ಬೆಂಗಳೂರು: 2014ರ ನಂತರ ಇಲ್ಲಿಯವರೆಗೆ ಕರ್ನಾಟಕದಲ್ಲಿ 64,512 ಕೋಟಿ ಹಣದಲ್ಲಿ 6,715 ಕಿಲೊ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ವೆಚ್ಚದಲ್ಲಿ 3084 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ (Highway Development) ಯೋಜನೆ ರೂಪಿಸಲಾಗಿದೆ. ಈ ಎಲ್ಲ ಅಂಶಗಳನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಬಜೆಟ್ ವೇಳೆ (Karnataka Budget 2023) ತಿಳಿಸಿದ್ದಾರೆ.
ಬಲು ಕುತೂಹಲ ಹುಟ್ಟಿಸಿರುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇಯನ್ನು 5,486 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಹೆದ್ದಾರಿಗೆ 8,408 ಕೋಟಿ ಅನುದಾನ ನೀಡಲಾಗಿದೆ. ಸೂರತ್-ಚೆನ್ನೈ ಎಕ್ಸ್ಪ್ರೆಸ್ವೇಗೆ 4,544 ಕೋಟಿ ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಉತ್ತರ ಕರ್ನಾಟಕದ ಊರುಗಳಿಗೂ ಬಂಪರ್ ಕೊಡುಗೆ
ಹುಬ್ಬಳ್ಳಿ-ಧಾರವಾಡ 6 ಪಥಗಳ ಹೆದ್ದಾರಿಗೆ 1,200 ಕೋಟಿ ಅನುದಾನ ನೀಡಲಾಗಿದೆ. ಜೊತೆಗೆ ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ- ಆಂಧ್ರ ಗಡಿ ಹೆದ್ದಾರಿಗೆ 2,200 ಕೋಟಿ ಅನುದಾನ ನೀಡಲಾಗಿದೆ.
ಚಿತ್ರದುರ್ಗಕ್ಕೆ ಮತ್ತು ಮೈಸೂರಿನ ಹೆದ್ದಾರಿಗೆ ಇಷ್ಟು ಅನುದಾನ
ಚಿತ್ರದುರ್ಗ-ದಾವಣಗೆರೆ-ಹಾವೇರಿ 6 ಪಥದ ಹೆದ್ದಾರಿಗೆ 2,611 ಕೋಟಿ ಅನುದಾನ ನೀಡಲಾಗಿದೆ. ಮೈಸೂರು-ಕುಶಾಲನಗರ 92 ಕಿಲೋ ಮೀಟರ್ ಹೆದ್ದಾರಿ ಅಬಿವೃದ್ಧಿಗೆ 4,128 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಈ ಹೆದ್ದಾರಿ ಚತುಷ್ಪಥಕ್ಕೆ ಏರಿಕೆ
ಕಲ್ಯಾಣ ಕರ್ನಾಟಕದ ಪ್ರಮುಖ ಸಂಪರ್ಕ ರಸ್ತೆಯಾದ 411 ಕಿ.ಮೀ. ಉದ್ದದ ಬೀದರ್-ಕಲಬುರಗಿ-ಬಳ್ಳಾರಿ ರಸ್ತೆಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:Karnataka Budget 2023-24 Live: ನಿರುದ್ಯೋಗಿಗಳಿಗೆ ಸರ್ಕಾರದಿಂದ ಸಂಬಳ, ಬಜೆಟ್ನಲ್ಲಿ ಸಿಎಂ ಘೋಷಣೆ
ಗದಗ ಜಿಲ್ಲೆಗೆ ಏನೆಲ್ಲ ಸಿಕ್ತು?
ಗದಗ ಜಿಲ್ಲೆಯ ಶಿರಹಟ್ಟಿ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಸುತ್ತಲಿನ ಗ್ರಾಮಗಳ ಬಡ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆ ಸಿಗುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಪಿಎಂ-ಅಭಿಂ ಅಡಿಯಲ್ಲಿ ತೃತೀಯ ಹಂತದ ಆರೈಕೆಯನ್ನು ಒದಗಿಸುವ ಸಲುವಾಗಿ ಗದಗ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆಗೆ ತೀರ್ಮಾನಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ