Traffic Rules: ವಾಹನ ಸವಾರರೇ ಎಚ್ಚರ; ಈ ಹೆಲ್ಮೆಟ್​ಗಳನ್ನು ಧರಿಸಿದ್ರೆ ಬೀಳುತ್ತೆ ಭಾರೀ ದಂಡ!

ಹಾಫ್ ಹೆಲ್ಮೆಟ್‌ಗಳು ಅಥವಾ ಐಎಸ್‌ಐ ಹಾಲ್‌ಮಾರ್ಕ್ ಗುರುತಿಲ್ಲದ ಹೆಲ್ಮೆಟ್‌ಗಳನ್ನು ಬೆಂಗಳೂರಿನಲ್ಲಿ ಇನ್ನು ಮುಂದೆ ಹೆಲ್ಮೆಟ್ ಧರಿಸಿಲ್ಲ ಎಂಬುದಾಗಿ ಪರಿಗಣಿಸಿ ಸೂಕ್ತ ದಂಡ ವಿಧಿಸಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಬ್ಬನ್ ಪಾರ್ಕ್ ಪೊಲೀಸರು ಸಂಪೂರ್ಣ, ISI ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು (Helmet) ಧರಿಸುವುದರ ಕುರಿತು ಜಾಗೃತಿ ಮೂಡಿಸಿದ್ದು; ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸುವುದಾಗಿ ಎಚ್ಚರಿಸಿದ್ದಾರೆ ವಾಹನಗಳನ್ನು ಚಾಲನೆ ಮಾಡುವ ಸಮಯದಲ್ಲಿ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸುವುದು ಹಾಗೂ ಜೀವ ರಕ್ಷಣೆಯಲ್ಲಿ (Life saving) ಅವುಗಳ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಕುರಿತು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು (Cubbon Park Traffic Police) ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ರಸ್ತೆಯಲ್ಲಿ ಸುರಕ್ಷಿತ ಚಾಲನೆಯನ್ನು ಖಾತ್ರಿಪಡಿಸಲು ಇನ್ನು ಮುಂದೆ ಐಎಸ್‌ಐ ಹಾಲ್‌ಮಾರ್ಕ್‌ (ISI Hallmark) ಇಲ್ಲದಿರುವ ಹೆಲ್ಮೆಟ್‌ ಧರಿಸುವವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಹಾಫ್ ಹೆಲ್ಮೆಟ್ ಧರಿಸಿದರೆ ಬೀಳತ್ತೆ ದಂಡ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹಾಫ್ ಹೆಲ್ಮೆಟ್‌ಗಳು ಅಥವಾ ಐಎಸ್‌ಐ ಹಾಲ್‌ಮಾರ್ಕ್ ಗುರುತಿಲ್ಲದ ಹೆಲ್ಮೆಟ್‌ಗಳನ್ನು ಬೆಂಗಳೂರಿನಲ್ಲಿ ಇನ್ನು ಮುಂದೆ ಹೆಲ್ಮೆಟ್ ಧರಿಸಿಲ್ಲ ಎಂಬುದಾಗಿ ಪರಿಗಣಿಸಿ ಸೂಕ್ತ ದಂಡ ವಿಧಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ

ಮುಂಬರುವ ದಿನಗಳಲ್ಲಿ ಐಎಸ್‌ಐ ಗುರುತಿರುವ ಹೆಲ್ಮೆಟ್‌ಗಳನ್ನು ಸವಾರರು ಬಳಸಬೇಕೆಂಬ ಉದ್ದೇಶವನ್ನು ಹೊಂದಿದ್ದೇವೆ. ಹೆಚ್ಚಿನ ಸವಾರರು ಅರೆ ತೆರೆದ ಹೆಲ್ಮೆಟ್‌ಗಳನ್ನು ಧರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದು ಕಾನೂನು ಬಾಹಿರವಾಗಿದೆ. ಇಂತಹ ಸವಾರರನ್ನು ನಾವು ತಡೆದು ನಿಲ್ಲಿಸಿ ಅವರಿಗೆ ಐಎಸ್‌ಐ ಗುರುತಿರುವ ಹೆಲ್ಮೆಟ್‌ಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ ಅಂತೆಯೇ ಇನ್ನು ಮುಂದೆ ಬೆಂಗಳೂರಿನಲ್ಲಿ ಈ ಗುರುತಿರುವ ಹೆಲ್ಮೆಟ್‌ಗಳು ಕಡ್ಡಾಯವಾಗಿವೆ ಎಂದು ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಲ್ಮೆಟ್ ಜಾಗೃತಿ ಅಭಿಯಾನ:
ಐಎಸ್‌ಐ ಹೆಲ್ಮೆಟ್‌ಗಳ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಸವಾರರಲ್ಲಿ ಮನವರಿಕೆ ಮಾಡುವ ಸಲುವಾಗಿ ಪೊಲೀಸರು ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಐಎಸ್‌ಐ ಗುರುತಿರುವ ಹತ್ತು ಹೆಲ್ಮೆಟ್‌ಗಳನ್ನು ಜಿಪಿಒ ಸರ್ಕಲ್‌ನಲ್ಲಿರುವ ಸವಾರರಿಗೆ ಒದಗಿಸಿದ್ದಾರೆ. ರಸ್ತೆಗಳನ್ನು ಸರಿಪಡಿಸುವು ನಮ್ಮ ಕೈಯಲ್ಲಿಲ್ಲದಿದ್ದರೂ ಪ್ರಾಣಾಪಾಯಗಳಾದಂತೆ ಹೆಲ್ಮೆಟ್‌ಗಳನ್ನು ಧರಿಸುವಂತೆ ಸವಾರರ ಮನವೊಲಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂಬುದು ಹಿರಿಯ ಅಧಿಕಾರಿಯ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Mysore Dasara: ಭರ್ಜರಿಯಾಗಿ ರೆಡಿಯಾಗ್ತಿದೆ ಅಭಿಮನ್ಯು ಆ್ಯಂಡ್​ ಟೀಂ, ಇಲ್ಲಿದೆ ಗಜಪಡೆ ಊಟದ​ ಮೆನು

ಬೆಂಗಳೂರು ಮೂಲದ ಸಮುದಾಯ ಸೇವಾ ಸಮೂಹ ಸಿಟಿಜನ್ಸ್ ಫೋರ್ ಸಿಟಿಜನ್ಸ್ (ಸಿ4ಸಿ) ಸಹಯೋಗದಲ್ಲಿ ಹೆಲ್ಮೆಟ್ ಪ್ರಾಮುಖ್ಯತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿ4ಸಿಯ ಸ್ಥಾಪಕರಾದ ರಾಜ್‌ಕುಮಾರ್ ದುಗಾರ್ ಅನಿಸಿಕೆ ಹಂಚಿಕೊಂಡಿದ್ದು ಹೆಚ್ಚಿನ ಜನರು ಗಂಭೀರ ಗಾಯಗಳು ಹಾಗೂ ಸಾವುಗಳಿಗೆ ತುತ್ತಾಗುತ್ತಿದ್ದು ಇದಕ್ಕೆ ಕಾರಣ ಸವಾರರು ಹೆಲ್ಮೆಟ್ ಧರಿಸದಿರುವುದು ಹಾಗೂ ಪ್ರಯಾಣ ಸಮಯದಲ್ಲಿ ಹೆಲ್ಮೆಟ್‌ಗಳನ್ನು ತಮ್ಮೊಂದಿಗೆ ಒಯ್ಯದಿರುವುದಾಗಿದೆ. ಹೆಲ್ಮೆಟ್‌ಗಳು ಅವರವರ ಪ್ರಾಣವನ್ನು ರಕ್ಷಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ಕಾರ್ಯಕ್ರಮದ ಮೂಲಕ ಹೆಲ್ಮೆಟ್‌ಗಳ ಕುರಿತು ಅಸ್ತಿತ್ವದಲ್ಲಿರುವ ನಿಯಮಗಳನ್ನು ಜನರಿಗೆ ತಿಳಿಸುವುದಾಗಿದೆ.

ಜನರು ಕೆಟ್ಟ ರಸ್ತೆಯ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ ಆದರೆ ತಾವು ಮಾಡುವ ತಪ್ಪಿನ ಕುರಿತು ಮಾತನಾಡುವುದಿಲ್ಲ ಹಾಗಾಗಿ ಕನಿಷ್ಟ ಪಕ್ಷ ಹೆಲ್ಮೆಟ್ ಧರಿಸಿ ರಸ್ತೆ ಅಪಘಾತಗಳಂತಹ ಅವಘಡಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ.

ಐಎಸ್‌ಐ ಗುರುತಿನ ಹೆಲ್ಮೆಟ್ ಇದೀಗ ಕಡ್ಡಾಯ
ಐಎಸ್‌ಐ ಗುರುತಿಲ್ಲದ ಹೆಲ್ಮೆಟ್‌ಗಳನ್ನು ಧರಿಸದಿರುವುದಕ್ಕೆ ದಂಡ ವಿಧಿಸಲಾಗುತ್ತಿದ್ದು ಹೆಲ್ಮೆಟ್‌ಗಳಲ್ಲಿ ಗದ್ದದ ಕೆಳಗಿನ ಪಟ್ಟಿ ಕಡ್ಡಾಯವಾಗಿದೆ. ಹೆಚ್ಚಿನ ಪ್ರಯಾಣಿಕರು ಹಾಗೆಯೇ ಸವಾರರು ಪಟ್ಟಿಗಳನ್ನು ಧರಿಸದೆಯೇ ಇಲ್ಲವೇ ಪಟ್ಟಿ ರಹಿತ ಅರೆ ತೆರೆದ ಹೆಲ್ಮೆಟ್‌ಗಳನ್ನು ಧರಿಸಿ ಪ್ರಯಾಣಿಸುತ್ತಾರೆ. ಸಾರ್ವಜನಿಕರಲ್ಲಿ ಹೆಲ್ಮೆಟ್‌ಗಳ ಕುರಿತು ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Taxi Drivers: ಗಣೇಶೋತ್ಸವ ಮುಗಿದ್ರು ತೆಗೆದಿಲ್ಲ ಈದ್ಗಾ ಮೈದಾನದ ಬೀಗ! ಬೀದಿ ಪಾಲಾದ ಟ್ಯಾಕ್ಸಿ ಚಾಲಕರು

ಮೋಟಾರ್ ವಾಹನ ಕಾಯ್ದೆ 1998 ರ ಪ್ರಕಾರ ಐಎಸ್‌ಐ ಹೆಲ್ಮೆಟ್‌ಗಳನ್ನು ಧರಿಸುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಕೃತ ಹಾಗೂ ಕಡ್ಡಾಯಗೊಳಿಸಿದೆ. ಐಎಸ್‌ಐ ಗುರುತಿಲ್ಲದ ಹೆಲ್ಮೆಟ್‌ಗಳನ್ನು ಸವಾರರು ಧರಿಸಿದಲ್ಲಿ ರೂ 1,000 ದಂಡವನ್ನು ತೆರಬೇಕಾಗುತ್ತದೆ. ಇನ್ನು ಪಟ್ಟಿ ಇಲ್ಲದಿದ್ದರೆ ಹೆಚ್ಚುವರಿ ರೂ 1,000 ವನ್ನು ದಂಡಕ್ಕೆ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Published by:Ashwini Prabhu
First published: