EV Charging Stations Bengaluru: ಬೆಂಗಳೂರಲ್ಲಿ ಎಲ್ಲೆಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ಗಳಿವೆ? ಹೀಗೆ ಹುಡುಕಿ
ಎಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಶನ್ ಇದೆ? ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವುದು ಹೇಗೆ? ನೀವೇ ಎಲೆಕ್ಟ್ರಿಕ್ ವಾಹನ ಉದ್ಯಮ ಆರಂಭ ಮಾಡುವುದು ಹೇಗೆ ಬೇರೆ ವಾಹನ ಖರೀದಿ ಮಾಡುವುದಕ್ಕಿಂತ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದರೆ ಹೇಗೆ ಲಾಭವಾಗುತ್ತದೆ? ಇದನ್ನು ತಿಳಿಯಲು ಲೋಕಾರ್ಪಣೆಯಾಗಿದೆ ಹೊಸ ಪೋರ್ಟಲ್!
ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಕಾಲ ಇದು! ಪೆಟ್ರೋಲ್ ಡೀಸೆಲ್ ಬಿಟ್ಬಿಡಿ, ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿ (Electric Vehicle) ಅನ್ನೋ ಈ ಕಾಲಮಾನದಲ್ಲಿ ಸರ್ಕಾರಗಳೂ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಹ ಬೆಂಗಳೂರಿನ ನಾಗರಿಕರಿಗೆ ಎಂದೇ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಬೆಸ್ಕಾಂ (BESCOM) ಸಾರ್ವಜನಿಕರ ಬಳಕೆಗಾಗಿ ವಿದ್ಯುತ್ ಚಾಲಿತ ವಾಹನ ಬಳಕೆ ಕುರಿತ ಸಂಪೂರ್ಣ ಮಾಹಿತಿ ಒಳಗೊಂಡ ಪೋರ್ಟಲ್ ಲೋಕಾರ್ಪಣೆ (Electric Vehicle Portal) ಮಾಡಿದೆ. ಈ ಪೋರ್ಟಲ್ ಮೂಲಕ ನೀವು ಸಹ ಅತ್ಯಂತ ಸರಳ ಮತ್ತು ಸುಲಭವಾಗಿ ಬೆಂಗಳೂರಿಗೆ ಸಂಬಂಧಿಸಿ ಎಲೆಕ್ಟ್ರಿಕ್ ವಾಹನಗಳ ಸಮಗ್ರ ಮಾಹಿತಿ (EV Charging Stations In Bengaluru) ಪಡೆಯಬಹುದು.
ಅಂದರೆ ಎಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಶನ್ ಇದೆ? ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವುದು ಹೇಗೆ? ನೀವೇ ಎಲೆಕ್ಟ್ರಿಕ್ ವಾಹನ ಉದ್ಯಮ ಆರಂಭ ಮಾಡುವುದು ಹೇಗೆ ಬೇರೆ ವಾಹನ ಖರೀದಿ ಮಾಡುವುದಕ್ಕಿಂತ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದರೆ ಹೇಗೆ ಲಾಭವಾಗುತ್ತದೆ? ಈ ಎಲ್ಲ ಪ್ರಶ್ನೆಗಳಿಗೂ ಬೆಂಗಳೂರಿನ ನಾಗರಿಕರು ಅತ್ಯಂತ ಸುಲಭವಾಗಿ ಈ ಪೋರ್ಟಲ್ನಲ್ಲಿ ಮಾಹಿತಿ ಪಡೆಯಬಹುದು.
ಇತರ ಪ್ರದೇಶಗಳ ಜನರೂ ಪೋರ್ಟಲ್ ಬಳಸಿ ಅಲ್ಲದೇ ಬೆಂಗಳೂರು ಬಿಟ್ಟು ಕರ್ನಾಟಕದ ಬೇರೆ ಊರುಗಳ ಜನರು ಸಹ ಈ ಪೋರ್ಟಲ್ ಮೂಲಕ ಎಲೆಕ್ಟ್ರಿಕ್ ವಾಹನಗಳ ಕುರಿತು ಎಲ್ಲ ಮಾಹಿತಿ ಪಡೆದುಕೊಳ್ಳಬಹುದು.
ಪೋರ್ಟಲ್ ವೀಕ್ಷಿಸಬೇಕೇ? ಇಲ್ಲಿದೆ ವಿಳಾಸ ಎಲೆಕ್ಟ್ರಿಕ್ ವಾಹನಗಳ ಕುರಿತು ಜನರಲ್ಲಿರುವ ಗೊಂದಲವನ್ನು ಮತ್ತು ಆತಂಕವನ್ನು ದೂರ ಮಾಡುವ ಉದ್ದೇಶದಿಂದ ಈ ಪೋರ್ಟಲ್ ರಚಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡಲು ಕರ್ನಾಟಕ ಸರ್ಕಾರದ ಒದಗಿಸುವ ಬೆಂಬಲ ಧನ, ಚಾರ್ಜಿಂಗ್ ಸ್ಟೇಷನ್ ಎಲ್ಲೆಲ್ಲಿ ಸಿಗುತ್ತೆ? ಎಂಬ ಮಾಹಿತಿಯನ್ನು ಸುಲಭವಾಗಿ ಇಲ್ಲಿ ಪಡೆಯಬಹುದು. ಈ ಜಾಲತಾಣ ಎಲೆಕ್ಟ್ರಿಕ್ ವಾಹನಗಳ ಕುರಿತು ಒನ್ ಸ್ಟಾಪ್ ಸೈಟ್ ಆಗಿ ಕಾರ್ಯ ನಿರ್ವಹಿಸಲಿದೆ. ಈ ಜಾಲತಾಣವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಏನೆಲ್ಲ ಮತ್ತು ಯಾರೆಲ್ಲ ಮಾಹಿತಿ ಪಡೆಯಬಹುದು?
1. ಎಲೆಕ್ಟ್ರಿಕ್ ವಾಹನ ಖರೀದಿ ಮಾಡಬಯಸುವವರು
2. ಎಲೆಕ್ಟ್ರಿಕ್ ವಾಹನ ಉದ್ಯಮ ಆರಂಭಿಸಬಯಸುವವರು
3. ಬೆಂಗಳೂರಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಎಲ್ಲಿದೆ? ಎಲ್ಲಿ ಚಾರ್ಜ್ ಹಾಕಬೇಕು ಎಂದು ತಲೆಬಿಸಿ ಮಾಡಿಕೊಂಡವರು ಆರಾಮವಾಗಿ ಈ ಪೋರ್ಟಲ್ನಲ್ಲಿ ಚಾರ್ಜಿಂಗ್ ಸ್ಟೇಶನ್ ವಿಳಾಸ ಕಂಡುಹಿಡಿಯಬಹುದು.
4. ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದರೆ ಏನು ಉಪಯೋಗ ಎಂಬ ಪ್ರಶ್ನೆ ನಿಮ್ಮಲಿದೆಯೇ? ಈ ಹೊಸ ಪೋರ್ಟಲ್ ವೀಕ್ಷಿಸಿ.
ಈ ಪೋರ್ಟಲ್ ರೂಪಿಸಿದವರು ಯಾರು? ನೀತಿ ಆಯೋಗ, ಕರ್ನಾಟಕ ಸರ್ಕಾರ ಮತ್ತು ಬ್ರಿಟನ್ ಸರ್ಕಾರ ಜಂಟಿ ಸಹಯೋಗದಲ್ಲಿ ನಿರ್ಮಿಸಲಾದ ಎಲೆಕ್ಟ್ರಿಕ್ ವಾಹನ ಜಾಗೃತಿ ಪೋರ್ಟಲ್ ರಚಿಸಲಾಗಿದೆ. ಇಂದಷ್ಟೇ (ಜೂನ್ 9, 2022) ಕರ್ನಾಟಕ ಇಂಧನ ಸಚಿವ ಸುನಿಲ್ ಕುಮಾರ್ ಅವರು ಒಂದೇ ಕ್ಲಿಕ್ನಲ್ಲಿ ಎಲೆಕ್ಟ್ರಿಕ್ ವಾಹನಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ.