• Home
  • »
  • News
  • »
  • bengaluru-urban
  • »
  • Bengaluru House Rent: ಕಾಸ್ಟ್ಲಿಯಾದ ಬೆಂಗಳೂರು- ಮನೆ ಬಾಡಿಗೆ ಕೇಳಿದ್ರೆ ಶಾಕ್‌ ಆಗ್ತೀರಾ!

Bengaluru House Rent: ಕಾಸ್ಟ್ಲಿಯಾದ ಬೆಂಗಳೂರು- ಮನೆ ಬಾಡಿಗೆ ಕೇಳಿದ್ರೆ ಶಾಕ್‌ ಆಗ್ತೀರಾ!

ಬೆಂಗಳೂರು

ಬೆಂಗಳೂರು

ಕಳೆದ ಎರಡು ವರ್ಷಗಳಿಂದ ಮನೆ ಬಾಡಿಗೆ ಒಂದೇ ಸಮನೆ ಏರುತ್ತಲೇ ಇದೆ ಎನ್ನಬಹುದು. 1 ಬಿಹೆಚ್‍ಕೆ, 2 ಬಿಹೆಚ್‍ಕೆ ಬಾಡಿಗೆ ಮನೆ, ಅಪಾರ್ಟ್‌ಮೆಂಟ್ ಸೇರಿದಂತೆ ಲೀಸ್ ಅಮೌಂಟ್‍ನಲ್ಲೂ ಭರ್ಜರಿ ಏರಿಕೆಯಾಗಿದೆ.

  • Trending Desk
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರಲ್ಲಿ(Bengaluru) ಸ್ವಂತ ಮನೆ(Own House) ಇರುವವರಿಗಿಂತ ಬಾಡಿಗೆ ಮನೆಗಳಲ್ಲಿ(Rent House) ಇರುವವರ ಸಂಖ್ಯೆಯೇ ಹೆಚ್ಚು. ಕಾರಣ ಇಷ್ಟೇ, ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯದ(Out of State) ಜನ ಕೆಲಸ ಅರಸಿ ಇಲ್ಲಿಗೆ ಬರುವುದರಿಂದ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಮನೆ ಬಾಡಿಗೆ, ಊಟ, ಪ್ರತಿದಿನ ಖರ್ಚು ಎಲ್ಲವನ್ನೂ ನಿಭಾಯಿಸಿಕೊಂಡು ಅಲ್ಪಸ್ವಲ್ಪ ಉಳಿತಾಯ(Savings) ಮಾಡಿಕೊಳ್ಳುವವರಿಗೆ ಬೆಂಗಳೂರು ಯಾಕೋ ಇತ್ತೀಚೆಗೆ ದುಬಾರಿ ಆಗ್ತಿದೆ. ಇದಕ್ಕೆ ಪ್ರಮುಖ ಕಾರಣ ಮನೆ ಬಾಡಿಗೆ(House Rent).


ಕಳೆದ ಎರಡು ವರ್ಷಗಳಿಂದ ಮನೆ ಬಾಡಿಗೆ ಒಂದೇ ಸಮನೆ ಏರುತ್ತಲೇ ಇದೆ ಎನ್ನಬಹುದು. 1 ಬಿಹೆಚ್‍ಕೆ, 2 ಬಿಹೆಚ್‍ಕೆ ಬಾಡಿಗೆ ಮನೆ, ಅಪಾರ್ಟ್‌ಮೆಂಟ್ ಸೇರಿದಂತೆ ಲೀಸ್ ಅಮೌಂಟ್‍ನಲ್ಲೂ ಭರ್ಜರಿ ಏರಿಕೆಯಾಗಿದೆ.


ಸಿಲಿಕಾನ್ ಸಿಟಿಯ ಗೇಟೆಡ್ ಕಮ್ಯುನಿಟಿಗಳಲ್ಲಿ ವಸತಿ ಬಾಡಿಗೆಯು ಶೇಕಡಾ 40 ರಷ್ಟು ಹೆಚ್ಚುತ್ತಿದೆ ಎಂದು‌ ಈ ಹಿಂದೆ NoBroker.com ವರದಿ ಮಾಡಿದೆ.


ಕಾಸ್ಟ್ಲಿಯಾದ ಸರ್ಜಾಪುರ, ಥಣಿಸಂಧ್ರ


ಬೆಂಗಳೂರು ನಗರಕ್ಕೆ ವೃತ್ತಿಪರರು ಆಗಮಿಸುತ್ತಿರುವುದರಿಂದ ಬಾಡಿಗೆ ಬೇಡಿಕೆಯಲ್ಲಿ ಸ್ಥಿರವಾದ ಏರಿಕೆ ಕಂಡುಬರುತ್ತಿದೆ, ನಗರದಲ್ಲಿನ ಬಾಡಿಗೆ ವಸತಿಗಳ ಇತ್ತೀಚಿನ ವರದಿಯ ಪ್ರಕಾರ, ಸರ್ಜಾಪುರ ರಸ್ತೆಯು ಅತ್ಯಂತ ದುಬಾರಿ ಬಾಡಿಗೆ ಇರುವಂತ ಏರಿಯಾವಾದರೆ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆ ಗರಿಷ್ಠ ಹೆಚ್ಚಳ ಕಂಡುಬಂದಿದೆ.


ಇದನ್ನೂ ಓದಿ:Bus Service: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಆರಂಭ; ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾದ MES


ಬಾಡಿಗೆಯಲ್ಲಿ ಎಷ್ಟು ಹೆಚ್ಚಳವಾಗಿದೆ?


ಬೆಂಗಳೂರು ಬಾಡಿಗೆ ಮಾರುಕಟ್ಟೆಯ (Q3-2022) ಅನಾರಾಕ್ ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಮನೆ ಬಾಡಿಗೆ ರೂ. 14,000 ರಿಂದ ರೂ 22,500, ವೈಟ್‌ಫೀಲ್ಡ್‌ನಲ್ಲಿ ರೂ. 17,000 ರಿಂದ ರೂ 26,500, ಸರ್ಜಾಪುರ ರಸ್ತೆಯಲ್ಲಿ 17,500 ರಿಂದ 30,500 ರೂ. ಹಾಗು ಥಣಿಸಂದ್ರ ಮುಖ್ಯರಸ್ತೆಯಲ್ಲಿ ರೂ. 18,000 ರಿಂದ 26,000ರೂ. ಮೈಸೂರು ರಸ್ತೆಯಲ್ಲಿ 13,500 ರಿಂದ 20,000 ರೂ ಮನೆ ಬಾಡಿಗೆ ಇದೆ ಎಂದು ವರದಿಯಾಗಿದೆ.


ವರದಿಗಳನುಸಾರ ಮೈಸೂರು ರಸ್ತೆ, ಸರ್ಜಾಪುರ ರಸ್ತೆ ಮತ್ತು ವೈಟ್‌ಫೀಲ್ಡ್‌ ಬಾಡಿಗೆಯಲ್ಲಿ ಶೇಕಡಾ 5 ರಷ್ಟು ಬೆಳವಣಿಗೆಯನ್ನು ಕಂಡಿದ್ದರೆ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಗರಿಷ್ಠ ಹೆಚ್ಚಳ ಕಂಡು ಬಂದಿದ್ದು, 9% ಏರಿಕೆಯಾಗಿದೆ.


ಟೆಕ್ಕಿ ದಿವ್ಯಶ್ರೀ ಎಸ್, ಎಂಬುವವರು ಈ ಬಗ್ಗೆ ಮಾತನಾಡಿ ''ಕೋವಿಡ್‌ ಲಾಕ್‌ಡೌನ್‌ ನಿಂದಾಗಿ ಇಲ್ಲಿ ಮನೆ ಖಾಲಿ ಮಾಡಿ ಊರಿಗೆ ಹೋಗಿದ್ದೆವು, ಈಗ ಮತ್ತೆ ಬರಲು ಯೋಜಿಸುತ್ತಿದ್ದೇವೆ. ಆದರೆ ಮನೆ ಮಾಲೀಕರು ಬಾಡಿಗೆಯನ್ನು ಶೇ.15 ರಿಂದ 25 ರಷ್ಟು ಹೆಚ್ಚಳ ಕೇಳುತ್ತಿದ್ದಾರೆ. ಐಟಿ ಕೆಲಸದಲ್ಲಿರುವ ಎಲ್ಲಾ ನನ್ನ ಸ್ನೇಹಿತರದ್ದೂ ಇದೇ ಕಥೆ ಎಂದು ದಿವ್ಯಾ ಹೇಳಿದ್ದಾರೆ.


ಕೋವಿಡ್‌ ಸಮಯದಲ್ಲಿ ಬೆಂಗಳೂರು ಬಿಟ್ಟು ಜನ ತಮ್ಮತಮ್ಮ ಊರು ಸೇರಿದ್ದರು, ಹಲವರು ಮನೆ ಖಾಲಿ ಮಾಡಿಕೊಂಡೇ ಹೋಗಿದ್ದರು. ಆದರೆ ಜನ ಮತ್ತೆ ಈಗ ನಗರದತ್ತ ಮುಖ ಮಾಡಿದ್ದಾರೆ. ಬೆಂಗಳೂರಲ್ಲಿ ಈಗ ಮನೆ ಮುಂದೆ ಟು-ಲೆಟ್ ಬೋರ್ಡ್‌ಗಳು ಸಹ ಕಾಣುವುದು ಕಡಿಮೆಯಾಗಿವೆ.


"ಸ್ವಂತ ಮನೆ ಕಟ್ಟೋದಕ್ಕಿಂತ ಮನೆ ಬಾಡಿಗೆ ಕಟ್ಟುವುದೇ ಹೊರೆ"


ಅಮರೇಂದ್ರ ಸಾಹು NestAway ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ಸಿಇಒ "2023 ರ ಮುಂಬರುವ ತ್ರೈಮಾಸಿಕದಲ್ಲಿ ಬಾಡಿಗೆ ಮನೆಗಳ ಬೇಡಿಕೆಯು ಮನೆಯನ್ನು ಹೊಂದುವುದಕ್ಕಿಂತ ಹೆಚ್ಚಾಗಿರುತ್ತದೆ" ಎಂದು ಹೇಳುತ್ತಾರೆ.


ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳಿಂದಾಗಿ, ಸಾಂಕ್ರಾಮಿಕ ರೋಗದಿಂದ ಹಿಂದಿರುಗುವ ಅಥವಾ ಬಾಡಿಗೆಗೆ ಹುಡುಕುತ್ತಿರುವ ಯುವ ವೃತ್ತಿಪರರು/ವಿದ್ಯಾರ್ಥಿಗಳ ಸಾಕಷ್ಟು ಒಳಹರಿವು ಕಂಡುಬಂದಿದೆ ಎಂದು ಅವರು ತಿಳಿಸುತ್ತಾರೆ.


ವಸತಿ ಮಾರಾಟದಲ್ಲಿ 10 % ಹೆಚ್ಚಳ


ಹಿಂದಿನ ತ್ರೈಮಾಸಿಕ 2022 ಕ್ಕೆ ಹೋಲಿಸಿದರೆ 2022ರ Q3 ರಲ್ಲಿ ಬೆಂಗಳೂರಿನಲ್ಲಿ ವಸತಿ ಮಾರಾಟವು ಶೇಕಡಾ 10 ರಷ್ಟು ಹೆಚ್ಚಾಗಿದೆ ಎಂದು ಅನಾರಾಕ್ ವರದಿ ಹೇಳಿದೆ.


Q3 2022 ರಲ್ಲಿ ಸುಮಾರು 12,700 ವಸತಿ ಘಟಕಗಳು ಮಾರಾಟವಾಗಿದ್ದು, ಇನ್ನೂ 10% ಮಾರಾಟವಾಗಲು ಸಿದ್ಧವಾಗಿವೆ.


ಇದನ್ನೂ ಓದಿ: Shivaji Nagar: ಸ್ಮಾರ್ಟ್​ ಲುಕ್​ನಲ್ಲಿ ಶಿವಾಜಿ ನಗರ; ಏನೆಲ್ಲಾ ಬದಲಾವಣೆ ಆಗಲಿದೆ?


"2022 ಕ್ಕೆ ಹೋಲಿಸಿದರೆ ಶೂನ್ಯ ಬದಲಾವಣೆಯೊಂದಿಗೆ ಪೂರ್ವ ಬೆಂಗಳೂರು 2022 ರ Q3 ರಲ್ಲಿ ಸರಿಸುಮಾರು 44 ಪ್ರತಿಶತದಷ್ಟು ಮನೆ ಮಾರಾಟವನ್ನು ದಾಖಲಿಸಿದೆ.


ಉತ್ತರ ಬೆಂಗಳೂರು ಶೇಕಡಾ 2 ರಷ್ಟು ಕುಸಿತವನ್ನು ಕಂಡಿದೆ. ದಕ್ಷಿಣ ಬೆಂಗಳೂರಲ್ಲಿ ಮನೆ ಮಾರಾಟದಲ್ಲಿ 2 ಶೇಕಡಾ ಏರಿಕೆಯಾಗಿದೆ. ಪಶ್ಚಿಮ ಬೆಂಗಳೂರಿನಲ್ಲಿ ವಸತಿ ಮಾರಾಟ 2022 ರ Q2 ಕ್ಕೆ ಹೋಲಿಸಿದರೆ Q3 2022 ರಲ್ಲಿ ಸ್ಥಿರವಾಗಿದೆ.


ಒಟ್ಟಾರೆ ಬೆಂಗಳೂರು ಮನೆ ಮಾರಾಟದಲ್ಲಿ 5 ಶೇಕಡಾ ಪಾಲನ್ನು ಹೊಂದಿದೆ.

Published by:Latha CG
First published: