• Home
  • »
  • News
  • »
  • bengaluru-urban
  • »
  • Crime News: 'ಆ ತರ' ವಿಡಿಯೋದಲ್ಲಿ ಇರೋರೆಲ್ಲ ಇವನ ವೈಫ್ ತರಾನೇ ಕಾಣಿಸ್ತಾರಂತೆ! ಅದಕ್ಕೆ ಹೆಂಡ್ತಿಯನ್ನೇ ಕೊಂದು ಬಿಡೋದಾ?

Crime News: 'ಆ ತರ' ವಿಡಿಯೋದಲ್ಲಿ ಇರೋರೆಲ್ಲ ಇವನ ವೈಫ್ ತರಾನೇ ಕಾಣಿಸ್ತಾರಂತೆ! ಅದಕ್ಕೆ ಹೆಂಡ್ತಿಯನ್ನೇ ಕೊಂದು ಬಿಡೋದಾ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆರೋಪಿ ಜಹೀರ್ ಪಾಷಾ ಎರಡು ತಿಂಗಳ ಹಿಂದೆ ಅಶ್ಲೀಲ ಚಲನಚಿತ್ರವನ್ನು ವೀಕ್ಷಿಸಿದ್ದು, ಅದರಲ್ಲಿ ಇರುವ ಮಹಿಳೆಯನ್ನು ಕಂಡು ಆಕೆ ತನ್ನ ಪತ್ನಿಯೇ ಇರಬೇಕು ಅಂತ ಸಂಶಯಗೊಂಡಿದ್ದಾನೆ.  ಪತ್ನಿಯ ನಿಷ್ಠೆಯ ಬಗ್ಗೆ ಅನುಮಾನಗೊಂಡು ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ.

  • Share this:

ಬೆಂಗಳೂರು: ಅಶ್ಲೀಲ ವಿಡಿಯೋ (Obscene Video) ನೋಡುವ ಚಟ (Addiction) ಹೊಂದಿದ್ದ ವ್ಯಕ್ತಿಯೊಬ್ಬ, ಅದೇ ಕಾರಣದಿಂದ ತನ್ನ ಹೆಂಡತಿಯನ್ನೇ (Wife) ಕೊಲೆ (Murder) ಮಾಡಿದ್ದಾನೆ. ಇಂಥದ್ದೊಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. 40 ವರ್ಷದ ಆಟೋ ಚಾಲಕನೊಬ್ಬ (Auto Driver) ಅಶ್ಲೀಲ ಚಿತ್ರ ನೋಡುವ ಚಟಕ್ಕೆ ಬಿದ್ದು, ತನ್ನ ಹೆಂಡತಿಯನ್ನೇ ಕೊಂದಿದ್ದಾನೆ. ಅದೂ ಕೂಡ ತನ್ನ ಪುಟ್ಟ ವಯಸ್ಸಿನ ಮಗನ (Son) ಮುಂದೆಯೇ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಇದೀಗ ಆ ಪುಟ್ಟ ಮಗುವಿನ ಅಮ್ಮ (Mother) ಸಾವಿನ ಮನೆ ತಲುಪಿದ್ದರೆ, ತಂದೆ (Father) ಮಾಡಿದ ತಪ್ಪಿಗೆ ಜೈಲು (Jail) ಸೇರಿದ್ದಾನೆ. ಇತ್ತ ಅಪ್ಪ-ಅಮ್ಮ ಇಲ್ಲದೇ ಪುಟ್ಟ ಕಂದ ಅನಾಥವಾಗಿದೆ.


ಅಶ್ಲೀಲ ವಿಡಿಯೋ ನೋಡುವ ಚಟ ಹೊಂದಿದ್ದ ಆರೋಪಿ


ಅಶ್ಲೀಲ ವಿಡಿಯೋ ನೋಡುವ ಚಟಕ್ಕೆ ಬಿದ್ದಿದ್ದ ಬೆಂಗಳೂರಿನ 40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಪೋರ್ನ್ ಸಿನಿಮಾದಲ್ಲಿ ನಟಿಸಿದ್ದಾಳೆ ಎಂದು ಭಾವಿಸಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಆಟೋ ಚಾಲಕ ಜಹೀರ್ ಪಾಷಾ ಎಂದು ಗುರುತಿಸಲಾಗಿದೆ. ಆತನ ಪತ್ನಿ 35 ವರ್ಷದ ಮುಬೀನಾ ಕೊಲೆಯಾಗಿದ್ದಾಳೆ.


ಅಶ್ಲೀಲ ಸಿನಿಮಾದಲ್ಲಿ ಇರುವುದು ಪತ್ನಿಯೇ ಎಂಬ ಸಂಶಯ


ಆರೋಪಿ ಜಹೀರ್ ಪಾಷಾ ಎರಡು ತಿಂಗಳ ಹಿಂದೆ ಅಶ್ಲೀಲ ಚಲನಚಿತ್ರವನ್ನು ವೀಕ್ಷಿಸಿದ್ದು, ಅದರಲ್ಲಿ ಇರುವ ಮಹಿಳೆಯನ್ನು ಕಂಡು ಆಕೆ ತನ್ನ ಪತ್ನಿಯೇ ಇರಬೇಕು ಅಂತ ಸಂಶಯಗೊಂಡಿದ್ದಾನೆ.  ಪತ್ನಿಯ ನಿಷ್ಠೆಯ ಬಗ್ಗೆ ಅನುಮಾನಗೊಂಡು ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ.


ಇದನ್ನೂ ಓದಿ: Shocking News: ಕಣ್ಣಾ ಮುಚ್ಚೆ ಕಾಡೇ ಗೂಡೇ ವರನ ಕತ್ತು ಸೀಳೇ ಹೋಯ್ತು, ವಧು ಎಸ್ಕೇಪ್!


ಕಾರ್ಯಕ್ರಮದಲ್ಲೂ ಪತ್ನಿಗೆ ಥಳಿಸಿದ್ದ ಆರೋಪಿ


ಜಹೀರ್ ಪಾಷಾ ಮತ್ತು ಮುನೀಬಾ ಬೆಂಗಳೂರಿನವರಾಗಿದ್ದು, ಮದುವೆಯಾಗಿ 15 ವರ್ಷವಾಗಿತ್ತು. ಅವರಿಗೆ ಐದು ಮಕ್ಕಳು ಇದ್ದಾರೆ. ಎರಡು ತಿಂಗಳ ಹಿಂದೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಷಾ ಮುನೀಬಾ ಮೇಲೆ ಹಲ್ಲೆ ನಡೆಸಿ ಥಳಿಸಿದ್ದ. ಈ ವೇಳೆ ಅಳಿಯ ಮಗಳಿಗೆ ದೈಹಿಕ, ಮಾನಸಿಕ ಕಿರುಕುಳ ಕೊಡುತ್ತಿರುವುದು ಆಕೆಯ ಕುಟುಂಬಸ್ಥರಿಗೆ ಗೊತ್ತಾಗಿದೆ.


ಮಕ್ಕಳ ಎದುರೇ ಇರಿದು ಕೊಂದ ಪಾಪಿ


ಮಧ್ಯರಾತ್ರಿ 12.40 ಕ್ಕೆ, ಇದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆದಿದೆ. ಕೊನೆಗೆ ಅದು ವಿಪರೀತಕ್ಕೆ ಹೋಗಿ ಅಲ್ಲೇ ಇರುವ ಚಾಕುವಿನಿಂದ ಜಹೀರ್ ಪಾಷಾ ಮುನೀಬಾಳನ್ನು ಚುಚ್ಚಿದ್ದಾನೆ. ಆ ವೇಳೆ ದಂಪತಿಯ ಚಿಕ್ಕ ಮಕ್ಕಳು ಅಲ್ಲೇ ಎದುರಲ್ಲಿ ಇದ್ದರು ಎನ್ನಲಾಗಿದೆ.


ದಂಪತಿಯ ಮೊದಲ ಮಗ ಹತ್ತಿರದಲ್ಲೇ ಇರುವ ತನ್ನ ಅಜ್ಜ ಘೌಸ್ ಪಾಷಾ ಅವರ ನಿವಾಸಕ್ಕೆ ಧಾವಿಸಿ, ತಮ್ಮ ತಾಯಿಗೆ ತಮ್ಮ ತಂದೆಯಿಂದ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿಸಿದ್ದಾನೆ. ಜಹೀರ್ ಪಾಷಾ ವಿರುದ್ಧ ದೂರು ದಾಖಲಿಸಿದ ಗೌಸ್ ಪಾಷಾ ತನ್ನ ಮಗಳ ಮನೆಗೆ ಧಾವಿಸಿ ನೋಡಿದಾಗ ಆಕೆ ಶವವಾಗಿ ಬಿದ್ದಿರುವುದು ಗೊತ್ತಾಗಿದೆ.


ಪೊಲೀಸರಿಂದ ಆರೋಪಿ ಬಂಧನ


ಇದೀಗ ಮುನೀಬಾಳ ತಂದೆ ಗೌಸ್ ಪಾಷಾ ದೂರು ನೀಡಿದ್ದಾರೆ. ಈ ದೂರನ್ನು ದಾಖಲಿಸಿಕೊಂಡ ಪೊಲೀಸರು, ಆರೋಪಿ ಜಹೀರ್ ಪಾಷಾನನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.


 ಇದನ್ನೂ ಓದಿ: Political Leader ಪುತ್ರನಿಂದ ಮಾನಗೇಡಿ ಕೃತ್ಯ; ಯುವತಿಗೆ ಮತ್ತು ಬರುವ ಔಷಧಿ ಕುಡಿಸಿ ಅತ್ಯಾಚಾರ!


 ಅಪ್ಪ, ಅಮ್ಮ ಇಲ್ಲದೇ ಅನಾಥರಾದ ಪುಟ್ಟ ಮಕ್ಕಳು


ಅಪ್ಪ ಅಮ್ಮನ ಜಗಳದಲ್ಲಿ ಐವರು ಪುಟ್ಟ ಪುಟ್ಟ ಮಕ್ಕಳು ಬಡವಾಗಿದ್ದಾರೆ. ಮಕ್ಕಳ ಅಮ್ಮ  ಸಾವಿನ ಮನೆ ತಲುಪಿದ್ದರೆ, ತಂದೆ ತಾನು  ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ. ಇತ್ತ ಅಪ್ಪ-ಅಮ್ಮ ಇಲ್ಲದೇ ಪುಟ್ಟ ಕಂದ ಅನಾಥವಾಗಿದೆ.

Published by:Annappa Achari
First published: