• Home
  • »
  • News
  • »
  • bengaluru-urban
  • »
  • ವಾಹನ ಕಳ್ಳತನವಾದರೆ ಹೆದರಬೇಡಿ, ಸುಲಭವಾಗಿ ಹೀಗೆ ಆನ್​ಲೈನ್​ನಲ್ಲೇ FIR ದಾಖಲಿಸಿ!

ವಾಹನ ಕಳ್ಳತನವಾದರೆ ಹೆದರಬೇಡಿ, ಸುಲಭವಾಗಿ ಹೀಗೆ ಆನ್​ಲೈನ್​ನಲ್ಲೇ FIR ದಾಖಲಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾಹನ ಕಳ್ಳತನವಾದಲ್ಲಿ ಅಪರಾಧವನ್ನು ವರದಿ ಮಾಡಲು ಅಥವಾ ದೂರು ನೀಡಲು ನಾಗರಿಕರು ಪೊಲೀಸ್ ಠಾಣೆಗೆ ಭೇಟಿ ನೀಡಬೇಕಾಗಿಲ್ಲ

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ವಾಹನ ಕಳ್ಳತನವಾದ್ರೆ (Vehicle Theft) ಏನು ಮಾಡಬೇಕು? ಪೊಲೀಸ್ ಸ್ಟೇಷನ್​ಗೆ ಅಲೆಯಬೇಕು, ಇತ್ತ ವಾಹನ ಕಳ್ಳತನವಾದ ತಲೆನೋವು, ಅತ್ತ ಪೊಲೀಸ್ ಠಾಣೆಗೂ ಅಲೆಯಬೇಕು ಎಂಬ ರಗಳೆ ಎಂದುಕೊಂಡ್ರಾ? ಇನ್ಮೇಲೆ ಈ ತಲೆನೋವು ಇರಲ್ಲ ಬಿಡಿ. ಏಕೆಂದ್ರೆ ಕರ್ನಾಟಕ ಪೊಲೀಸರು (Karnataka Police) ವಾಹನ ಕಳ್ಳತನವಾದರೆ ಸಾರ್ವಜನಿಕರಿಗೆ ಸಹಾಯವಾಗಬಲ್ಲ ಹೊಸ ಸೌಲಭ್ಯವೊಂದನ್ನು (Vehicle Theft Online FIR) ಪರಿಚಯಿಸಿದ್ದಾರೆ. ವಾಹನ ನೋಂದಣಿಗಾಗಿ ವಾಹನ್ ಡೇಟಾಬೇಸ್ ಮತ್ತು ಎಲೆಕ್ಟ್ರಾನಿಕ್ ಸಹಿಗಾಗಿ ಆಧಾರ್ ಸಿಸ್ಟಮ್‌ಗೆ ಲಿಂಕ್ ಮಾಡುವ ಮೂಲಕ ವಾಹನ ಕಳ್ಳತನಕ್ಕಾಗಿ ಕರ್ನಾಟಕ ಪೊಲೀಸರು ಪೂರ್ಣ ಪ್ರಮಾಣದ ಎಲೆಕ್ಟ್ರಾನಿಕ್ ಪ್ರಥಮ ಮಾಹಿತಿ ವರದಿ (FIR) ಫೈಲಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.


    ವಾಹನ ಕಳ್ಳತನವಾದಲ್ಲಿ ಅಪರಾಧವನ್ನು ವರದಿ ಮಾಡಲು ಅಥವಾ ದೂರು ನೀಡಲು ನಾಗರಿಕರು ಪೊಲೀಸ್ ಠಾಣೆಗೆ ಭೇಟಿ ನೀಡಬೇಕಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


    ದೇಶದಲ್ಲೇ ಮೊದಲು!
    ಪೊಲೀಸ್ ದೂರುಗಳ ಇ-ಫೈಲಿಂಗ್ ಅನ್ನು ಅನೇಕ ನಗರಗಳಲ್ಲಿ, ವಿಶೇಷವಾಗಿ ಸೈಬರ್ ಅಪರಾಧಗಳಲ್ಲಿ ಜಾರಿಗೊಳಿಸಲಾಗಿದೆ. ಆದರೆ ಇಲ್ಲಿಯವರೆಗೆ ಅಂತಹ ದೂರುಗಳಿಗೆ ದೂರುದಾರರಿಂದ ಔಪಚಾರಿಕ ಸಹಿ ಅಗತ್ಯವಿತ್ತು. ಇತರ ನಗರಗಳನ್ನೂ ಮೀರಿ ಇಡೀ ದೇಶದಲ್ಲಿ ಎಫ್‌ಐಆರ್‌ಗಳು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಆಗುತ್ತಿರುವ ಮೊದಲ ನಿದರ್ಶನ ಇದಾಗಿದೆ.


    ಇಲ್ಲಿದೆ ಹಂತ ಹಂತದ ಮಾಹಿತಿ
    ಇಲಾಖೆ ಬಿಡುಗಡೆ ಮಾಡಿರುವ ವಿಡಿಯೋ ಪ್ರಕಾರ, ಇ-ಎಫ್‌ಐಆರ್ ದಾಖಲಿಸಲು ಬಯಸುವ ವ್ಯಕ್ತಿಯು ರುಜುವಾತುಗಳಿಗಾಗಿ ಪೋರ್ಟಲ್‌ಗೆ ಸೈನ್ ಅಪ್ ಮಾಡಬೇಕು. ಲಾಗಿನ್ ಆದ ನಂತರ, ಇ-ಎಫ್‌ಐಆರ್ ವರ್ಗದ ಅಡಿಯಲ್ಲಿ 'ವಾಹನ ಕಳ್ಳತನ' ಆಯ್ಕೆಯನ್ನು ಕ್ಲಿಕ್ ಮಾಡಬಹುದು. ಆಗ ಒಂದು ಹೊಸ ಪುಟವು ಪಾಪ್ ಅಪ್ ಆಗುತ್ತದೆ. ಒಬ್ಬ ವ್ಯಕ್ತಿಯು ವಾಹನದ ಎಲ್ಲಾ ವಿವರಗಳಾದ ನೋಂದಣಿ ಸಂಖ್ಯೆ ಮತ್ತು ಕಳ್ಳತನದ ಸ್ಥಳ ಇತ್ಯಾದಿ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ.


    ಇದನ್ನೂಓದಿ: Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ


    ದೂರಿನ ಪ್ರತಿಯನ್ನು ಡೌನ್​ಲೋಡ್ ಸಹ ಮಾಡಬಹುದು
    ಮುಂದಿನ ಹಂತದಲ್ಲಿ ದೂರು ಪತ್ರದ ಪ್ರತಿಯನ್ನು ಅಪ್‌ಲೋಡ್ ಮಾಡಬಹುದು. ನಂತರ ವ್ಯಕ್ತಿಯು ದೂರು ನೋಂದಣಿಯನ್ನು ಸ್ವೀಕರಿಸಬಹುದು. ಪೋರ್ಟಲ್‌ನಿಂದ ಇ-ಎಫ್‌ಐಆರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೊತೆಗೆ ದೂರಿನ ಸ್ಥಿತಿಯನ್ನು ವೆಬ್‌ಸೈಟ್‌ನಲ್ಲಿಯೂ ವೀಕ್ಷಿಸಬಹುದು. ವೆಬ್​ಸೈಟ್ ಮೂಲಕ ದೂರು ನೀಡಲು ಇಲ್ಲಿ ಕ್ಲಿಕ್ ಮಾಡಿ


    ಇದನ್ನೂ ಓದಿ: Sweet Potato: ಅಂಕೋಲಾ ಗೆಣಸು ಉಪವಾಸಕ್ಕೆ ಫೇಮಸ್ಸು! ಆರೋಗ್ಯಕ್ಕಂತೂ ಭಾರೀ ಬೆಸ್ಟು


    ಆದರೆ ವಾಹನ ಕಳ್ಳತನವಾಗಿರುವ ಕುರಿತು ಸುಳ್ಳು ದೂರು ನೀಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದರು. ಅಲ್ಲದೇ ಸುಳ್ಳು ಮತ್ತು ಚೇಷ್ಟೆಯ ದೂರುಗಳನ್ನು ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಉನ್ನತ ಪೊಲೀಸ್ ಮೂಲಕಗಳು ಮಾಹಿತಿ ನೀಡಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: