Independence Day 2022: ಬೆಂಗಳೂರಲ್ಲಿ ಮುಗಿಲು ಮುಟ್ಟಿದ ಸ್ವಾತಂತ್ರ್ಯೋತ್ಸವದ ಸಂಭ್ರಮ; ಅದ್ಭುತ ವಿಡಿಯೋ ನೋಡಿ

X
ನಮ್ಮ ಧ್ವಜ ನಮ್ಮ ಹೆಮ್ಮೆ

"ನಮ್ಮ ಧ್ವಜ ನಮ್ಮ ಹೆಮ್ಮೆ"

Bengaluru News: ದೇಶಾದ್ಯಂತ ಸ್ವಾಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಳ್ಳಿಯಿಂದ ದಿಲ್ಲಿವರೆಗೂ, ಅಷ್ಟದಿಕ್ಕುಗಳಲ್ಲೂ ತ್ರಿವರ್ಣ ಪತಾಕೆ ರಾರಾಜಿಸುತ್ತಾ ಇತಿಹಾಸವನ್ನು ಮೆಲುಕು ಹಾಕಲಾಯಿತು. ಹಾಗಿದ್ರೆ ಹೇಗಿತ್ತು ಅಮೃತ ಮಹೋತ್ಸವ ಸಂಭ್ರಮ ಅನ್ನೋದನ್ನ ನೀವೇ ನೋಡಿ.

ಮುಂದೆ ಓದಿ ...
  • Share this:

ಬೆಂಗಳೂರು: ಬೋಲೋ ಭಾರತ್ ಮಾತಾಕಿ ಜೈ! ವಂದೇ ಮಾತರಂ! ಮುಗಿಲುಮುಟ್ಟಿದ ಉದ್ಘೋಷ! ದೇಶಪ್ರೇಮ. ಎಲ್ಲಿ ನೋಡಿದ್ರೂ ಕೇಸರಿ ಬಿಳಿ ಹಸಿರು! ಭಾರತದ ಬಾವುಟ ಹಾರಿಸುವ ಉತ್ಸಾಹ. ಮನೆಮನೆಗಳಲ್ಲಿ ಮನಮನಗಳಲ್ಲೂ ತ್ರಿವರ್ಣದ ರಂಗು!  75ನೇ ಸ್ವಾತಂತ್ರ್ಯ ದಿನಾಚರಣೆಯಂದು (Independence day 2022) ಎಲ್ಲೆಲ್ಲೂ ಕಂಡುಬಂದ ದೃಶ್ಯಗಳಿವು. ಬೆಳಗ್ಗೆ ಬೇಗನೆ ಎದ್ದು ಚಂದಚಂದ ತಯಾರಾಗಿ ಶಾಲೆಗಳಿಗೆ ಬಂದ ಚಿಣ್ಣರು. ಧ್ವಜಸ್ತಂಭ ಸಜ್ಜುಗೊಳಿಸಿ ಧ್ವಜಾರೋಹಣ ನಡೆಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ರು. ಜನಗಣಮನ ಮೊಳಗಿಸಿದ್ರು. ಸಿಹಿಸಿಹಿ ಚಾಕೊಲೇಟ್ ಸವಿದ್ರು.  ಬೆಂಗಳೂರಲ್ಲಿ (Independence day 2022 Bengaluru) ಸಂಭ್ರಮ ಮುಗಿಲು ಮುಟ್ಟಿತ್ತು.


ಇನ್ನು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಸ್ವಾತಂತ್ರ್ಯ ದಿನಾಚರಣೆ ವೈಭವೋಪೇತವಾಗಿ ನೆರವೇರ್ತು. ಕೋಲಾರದಲ್ಲಿ ದೇಶದಲ್ಲೇ ಅತಿ ದೊಡ್ಡ ಬಾವುಟ ಹಾರಾಡ್ತು.


ಕೋಲಾರದಲ್ಲಿ ಲಿಮ್ಕಾ ದಾಖಲೆ
630 ಅಡಿ ಉದ್ದ, 205 ಅಡಿ ಅಗಲ ಇರೋ 3 ಟನ್​ಗೂ ಹೆಚ್ಚು ತೂಕದ ಧ್ವಜವನ್ನು ಹಾರಿಸಲಾಯ್ತು. ಈ ಧ್ವಜ ಲಿಮ್ಕಾ ದಾಖಲೆ ನಿರ್ಮಿಸಿತು. ವಾಯುಸೇನೆ ಹೆಲಿಕಾಪ್ಟರ್​ನಿಂದ ಧ್ವಜಕ್ಕೆ ಪುಷ್ಪಾರ್ಚನೆ ಮಾಡಲಾಯ್ತು.


ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ


ಸಿಎಂ ಬಸವರಾಜ್ ಬೊಮ್ಮಾಯಿ ಧ್ವಜಾರೋಹಣ
ಇಂದು 75ನೇ ಅಮೃತ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರೆವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಕೆಲ ಘೋಷಣೆಗಳನ್ನ ಮಾಡಿದರು. ಒಟ್ಟಿನಲ್ಲಿ ಸ್ವಾತಂತ್ರ್ಯ ಹಬ್ಬ ಈವರ್ಷ ಇನ್ನಷ್ಟು ಮೆರಗುಗಟ್ಟಿತ್ತು. 


ಇದನ್ನೂ ಓದಿ: Kalaburagi: ಮರವೇ ದವಾಖಾನೆ! ಕಲಬುರಗಿಯಲ್ಲೊಂದು ಸಂಜೀವಿನಿ ಮರ!


ಸ್ವಚ್ಚತೆ, ಪೌಷ್ಠಿಕತೆ ಕಾಪಾಡಲು, ರೈತರು, ಶ್ರಮಿಕರು, ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೊಡುಗೆ ನೀಡಿದರು. ಶೇ.100ರಷ್ಟು ಶೌಚಾಲಯಗಳನ್ನು 250 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು. ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಲಾಗುವುದು ಎಂದು ತಿಳಿಸಿದರು.

First published: