ಬೆಂಗಳೂರು: ಒಂದೊಂದು ರಾಜ್ಯದಲ್ಲೂ (State) ಒಂದೊಂದು ರೀತಿ ಸಾಂಪ್ರದಾಯಿಕ ಕ್ರೀಡೆಗಳು (Sports) ಫೇಮಸ್, ನಮ್ಮ ರಾಜ್ಯದಲ್ಲಿ ಕಂಬಳ ಫೇಮಸ್ ಆದ್ರೆ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಜಲ್ಲಿಕಟ್ಟು (Jallikattu) ಪ್ರಮುಖ ಆಕರ್ಷಣೆ. ಈ ಜಲ್ಲಿಕಟ್ಟಿನ ಸಖತ್ ಝಲಕ್ ನಿಮಗೆಂದೇ ಇಲ್ಲಿದೆ ನೋಡಿ.
ಹೀಗೆ ಹೋರಿಗಳನ್ನು ಸಿಂಗರಿಸಿ ಹದ್ದಿಗೆ ಕರೆತರುತ್ತಿರುವ ಗ್ರಾಮಸ್ಥರು. ಹೋರಿಗಳನ್ನು ಬೆದರಿಸಲು ಸಜ್ಜಾಗಿರೋ ಯುವಕರು, ಜಲ್ಲಿಕಟ್ಟು ನೋಡಲು ಬಂದಿರೋ ಸಾರ್ವಜನಿಕರು ಇದೆಲ್ಲ ಕಂಡುಬಂದದ್ದು ತಮಿಳುನಾಡಿನ ಕೃಷ್ಣಗಿರಿ ಸಮೀಪದ ಹೊಸೂರಿನ ಆರೂರು ಗ್ರಾಮದಲ್ಲಿ.
ಇದನ್ನೂ ಓದಿ: Bengaluru Matsya Loka ಬೆಂಗಳೂರಿನಲ್ಲಿ ವಿದೇಶಿ ಮೀನುಗಳ ಮತ್ಸ್ಯಲೋಕ! ದುಬೈ, ಸಿಂಗಾಪುರ್ ಎಲ್ಲಾ ಇಲ್ಲೇ ಇದೆ
ಈ ಗ್ರಾಮದಲ್ಲಿ ಪ್ರತಿವರ್ಷ ಪೊಂಗಲ್ ಹಬ್ಬ ಕಳೆದ ಮಾರನೇ ದಿನ ಜಲ್ಲಿಕಟ್ಟು ಅಯೋಜಿಸಲಾಗುತ್ತೆ, ಈ ವರ್ಷ ಸಹ ಗ್ರಾಮಸ್ಥರು ತಮ್ಮಲ್ಲಿರುವ ಹೋರಿಗಳನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಕರೆತಂದು ಅಖಾಡದಲ್ಲಿ ಬಿಟ್ಟರು. ಹೀಗೆ ಬಿಟ್ಟ ಹೋರಿಗಳನ್ನು ತಡೆದು ಅವುಗಳ ಕೊಂಬಿಗೆ ಕಟ್ಟಿರುವ ತಡಿಕೆಗಳನ್ನು ಕಿತ್ತುಕೊಳ್ಳುವುದಕ್ಕೆಂದೇ ನೂರಾರು ಯುವಕರು ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: ಕೊಯಮತ್ತೂರಿಗೇ ಹೋಗ್ಬೇಕಂತಿಲ್ಲ, ಬೆಂಗಳೂರು ಸಮೀಪದಲ್ಲೇ ಆದಿಯೋಗಿ! ಹೀಗೆ ಹೋಗಿಬನ್ನಿ
ಇನ್ನು ಜಲ್ಲಿಕಟ್ಟು ನೋಡಲು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ಸೇರಿದಂತೆ ಸುತ್ತಮುತ್ತಲ ನಗರಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಮೂನ್ನೂರಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಹೋರಿ ಬೆದರಿಸುವ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದು ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲಾಯಿತು.
ವರದಿ: ಆದೂರು ಚಂದ್ರು, ನ್ಯೂಸ್ 18 ಆನೇಕಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ