Gowri Habba Bengaluru: ಮುಗಿಲು ಮುಟ್ಟಿದ ಸ್ವರ್ಣ ಗೌರಿ ಸಡಗರ, ಸಂಭ್ರಮ!

Swarna Gowri Vratha: ಗಣೇಶ ಚತುರ್ಥಿ ಹಬ್ಬಕ್ಕೂ ಮುನ್ನ ನಾಡಿನಾದ್ಯಂತ ಗೌರಿ ಹಬ್ಬದ ಸಂಭ್ರಮ ಕಂಡು ಬಂತು. ಮಹಿಳೆಯರು ತಮ್ಮ ಇಷ್ಟಾರ್ಥಗಳ ಬೇಡಿಕೆಗಳ ಈಡೇರಿಕೆಗಾಗಿ ಪ್ರಾರ್ಥಿಸಿಕೊಂಡರು.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಸರ್ವಮಂಗಳ ಮಾಂಗಲ್ಯೇ , ಶಿವೇ ಸರ್ವಾರ್ಥ ಸಾಧಿಕೇ, ಶರಣ್ಯೇ ತ್ರ್ಯಯಂಬಕೇ ಗೌರಿ ನಾರಾಯಣಿ ನಮೋಸ್ತುತೆ. ಹೀಗೆನ್ನುತ್ತಾ ನಾಡಿನಾದ್ಯಂತ ಇಂದು ಗೌರಿ ಹಬ್ಬವನ್ನು (Gowri Habba) ಆಚರಿಸಲಾಗುತ್ತಿದೆ. ಹೆಂಗಳೆಯರ ಹಬ್ಬವೆಂದೇ ಕರೆಯಲ್ಪಡುವ ಮಂಗಳಕರ ಗೌರಿ ಹಬ್ಬವನ್ನು ವಿಜೃಂಭಣೆ (Bengaluru) ಮುಂಜಾನೆಯಿಂದಲೇ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಹಿಳೆಯರೇ ಗೌರಿ ಮಾತೆಗೆ ಆರತಿ ಎತ್ತಿ ಪೂಜೆ ಮಾಡುತ್ತಾ ತಮ್ಮ ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥಿಸಿಕೊಂಡರು.

    ಇಷ್ಟಾರ್ಥಗಳ ಬೇಡಿಕೆಗೆ ಪ್ರಾರ್ಥನೆ
    ಶಾಲಾ ಕಾಲೇಜ್, ಆಫೀಸ್, ಇನ್ಯಾವುದೋ ಕೆಲಸಕ್ಕೆ ತೆರಳುವ ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷವಾಗಿ ದೇವಿ ಶಕ್ತಿಯಾದ ಗೌರಿ ಮುಂದೆ ನಿಂತು ಮುತ್ತೈದೆಯರು, ಮದ್ವೆಯಾಗ್ದೇ ಇರೋರು ಕೂಡಾ ತಮ್ಮ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಬೇಡಿಕೊಂಡರು. ಇನ್ನು ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರವೂ ನಡೆಯುತ್ತಿದ್ದು, ಭಕ್ತರ ಸಂಖ್ಯೆಯೂ ಹೆಚ್ಚಿದೆ.

    ಇದನ್ನೂ ಓದಿ: Kalaburagi Ganesh Chaturthi: ರಾಜಸ್ತಾನಿ ಮಹಿಳೆಯರ ಕೈಯ್ಯಲ್ಲಿ ಕಲಬುರಗಿ ಗಣಪತಿ!

    ಮಾರುಕಟ್ಟೆಗಳಲ್ಲಿ ಗಣಪತಿ
    ಇನ್ನು ಗಣೇಶ ಚತುರ್ಥಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಾರುಕಟ್ಟೆಗಳಲ್ಲಿ ಪುಟ್ಟ ಗಾತ್ರದ ಗಣಪತಿ ಮೂರ್ತಿಗಳು ಗಮನ ಸೆಳೆಯುತ್ತಿದೆ. ಹಬ್ಬದ ಹಿನ್ನೆಲೆ ವ್ಯಾಪಾರ ವಹಿವಾಟು ಜೋರಾಗಿದ್ದು, ಕೊರೊನಾದ ಎರಡು ವರ್ಷಗಳ ಬಳಿಕ ಹಬ್ಬವನ್ನ ಸಂಭ್ರಮಿಸಲು ಜನರು ಸಿದ್ಧರಾಗಿದ್ದಾರೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಜನ ಸಾಗರೋಪಾದಿಯಲ್ಲಿ ಕಂಡು ಬರ್ತಿದ್ದಾರೆ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    ಒಟ್ಟಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ನಾಡು ಸಿದ್ದಗೊಂಡಿದೆ. ನಾಳೆ ಗಣೇಶ ಚತುರ್ಥಿ ಹಬ್ಬ ಇನ್ನಷ್ಟು ರಂಗೇರಲಿದ್ದು, ಗಣಪತಿ ಬಪ್ಪ ಮೋರಯ್ಯಾ ಅನ್ನೋ ಕ್ಷಣಕ್ಕಾಗಿ ಜನರು ಎದುರು ನೋಡುತ್ತಿದ್ದಾರೆ.
    Published by:guruganesh bhat
    First published: