ಅಲ್ಲಿ ನೋಡಿದ್ರೂ ಅಪ್ಪು ಇಲ್ಲಿ ನೋಡಿದ್ರೂ ಅಪ್ಪು…ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುಟ್ಟ ಪುನೀತ್ ರಾಜ್ಕುಮಾರ್ (Puneeth Rajkumar) ನನ್ನ ಹರಿ ಎಲ್ಲೆಲ್ಲೂ ಇರುವನು ಅಂದಂತೆ ಲಾಲ್ಬಾಗ್ನಲ್ಲಿ ಈಗ ಎಲ್ಲೆಲ್ಲೂ ಅಪ್ಪು! ಹೌದು ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುತ್ತಿರೊ ಫಲಪುಷ್ಪ ಪ್ರದರ್ಶನದಲ್ಲಿ 500 ಕ್ಕೂ ಹೆಚ್ಚು ಹೂಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅರಳಿ ನಗ್ತಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನಲ್ಲಿ (Bengaluru Lalbagh) ಫಲ ಪುಷ್ಪಪ್ರದರ್ಶನ ಮಾಡಲಾಗ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್ಕುಮಾರ್ (Dr.Rajkumar) ಥೀಮ್ನಲ್ಲಿ ಫಲಪುಷ್ಪ ಪ್ರದರ್ಶನ ಮಾಡಲಾಗ್ತಿದೆ.
ಒಟ್ಟು 500 ಬಗೆಯ ವಿವಿಧ ಜಾತಿಯ ಹೂವುಗಳಿಂದ ಅರಳಿದೆ ಹೂವಿನ ಲೋಕ. ಆಗಸ್ಟ್ 15 ರವರೆಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿ ಶಾಲಾ ಮಕ್ಕಳ ಆಗಮಿಸುವ ನಿರೀಕ್ಷೆಯಿದೆ.
ಸಮಯ, ಪ್ರವೇಶ ದರ ವಿವರ ಇಲ್ಲಿದೆ
ಪ್ರತಿ ದಿನ ಬೆಳಗ್ಗೆ 8 ರಿಂದ ಸಂಜೆ 6:30ರ ವರೆಗೆ ಫ್ಲವರ್ ಶೋ ಓಪನ್ ಇರಲಿದೆ. 1 ರಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ವಯಸ್ಕರಿಗೆ ರಜಾದಿನಗಳಲ್ಲಿ 100, ರೂ., ಸಾಮಾನ್ಯ ದಿನಗಳಲ್ಲಿ 80 ರೂ. ಪ್ರವೇಶದರವಿದೆ.
ಲಾಲ್ಬಾಗ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಗಾಜನೂರಿನಲ್ಲಿ ಅಣ್ಣಾವ್ರು ಹುಟ್ಟಿದ ಮಾದರಿಯಲ್ಲಿ ಫ್ಲವರ್ ಶೋ ನಿರ್ಮಾಣ ಮಾಡಲಾಗಿದೆ. 30 ಲಕ್ಷ ವೆಚ್ಚದಲ್ಲಿ ಡಾ.ರಾಜ್ ಕುಮಾರ್ ನಟನೆಯ ಬೇಡರ ಕಣ್ಣಪ್ಪ ಚಿತ್ರದ ವಾಲ್ ನಿರ್ಮಾಣ ಮಾಡಲಾಗಿದೆ. ನವೆಂಬರ್ 1 ರಂದು ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಕೊಡಲಿದ್ದೇವೆ ಅಂತಾ ಅಧಿಕೃತವಾಗಿ ಘೋಷಿಸಿದ್ರು.
ನೀವೂ ಬೆಂಗ್ಳೂರಿನ ಲಾಲ್ಬಾಗ್ ಬಂದು ಅಪ್ಪುವನ್ನು ಕಣ್ತುಂಬಿಸಿಕೊಳ್ಬಹುದು.