ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಇನ್ನೂ ಚೇತರಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಇದರ ನಡುವೆ ಈಗ ಮತ್ತೆ ಬೆಂಗಳೂರಿನಲ್ಲಿ (Bengaluru) ಭಾರೀ ಮಳೆ (Heavy Rain) ಶುರುವಾಗಿದೆ. ಮತ್ತಿಕೆರೆ, ಕಾರ್ಪೊರೇಷನ್, ಯಶವಂತಪುರ, ಬಿಇಎಲ್ ಸರ್ಕಲ್, ಗೊರಗುಂಟೆಪಾಳ್ಯ ಸೇರಿದಂತೆ ಹಲವೆಡೆ ಮಳೆ ಆರಂಭವಾಗಿದೆ. ತಗ್ಗುಪ್ರದೇಶದಲ್ಲಿರುವ (Down Area) ಜನರಿಗೆ ಹಾಗೂ ರಾಜಕಾಲುವೆ ಪಕ್ಕದಲ್ಲಿರುವ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಅದರಲ್ಲೂ ಆಫೀಸ್ (Office) ಬಿಡೋ ಟೈಮ್ ಆಗಿರೋದ್ರಿಂದ ವಾಹನ ಸವಾರರಿಗೆ (Vehicle ) ಕಿರಿಕಿರಿ ಆಗಿದೆ. ಮಳೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ನಿನ್ನೆ ಸುರಿದ ಧಾರಾಕಾರ ಮಳೆಯ ನೀರು ಇನ್ನೂ ತಗ್ಗಿಲ್ಲ. ಇಂದು ಮತ್ತೆ ನಿರಂತರವಾಗಿ 2 ಗಂಟೆ ಮಳೆ ಸುರಿದ್ರೆ ಮತ್ತಷ್ಟು ಅನಾಹುತ ಫಿಕ್ಸ್ ಎನ್ನುವಂತಾಗಿದೆ.
ಬೆಂಗಳೂರಿನಲ್ಲಿ ಸಂಜೆ ಆಗ್ತಿದ್ದಂತೆ ಮತ್ತೆ ಮಳೆ ಆರಂಭವಾಗಿದೆ. ಪ್ರಮುಖ ಏರಿಯಾಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಪೋರೇಷನ್, ವಿಧಾನಸೌಧ, ಲಾಲ್ ಬಾಗ್, ಟೌನ್ ಹಾಲ್, ಮಾರ್ಕೆಟ್ ಸುತ್ತಲೂ ಮಳೆಯಾಗ್ತಿದೆ. ವಾಹನ ಸವಾರರು ಮಳೆಗೆ ಪರದಾಡುತ್ತಿದ್ದಾರೆ.
ಮಳೆ ಹಿನ್ನೆಲೆ ಸಿಎಂ ಬೊಮ್ಮಾಯಿ ತುರ್ತು ಸಭೆ
ಬೆಂಗಳೂರಿನಲ್ಲಿ ಮಳೆಯಿಂದಾಗಿ ಅವಾಂತರ ಹಿನ್ನೆಲೆ ಬೆಂಗಳೂರು ಸಚಿವರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸ್ತಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ಮಾಡ್ತಿದ್ದಾರೆ. ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಆರ್. ಅಶೋಕ್, ಬೈರತಿ ಬಸವರಾಜ್, ಬಿಬಿಎಂಪಿ ಕಮಿಷನರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದಾರೆ.
ನಿನ್ನೆ ಮಹದೇವಪುರ ಹಾಗೂ ಬೊಮ್ಮನಳ್ಳಿ ಕ್ಷೇತ್ರದಲ್ಲಿ ಸುರಿದ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗ್ತಿದೆ. ಮಳೆ ಸಮಸ್ಯೆಗಳಿಗೆ ಪರಿಹಾರ ಸಂಬಂಧ ಯೋಜನೆ ರೂಪಿಸುವ ಸಂಬಂಧ ಸಿಎಂ ಮಾಹಿತಿ ಪಡೆಯುತ್ತಿದ್ದಾರೆ.
ವಾಹನಗಳನ್ನು ಬಿಟ್ಟು ನಡೆದುಕೊಂಡೇ ಹೋದ ಅಧಿಕಾರಿಗಳು
ಗೃಹ ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಿಂದಾಗಿ ಟ್ರಾಫಿಕ್ ಹೆಚ್ಚಿದೆ. ಹಾಗಾಗಿ ಸಿಎಂ ಸಭೆಗೆ ಬರುವ ಅಧಿಕಾರಿಗಳಿಗೂ ಟ್ರಾಫಿಕ್ ಬಿಸಿ ತಟ್ಟಿದೆ. ಪರಿಣಾಮ ಅಧಿಕಾರಿಗಳು ವಾಹನಗಳನ್ನು ಬಿಟ್ಟು ನಡೆದುಕೊಂಡೇ ತೆರಳಿದರು.
ಅಧಿಕ ಹೊತ್ತು ಭಾರೀ ಮಳೆ ಸುರಿದರೆ ಅನಾಹುತ ಫಿಕ್ಸ್
ನಿನ್ನೆಯ ಮಳೆಗೆ ಬೆಂಗಳೂರು ಚೇತರಿಸಿಕೊಂಡಿಲ್ಲ. ಈ ಮತ್ತೆ ಮಳೆಯಾಗ್ತಿದ್ದು ಇದೇ ರೀತಿ ನಿರಂತರ ಎರಡು ಗಂಟೆಗಳ ಕಾಲ ಸುರಿದರೇ ಅನಾಹುತ ಆಗೋದ್ರಲ್ಲಿ ಅನುಮಾನವಿಲ್ಲ. ಮತ್ತೆ ಜನ, ವಾಹನ ಸವಾರರು ಒದ್ದಾಡಬೇಕಾದಂತು ಸತ್ಯ.
ಬೆಳ್ಳಂದೂರಿನ ರಸ್ತೆಗಳ ಮೇಲೆ ಎರಡರಿಂದ ಮೂರು ಅಡಿಯಷ್ಟು ನೀರು ಹರಿಯುತ್ತಿರುವ ಪರಿಣಾಮ ವಾಹನಗಳ ಓಡಾಟವೇ ಕಷ್ಟವಾಗಿದೆ. ಬೊಮ್ಮನಹಳ್ಳಿ ಭಾಗದಲ್ಲಿ ಐಟಿ-ಬಿಟಿ ಕಂಪನಿಗಳೇ ಹೆಚ್ಚಾಗಿದ್ದು, ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಳೆಗೆ ಮುಳುಗಿದ ಕಾರ್, ಬೈಕ್ಗಳು
ಸರ್ಜಾಪುರ ರಸ್ತೆಯ ಮತ್ತೊಂದು ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ನಲ್ಲೂ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರಿನಲ್ಲಿ ಸುಮಾರು 15ಕ್ಕೂ ಹೆಚ್ಚು ಕಾರ್ ಹಾಗೂ ಬೈಕ್ ಗಳು ಮುಳುಗಡೆಯಾಗಿದೆ. ಅಪಾರ್ಟ್ಮೆಂಟ್ ನ ನೆಲಮಹಡಿಯಲ್ಲಿ ಪಾರ್ಕ್ ಮಾಡಿರುವ ವಾಹನ ನೀರಿನಲ್ಲಿ ಜಲಾವೃತಗೊಂಡಿದೆ.
HAL ಬಳಿ ಅಪಾರ್ಟ್ ಮೆಂಟ್ ಒಳಗೆ ನುಗ್ಗಿದ ಮಳೆ ನೀರು
HAL ಬಳಿಯ ಅಪಾರ್ಟ್ ಮೆಂಟ್ ಒಳಗೆ ಮಳೆ ನೀರು ನುಗ್ಗಿದೆ. 63 ಪಂಪ್ ಗಳಲ್ಲಿ 43 ಪಂಪ್ ಬಳಕೆ ಮಾಡಿ ನೀರು ಹೊರಹಾಕಲಾಗ್ತಿದೆ. ಜನರ ರಕ್ಷಣೆಗೆ ಎಸ್ ಡಿ ಆರ್ ಎಫ್, ಬೋಟ್ ಬಳಕೆ ಮಾಡಲಾಗುತ್ತಿದೆ. ಔಟರ್ ರಿಂಗ್ ರೋಡ್ ನಲ್ಲಿ ಎರಡು ಅಡಿ ನೀರು ಹರಿಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ