• Home
  • »
  • News
  • »
  • bengaluru-urban
  • »
  • PSI ನೇಮಕಾತಿಯಲ್ಲಿ BJP, RSS ಕಾರ್ಯಕರ್ತರ ನೇಮಕ, ಒಬ್ಬರಿಂದ 70 ರಿಂದ 80 ಲಕ್ಷ ಲಂಚ: Congress ಆರೋಪ

PSI ನೇಮಕಾತಿಯಲ್ಲಿ BJP, RSS ಕಾರ್ಯಕರ್ತರ ನೇಮಕ, ಒಬ್ಬರಿಂದ 70 ರಿಂದ 80 ಲಕ್ಷ ಲಂಚ: Congress ಆರೋಪ

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

ಗೃಹ ಸಚಿವರು ಇದರ ಹಿಂದೆ ಇದ್ದಾರೆ. ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಬಳಿಗೆ ಹೋಗಲು ಯಾವುದೇ ಸಚಿವರಿಗೂ ತಾಕತ್ತಿಲ್ಲ. ಇವರ 40 ಪರ್ಸಂಟೇಜ್ ವಿಚಾರದಲ್ಲಿ ಅಭ್ಯರ್ಥಿಗಳ ಭವಿಷ್ಯ ಹಾಳಾಗಿದೆ

  • Share this:

ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ವಿರುದ್ಧ ಕಾಂಗ್ರೆಸ್ (Congress) ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ವಿಧಾನಸೌಧದ ದ್ವಾರದ ಬಳಿಯಲ್ಲಿಯೇ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy), ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮ್ಮುಖದಲ್ಲಿ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ,  ನಾವು ಈಶ್ವರಪ್ಪ ಅವರ ರಾಜೀನಾಮೆ ಕೇಳುವುದು ಮಾತ್ರ ನಮ್ಮ ಉದ್ದೇಶವಿಲ್ಲ. ಈ ಸರ್ಕಾರ 40% ಕಮಿಷನ್ ಪಡೆಯುತ್ತಿದೆ. ಸರ್ಕಾರವನ್ನು ಕಿತ್ತು ಬೀಸಾಕಬೇಕಿದೆ ಎಂದು ಗುಡಗಿದರು. ಕಳೆದ ತಿಂಗಳು ನಾನೊಂದು ಸುದ್ದಿಗೋಷ್ಠಿ ಮಾಡಿದ್ದೆ. ದೇವರಾಜು ಅರಸು ನಿಗಮದಲ್ಲಿ, ಅಂಬೇಡ್ಕರ್ ನಿಗಮದಲ್ಲಿ ಬೋರ್ ವೆಲ್'ಗಳನ್ನು ಕೊರೆಸುವುದರಲ್ಲಿ ಕಮಿಷನ್ ನಡೆಯುತ್ತಿದೆ. ನಾನು ಆರೋಪಿಸಿದ ಬಳಿಕ ತನಿಖೆಗೆ ಆದೇಶ ಮಾಡಿದ್ದಾರೆ. ಆದರೆ ಬೋರ್'ವೆಲ್ ಕೊರೆಯುವುದನ್ನು ನಿಲ್ಲಿಸಿಲ್ಲ ಕೆಲಸ ನಿಲ್ಲಿಸದೇ ಹೇಗೆ ತನಿಖೆ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.


ಸಚಿವ ಕೋಟ ಶ್ರೀನವಾಸ ಪೂಜಾರಿ ಭ್ರಷ್ಟರಲ್ಲ ಎಂದುಕೊಂಡಿದ್ದೆ. ಈ ಕೆಲಸದಲ್ಲಿ ನಿಮಗೆ ಎಷ್ಟು ಕಿಕ್ ಬ್ಯಾಕ್ ಬರುತ್ತಿದೆ? ಕಿಕ್ ಬ್ಯಾಕ್ ಸಿಗದಿದ್ದರೆ ಕೆಲಸವನ್ನು ಯಾಕೆ ನಿಲ್ಲಿಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕೇಳಿದರು.


ಸಿಎಂಗೆ ಧೈರ್ಯ ಇದ್ದರೆ ಚುನಾವಣೆಗೆ ಹೋಗಲಿ. ಈಗ ಚುನಾವಣೆ ಮಾಡಲಿ, ಅದ್ಯಾವುದು ಮಾಂಸ, ಗುಡ್ಡೆ ಮಾಂಸ, ಜಟ್ಕಾ ಅಂತ ಹೋಗ್ತಾರೆ. ಜನ ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದ ಬಳಲ್ತಿದಾರೆ. ಸರ್ಕಾರ ನೌಕರಿ ಕೊಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.


ಗೃಹ ಸಚಿವರಿಂದ ಉಡಾಫೆ ಉತ್ತರ


75 ಸಾವಿರ ಅಭ್ಯರ್ಥಿ ಗಳು ಪಿ ಎಸ್ ಐ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ನಂತರ ಅಭ್ಯರ್ಥಿ ಗಳು ಪರೀಕ್ಷೆಯಲ್ಲಿ ಅಕ್ರಮವಾಗಿರುವ ಸಾಧ್ಯತೆ ಇದೆ ಅಂತಾ ದೂರು ಕೊಟ್ಟರು.ಆಗ ಗೃಹ ಮಂತ್ರಿಗಳು ಆ ರೀತಿ ಅಗಿಲ್ಲ ಅಂತಾ ಸದನದಲ್ಲಿ ಉತ್ತರ ಕೊಟ್ಟರು. ಇದು ಉಡಾಫೆ ಉತ್ತರ. ಆದರೆ ಈಗ ಮತ್ತೆ ಗೃಹ ಮಂತ್ರಿಗಳು ಇದರಲ್ಲಿ ಅಕ್ರಮ ವಾಗಿರುವ ಸಾಧ್ಯತೆ ಇದೆ ಅಂತಾ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ


ಇದನ್ನೂ ಓದಿ:  CM Bommai ಕಪ್ಪು ಚುಕ್ಕೆ, ಪೊಲೀಸರಿಗೆ ಕೆಲಸ ಮಾಡಲು ಬಿಡ್ತಿಲ್ಲ: DK Shivakumar ಹೇಳಿಕೆ


ಬಿಜೆಪಿಯ ಪದಾಧಿಕಾರಿಗಳೇ ಈ ಭ್ರಷ್ಟಾಚಾರ ದಲ್ಲಿ ಪಾಲ್ಗೊಂಡಿದಾರೆ. ಅವರನ್ನು ಈ 40% ಸರ್ಕಾರ ಕಾಪಾಡುತ್ತಿದೆ.ಈಗ ಪರೀಕ್ಷೆ ಬರೆದ ಸುಮಾರು 75 ಸಾವಿರ ಅಭ್ಯರ್ಥಿ ಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಿಯಾಗಿ ತನಿಖೆ ನಡೆದರೆ ಇನ್ನೂ ಎರಡು ವಿಕೆಟ್ ಬೀಳುತ್ತವೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಿದರೆ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತದೆ. ಆಗ ಅನಿವಾರ್ಯವಾಗಿ ವಿಧಾನಸಭೆ ವಿಸರ್ಜನೆ ಮಾಡಬೇಕಾಗುತ್ತದೆ ಎಂದರು.


ಒಬ್ಬ ಅಭ್ಯರ್ಥಿಯಿಂದ 70 ರಿಂದ 80 ಲಕ್ಷ ಹಣ


545  ಪಿಎಸ್ಐ ಹುದ್ದೆಗೆ ಪರೀಕ್ಷೆಯಲ್ಲೂ ಅವ್ಯವಹಾರ ಆಗಿದೆ ಈ ಬಗ್ಗೆ ಅಭ್ಯರ್ಥಿಗಳೇ ದೂರು ನೀಡಿದರೂ ಗೃಹ ಸಚಿವರು ಪರಿಷತ್ ನಲ್ಲಿ ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಉತ್ತರ ನೀಡಿದ್ದರು. ಒಬ್ಬ ಅಭ್ಯರ್ಥಿಯಿಂದ 70, ರಿಂದ 80 ಲಕ್ಷ ರೂ ಲಂಚ ಪಡೆದು ಆಯ್ಕೆ ಮಾಡಿದ್ದಾರೆ. ಅಧಿಕಾರಿಗಳು, ಗೃಹ ಸಚಿವರು ಇದರ ಹಿಂದೆ ಇದ್ದಾರೆ. ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಬಳಿಗೆ ಹೋಗಲು ಯಾವುದೇ ಸಚಿವರಿಗೂ ತಾಕತ್ತಿಲ್ಲ. ಇವರ 40 ಪರ್ಸಂಟೇಜ್ ವಿಚಾರದಲ್ಲಿ ಅಭ್ಯರ್ಥಿಗಳ ಭವಿಷ್ಯ ಹಾಳಾಗಿದೆ


ಈ ಎರಡು ಪ್ರಕರಣದಲ್ಲಿ ಇನ್ನು 4 ವಿಕೆಟ್ ಹೋಗುತ್ತದೆ. ಸಿಎಂ ಅವರು ಈ ಪ್ರಕರಣವನ್ನ ಹೈಕೋರ್ಟ್ ಹಾಲಿ ನ್ಯಾಯಾಧೀಶರ ತನಿಖೆ ನಡೆಸಬೇಕು. ಭ್ರಷ್ಟಾಚಾರ ಪ್ರಕರಣ ನಾವು ಸಹಿಸೋಲ್ಲ ಎಂದು ಸಿಎಂ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.


ಬಿಜೆಪಿ ಪದಾಧಿಕಾರಿ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್


ಬಿಜೆಪಿ ಪದಾಧಿಕಾರಿಯ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಅದರ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ. ಬಿಜೆಪಿ ಪದಾಧಿಕಾರಿ ಮನೆಗೆ ಹೊಗಿಲ್ಲ ಎಂದು ಗೃಹ ಸಚಿವರು ಹೇಳಲಿ. ನಮ್ಮ ಬಳಿ ಪೋಟೋ ಎಲ್ಲ ಇದೆ. ಈಶ್ವರಪ್ಪ ಬಂಧನ ಆಗಲಿಆ ಮೇಲೆ ಎಲ್ಲ ದಾಖಲೆ ಬಿಚ್ಚುತ್ತೇವೆ.  ಸರ್ಕಾರದ ಸಚಿವರು ಆಲ್ ಔಟ್ ಆಗ್ತಾರೆ ಎಂದು ಟೀಕಿಸಿದರು.


ಇದನ್ನೂ ಓದಿ:  Ambedkar Jayanti: ಅನೇಕರು ಅಂಬೇಡ್ಕರ್ ಹೆಸರೇಳಿ ಮೇಲೆ ಬಂದಿದ್ದಾರೆ; ಉತ್ತಮ ಸ್ಥಾನ ಪಡೆದು ಸಮಾಜವನ್ನೇ ಮರೆತಿದ್ದಾರೆ- CM ಬೊಮ್ಮಾಯಿ


ಇದೇ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ, RSS ಮತ್ತು ಬಿಜೆಪಿ ಕಾರ್ಯಕರ್ತರನ್ನೇ ನೇಮಕ ಮಾಡಲಾಗಿದೆ. ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಈ ಸಂಬಂಧ ನಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿದರು.

Published by:Mahmadrafik K
First published: