• Home
  • »
  • News
  • »
  • bengaluru-urban
  • »
  • Good News: ಅರಣ್ಯ ಇಲಾಖೆಯ ಈ ಸ್ಪರ್ಧೆಯಲ್ಲಿ ಗೆದ್ರೆ ಸಿಗುತ್ತೆ 20 ಸಾವಿರ!

Good News: ಅರಣ್ಯ ಇಲಾಖೆಯ ಈ ಸ್ಪರ್ಧೆಯಲ್ಲಿ ಗೆದ್ರೆ ಸಿಗುತ್ತೆ 20 ಸಾವಿರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲೋಗೋ ವಿನ್ಯಾಸ ಸಲ್ಲಿಸಲು ವಿದ್ಯಾರ್ಥಿಗಳು, ಕಲಾವಿದರು ಹಾಗೂ ಇತರೆ ಯಾವುದೇ ಸಾರ್ವಜನಿಕರು ಭಾಗವಹಿಸಬಹುದಾಗಿದೆ.

  • Share this:

    ಕರ್ನಾಟಕ ಅರಣ್ಯ ಇಲಾಖೆ (Karnataka Forest Department) ಇದೀಗ ತನ್ನ ವಿನೂತನ, ಆಕರ್ಷಕ ಲೋಗೋ ತಯಾರಿಗೆ ಮುಂದಾಗಿದೆ. ಇದಕ್ಕಾಗಿ ಆಸಕ್ತ ಕಲಾವಿದರಿಂದ ಲೋಗೋ ಡಿಸೈನ್ ಗಾಗಿ (Logo Design) ಆಹ್ವಾನ ನೀಡಿದೆ. ಹೊಸ ಬಗೆಯ ಸಂದೇಶ ನೀಡುವ, ವಿನೂತನವಾಗಿ ಆಕರ್ಷಕವಾದ ಲೋಗೋ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ಆಹ್ವಾನಿಸಿದೆ. ಅತ್ಯುತ್ತಮ ಲೋಗೋ ವಿನ್ಯಾಸಕ್ಕೆ ಉತ್ತಮ ಬಹುಮಾನವೂ (Prize) ದೊರೆಯಲಿದೆ. ಲೋಗೋ ವಿನ್ಯಾಸ ಸಲ್ಲಿಸಲು ವಿದ್ಯಾರ್ಥಿಗಳು, ಕಲಾವಿದರು ಹಾಗೂ ಇತರೆ ಯಾವುದೇ ಸಾರ್ವಜನಿಕರು ಭಾಗವಹಿಸಬಹುದಾಗಿದೆ.


    ಅರ್ಹತೆಗಳೇನು?
    ರಾಜ್ಯ ಅರಣ್ಯ ಇಲಾಖೆಯ ಲೋಗೋ ವಿನ್ಯಾಸಕ್ಕೆ ಅರ್ಜಿ ಸಲ್ಲಿಸುವವರು ಈ ಎಲ್ಲ ಅರ್ಹತೆಗಳನ್ನು ಹೊಂದಿರುವುದ ಕಡ್ಡಾಯವಾಗಿದೆ.
    1. ಸ್ಪರ್ಧೆಗೆ ಕರ್ನಾಟಕದ ನಿವಾಸಿಗಳಿಗೆ ಮಾತ್ರ ಅವಕಾಶ.
    2. ಸ್ಪರ್ಧಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
    3. ವೈಯಕ್ತಿಕ ನಮೂನೆಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.
    4. ಪ್ರತಿ ಸ್ಪರ್ಧಿಯು ಸ್ಪರ್ಧೆಗೆ ಪ್ರವೇಶವಾಗಿ ಒಂದು ವಿನ್ಯಾಸವನ್ನು ಮಾತ್ರ ಸಲ್ಲಿಸಬಹುದು.


    ವಿನ್ಯಾಸ ಪರಿಗಣನೆ
    ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದಲ್ಲಿರುವ ಅರಣ್ಯಗಳು ಹಾಗು ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ನೀರು, ಪ್ರಾಣಿ ಪಕ್ಷಿ ಸಂಕುಲ, ಜಲಚರಗಳು, ಮರಗಿಡಗಳು, ಕಾಡು ಮತ್ತು ಸಾಕಷ್ಟು ನೈಸರ್ಗಿಕ ಸಂಪನ್ಮೂಲವನ್ನು ಉಳಿಸಿ ಬೆಳೆಸುವತ್ತ ಶ್ರಮಿಸುತ್ತಿದೆ. ಲೋಗೋ ಯಾವುದೇ ಶೈಲಿಯಲ್ಲಿರಬಹುದು. ಆದರೆ ಇಲಾಖೆಯ ಕೆಲಸದ ಪ್ರಮುಖ ವಿಷಯಗಳನ್ನು ಒಳಗೊಂಡಿರಬೇಕು. ಉದಾಹರಣೆಗೆ - ನೀರು, ಅರಣ್ಯ, ಪ್ರಾಣಿ-ಪಕ್ಷಿಗಳು, ಮಣ್ಣು, ಸಸ್ಯ, ಮರಗಿಡಗಳು ಇತ್ಯಾದಿ.


    ಲೋಗೋ ವಿನ್ಯಾಸ ಹೀಗಿರಬೇಕು
    1. ಲೋಗೋವನ್ನು JPEG/PNG ಸ್ವರೂಪದಲ್ಲಿ ಸಲ್ಲಿಸಬೇಕು
    2. ಹಿನ್ನೆಲೆ ಪಾರದರ್ಶಕವಾಗಿರಬೇಕು
    3. ನಿಮ್ಮ ವಿನ್ಯಾಸದ ಪರಿಕಲ್ಪನೆ ಮತ್ತು ಥೀಮ್ ಅನ್ನು ವಿವರಿಸುವ ಸಂಕ್ಷಿಪ್ತ ವಿವರಣೆಯನ್ನು 50 ರಿಂದ 100 ಪದಗಳಲ್ಲಿ ಕಳುಹಿಸಬೇಕು.
    4. ಎಲ್ಲಾ ಲೋಗೋ ವಿನ್ಯಾಸಗಳು ವೆಬ್ಸೈಟ್, ಬ್ಯಾನರ್, ಲೆಟರ್ ಹೆಡ್, ಫ್ಲೈಯರ್ ಇತ್ಯಾದಿ, ಇಲಾಖೆಯ ಪ್ರಚಾರ ಸಾಮಗ್ರಿಗಳ ಯಾವುದೇ ರೂಪಕ್ಕೆ ಹೊಂದಿಕೊಳ್ಳುವಂತಿರಬೇಕು.


    ಕೊನೆಯ ದಿನಾಂಕ ಯಾವಾಗ?
    2023ರ ಜನವರಿ 15 ರ ಒಳಗೆ ಆಸಕ್ತರು ಲೋಗೋ ವಿನ್ಯಾಸ ಮಾಡಿ ಅರಣ್ಯ ಇಲಾಖೆಗೆ ಸಲ್ಲಿಸಬಹುದಾಗಿದೆ.


    ಗೆದ್ದವರಿಗೆ ಸಿಗಲಿರುವ ಬಹುಮಾನ!
    ಲೋಗೋ ವಿನ್ಯಾಸದಲ್ಲಿ ಗೆದ್ದವರಿಗೆ 20 ಸಾವಿರ ರೂ. ನಗದು, ಇಬ್ಬರಿಗೆ ಪ್ರಾಯೋಜಿತ ಸಾಹಸ ಅನುಭವ ಹಾಗೂ ಪ್ರಮಾಣ ಪತ್ರ ಬಹುಮಾನವಾಗಿ ಸಿಗಲಿದೆ.


    ನೀವೂ ಲೋಗೀ ವಿನ್ಯಾಸ ಮಾಡುತ್ತೀರಿ ಅಂತಾದ್ರೆ ಮೊದಲು ನೋಂದಣಿ ಮಾಡಿಕೊಳ್ಳಬೇಕು. ನೀವೂ ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


    ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣ ಚೆಕ್ ಮಾಡಿ
    ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅರಣ್ಯ ಇಲಾಖೆಯ ವೆಬ್​ಸೈಟ್​ಗೆ ಲಾಗಿನ್ ಆಗಿ ಮಾಹಿತಿ ಪಡೆಯಬಹುದಾಗಿದೆ. ಇನ್ನೇಕೆ ತಡ, ನೀವೂ ಟ್ರೈ ಮಾಡಬಹುದಲ್ಲ!

    Published by:ಗುರುಗಣೇಶ ಡಬ್ಗುಳಿ
    First published: