• Home
  • »
  • News
  • »
  • bengaluru-urban
  • »
  • Kadlekai Parishe: ರೈತರಿಗೆ ಜೀವನ, ಬೆಂಗಳೂರಿಗೆ ಖುಷಿ! ಜಾತ್ರೆ ಅಂದ್ರೆ ಕಡಲೆಕಾಯಿ ಪರಿಷೆ

Kadlekai Parishe: ರೈತರಿಗೆ ಜೀವನ, ಬೆಂಗಳೂರಿಗೆ ಖುಷಿ! ಜಾತ್ರೆ ಅಂದ್ರೆ ಕಡಲೆಕಾಯಿ ಪರಿಷೆ

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಲೆಕ್ಕ ಮಾಡಲಾರದಷ್ಟು ಕಡ್ಲೇಕಾಯಿ ರಾಶಿಗಳು, ಹಾಗೇ ಲೆಕ್ಕಕ್ಕೇ ಸಿಗದಷ್ಟು ಜಾತ್ರೆಗೆ ಬಂದ ಜನರು!

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರಲ್ಲಿ ಜಾತ್ರೆ ಅಂದ್ರೆ ಅದು ಕಡಲೆಕಾಯಿ ಪರಿಷೆ! ಪಾರಂಪರಿಕ ಹಳ್ಳಿ ಸೊಗಡಿನ ಪ್ರಸಿದ್ಧ ಬಸವನಗುಡಿ ಜಾತ್ರೆಯ (Basavanagudi Parishe) ಕಡ್ಲೆಕಾಯಿ ಪರಿಷೆ (Basavanagudi Kadlekai Parishe 2022) ಅಂದ್ರೆ ಕೇಳ್ಬೇಕಾ? ಲೆಕ್ಕ ಮಾಡಲಾರದಷ್ಟು ಕಡ್ಲೇಕಾಯಿ ರಾಶಿಗಳು, ಹಾಗೇ ಲೆಕ್ಕಕ್ಕೇ ಸಿಗದಷ್ಟು ಜಾತ್ರೆಗೆ ಬಂದ ಜನರು! ಲಕ್ಷಾಂತರ ಜನರು ಬಸವನಗುಡಿಯ ಬಸವನ (Bull Temple Basavanagudi) ಆರ್ಶಿವಾದವನ್ನು ಪಡೆದು ಪಾವನರಾದ್ರು.


    ಹಿರಿಯರು, ಕಿರಿಯರು ವಯೋವೃದ್ಧರು ಎಂಬ ಬೇಧವಿಲ್ಲದೇ ಪರಿಷೆಯಲ್ಲಿ ಖುಷಿಯಿಂದ ಸುತ್ತಾಡಿದ್ರು. ಮುಗಿಬಿದ್ದು ಕಡ್ಲೆಕಾಯಿಯನ್ನು ಖರೀದಿಸುವುದರಲ್ಲಿ ಬ್ಯುಸಿ ಆಗಿದ್ರು.


    ಇದನ್ನೂ ಓದಿ: Chamarajanagar: ಕೊತಕೊತ ಕುದಿಯುವ ಎಣ್ಣೆ, ಬರಿಗೈಲಿ ವಡೆ ತೆಗೆದ ಅರ್ಚಕ!


    ಆಟದ ಮೈದಾನದಲ್ಲಿ ಮೋಜು ಮಸ್ತಿ!
    ರುಚಿರುಚಿಯಾದ ತಿಂಡಿ ತಿನಿಸುಗಳನ್ನು ತಿಂದು, ಆಟದ ಮೈದಾನದಲ್ಲಿ ಮೋಜು ಮಾಡಿ ಜಾತ್ರೆಯ ಮೆರುಗನ್ನ ಹೆಚ್ಚಿಸಿದ್ರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಅಧಿಕೃತವಾಗಿ ಚಾಲನೆ ನೀಡಿದ್ರು.


    ಇದನ್ನೂ ಓದಿ: Bengaluru Metro: ನಮ್ಮ ಮೆಟ್ರೋ ಸ್ಟೇಷನ್​ಗಳಲ್ಲಿ ಸಿಗಲಿದೆ ಟೀ, ಕಾಫಿ ತಿಂಡಿ!


    ಜೀವನ ಕಟ್ಟಿಕೊಟ್ಟ ಪರಿಷೆ
    ಕಳೆದೆರಡು ವರ್ಷಗಳಿಂದ ಕಡ್ಲೆಕಾಯಿ ಪರಿಷೆಗೆ ಕಡಿವಾಣ ಹಾಕಿದ್ದ ಕೊರೊನಾ ಸೋಂಕನ್ನೂ ಮೀರಿ ಈ ಬಾರಿ ಪರಿಷೆ ಕಳೆಗಟ್ಟಿತ್ತು. ಹೊರರಾಜ್ಯಗಳಿಂದಲೂ ಆಗಮಿಸಿದ್ದ ರೈತರು, ವ್ಯಾಪಾರಿಗಳು ಪರಿಷೆಗೆ ಸಂಭ್ರಮ ಹೆಚ್ಚಿಸಿದ್ರು. ಒಟ್ಟಾರೆ ಬೆಂಗಳೂರಿಗರಿಗೆ ಖುಷಿ, ಕಡ್ಲೆಕಾಯಿ ಬೆಳೆಗಾರರಿಗೆ ಜೀವನವನ್ನಂತೂ ಪರಿಷೆ ಕಟ್ಟಿಕೊಡ್ತು.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು