ಬೆಂಗಳೂರು (ಆಗಸ್ಟ್ 06): ರಾಜ್ಯದಲ್ಲಿ ಮಳೆಯಬ್ಬರ ತಗ್ಗುತ್ತಿಲ್ಲ. ಕಳೆದ ಏಳೆಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ (Heavy Rain) ಇಡೀ ಕರ್ನಾಟಕ (Karnataka) ತೋಯ್ದು ತೊಪ್ಪೆಯಾಗಿದೆ. ಬೆಂಗಳೂರಿನಲ್ಲೂ (Bangalore) ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಬೆಳಗ್ಗಿನ ವೇಳೆ ಕೊಂಚ ಸೂರ್ಯ ಇಣುಕಿದರೂ ಸಂಜೆ ವೇಳೆಗೆ ಧೋ ಅಂತಾ ಮಳೆಯಾಗ್ತಿದೆ. ಉತ್ತರ ಕರ್ನಾಟಕ (North Karnataka) , ಕರಾವಳಿ ಜಿಲ್ಲೆಯಲ್ಲೂ ಜಡಿಮಳೆಯಾಗ್ತಿದ್ದು ಜನ ಹಿಡಿಶಾಪ ಹಾಕ್ತಿದ್ದಾರೆ. ವರುಣಾರ್ಭಟಕ್ಕೆ ಅವಾಂತರಗಳು ಮುಂದುವರಿದಿದೆ. ಕೊಡಗಿನಲ್ಲಿ ಜಲಸ್ಫೋಟದ (Cloud burst) ಬಳಿಕ ಭೂಕುಸಿತದ ಆತಂಕ ಹೆಚ್ಚಾಗಿದೆ. ಇದರ ನಡುವೆ ಇಂದೂ ಕೂಡ ರಾಜ್ಯದೆಲ್ಲೆಡೆ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲೂ ಇನ್ನೂ ನಾಲ್ಕು ದಿನ ಮಳೆಯಾಗಲಿದೆ.
ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯ ಅಬ್ಬರ ನಿಲ್ಲುತ್ತಿಲ್ಲ. ಸದಾ ಮೋಡ ಮುಸುಕಿದ ವಾತಾವರಣದಲ್ಲಿ ಬೆಂಗಳೂರು ಇದೆ. ಬೆಳಗ್ಗಿನ ವೇಳೆ ಕೊಂಚ ಸೂರ್ಯದೇವ ದರ್ಶನ ಕೊಟ್ರೆ ನಂತರ ಸಂಜೆ ವೇಳೆಗೆ ನಾಪತ್ತೆ. ಈಗ ಹವಾಮಾನ ಇಲಾಖೆ ಮತ್ತೊಂದು ಮುನ್ಸೂಚನೆ ಕೊಟ್ಟಿದ್ದು ಮುಂದಿನ 4 ದಿನ ನಗರದಲ್ಲಿ ಮಳೆ ಇರಲಿದೆ ಎಂದಿದೆ.
ಬೆಂಗಳೂರಿನಲ್ಲಿ ಇನ್ನೂ 4 ದಿನ ಮಳೆ
ಬೆಂಗಳೂರಿನಲ್ಲಿ ಇನ್ನೊಂದು ವಾರ ಬಿಸಿಲು ಬರೋದು ಅಷ್ಟಕ್ಕಷ್ಟೇ. ಮುಂದಿನ ನಾಲ್ಕು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆಯಾಗಲಿದೆ. ಮಳೆ ಆರ್ಭಟ ಜೋರು ಇರದಿದ್ದರೂ ಇಡೀ ದಿನ ಜಡಿಮಳೆ ಆಗಲಿದೆ ಅಂತಾ ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ
ಬೆಂಗಳೂರಿನಲ್ಲಿ ಆಗಾಗ್ಗೆ ಮಾತ್ರ ಸೂರ್ಯದೇವ ದರ್ಶನ ಕೊಡ್ತಿದ್ದಾನೆ. ಬೆಳಗ್ಗೆಯಿಂದಲೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದೆ. ಇಂದು ಮಾತ್ರವಲ್ಲದೇ ಮುಂದಿನ ನಾಲ್ಕು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಅಂತಾನೂ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಒಮ್ಮೆ ಮಗು ಬಿಟ್ಟು ಬಂದಿದ್ದಳು, ನಿನ್ನೆ ಮಹಡಿಯಿಂದ ಎಸೆದು ಕೊಂದಳು! ಪಾಪಿ ತಾಯಿಯ ಪಾಪದ ಕೃತ್ಯ ಬೆಳಕಿಗೆ
11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದೂ ಕೂಡ ವ್ಯಾಪಕ ಮಳೆಯಾಗುವ ಮುನ್ಸೂಚನೆ ಕೊಡಲಾಗಿದೆ. 11 ಜಿಲ್ಲೆಗಳಿಗೆ ಇಂದು ಕೂಡ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಗದಗ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಹಾವೇರಿಯಲ್ಲಿ ಭಾರೀ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ.
4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಕರಾವಳಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ವರುಣದೇವ ಬಿಡುವೇ ಕೊಟ್ಟಿಲ್ಲ. ಜನ ಮನೆಯಿಂದ ಹೊರಬರಲು ಪರದಾಡ್ತಿದ್ದಾರೆ. ಅದರ ನಡುವೆ ಇಂದು ಆರೆಂಜ್ ಅಲರ್ಟ್ ಕೂಡ ಕೊಡಲಾಗಿದೆ. ಮತ್ತೊಂದೆಡೆ 4 ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೊಡಗಿನಲ್ಲಿ ಭೂಕುಸಿತ, ಪ್ರವಾಹದ ಆತಂಕ
ಕೊಡಗಿನಲ್ಲಿ ವರುಣಾರ್ಭಟ ಜೋರಾಗಿದೆ. ಮಳೆ ಕೊಂಚನೂ ತಗ್ಗುತ್ತಿಲ್ಲ. ಕೊಡಗು-ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಜಲಸ್ಫೋಟದ ಆತಂಕ ಹೆಚ್ಚಾಗಿದೆ. ಗುಡ್ಡದ ನಡುವೆ ಜಲಸ್ಫೋಟವಾಗ್ತಿದ್ದು ಕೃತಕ ನದಿಗಳೇ ಸೃಷ್ಟಿಯಾಗ್ತಿದೆ. ಮಣ್ಣು ಜಾರಿ ಬಹುದೂರಕ್ಕೆ ಬಂದು ಬೀಳ್ತಿದೆ. ಜಲಸ್ಫೋಟದಿಂದ ಭೂಕುಸಿತ ಆತಂಕ ಶುರುವಾಗಿದೆ. ಇಂದು ಕೊಡಗಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ಎರಡು ತಿಂಗಳ ಹಿಂದಷ್ಟೇ ಹಾಕಿದ್ದ ಟಾರ್ ಮಳೆ ಪಾಲು! ಕಳಪೆ ಕಾಮಗಾರಿಗೆ ಜನರ ಆಕ್ರೋಶ
ಉತ್ತರ ಕನ್ನಡದಲ್ಲೂ ಭೂಕುಸಿತ
ಉತ್ತರ ಕನ್ನಡದಲ್ಲೂ ಮಳೆಯಾಗ್ತಿದೆ. ಕಳೆದ ಒಂದು ತಿಂಗಳಿನಿಂದ ಬಿಡುವಿರದೇ ಮಳೆಯಾಗ್ತಿದ್ದು, ಭೂಕುಸಿತ ಭೀತಿ ಕಾಡಲಾರಂಭಿಸಿದೆ. ಮಣ್ಣು ಸಡಿಲಗೊಂಡು ಬಹುತೇಕ ಕಡೆ ಭೂಕುಸಿತವಾಗ್ತಿದೆ. ರಾಜ್ಯದಲ್ಲಿ ಇನ್ನೂ ಒಂದು ವಾರ ಬಿಸಿಲು ಅನ್ನೋದು ದೂರದ ಮಾತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ