ಜೂನ್ 19ರಂದು ಭಾನುವಾರ ಭಾರತ - ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್ ಪಂದ್ಯ (India South Africa T20 Match) ನಡೆಯಲಿರುವ ಕಾರಣ ಬೆಂಗಳೂರಿನ (Bengaluru News) ಜನತೆಗೆ ಸಾರಿಗೆ ಸೌಲಭ್ಯ ಇನ್ನಷ್ಟು ಹೆಚ್ಚು ಹೊತ್ತು ದೊರೆಯಲಿದೆ. ಕ್ರಿಕೆಟ್ ಪ್ರಿಯರ ಪ್ರಯಾಣಕ್ಕೆ ಎಂದೇ ಬಿಎಂಟಿಸಿ ಮತ್ತು ಮೆಟ್ರೊ (Bengaluru Metro) ಪ್ರಯಾಣ ಸೇವೆಗಳು ಇನ್ನಷ್ಟು ವಿಸ್ತರಿಸಲಿವೆ. BMTC ಬಸ್ಗಳು ಮಧ್ಯರಾತ್ರಿಯೂ ದೊರೆಯಲಿವೆ. ಬಿಎಂಟಿಸಿ ಬಸ್ಗಳು ಮಧ್ಯಾಹ್ನ 3 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಿಂದ ಕೆಂಗೇರಿ, ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಮಾಗಡಿ ರೋಡ್, ಯಲಹಂಕ, ನೆಲಮಂಗಲ, ನಾಗವಾರ, ಬಾಣಸವಾಡಿ, ಬಾಗಲೂರು, ಹೊಸಕೋಟೆಗೆ ಮ್ಯಾಚ್ ಮುಗಿದ ಬಳಿಕವೂ ಸಂಚರಿಸಲಿವೆ.
ಇದೇ ರೀತಿ ಭಾರತ - ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ಹಿನ್ನೆಲೆಯಲ್ಲಿ ಮೆಟ್ರೋ ಸಹ ಬೆಂಗಳೂರು ಜನರಿಗೆ ಗುಡ್ ನ್ಯೂಸ್ ನೀಡಿದೆ. ಟಿ 20 ಕ್ರಿಕೆಟ್ ಪಂದ್ಯದ ಕಾರಣ ಮೆಟ್ರೋ ರೈಲು ಸಂಚಾರದ ಸಮಯ ವಿಸ್ತರಣೆ ಮಾಡಲಾಗಿದೆ. ಜೂನ್ 20ರ ಮುಂಜಾನೆಯವರೆಗೂ ಮೆಟ್ರೋ ರೈಲುಗಳು ಸಂಚರಿಸಲಿವೆ. ಜನರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಮೆಟ್ರೋ ರೈಲುಗಳ ಸಂಚಾರ ಅವಧಿಯಲ್ಲಿ ಹೆಚ್ಚಿಸಲಾಗಿದೆ.
ಟರ್ಮಿನಲ್ ನಿಲ್ದಾಣಗಳಿಂದ ಈ ಸಮಯಕ್ಕೆ ಹೊರಡಲಿವೆ ಮೆಟ್ರೋ
ಕೊನೆಯ ಮೆಟ್ರೋ ರೈಲು ಸೇವೆಯು ಟರ್ಮಿನಲ್ ನಿಲ್ದಾಣಗಳಿಂದ (ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ) 20/06/2022ರಂದು ಮುಂಜಾನೆ 1 ಗಂಟೆಗೆ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣದ ಮೆಜೆಸ್ಟಿಕ್ನಿಂದ ಎಲ್ಲ ನಾಲ್ಕು ದಿಕ್ಕಿಗೆ ಮುಂಜಾನೆ 1:30 ಕ್ಕೆ ಹೊರಡಲಿದೆ.
ಇದನ್ನೂ ಓದಿ: Bengaluru Traffic Diversions: ಬೆಂಗಳೂರು ಟ್ರಾಫಿಕ್ನಿಂದ ಪಾರಾಗಿ, ಸಲೀಸಾಗಿ ಹೀಗೆ ಮನೆ, ಆಫೀಸ್ ಸೇರಿ!
50 ರೂ.ಗೆ ರಿಟರ್ನ್ ಜರ್ನಿ ಟಿಕೆಟ್
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರಿಟರ್ನ್ ಜರ್ನಿ ಟಿಕೆಟ್ಗಳನ್ನು ನೀಡಲಿದ್ದು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಜೂನ್ 19 ಮಧ್ಯಾಹ್ನ 3 ಗಂಟೆಗೆ ಮಾರಾಟ ಮಾಡಲಾಗುತ್ತದೆ. 50 ರೂ.ಗೆ ರಿಟರ್ನ್ ಜರ್ನಿ ಟಿಕೆಟ್ಗಳು ದೊರೆಯಲಿವೆ. ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ 19 ಜೂನ್ 2022ರ ರಾತ್ರಿ 10 ಗಂಟೆಯ ನಂತರ ಮತ್ತು 20 ಜೂನ್ ಅವಧಿಯಲ್ಲಿ ಬಳಸಬಹುದಾಗಿದೆ.
ಇದನ್ನೂ ಓದಿ: Bengaluru News: ಬೆಂಗಳೂರಿನ ಸೈನಿಕ ಶಾಲೆಗೆ ಸೇರಬೇಕೆ? ವಿದ್ಯಾರ್ಥಿನಿಯರೇ ಈ ಅವಕಾಶ ಬಿಡಬೇಡಿ
ಕಬ್ಬನ್ ಪಾರ್ಕ್ ನಿಲ್ದಾಣದಿಂದ ಪೇಪರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣ
ಯಾವುದೇ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ಸಾಮಾನ್ಯ ದರದಲ್ಲಿ ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್ಗಳನ್ನು ಉಪಯೋಗಿಸಿ ಪ್ರಯಾಣ ಮಾಡಬಹುದು. ಆದರೆ ಕಬ್ಬನ್ ಪಾರ್ಕ್ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹಿಂತಿರುಗುವಾಗ ಪೇಪರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣ ಬೆಳೆಸಬಹುದಾಗಿದೆ.
ಬೆಂಗಳೂರಿನಿಂದ ತಮಿಳುನಾಡಿಗೆ ಮೆಟ್ರೋದಲ್ಲಿ ಪ್ರಯಾಣಿಸಿ!
ಬೆಂಗಳೂರಿನಿಂದ ತಮಿಳುನಾಡಿಗೆ ಮೆಟ್ರೋದಲ್ಲೇ ಪ್ರಯಾಣ ಮಾಡುವ ಕಾಲ ಇನ್ನು ದೂರವಿಲ್ಲ! ಹೌದು, ಬೆಂಗಳೂರಿನ ನಮ್ಮ ಮೆಟ್ರೋ ಪಕ್ಕದ ತಮಿಳುನಾಡು ರಾಜ್ಯದ ಹೊಸೂರಿಗೂ ಲಗ್ಗೆ ಇಡಲಿದೆ. ಈ ಪ್ರಸ್ತಾಪಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ಸೂಚಿಸಿದ್ದಾರೆ. ಬೆಂಗಳೂರಿನಿಂದ ಮೆಟ್ರೋದಲ್ಲೇ ಹೊರಟು ತಮಿಳುನಾಡು ತಲುಪಿ ಮತ್ತೆ ಮೆಟ್ರೋದಲ್ಲೇ ಬೆಂಗಳೂರಿಗೆ ವಾಪಸ್ಸಾಗಲು ದಿನಗಳು ಬರುವ ದಿನಗಳು ಇನ್ನೇನು ಶೀಘ್ರದಲ್ಲೆ ಬರುವುದಂತೂ ಪಕ್ಕಾ! ಅರೇ ಹೇಗಿದು? ಬೆಂಗಳೂರು ಮೆಟ್ರೋ ತಮಿಳುನಾಡನ್ನೂ ತಲುಪಲಿದೆಯಾ? ತಮಿಳುನಾಡಿನ ಯಾವ ಊರಿಗೆ ಬೆಂಗಳೂರು ಮೆಟ್ರೋ ಸೇವೆ ವಿಸ್ತರಿಸಲಿದೆ? ಎಲ್ಲ ವಿವರ ಇಲ್ಲಿದೆ
ಬೆಂಗಳೂರು ಮೆಟ್ರೋ ಮಾರ್ಗವು ಸದ್ಯ ಬೊಮ್ಮಸಂದ್ರದವರೆಗೂ ವಿಸ್ತರಿಸಿದೆ. ತಮಿಳುನಾಡಿನ ಹೊಸೂರು ಬೆಂಗಳೂರಿನ ಬೊಮ್ಮಸಂದ್ರ ಮೆಟ್ರೋ ಟರ್ಮಿನಲ್‌ನಿಂದ 20.5 ಕಿಲೋಮೀಟರ್ ದೂರದಲ್ಲಿದೆ. ಇದರಲ್ಲಿ 11.7 ಕಿಲೋಮೀಟರ್ ಕರ್ನಾಟಕದಲ್ಲಿ ಮತ್ತು ಉಳಿದ 8.8 ಕಿಲೋಮೀಟರ್ ತಮಿಳುನಾಡಿನಲ್ಲಿದೆ. ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ಸೌಕರ್ಯ ಕಲ್ಪಿಸಿದರೆ ನೀವು ಅಕ್ಷರಶಃ ಕರ್ನಾಟಕದಿಂದ ತಮಿಳುನಾಡಿಗೆ ಮೆಟ್ರೋದಲ್ಲೇ ಓಡಾಡಿದಂತಾಗುತ್ತದೆ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ