ಬೆಂಗಳೂರು: ತೊಟ್ಟಿಲನ್ನು ತೂಗುವ ಕೈ ಇಂದು ಜಗತ್ತನ್ನೇ ಆಳುತ್ತಿದೆ. ಸಣ್ಣ ಪದವಿ, ಕೆಲಸ, ಮನೆಗೆಲಸದಿಂದ ಹಿಡಿದು ಅತ್ಯುತ್ತಮ ಪದವಿಯವರೆಗೂ (International Women's Day 2023) ಮಹಿಳೆ ಸ್ಥಾನ ಪಡೆದುಕೊಂಡಿದ್ದಾಳೆ. ಮನೆಯಲ್ಲಿ ಅಡುಗೆ ಮಾಡಿದ ಮಹಿಳೆ ಆಟೋ ಓಡಿಸಿ (Women Auto Driver) ಕುಟುಂಬ ಸಲಹುತ್ತಿದ್ದಾಳೆ!
ನಮ್ಮ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲೆಡೆ ಹೀಗೆ ಡ್ರೈವರ್ ಆಗಿ ಕೆಲಸ ಮಾಡುತ್ತಿರೋ ಮಹಿಳೆಯರು ನಿಜಕ್ಕೂ ಗ್ರೇಟ್ ಅನಿಸುತ್ತಾರೆ. ಅಂತಹ ವಿಶೇಷ ಸಾಧಕಿ ಬೆಂಗಳೂರಿನ ಭುವನೇಶ್ವರಿ ಅವರು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ್ದಾರೆ ನೋಡಿ.
ಇದನ್ನೂ ಓದಿ: Uttara Kannada: ಸ್ನಾತಕೋತ್ತರ ಪದವಿಯಲ್ಲಿ ಚಿನ್ನ ಗಳಿಸಿದ ಗೌಳಿ ಸಮುದಾಯದ ಮೊದಲ ಮಹಿಳೆ!
ಅತ್ತಿಗೆಯೇ ನನಗೆ ಪ್ರೇರಣೆ
ಆಟೋ ಚಾಲಕಿ ಭುವನೇಶ್ವರಿ ಅವರಿಗೆ ಅವರ ಅತ್ತಿಗೆಯೇ ಪ್ರೇರಣೆಯಂತೆ. "ಯಾರಿಗೂ ಮೋಸ ಮಾಡದೇ ಪ್ರಾಮಾಣಿಕವಾಗಿ ಮಾಡುವ ಯಾವುದೇ ಕೆಲಸವಾದ್ರೂ ಸರಿ, ನೀನು ಮಾಡಮ್ಮಾ ಎಂದು ಅವರ ಅತ್ತಿಗೆಯೇ ಹುರಿದುಂಬಿಸಿದ್ದೇ ನಾನು ಆಟೋ ಚಾಲಕಿಯಾಗಲು ಕಾರಣ" ಅಂತಾರೆ ಭುವನೇಶ್ವರಿ.
ಇದನ್ನೂ ಓದಿ: Haveri: ಪ್ರೀತಿಸಿ ಮನೆಯಿಂದ ಹೊರಬಿದ್ದ ಈ ಮಹಿಳೆಗೆ ಇಂದು ಇಡೀ ಸಮಾಜವೇ ಸೆಲ್ಯೂಟ್ ಮಾಡುತ್ತೆ!
ಜೊತೆಗೆ ನನಗೇ ಆಟೋ ಓಡಿಸಬೇಕು ಎಂಬ ಇಚ್ಛೆಯಿತ್ತು. ಅಷ್ಟೇನೂ ವಿದ್ಯಾಭ್ಯಾಸ ಮಾಡಿರಲಿಲ್ಲ, ನನ್ನ ಗಂಡ ಆಟೋ ಓಡಿಸಲು ಸಮ್ಮತಿ ಕೊಟ್ಟಿರ್ಲಿಲ್ಲ. ಆದ್ರೆ ನಮ್ಮ ಅತ್ತಿಗೆಯೇ ನನ್ನನ್ನು ಹುರಿದುಂಬಿಸಿದ್ರು ಎಂದು ಅವರು ಆಟೋ ಡ್ರೈವರ್ ಆದ ಹಿಂದಿನ ಕಥೆ ಬಿಚ್ಚಿಟ್ಟರು.
ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಡ್ಯೂಟಿ!
ಆಟೋ ಓಡಿಸುವುದು ಅಷ್ಟು ಸುಲಭದ ಕೆಲಸ ಅಲ್ಲ, ತುಂಬಾ ಕಷ್ಟ ಇದ್ರೂ ಅದೆಲ್ಲ ಸವಾಲುಗಳನ್ನು ಎದುರಿಸಿಕೊಂಡು ಜೀವನ ನಡೆಸಬಹುದು. 8-9 ವರ್ಷದಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಡ್ಯೂಟಿ ಮಾಡ್ತೇನೆ
ಇಂತಹ ಮಹಿಳೆಯರ ಸಾಧನೆ, ಕೊಡುಗೆ ಸ್ಮರಿಸಲು ಒಂದು ವಿಶೇಷ ದಿನವನ್ನು (Women's Day) ಆಚರಿಸಲಾಗುತ್ತದೆ. ಪುರುಷರಷ್ಟೇ ಸರಿಸಮಾನವಾಗಿ ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಮಹಿಳೆ ಮಹತ್ತರ ಸಾಧನೆ ಮಾಡುತ್ತಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ