Bengaluru: ಆಹಾ! ಚಿತ್ರಕಲಾ ಪರಿಷತ್​ನಲ್ಲಿ ಕರಕುಶಲ ಕಲರವ! ನೀವೂ ತಪ್ಪಿಸ್ಬೇಡಿ

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ವಿವಿಧ ರಾಜ್ಯಗಳ ಐಟಂಗಳು ಇಲ್ಲಿವೆ. ನೋಡಲು ಆಕರ್ಷಕವಾಗಿದೆ. ಮಾತ್ರವಲ್ಲದೇ ಗುಣಮಟ್ಟವೂ ಚೆನ್ನಾಗಿದೆ ಅನ್ನೋದು ಗ್ರಾಹಕರ ಅಭಿಪ್ರಾಯ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಬೆಂಗಳೂರು: ಕಿವಿಯೋಲೆಗಳು, ಹ್ಯಾಂಡ್ ಬ್ಯಾಗ್, ಪರ್ಸ್ ಗಳು, ಪಿಂಗಾಣಿ ವಸ್ತುಗಳು, ಅಲಂಕಾರಿಕ ಐಟಂಗಳು, ವಿವಿಧ ರಾಜ್ಯಗಳ ಕಸೂತಿ ಬಟ್ಟೆಗಳು ಹೀಗೆ ಇಡೀ ಮಳಿಗೆಯೇ ಅರ್ಧ ಭಾರತವನ್ನೇ ಹೊಂದಿದೆ. ಅದ್ರಲ್ಲೂ ಮಹಿಳೆಯರಿಗಂತೂ ಬಗೆ ಬಗೆಯ ಆಯ್ಕೆಗಳು. ಹೌದು, ಇದೆಲ್ಲವೂ ಸದ್ಯ ಬೆಂಗಳೂರಿನ ಚಿತ್ರಕಲಾ ಪರಿಷತ್​ನ (Karnataka Chitrakala Parishath Bengaluru) ಇಂಡಿಯನ್ ಹಾತ್ ಫೆಸ್ಟಿವಲ್ ನಲ್ಲಿ (Indian Haat Festival) ಕಾಣಬಹುದಾಗಿದೆ. ಇಲ್ಲಿ ಒಂದು ಇದೆ, ಒಂದು ಇಲ್ಲ ಅನ್ನೋ ಹಾಗಿಲ್ಲ. ಸದ್ಯ ಚಿತ್ರಕಲಾ ಪರಿಷತ್​ನಲ್ಲಿ ಎಲ್ಲ ಐಟಂಗಳು ಕೂಡಾ ನೋಡಬಹುದು, ಖರೀದಿಸಬಹುದಾಗಿದೆ. ವಿವಿಧ ಶೈಲಿಯ ಸೀರೆಗಳು, ಕೈ ಬಳೆಗಳು, ಸರ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಗಂತೂ ಜನ ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ ಇಲ್ಲಿ ಆರಂಭವಾಗಿರುವ ಇಂಡಿಯನ್ ಹಾತ್ ಫೆಸ್ಟಿವಲ್ ಸೆಪ್ಟಂಬರ್ 11 ರವರೆಗೆ ನಡೆಯಲಿದೆ.

    ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ವಿವಿಧ ರಾಜ್ಯಗಳ ಐಟಂಗಳು ಇಲ್ಲಿವೆ. ನೋಡಲು ಆಕರ್ಷಕವಾಗಿದೆ. ಮಾತ್ರವಲ್ಲದೇ ಗುಣಮಟ್ಟವೂ ಚೆನ್ನಾಗಿದೆ ಅನ್ನೋದು ಗ್ರಾಹಕರ ಅಭಿಪ್ರಾಯ.

    Karnataka Chitrakala Parishattu
    ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ದೇಸಿ ವಸ್ತುಗಳ ಮಾರುಕಟ್ಟೆ
    ದೇಸಿ ಆಭರಣ, ಉಡುಪುಗಳ ಬಗ್ಗೆ ಆಸಕ್ತಿ ಇರೋರು ಹಾಗೂ ಕರಕುಶಲ ವಸ್ತುಗಳನ್ನ ಇಷ್ಟಪಡುವವರಿಗಂತೂ ಇಂಡಿಯನ್ ಹಾತ್ ಫೆಸ್ಟಿವಲ್ ಮೇಳವು ಹೇಳಿಟ್ಟ ಹಾಗಿದೆ. ವಿವಿಧ ರಾಜ್ಯಗಳ ವಸ್ತುಗಳು ಒಂದೇ ಸೂರಿನಡಿ ಸಿಗುತ್ತಿದ್ದು, ಬಹುತೇಕ ವಸ್ತುಗಳು ಕೈಯ್ಯಲ್ಲಿಯೇ ತಯಾರಿಸಲಾಗಿದ್ದು ಹಾಗಾಗಿ ಆಕರ್ಷಕವೂ ಆಗಿದೆ. ಒಟ್ಟಿನಲ್ಲಿ ಆನ್ ಲೈನ್ ಮಾರುಕಟ್ಟೆ ಭರಾಟೆ ನಡುವೆಯೂ ದೇಸಿ ಉತ್ಪನ್ನಗಳು ಇಂತಹ ಮೇಳಗಳ ಮೂಲಕ ತನ್ನ ಜೀವಂತಿಕೆಯನ್ನ ಉಳಿಸಿಕೊಂಡಿದ್ದು ಸಂತಸದ ವಿಚಾರವೇ ಸರಿ.
    Published by:guruganesh bhat
    First published: