• Home
 • »
 • News
 • »
 • bengaluru-urban
 • »
 • KSR Railway Station : ಕೆಎಸ್‍ಆರ್ ರೈಲು ನಿಲ್ದಾಣದಲ್ಲಿ ಇನ್ಮುಂದೆ ಪ್ರಯಾಣಿಕರಿಗೆ ಕಚಗುಳಿ ಇಡಲಿವೆ ಪುಟ್ಟ ಮೀನುಗಳು

KSR Railway Station : ಕೆಎಸ್‍ಆರ್ ರೈಲು ನಿಲ್ದಾಣದಲ್ಲಿ ಇನ್ಮುಂದೆ ಪ್ರಯಾಣಿಕರಿಗೆ ಕಚಗುಳಿ ಇಡಲಿವೆ ಪುಟ್ಟ ಮೀನುಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Fish Foot Spa :ಕನಿಷ್ಠ 15ರಿಂದ ಗರಿಷ್ಠ30 ನಿಮಿಷಗಳಕಾಲ ಈ ಮಸಾಜ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಸುರಂಗ ಅಕ್ವೇರಿಯಂಗೆ ಪ್ರವೇಶ ಶುಲ್ಕ ಇರುವಂತೆಯೇ ಮಸಾಜ್‌ಗೂ ಕೇವಲ 25 ರೂಪಾಯಿ ನಿಗದಿಪಡಿಸಿದ್ದು, ಕೈಗೆಟಕುವ ದರದಲ್ಲಿಯೇ ರೈಲು ಪ್ರಯಾಣಿಕರಿಗೆ ಫಿಶ್ ಸ್ಪಾ ವ್ಯವಸ್ಥೆ ದೊರೆಯಲಿದೆ.

ಮುಂದೆ ಓದಿ ...
 • Share this:

  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(Krantivira Sangolli Rayanna) ರೈಲು ನಿಲ್ದಾಣಕ್ಕೆ(Railway station) ಬರುವ ಪ್ರಯಾಣಿಕರಿಗೆ (Passengers)ಸುದ್ದಿ ಸಿಕ್ಕಿದ್ದು ಇನ್ನು ಮುಂದೆ ನಿಮ್ಮ ಪಾದಗಳನ್ನು ಮೀನುಗಳು(Fish) ಮಸಾಜ್ ಮಾಡಲಿವೆ.ರೈಲಿಗಾಗಿ ಕಾಯುವ ಪ್ರಯಾಣಿಕರಿಗೆ ಕಚಗುಳಿ ಇಟ್ಟು , ಒತ್ತಡದಲ್ಲಿರುವ ಪ್ರಯಾಣಿಕರನ್ನು ರಿಲ್ಯಾಕ್ಸ್‌ ಮೂಡ್‌ ಗೆ ಮೀನುಗಳು ಕರೆದುಕೊಂಡು ಹೋಗಲಿವೆ. ಹೀಗಾಗಿ ರೈಲಿಗಾಗಿ ಕಾಯುತ್ತಾ ನಿಂತ ಪ್ರಯಾಣಿಕರು ಟೆನ್ಶನ್ ಮಾಡಿಕೊಳ್ಳುವ ಬದಲು ಮೀನುಗಳಿಂದ ಮಸಾಜ್ ಮಾಡಿಸಿಕೊಂಡು  ಫ್ರೀಯಾಗಿ ಇರಬಹುದು.


  ಬೆಂಗಳೂರಿನ KSR ರೈಲು ನಿಲ್ದಾಣದಲ್ಲಿ ಫಿಶ್ ಫೂಟ್ ಸ್ಪಾ


  ಬೆಂಗಳೂರಿನ ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ
  ಫಿಶ್ ಫೂಟ್ ಸ್ಪಾವನ್ನು ತೆರೆಯಲಾಗಿದ್ದು,ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಫಿಶ್ ಫೂಟ್ ಸ್ಪಾ ಉದ್ಘಾಟಿಸಿದ್ದಾರೆ. ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗೆ ತೆರಳುವ ಮಾರ್ಗದಲ್ಲಿ ಈಗಾಗಲೇ 30/30 ಅಡಿ ಜಾಗದಲ್ಲಿ ಚಿತ್ತಾಕರ್ಷಕ ಕಾರಂಜಿಯನ್ನು ನಿರ್ಮಿಸಲಾಗಿದೆ. ಅದರ ಮೇಲೆ “ಐ ಲವ್‌ ಕೆಎಸ್‌ಆರ್‌ ಬೆಂಗಳೂರು’ ಎಂದು ಕೆತ್ತಲಾಗಿದೆ. ಈಗ ಇದೇ ಜಾಗದಲ್ಲಿ ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮವು ಫಿಶ್‌ ಸ್ಪಾ ಶುರು ಮಾಡಿದೆ.


  25 ರೂಪಾಯಿಯಲ್ಲಿ ಸಿಗಲಿದೆ ಫಿಶ್ ಸ್ಪಾ


  ಹರ್ಬಲ್, ವೈನ್‌, ಚಾಕೊಲೇಟ್‌ ಅಂಶಗಳ ಪೆಡಿಕ್ಯೂರ್‌ ಓರಿಫ್ಲೇಮ್, ಮ್ಯಾಕ್‌, ವಿಎಲ್‌ಸಿಸಿ, ಓರ್ಲಿ ಸೇರಿ ಉತ್ತಮ ಗುಣಮಟ್ಟದ ಬ್ರ್ಯಾಂಡ್ ನ‌ ಪೆಡಿಕ್ಯೂರ್‌ ಪಡಿಸಿಕೊಳ್ಳಬೇಕು ಅಂದ್ರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಕೊಂಚ ಕಡಿಮೆ ಬೆಲೆಯಲ್ಲಿ ಪೆಡಿಕ್ಯೂರ್ ಮಾಡಿಸಿಕೊಳ್ಳಬೇಕು ಅಂದ್ರೆ ಅದಕ್ಕೆ ಫಿಶ್ ಸ್ಪಾ ಬೆಸ್ಟ್. ಆದ್ರೆ ಎಲ್ಲ ಪ್ರಕಾರದ ಮೀನುಗಳಿಂದ ಮಸಾಜ್ ಮಾಡಿಸಿಕೊಳ್ಳಲು ಆಗುವುದಿಲ್ಲ.. ಹೀಗಾಗಿ ಕಡಿಮೆ ವೆಚ್ಚದಲ್ಲಿ ದೇಶಿಯವಾಗಿ ಸಿಗುವ ಮೀನುಗಳಿಂದ ಪೆಡಿಕ್ಯೂರ್ ಮಾಡಿಸಿಕೊಳ್ಳಬಹುದು


  ಇದನ್ನೂ ಓದಿ :ಮೆಜೆಸ್ಟಿಕ್​ನಿಂದ ಕೇವಲ 10 ರೂ.ಗೆ ಬೆಂಗಳೂರು ಏರ್​ಪೋರ್ಟ್​ಗೆ ರೈಲು ಸಂಚಾರ ಆರಂಭ


  ಇನ್ನು ಏಕಕಾಲದಲ್ಲಿ ಆರರಿಂದ ಎಂಟು ಜನ ಫಿಶ್ ಸ್ಪಾ ಎಂಜಾಯ್ ಮಾಡಬಹುದಾಗಿದೆ.ಕನಿಷ್ಠ 15ರಿಂದ ಗರಿಷ್ಠ30 ನಿಮಿಷಗಳಕಾಲ ಈ ಮಸಾಜ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಸುರಂಗ ಅಕ್ವೇರಿಯಂಗೆ ಪ್ರವೇಶ ಶುಲ್ಕ ಇರುವಂತೆಯೇ ಮಸಾಜ್‌ಗೂ ಕೇವಲ 25 ರೂಪಾಯಿ ನಿಗದಿಪಡಿಸಿದ್ದು, ಕೈಗೆಟಕುವ ದರದಲ್ಲಿಯೇ ರೈಲು ಪ್ರಯಾಣಿಕರಿಗೆ ಫಿಶ್ ಸ್ಪಾ ವ್ಯವಸ್ಥೆ ದೊರೆಯಲಿದೆ.


  KSR ರೈಲು ನಿಲ್ದಾಣದಲ್ಲಿ ಇದೆ ದೇಶದ ಮೊದಲ ಸುರಂಗ ಮತ್ಸ್ಯಗಾರ


  ಜುಲೈನಲ್ಲಿ ದೇಶದ ಮೊದಲ ಸುರಂಗ ಮತ್ಸ್ಯಾಗಾರ KSR ರೈಲು ನಿಲ್ದಾಣದಲ್ಲಿ ಅನಾವರಣ ಮಾಡಲಾಗಿತ್ತು... ಅಮೆಜಾನ್‌ ನದಿ ಕಲ್ಪನೆಯಡಿ 12 ಅಡಿ ಉದ್ದದ ಈ ಸುರಂಗ ಮತ್ಸ್ಯಾಗಾರ ‌ ರೂಪಿಸಲಾಗಿದ್ದು, ಸುರಂಗದೊಳಗೆ ಸಾಗುತ್ತಿದ್ದರೆ, ಅಮೆಜಾನ್‌ ನದಿಯೊಳಗೆ ಸಾಗುತ್ತಿರುವ ಮೀನುಗಳನ್ನು ಪ್ರತ್ಯಕ್ಷ ‌ನೋಡುತ್ತಿರುವಂತೆ ಭಾಸವಾಗುತ್ತದೆ. ಸಾಗರದಲ್ಲಿ ಕಾಣಸಿಗುವ ಮತ್ಸ್ಯ ಪ್ರಭೇದಗಳು, ಸಮುದ್ರ ಜೀವಿಗಳ ಮಾದರಿಗಳು ಇಲ್ಲಿ ಇವೆ. ಇನ್ನು ಇದೆ ಸುರಂಗ ಅಕ್ವೇರಿಯಂ ಮಾಡಿದ್ದ ಎಚ್‌ಎನ್‌ಐ ಎಂಟರ್‌ಪ್ರೈಸಸ್ ಫಿಶ್ ಸ್ಪಾ ನಿರ್ವಹಣೆಯ ಮಾಡುತ್ತಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ, ಅಕ್ವೇರಿಯಂ, ಕಾರಂಜಿ, ಫಿಶ್‌ ಸ್ಪಾ ಜೊತೆಗೆ ರೈಲು ಆರ್ಕೆಡ್‌ನ‌ಂತಹ ಹಲವು ವಿನೂತನ ಪ್ರಯೋಗಗಳನ್ನು ಮಾಡಲು ಎಚ್‌ಎನ್‌ಐ ಎಂಟರ್‌ಪ್ರೈಸಸ್ ಸಿದ್ಧತೆ ಮಾಡಿಕೊಂಡಿದೆ.


  ಇದನ್ನೂ ಓದಿ :ಇಲ್ಲಿಂದ ಯಾವ ಕ್ರಿಮಿನಲ್ ಕೂಡಾ ತಪ್ಪಿಸಿಕೊಳ್ಳೋದು ಅಸಾಧ್ಯ, ಬೆಂಗ್ಳೂರಲ್ಲಿ ರೆಡಿಯಾಗ್ತಿದೆ ಹೈಟೆಕ್ ಸೆಕ್ಯುರಿಟಿ ಸಿಸ್ಟಮ್!


  ಏನಿದು ಫಿಶ್ ಸ್ಪಾ...?


  ಪಾದಗಳನ್ನು ನೀರಿನಲ್ಲಿ ಇಳಿಬಿಟ್ಟು ಕೂರುತ್ತಿದ್ದಂತೆ ಬುಳುಬುಳು ಬಾಯಿ ಬಿಡುತ್ತಾಬರುವಮೀನುಗಳು, ಒಡೆದ ಪಾದದ ಚರ್ಮವನ್ನು ತಿಂದು ಹಾಕುತ್ತವೆ. ಮೊಣಕಾಲಿನವರೆಗೆ ಕಾಲುಗಳನ್ನು ತೊಳೆದುಕೊಂಡ ನಂತರ ಪುಟ್ಟಪುಟ್ಟ ಮೀನುಗಳು ತುಂಬಿದ ನೀರಿನ ತೊಟ್ಟಿಯಲ್ಲಿ ಇಳಿಬಿಟ್ಟರೆ ಸಾಕು. 15 ನಿಮಿಷದಲ್ಲಿ ಬಿರುಕು ಪಾದವನ್ನು ನಯಗೊಳಿಸಿರುತ್ತದೆ. ನೀರಿನಲ್ಲಿ ನೆನೆಯುತ್ತಾ ಪಾದ ಮೃದುವಾಗುತ್ತಾ ಹೋದಂತೆ ಮೀನು ಮೇಲ್ಭಾಗದ ಚರ್ಮವನ್ನು ತಿಂದು ಹಾಕುತ್ತವೆ

  Published by:ranjumbkgowda1 ranjumbkgowda1
  First published: