• Home
  • »
  • News
  • »
  • bengaluru-urban
  • »
  • ಏನ್ ಸ್ಮಾರ್ಟ್ ಆಗಿ ಬಂದಿದ್ದೀರಾ? Eshwarappa ಪ್ರಶ್ನೆಗೆ Siddaramaiah ನೀಡಿದ ಉತ್ತರ ಹೀಗಿತ್ತು

ಏನ್ ಸ್ಮಾರ್ಟ್ ಆಗಿ ಬಂದಿದ್ದೀರಾ? Eshwarappa ಪ್ರಶ್ನೆಗೆ Siddaramaiah ನೀಡಿದ ಉತ್ತರ ಹೀಗಿತ್ತು

ಸಿದ್ದರಾಮಯ್ಯ, ಈಶ್ವರಪ್ಪ

ಸಿದ್ದರಾಮಯ್ಯ, ಈಶ್ವರಪ್ಪ

ಸಿದ್ದರಾಮಯ್ಯ ಕ್ಲೀನ್ ಶೇವ್ ನೋಡಿದ ಈಶ್ವರಪ್ಪ ಅವರು ಏನ್ ಸ್ಮಾರ್ಟ್ ಆಗಿ ಬಂದಿದ್ದೀರಾ ಎಂದರು. ವಾರಕ್ಕೊಮ್ಮೆ ಹೀಗೆ ಮಾಡಿಸ್ತೀನಿ ಎಂದರು.

  • Share this:

ಇಂದು ವಿಧಾನಸಭೆ(Session)ಯಲ್ಲಿ ನಿಲುವಳಿ ಸೂಚನೆ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah) ಮತ್ತು ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ನಡುವೆ ಸ್ವಾರಸ್ಯಕರ ನಡೆಯಿತು. ತಮ್ಮ ಹಾಸ್ಯ ಮಾತುಗಳ ಮೂಲಕ ಸಿದ್ದರಾಮಯ್ಯ ಅವರು ಈಶ್ವರಪ್ಪರನ್ನ ಎಳೆದರು. ನಮಗೆ ವಯಸ್ಸು 75 ಆಗಿದೆ. ಅಂದು ನಮ್ಮ ಶಿಕ್ಷಕ ರಾಜಪ್ಪ 03-08-1947 ಅಂತ ಬರೆದರು. ಅದೇ ನನ್ನ ಜನ್ಮ ದಿನಾಂಕ (Date Of Birth) ಆಗಿದೆ. ನಮ್ಮ ತಂದೆ ತಾಯಿ ಇಬ್ಬರೂ ಹೆಬ್ಬೆಟ್ಟು ಗಿರಾಕಿಗಳು.  ಹಾಗಾಗಿ ನಾನು ಹುಟ್ಟಿದ ಹಬ್ಬ ಮಾಡಿಕೊಳ್ಳಲ್ಲ ಎಂದು ಹಾಸ್ಯ ಮಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಈಶ್ವರಪ್ಪ, ಹೌದೌದು ನೀವೊಬ್ಬರೇ ವಯಸ್ಸು ಹೇಳೋದು ಅಂದ್ರು. ಹೌದಪ್ಪ ನಾನು ಹೇಳ್ತೇನೆ ನನಗೆ 75 ವರ್ಷ ಆಗಿದೆ. ಬೇಕಾದ್ರೆ ನೀನು 65 ಅಂತ ಹೇಳಿಕೊ ಎಂದರು. ಊಟಕ್ಕೆ ಮೊದಲು ನಿಮ್ಮ ಮಾತು ಮುಗಿಸಿ ಅಂತ ಸ್ಪೀಕರ್ ಹೇಳಿದ್ರೆ, ಸಿದ್ದರಾಮಯ್ಯನವರು ಊಟದ ನಂತರವೂ ಮಾತಾಡ್ತೀನಿ ಎಂದರು.


ಸಿದ್ದರಾಮಯ್ಯ ಕ್ಲೀನ್ ಶೇವ್ ನೋಡಿದ ಈಶ್ವರಪ್ಪ ಅವರು ಏನ್ ಸ್ಮಾರ್ಟ್ ಆಗಿ ಬಂದಿದ್ದೀರಾ ಎಂದರು. ವಾರಕ್ಕೊಮ್ಮೆ ಹೀಗೆ ಮಾಡಿಸ್ತೀನಿ. ಇಲ್ಲದಿದ್ರೆ ನಿನ್ನಂತವರು ವಯಸ್ಸಾಯ್ತು ಅಂತ ಕಾಲೆಳಿತಾರಲ್ಲ ಅಂತ ಹೇಳಿದ್ದಕ್ಕೆ ನಿಮಗೆ ವಯಸ್ಸಾಯ್ತು ಅಂತ ಯಾರು ಹೇಳ್ತಾರೆ ಅಂತ ಈಶ್ವರಪ್ಪ ಕಾಲೆಳೆದರು.


ನಮ್ಮ ಮೇಷ್ಟ್ರು ಡೇಟ್ ಆಫ್ ಬರ್ತ್ ಬರೆದಿದ್ದು!


ನನಗೆ ಎಷ್ಟು ವಯಸ್ಸು ಅಂತ ಗೊತ್ತಿಲ್ಲ. ನನಗೂ ಗೊತ್ತಿಲ್ಲ, ನಮ್ಮ ಮನೆಯರಿಗೂ ಗೊತ್ತಿಲ್ಲ. ನನ್ನ ಹುಟ್ಟಿದ ದಿನವನ್ನ ನಮ್ಮ‌ಸ್ಕೂಲ್ ಮೇಷ್ಟ್ರು ರಾಜಪ್ಪ ಅಂತ ಅವರೇ ಬರೆದುಕೊಂಡಿದ್ದಾರೆ.. 3-8-1947 ಅಂತ ಬರೆದುಕೊಂಡಿದ್ದಾರೆ.. ಅದಕ್ಕೆ ನಾನು ನನ್ನ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲ್ಲ. ಮೇಷ್ಟ್ರು ಹೇಳಿದ ದಿನಾಂಕದ ಪ್ರಕಾರ ನನಗೆ 75 ವರ್ಷ ಎಂದು ಹೇಳಿದರು.


ಇದನ್ನೂ ಓದಿ:  ಮಾಲ್ ಗಳಿಂದ BBMPಗೆ ಮಹಾ ವಂಚನೆ: ಬಾಕಿ ಉಳಿಸಿಕೊಂಡ ತೆರಿಗೆ ಹಣ ಕೇಳಿದ್ರೆ ಶಾಕ್ ಆಗ್ತೀರಿ!


ಈಶ್ವರಪ್ಪ ಹೆಸರು ಹೇಳಿ ನಗೆ ಚಟಾಕಿ


ಅಂದು ನಮಗೆ ಕನ್ನಡ ಹೇಳಿಕೊಡುವ ಪಂಡಿತರಿದ್ದರು. ಕನ್ನಡ ವ್ಯಾಕರಣ, ಸಂಧಿಗಳನ್ನ ಹೇಳಿಕೊಡ್ತಿದ್ರು. ಆಗ ಕಲಿತಿದ್ದು, ಈಗಲೂ ಉಳಿದು ಕೊಂಡಿದೆ. ಹೈಸ್ಕೂಲ್ ವರೆಗಿನ ಓದು ಉಳಿಯುತ್ತೆ. ಕಾಲೇಜಿನ ಓದು ಮನಸ್ಸಿನಲ್ಲಿ ಉಳಿಯಲ್ಲ. ನನಗೆ ವ್ಯಾಕರಣ ಹೇಳಿಕೊಟ್ಟವರು ಈಶ್ವರಾಚಾರಿ ಮೇಷ್ಟ್ರು ಅಂತ ಹೇಳಿ ನೀನಲ್ಲಪ್ಪ ಎಂದು ಈಶ್ವರಪ್ಪ ಅವರ ಹೆಸರ ಹೇಳಿ ನಗೆ ಚಟಾಕಿ ಹಾರಿಸಿದರು.


ಶಾಂತಿ ಸುವ್ಯವಸ್ಥೆ ಇದ್ರೆ ದೇಶ ಅಭಿವೃದ್ಧಿ


ಯಾವ ದೇಶ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇರುತ್ತೆ. ಆ ದೇಶ ಅಭಿವೃದ್ಧಿ ಆಗುತ್ತೆ, ಇಲ್ಲದೆ ಹೋದ್ರೆ ಅಭಿವೃದ್ಧಿ ಕುಂಠಿತವಾಗಿ ಬದಕು ದುಸ್ತರ ಆಗುತ್ತದೆ. ವಿಜ್ಞಾನ, ತಂತ್ರಜ್ಞಾನ ಬೆಳೆದಾಗ ಸಮೃದ್ಧ ರಾಷ್ಟ್ರ ಆಗುತ್ತದೆ. ಅನೇಕ ದೇಶದಲ್ಲಿ ಹೀಗೆ ಬೇಳದ ಉದಾಹರಣೆ ಇದೆ. ಧರ್ಮ ಗದ್ದಲ ಇದ್ರೆ ಅಲ್ಲಿ ಬೆಳವಣಿಗೆ ಕಡಿಮೆ ಆಗುತ್ತೆ ಎಂದು ಹೇಳಿದರು.


ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದ ಮೂರನೇ ಅನುಚ್ಛೇದ ಕ್ಕೆ ಸೇರಿಸಿದ್ದೇವೆ. ಎಲ್ಲರಿಗೂ ಉಚಿತ, ಕಡ್ಡಾಯ ಶಿಕ್ಷಣ ಸಿಗಬೇಕು. ಇದು ಮೂಲಭೂತ ಹಕ್ಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಹಾಗಾದರೆ ಅದು ರಾಷ್ಟ್ರಕ್ಕೆ ಅನ್ಯಾಯ ಆದಂತೆ.


ಇದನ್ನೂ ಓದಿ:  Karnataka Assembly: ಹಿಜಾಬ್ ಹಿಂದಿರೋ ಕಾಣದ ಕೈಗಳು ಯಾವುದು ಗೊತ್ತಾ?, ಹರ್ಷ ಕೊಲೆ ಹಿಂದಿನ ಸತ್ಯ ಜನರಿಗೆ ತಿಳಿಸಿ- HDK ಆಗ್ರಹ


ಎರಡು ವರ್ಷದಿಂದ ಬಂಡವಾಳ ಬಂದಿಲ್ಲ


ನಾವು ಅವರಿಗೆ ಅನ್ಯಾಯ ಮಾಡಿದ್ರೆ, ಆ ಪಾಪವನ್ನು ನಾವು ಅನುಭವಿಸಬೇಕಾಗುತ್ತದೆ.. ಕೋವಿಡ್ ಕಾರಣದಿಂದ ಎರಡು ವರ್ಷ ದಿಂದ ಬಂಡವಾಳ ಹರಿದು ಬಂದಿಲ್ಲ. ಹಾಗಾಗಿ ಎರಡು ವರ್ಷ ದಿಂದ ಉದ್ಯೋಗ ಸೃಷ್ಟಿ ಆಗಿಲ್ಲ ಅಂತಾ ಸರ್ಕಾರ  ನಮ್ಮ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟಿದೆ ಎಂದು ತಿಳಿಸಿದರು.

Published by:Mahmadrafik K
First published: