Adiyogi Statue: ಆದಿಯೋಗಿ ಪ್ರತಿಮೆ ಸ್ಥಾಪನೆ ವಿರುದ್ಧದ ಅರ್ಜಿ ವಜಾ

ಬೃಹತ್ ಆದಿಯೋಗಿ ಮೂರ್ತಿ

ಬೃಹತ್ ಆದಿಯೋಗಿ ಮೂರ್ತಿ

Bangalore Latest News Today: ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲೇ ಈ ಆದಿಯೋಗಿ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂದು ಹೆಸರಿಡಲಾಗಿದೆ.

  • Share this:

    ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ (Chikkaballapur Adiyogi Statue) ಇಶಾ ಫೌಂಡೇಶನ್ (Isha Foundation) ಸ್ಥಾಪಿಸಿರುವ ಹೊಸ ಆದಿಯೋಗಿ ಪ್ರತಿಮೆ (Adiyogi Statue) ಸುತ್ತಮುತ್ತ ಕಾಮಗಾರಿ ಕೈಗೊಳ್ಳಲು ಹೈಕೋರ್ಟ್ (Karnataka High Court) ಒಪ್ಪಿಗೆ ನೀಡಿದೆ.


    ಆದಿಯೋಗಿ ಪ್ರತಿಮೆ ಸ್ಥಾಪನೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಅರ್ಜಿದಾರರು ತಮ್ಮ ಕ್ರಿಮಿನಲ್ ಹಿನ್ನೆಲೆಯನ್ನು ಬಹಿರಂಗಪಡಿಸಿಲ್ಲ. ವಾಸ್ತವಾಂಶವನ್ನು ಮುಚ್ಚಿಟ್ಟು ಪಿಐಎಲ್ ಸಲ್ಲಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ನಿಯಮಗಳನ್ನು ಪಾಲಿಸಿಲ್ಲವೆಂದು ಇಶಾ ಫೌಂಡೇಶನ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದರು. ಈ ವಾದವನ್ನು ಆಲಿಸಿದ ಹೈಕೋರ್ಟ್ ಆದಿಯೋಗಿ ಪ್ರತಿಮೆ ಸ್ಥಾಪನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.


    ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲೇ ಈ ಆದಿಯೋಗಿ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂದು ಹೆಸರಿಡಲಾಗಿದೆ.


    ಬರೋಬ್ಬರಿ 112 ಅಡಿ ಎತ್ತರದ ಮೂರ್ತಿ
    ಈ ಆದಿಯೋಗಿ ಮೂರ್ತಿ ಕೊಯಂಬತ್ತೂರಿನಲ್ಲಿರುವ ಆದಿಯೋಗಿ ಮೂರ್ತಿಯಷ್ಟೇ, ಅಂದರೆ ಬರೋಬ್ಬರಿ 112 ಅಡಿ ಎತ್ತರವಿದೆ. ಕೊಯಮತ್ತೂರಿನ ಆದಿಯೋಗಿ ಮೂರ್ತಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆದರೆ ಚಿಕ್ಕಬಳ್ಳಾಪುರದಲ್ಲಿ ಸಂಕ್ರಾಂತಿ ವೈಭವ ಕಳೆಗಟ್ಟಲಿದೆ. ಕೃಷಿ ಸಮುದಾಯದ ಸುಗ್ಗಿ ಹಬ್ಬದ ಪ್ರತೀಕವಾಗಿ ಸಂಕ್ರಾಂತಿಗೆ ಹೊಸ ಮೆರುಗು ನೀಡಲು ಇಶಾ ಫೌಂಡೇಶನ್ ನಿರ್ಧರಿಸಿದೆ.


    ಈ ಎಲ್ಲ ವಿಶೇಷಗಳೂ ಇರಲಿವೆ
    ಚಿಕ್ಕಬಳ್ಳಾಪುರದ ಆದಿಯೋಗಿ ಮೂರ್ತಿ ಆವರಣದಲ್ಲೇ ನವಗ್ರಹ ದೇಗುಲವಿದೆ. ಇಲ್ಲೇ ವಿಶೇಷ ಲಿಂಗ ಭೈರವಿ ದೇವಿಯ ದರ್ಶನ ಮಾಡಬಹುದಾಗಿದೆ. ಅಲ್ಲದೇ ಒಂದು ಪುಟ್ಟ ಜಲಪಾತವೂ ಸಹ ನಿಮ್ಮ ದಾರಿಯಲ್ಲಿ ಸಿಗಲಿದೆ!


    ಇಲ್ಲಿಗೆ ಬರೋದು ಹೇಗೆ?
    112 ಅಡಿ ಎತ್ತರದ ಆದಿಯೋಗಿಯ ದರ್ಶನ ಪಡೆಯಲು ನೀವು ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ಪ್ರಯಾಣಿಸಿದರೆ ಸಾಕು! ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಸ್ಟ್ 45 ಕಿಲೋ ಮೀಟರ್, ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 63 ಕಿಲೋ ಮೀಟರ್ ಪಯಣಿಸಿದರೆ ನೀವು ಆದಿಯೋಗಿ ದರ್ಶನ ಮಾಡಬಹುದು. ಸದ್ಯ ಈ ಆದಿಯೋಗಿ ಮೂರ್ತಿಯ ಹತ್ತಿರ ಇಶಾ ಫೌಂಡೇಶನ್​ನ ಚಿಕ್ಕ ಕ್ಯಾಂಟೀನ್ ಇದೆ ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಇಲ್ಲ.




    ಇದನ್ನೂ ಓದಿ: Vande Bharat Express Train: ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು ಇನ್ನಷ್ಟು ಸ್ಪೀಡ್!


    ಬಸ್ ಮೂಲಕ ಬರೋದಾದ್ರೆ ಹೀಗೆ ಬನ್ನಿ
    ಬಸ್ ಮೂಲಕ ಇಲ್ಲಿಗೆ ಬರ್ತೀರಿ ಅಂತಾದ್ರೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಸ್ ಹತ್ತಿ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಸ್ ಹತ್ತಿದರೆ ದೇವನಹಳ್ಳಿ ರಾಣಿ ಸರ್ಕಲ್​ ಬಳಿ ನಿಮಗೆ ಆದಿಯೋಗಿ ಬಳಿ ತಲುಪಲು ಬಸ್ ಸಿಗುವ ಸಾಧ್ಯತೆಯಿದೆ.


    ಇದನ್ನೂ ಓದಿ: Bengaluru Namma Metro: ಕೆಆರ್ ಪುರದಿಂದ ವೈಟ್‌ಫೀಲ್ಡ್​ಗೆ 12 ನಿಮಿಷದಲ್ಲಿ ಪ್ರಯಾಣಿಸಿ!


    ಅದಕ್ಕಿಂತ ಬೆಂಗಳೂರಿನಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿಂದ ದೊಡ್ಡಬಳ್ಳಾಪುರ ಬಸ್ ಹತ್ತಿದರೆ ಮಧ್ಯೆ ನಂದಿ ಬಸ್ ಸ್ಟಾಪ್ ಸಿಗುತ್ತೆ. ಹೀಗೂ ನೀವು ಆದಿಯೋಗಿ ಶಿವನ ಮೂರ್ತಿ ತಲುಪಬಹುದು. ಚಿಕ್ಕಬಳ್ಳಾಪುರದಿಂದಲೂ ಕೇವಲ 9 ಕಿಲೋ ಮೀಟರ್ ದೂರಕ್ಕೆ ಈ ಕ್ಷೇತ್ರ ದೊರೆಯುತ್ತದೆ. ಆದರೆ ಸದ್ಯದ ಮಟ್ಟಿಗೆ ಸದ್ಗುರು ಸನ್ನಿಧಿಗೆ ಖಾಸಗಿ ವಾಹನದಲ್ಲೆ ಆಗಮಿಸೋದೇ ಬೆಸ್ಟ್!

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು