• Home
  • »
  • News
  • »
  • bengaluru-urban
  • »
  • Bengaluru Karaga 2022: ಬೆಂಗಳೂರಿನ ರಸ್ತೆಗಳಲ್ಲಿ 2 ವರ್ಷಗಳ ಬಳಿಕ ದ್ರೌಪದಮ್ಮನ ಸಂಚಾರ..!?

Bengaluru Karaga 2022: ಬೆಂಗಳೂರಿನ ರಸ್ತೆಗಳಲ್ಲಿ 2 ವರ್ಷಗಳ ಬಳಿಕ ದ್ರೌಪದಮ್ಮನ ಸಂಚಾರ..!?

ಕರಗ ಮಹೋತ್ಸವ (ಫೈಲ್​ ಫೋಟೋ)

ಕರಗ ಮಹೋತ್ಸವ (ಫೈಲ್​ ಫೋಟೋ)

ಪ್ರವಾಹ, ಬರ, ಯುದ್ಧ, ಏನೇ ಆದ್ರೂ ನಿಲ್ಲದೇ ನಡೆದುಕೊಂಡು ಬಂದಿದ್ದ ಕರಗ ಶಕ್ತ್ಯೋತ್ಸವ ಕಳೆದ ಎರಡು ವರ್ಷದಿಂದ ನಿಂತು ಹೋಗಿತ್ತು. ಕೊರೋನಾ ಮಹಾಮಾರಿ ಆರ್ಭಟಕ್ಕೆ ಹೆದರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಪಾಲಿಕೆ ಬ್ರೇಕ್ ಹಾಕಿತ್ತು.

  • Share this:

ಬೆಂಗಳೂರು: ಕೊರೋನಾದಿಂದ (Corona) ಐತಿಹಾಸಿಕ ಕರಗ ಮಹೋತ್ಸವ(Bengaluru Karaga)ಎರಡು ವರ್ಷಗಳಿಂದ ನಿಂತು ಹೋಗಿತ್ತು. ಕೇವಲ ಧಾರ್ಮಿಕ ಆಚರಣೆಗಷ್ಟೇ ಸೀಮಿತವಾಗಿತ್ತು. ಆದರೆ  ಬಾರಿ ಕರಗ ಶಕ್ತ್ಯೋತ್ಸವಕ್ಕೆ ದಿನಗಣನೆ ಆರಂಭವಾಗ್ತಿದ್ದಂತೆ ಮುಕ್ತ ಅವಕಾಶದ ಸುಳಿವು ಪಾಲಿಕೆ (BBMP) ಕಡೆಯಿಂದ ಸಿಗ್ತಿದೆ. ಹೀಗಾಗಿ ಕರಗ ಮಹೋತ್ಸವ ತನ್ನ ಗತವೈಭಕ್ಕೆ ಮರಳುವ ಮುನ್ಸೂಚನೆ ಸಿಗುತ್ತಿದೆ. ಕೊರೋನಾ ಕಾಲಿಟ್ಟ ಮೇಲೆ ಎಲ್ಲವನ್ನೂ ತಲೆಕೆಳಗಾಗಿಸಿದೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದ ಅದೆಷ್ಟೋ ಸಂಪ್ರದಾಯಕ್ಕೂ ಕೊರೋನಾ ಅಡ್ಡಗಾಲು ಹಾಕಿತ್ತು. ಇದರಲ್ಲಿ ಬೆಂಗಳೂರಿನ ವಿಶ್ವ ಪ್ರಸಿದ್ಧ ಕರಗ ಮಹೋತ್ಸವವೂ ಒಂದು. ಪ್ರವಾಹ, ಬರ, ಯುದ್ಧ, ಏನೇ ಆದ್ರೂ ನಿಲ್ಲದೇ ನಡೆದುಕೊಂಡು ಬಂದಿದ್ದ ಕರಗ ಶಕ್ತ್ಯೋತ್ಸವ ಕಳೆದ ಎರಡು ವರ್ಷದಿಂದ ನಿಂತು ಹೋಗಿತ್ತು. ಕೊರೋನಾ ಮಹಾಮಾರಿ ಆರ್ಭಟಕ್ಕೆ ಹೆದರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಪಾಲಿಕೆ ಬ್ರೇಕ್ ಹಾಕಿತ್ತು. ಆದರೆ ಬಾರಿ ಕೊರೋನಾ ಕೊಂಚ ಇಳಿಕೆ ಹಾದಿ ಹಿಡಿದಿದ್ರಿಂದ ಮತ್ತೆ ಕರಗ ತನ್ನ ಹಿಂದಿನ ಗತವೈಭವಕ್ಕೆ ಮರಳೋ ಮುನ್ಸೂಚನೆ ಸಿಗ್ತಿದೆ.


ಮಾರ್ಚ್ 8 ರಂದು ಕರಗ ಶಕ್ತ್ಯೋತ್ಸವ


ನಿಜ ಈ ವರ್ಷದ ಮಾರ್ಚ್ 8 ರಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಇದರ ನಡುವೆ ಈ ಬಾರಿ ಕೊರೋನಾ ಮೂರನೇ ಅಲೆ ಇಳಿಕೆ ಹಾದಿ ಹಿಡಿದಿದೆ. ಹೀಗಾಗಿ ಕರಗ ಮಹೋತ್ಸವಕ್ಕೆ ಅನುಮತಿ ನೀಡಬೇಕೆಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಪರಿಷತ್ ಸದಸ್ಯರಾಗಿರುವ ಪಿ.ಆರ್. ರಮೇಶ್ ಸರ್ಕಾರಕ್ಕೆ ಹಾಗೂ ಪಾಲಿಕೆಗೆ ಪತ್ರ ಬರೆದಿದ್ದಾರೆ. ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ಬಾರಿ ಕರಗ ಮಹೋತ್ಸವ ಕೊರೋನಾ ನಿಯಮಾನುಸಾರ ವಿಜೃಂಭಣೆಯಿಂದ ನಡೆಯಲಿದೆ ಎಂದು ಪಿಆರ್ ರಮೇಶ್ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:Gadag Farmers: ವೀಳ್ಯದೆಲೆಯೇ ಈ ಊರಿನ ಗುರುತು.. ರೈತರಿಗೆ ಶ್ರೀಮಂತಿಕೆ ತಂದ ಕಥೆ ಇದು!


ಸದ್ಯ ಕೊರೋನಾ ಹಿನ್ನಲೆ ಜಾತ್ರೆ, ಸಭೆ ಸಮಾರಂಭಗಳಿಗೆ ಅವಕಾಶವನ್ನ ನೀಡಲಾಗ್ತಿಲ್ಲ. ಹೀಗಾಗಿ ಈ ಬಗ್ಗೆ ಒಂದಿಷ್ಟು ಸಭೆಗಳನ್ನ ನಡೆಸಿ ಸಾಧಕ ಬಾಧಕ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಆದರೆ ಸಿದ್ಧತೆಗಳನ್ನು ಆರಂಭಿಸಲು ಅನುಮತಿ ಕೊಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.


ಕರಗಕ್ಕಾಗಿ ಉತ್ಸಾಹ, ಸಂಭ್ರಮ 


ಇನ್ನೊಂದ್ಕಡೆಯಲ್ಲಿ ಪಾಲಿಕೆಯಿಂದ ಮೌಕಿಕ ಒಪ್ಪಿಗೆ ಸಿಕ್ಕ ಹಿನ್ನಲೆ ಕರಗ ಉತ್ಸವಕ್ಕೆ ಬೇಕಾದ ಸಿದ್ಧತೆಗಳನ್ನ ಕರಗ ಉತ್ಸವ ಸಮಿತಿ ಆರಂಭಿಸಿದೆ. 11 ಬಾರಿ ಕರಗ ಹೊತ್ತ ಖ್ಯಾತಿ ಹೊಂದಿರುವ ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ.  ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಕರಗ ಶಕ್ತ್ಯೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಯುವ ಎಲ್ಲಾ ಮುನ್ಸೂಚನೆ ಸಿಗ್ತಿದೆ.  ಹೀಗಾಗಿ ವಹ್ನೀ ಕುಲ ಕ್ಷತ್ರೀಯರ ಮನೆಗಳಲ್ಲಿ ಸಂತಸ ಮನೆಮಾಡಿದೆ.


ಹೇಗಿರುತ್ತೆ ಕರಗ ಮಹೋತ್ಸದ ಸಂಭ್ರಮ? 


ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ದೀಪಾಲಂಕಾರದಿಂದ ಕಂಗೊಳಿಸುತ್ತದೆ.  ಹೂವಿನ ಕರಗ ಸಾಗುವ ಹಾದಿಯಲ್ಲಿ ಸಕಲ ಸಿದ್ಧತೆ ಮಾಡಲಾಡಿಕೊಳ್ಳಲಾಗುತ್ತೆ. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕಬ್ಬನ್ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಕೃಷ್ಣರಾಜ ಮಾರುಕಟ್ಟೆ ಮೂಲಕ ಅಕ್ಕಿಪೇಟೆ, ಅರಳೇಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್‌ಪೇಟೆಗಳಲ್ಲಿ ಸಂಚರಿಸಿ ಕುಲಪುರೋಹಿತರ ಮನೆಯಲ್ಲಿ ವಿಶೇಷ ಪೂಜೆ ನಡೆಯುತ್ತೆ.


ರಾತ್ರಿ ಆರಂಭವಾಗುವ ಕರಗ ಸಾಮಾನ್ಯವಾಗಿ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಅಣ್ಣಮ್ಮ ದೇವಸ್ಥಾನ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಮಾರ್ಗವಾಗಿ ಕರಗ ಸಾಗಿ ಬೆಳಗ್ಗೆ ಧರ್ಮರಾಯಸ್ವಾಮಿ ದೇವಾಲಯ ತಲುಪುತ್ತೆ.

Published by:Kavya V
First published: