Hulikal Nataraj: ನೀವೂ ಪವಾಡ ಬಯಲು ಮಾಡಿ! ಇಲ್ಲಿದೆ ತರಬೇತಿ

ಪವಾಡಗಳನ್ನು ಬಯಲು ಮಾಡುವ ಆಸಕ್ತಿ ನಿಮ್ಮಲ್ಲಿದೆಯೇ? ಹಾಗಿದ್ರೆ ಕೂಡಲೇ ಉಚಿತ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಸಲ್ಲಿಸಿ. ಖ್ಯಾತ ಪವಾಡ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರಿಂದ ತರಬೇತಿ ಪಡೆಯಿರಿ.

ಡಾ.ಹುಲಿಕಲ್ ನಟರಾಜ್

ಡಾ.ಹುಲಿಕಲ್ ನಟರಾಜ್

 • Share this:
  ಬೆಂಗಳೂರು: ವಿಜ್ಞಾನಕ್ಕೆ ಸವಾಲು ಅನ್ನೋ ರೀತೀಲಿ, ಪ್ರಕೃತಿಗೆ ವಿರುದ್ಧವಾಗಿ ನಿಮ್ಮನ್ನು ಯಾರಾದರೂ ಪವಾಡದ (Miracle) ಹೆಸರಲ್ಲಿ ಯಾಮಾರಿಸಿದ್ದಾರೆಯೇ? ಅದರ ಹಿಂದಿನ ರಹಸ್ಯ ತಿಳಿಯದೇ ನೀವೂ ಮೋಸ ಹೋಗಿದ್ದೀರೆ? ಅಥವಾ ಅಂತಹ ಪವಾಡಗಳನ್ನ ಸಾರ್ವಜನಿಕರ ಮುಂದೆ ಬಯಲು ಮಾಡಿ ಸತ್ಯಾಸತ್ಯತೆ ತಿಳಿಸುವ ಆಸೆ ನಿಮಗಿದೆಯೇ? ಹಾಗಿದ್ರೆ ಇದೊಂದು ಸುವರ್ಣಾವಕಾಶ. ಖ್ಯಾತ ಪವಾಡ ಬಯಲು ತಜ್ಞ ಡಾ.ಹುಲಿಕಲ್ ನಟರಾಜ್ (Dr. Hulikal Nataraj) ಅವರಿಂದಲೇ ಅಂತಹ ವಿದ್ಯಾಭ್ಯಾಸವನ್ನ ಪಡೆಯುವ ಅವಕಾಶ ಇದೀಗ ನಿಮ್ಮ ಮುಂದಿದೆ. ಅದಕ್ಕಾಗಿ ನೀವು ಮಾಡಿಬೇಕಿರುವುದು ಸಿಂಪಲ್. ಕೂಡಲೇ ಅರ್ಜಿ ಸಲ್ಲಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬಹುದು.

  ಉಚಿತ ತರಬೇತಿ
  ಮಾನವ ಬಂಧುತ್ವ ವೇದಿಕೆ, ಕರ್ನಾಟಕ ವತಿಯಿಂದ 5 ದಿನಗಳ ಕಾಲ ಈ ಉಚಿತ ಪವಾಡ ಬಯಲು ತರಬೇತಿ ನಡೆಯಲಿದೆ.

  ಅರ್ಜಿ ಸಲ್ಲಿಕೆ ಹೇಗೆ?
  ಆಸಕ್ತ ಯುವಜನತೆ ಕೂಡಲೇ ಗೂಗಲ್ ಫಾರಂ ಮೂಲಕ ಅರ್ಜಿ ತುಂಬಿ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳಬಹುದು. ಅರ್ಜಿಯಲ್ಲಿ ಅಭ್ಯರ್ಥಿಯು ತನ್ನ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ವಿದ್ಯಾರ್ಹತೆ, ಜಾತಿ, ಧರ್ಮ ಮುಂತಾದ ವಿವರಗಳನ್ನು ಸಲ್ಲಿಸಬೇಕು.

  ಇದನ್ನೂ ಓದಿ: Bengaluru Namma Metro: ಸ್ಮಾರ್ಟ್​ಕಾರ್ಡ್, ಟೋಕನ್ ಬೇಕಿಲ್ಲ; ಮೆಟ್ರೋ ಪ್ರಯಾಣ ಇನ್ನಷ್ಟು ಈಸಿ!

  ಕಾರ್ಯಾಗಾರ ಯಾವಾಗ?
  ಈ  5 ದಿನಗಳ ಉಚಿತ ಕಾರ್ಯಾಗಾರದ ದಿನಾಂಕ, ಸ್ಥಳ ನಿಗದಿಯಾಗಿಲ್ಲ. ಆದರೆ, ಅರ್ಜಿ ಸಲ್ಲಿಸಿದವರಲ್ಲಿ ಆಯ್ಕೆ ನಡೆಯಲಿದ್ದು, ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿತ ಸ್ಥಳದಲ್ಲಿ ಪವಾಡ ಬಯಲು ಕಾರ್ಯಾಗಾರ ನಡೆಯಲಿದೆ.

  ಹೆಚ್ಚಿನ ಮಾಹಿತಿಗಾಗಿ
  ಆಸಕ್ತ ಅರ್ಜಿದಾರರು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ವೆಬ್​ಸೈಟ್​ಗಾಗಿ ಈ ಲಿಂಕ್ ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

  ಇದನ್ನೂ ಓದಿ: Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್

  ಪವಾಡಗಳನ್ನು ಬಯಲು ಮಾಡುವ ಆಸಕ್ತಿ ನಿಮ್ಮಲ್ಲಿದೆಯೇ? ಹಾಗಿದ್ರೆ ಕೂಡಲೇ ಉಚಿತ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಸಲ್ಲಿಸಿ. ಖ್ಯಾತ ಪವಾಡ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರಿಂದ ತರಬೇತಿ ಪಡೆಯಬಹುದಾಗಿದೆ.
  Published by:ಗುರುಗಣೇಶ ಡಬ್ಗುಳಿ
  First published: