ಷಿಸಬಹುದು.


    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


    ಎಲ್ಲಾ ಸಮಿತಿಗಳ ಅಧಿಕೃತ ಜಾಲತಾಣ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಸಾಕು!


    ಸಂಪರ್ಕ ಸಂಖ್ಯೆ: 080-22289676


    ವಿಧಾನಸಭಾ ಸಮಿತಿಯೊಂದರ ಕೆಲಸ ಹೀಗಿತ್ತು ನೋಡಿ
    ವಿಧಾನಸಭಾ ಸಮಿತಿಯೊಂದು ಮನಸು ಮಾಡಿದ್ರೆ ಏನೆಲ್ಲ ಮಾಡಬಹುದು ಅನ್ನೋದನ್ನ ನೋಡ್ತಾ ಹೋದ್ರೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಕೆಎಚ್​ಬಿ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಸರ್ಕಾರ 2020ರಲ್ಲಿ ವಿಧಾನಸಭೆಗೆ ತಿಳಿಸಿತ್ತು. ಆದರೆ ಎರಡು ವರ್ಷ ಕಳೆದರೂ ಈ ಕುರಿತು ಯಾವುದೇ ಬೆಳವಣಿಗೆ ನಡೆದಿರಲಿಲ್ಲ.




    ಇದನ್ನೂ ಓದಿ: Bengaluru Roads: ರಸ್ತೆ ಗುಂಡಿ ವಿರುದ್ಧ ದೂರು ನೀಡಲು ಮೊಬೈಲ್ ಆ್ಯಪ್!


    ಮುಖ್ಯಮಂತ್ರಿಗಳಿಂದ ಹಿಡಿದು ಸಂಸದರು, ಶಾಸಕರು, ಪ್ರತಿಪಕ್ಷದ ನಾಯಕರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರು, ಅಧಿಕಾರಿ ವರ್ಗಗಳನ್ನು ಮೂಲಭೂತ ಸೌಕರ್ಯಕ್ಕಾಗಿ 2016 ರಿಂದ ನಿರಂತರವಾಗಿ ಭೇಟಿ ಮಾಡಿತ್ತು. ಕರ್ನಾಟಕ ರೇರಾ ಪ್ರಾಧಿಕಾರದಲ್ಲಿ 2017ರಲ್ಲಿ ದೂರನ್ನು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.


    ಕೊನೆಗೂ ಅರ್ಜಿ ಸಮಿತಿಗೆ ದೂರು
    ಅಂತಿಮ ಪ್ರಯತ್ನವಾಗಿ ಕೆಎಚ್​ಬಿ ನಿವಾಸಿಗಳು ವಿಧಾನಸಭಾ ಸಮಿತಿಗೆ ದೂರು ನೀಡಿದರು. ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಫೆಬ್ರವರಿ 2022 ರಲ್ಲಿ ದೂರನ್ನು ದಾಖಲಿಸಲಾಯ್ತು.  ಸಮಿತಿಯು ಪ್ರಾಧಿಕಾರದೊಂದಿಗೆ ಸಾಕಷ್ಟು ವಿಚಾರಣೆ, ಬಡಾವಣೆ ವೀಕ್ಷಣೆ ಮತ್ತು ವಾಸ್ತವಾಂಶಗಳನ್ನು ಪರಿಶೀಲಿಸಿ ಕಳೆದ 6-7 ವರ್ಷಗಳಿಂದ ಕಾಮಗಾರಿಗಳನ್ನು ನಡೆಸಲು ಸೂಕ್ತ ನಿರ್ದೇಶನಗಳನ್ನು ನೀಡಿತು.


    ಇದನ್ನೂ ಓದಿ: Water Helpline: ನಿಮ್ಮ ಮನೆಗೆ ನೀರು ಬರ್ತಿಲ್ವಾ? ಈ ನಂಬರ್​ಗೆ ವಾಟ್ಸಪ್ ಮಾಡಿ ಸಾಕು


    ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿಯ ಸಹಾಯದಿಂದಲೇ ತಮ್ಮ ಸಮಸ್ಯೆಗಳು ಪರಿಹಾರವಾಯ್ತು  ಅಂತಾರೆ ಕೆಎಚ್​ಬಿ ನಿವಾಸಿಗಳು. ಹೀಗೆ ಮನಸು ಮಾಡಿದ್ರೆ ಹಲವು ಸಮಸ್ಯೆಗಳನ್ನು ಪರಿಹರಿಸಬಲ್ಲ ಸಮಿತಿಗಳು ಇಚ್ಛಾಶಕ್ತಿ ತೋರಲಿ, ಸಾರ್ವಜನಿಕರು ಈ ಸಮಿತಿಗಳಿಂದ ಇನ್ನಷ್ಟು ಪ್ರಯೋಜನ ಪಡೆಯಲಿ ಅನ್ನೋದೇ ನಮ್ಮ ಹಾರೈಕೆ

    Published by:ಗುರುಗಣೇಶ ಡಬ್ಗುಳಿ
    First published: