• Home
 • »
 • News
 • »
 • bengaluru-urban
 • »
 • Car Service Offer: ಪ್ರತಿಷ್ಠಿತ ಕಾರ್ ಕಂಪನಿಯಿಂದ ಬಂಪರ್ ಕೊಡುಗೆ; ನವೆಂಬರ್ 19ವರೆಗೆ ಮಾತ್ರ ಅವಕಾಶ

Car Service Offer: ಪ್ರತಿಷ್ಠಿತ ಕಾರ್ ಕಂಪನಿಯಿಂದ ಬಂಪರ್ ಕೊಡುಗೆ; ನವೆಂಬರ್ 19ವರೆಗೆ ಮಾತ್ರ ಅವಕಾಶ

ಜಾಗ್ವಾರ್ ಕಾರ್

ಜಾಗ್ವಾರ್ ಕಾರ್

ಈ ಕ್ಯಾಂಪ್​ನಲ್ಲಿ 32-ಪಾಯಿಂಟ್ ಎಲೆಕ್ಟ್ರಾನಿಕ್ ವೆಹಿಕಲ್ ಹೆಲ್ತ್ ಚೆಕ್-ಅಪ್, ಬ್ರೇಕ್ ಮತ್ತು ವೈಪರ್ ಚೆಕ್, ಟೈರ್ ಮತ್ತು ಫ್ಲೂಯಿಡ್ ಲೆವೆಲ್ ಚೆಕ್, ಜೊತೆಗೆ ಸಮಗ್ರ ಬ್ಯಾಟರಿ ಆರೋಗ್ಯ ತಪಾಸಣೆಯನ್ನು ಮಾಡಿಸಬಹುದಾಗಿದೆ.

 • Share this:

  ಬೆಂಗಳೂರು: ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ವಾರ್ಷಿಕ ಹಾಲಿಡೇ ಸರ್ವಿಸ್ ಕ್ಯಾಂಪ್  ಘೋಷಿಸಿದೆ. ನಿನ್ನೆ ಅಂದರೆ ನವೆಂಬರ್ 14 ರಿಂದಲೇ ಶುರುವಾಗಿರುವ  ಈ ಕ್ಯಾಂಪ್ ನವೆಂಬರ್ 19 ರವರೆಗೆ ಇರಲಿದೆ. ಈ ಕ್ಯಾಂಪ್‍ನಲ್ಲಿ ಜಾಗ್ವಾರ್ ಗ್ರಾಹಕರು ಸಮಗ್ರ ವಾಹನ ತಪಾಸಣೆ ಮತ್ತು ಬ್ರ್ಯಾಂಡೆಡ್ ಸರಕುಗಳು, ಪರಿಕರಗಳು ಮತ್ತು ಮೌಲ್ಯವರ್ಧಿತ ಸೇವೆಗಳ ವಿಶೇಷ ಕೊಡುಗೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.  ಈ ಕ್ಯಾಂಪ್​ನಲ್ಲಿ 32-ಪಾಯಿಂಟ್ ಎಲೆಕ್ಟ್ರಾನಿಕ್ ವೆಹಿಕಲ್ ಹೆಲ್ತ್ ಚೆಕ್-ಅಪ್, ಬ್ರೇಕ್ ಮತ್ತು ವೈಪರ್ ಚೆಕ್, ಟೈರ್ ಮತ್ತು ಫ್ಲೂಯಿಡ್ ಲೆವೆಲ್ ಚೆಕ್, ಜೊತೆಗೆ ಸಮಗ್ರ ಬ್ಯಾಟರಿ ಆರೋಗ್ಯ ತಪಾಸಣೆಯನ್ನು ಮಾಡಿಸಬಹುದಾಗಿದೆ.


  ಗ್ರಾಹಕರು ನವೆಂಬರ್  19 ರವರೆಗೂ ಈ ಸೇವೆಗಳನ್ನು ಪಡೆಯಬಹುದಾಗಿದೆ. 2022 ರಲ್ಲಿ 9:30 ರಿಂದ 4:30 ರವರೆಗೆ ಹತ್ತಿರದ ಅಧಿಕೃತ ರೀಟೇಲ್ ಡೀಲರ್​ಗಳ ಜೊತೆ ಅಪಾಯಿಂಟ್‍ಮೆಂಟ್ ಅನ್ನು ಪಡೆಯಬಹುದಾಗಿದೆ.


  ಲ್ಯಾಂಡ್ ರೋವರ್ ವಾಹನಗಳ ಸರ್ವಿಸ್ ಕ್ಯಾಂಪ್ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


  ಜಾಗ್ವಾರ್ ವಾಹನಗಳ ಸರ್ವಿಸ್ ಕ್ಯಾಂಪ್ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ


  ವಿಶೇಷವಾದ ಸಮಗ್ರ ಚಾಲಕ ತರಬೇತಿಯೂ ಇಲ್ಲಿ ಸಿಗುತ್ತೆ
  ಚಾಲಕರನ್ನು ಹೊಂದಿರುವ ಗ್ರಾಹಕರಿಗೂ ಇಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. ಚಾಲನೆ ಮತ್ತು ವಾಹನ ನಿರ್ವಹಣೆಯ ಎಲ್ಲಾ ಅಂಶಗಳನ್ನು ಒಳಗೊಂಡಿರುವ ವಿಶೇಷವಾದ ಸಮಗ್ರ ಚಾಲಕ ತರಬೇತಿಯೂ ಸಹ ಈ ಸರ್ವಿಸ್ ಕ್ಯಾಂಪ್​ನಲ್ಲಿ ದೊರೆಯಲಿದೆ.


  ಇದನ್ನೂ ಓದಿ: ವಾಹನ ಕಳ್ಳತನವಾದರೆ ಹೆದರಬೇಡಿ, ಸುಲಭವಾಗಿ ಹೀಗೆ ಆನ್​ಲೈನ್​ನಲ್ಲೇ FIR ದಾಖಲಿಸಿ!


  ಸಮಗ್ರ ವಾಹನ ಸ್ಥಿತಿಯ ತಪಾಸಣೆ ಪಡೆಯಿರಿ
  ಈ ರಜಾದಿನಗಳಲ್ಲಿ ಉತ್ತಮ ತರಬೇತಿ ಪಡೆದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ತಂತ್ರಜ್ಞರಿಂದ ಸಮಗ್ರ ವಾಹನ ಸ್ಥಿತಿಯ ತಪಾಸಣೆಯನ್ನು ಪಡೆಯಲು ನಾವು ನಮ್ಮ ಗ್ರಾಹಕರನ್ನು ಸ್ವಾಗತಿಸುತ್ತೇವೆ. ಈ ಹಾಲಿಡೇ ಸರ್ವಿಸ್ ಕ್ಯಾಂಪ್ ನಮ್ಮ ಗ್ರಾಹಕರ ಸಮಯೋಚಿತ ಅಗತ್ಯಗಳನ್ನು ಪರಿಹರಿಸಲು ರೂಪಿಸಲಾದ ಉಪಯುಕ್ತ ಕಾರ್ಯಕ್ರಮವಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ: Electric Charging Stations: ಬೆಂಗಳೂರಿನಿಂದ ಊರಿಗೆ ಹೊರಟಿದ್ದೀರಾ? ಈ ಹೆದ್ದಾರಿಗಳಲ್ಲಿದೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ಸ್


  ಭಾರತದಲ್ಲಿ 21 ನಗರಗಳಲ್ಲಿ ಸಿಗುತ್ತೆ ಸೇವೆ
  ಭಾರತದಲ್ಲಿ 21 ನಗರಗಳಲ್ಲಿ 25 ಅಧಿಕೃತ ಮಳಿಗೆಗಳ ಮುಖಾಂತರ ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳ ಸೇವೆ ನೀಡುತ್ತಿದೆ, ಅಹಮದಾಬಾದ್, ಬೆಂಗಳೂರು, ಭುವನೇಶ್ವರ್, ಚಂಡೀಗಢ, ಚೆನ್ನೈ, ಕೊಯಂಬತ್ತೂರು, ದೆಹಲಿ, ಗುರುಗ್ರಾಮ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಕೊಚ್ಚಿ, ಕರ್ನಾಲ್‍ನಲ್ಲಿ, ಲಕ್ನೋ, ಮುಂಬೈ, ನೋಯ್ಡಾ, ಪುಣೆ, ರಾಯಪುರ, ಸೂರತ್ ಮತ್ತು ವಿಜಯವಾಡ ನಗರಗಳಲ್ಲಿಈ ಸೇವೆಗಳು ಲಭ್ಯವಿದೆ ಎಂದು ಕಂಪನಿಯು ಮಾಹಿತಿಯಲ್ಲಿ ತಿಳಿಸಿದೆ. 

  Published by:ಗುರುಗಣೇಶ ಡಬ್ಗುಳಿ
  First published: