Bengaluru Lalbagh Flower Show: ಲಾಲ್‌‌ಬಾಗಲ್ಲಿ ನಮ್ಮ ಅಪ್ಪು! ನೀವೇ ವಿಡಿಯೋ ನೋಡಿ!

ಅಪ್ಪು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ ಅಂತನಿಸೋದು ಸುಳ್ಳಲ್ಲ, ಹಾ..ಸಸ್ಯಕಾಶಿ ಲಾಲ್​ಬಾಗ್ ಫ್ಲವರ್ ಶೋಗೆ ಮರೀದೇ ಬರ್ತೀರಲ್ಲ..

ಪುನೀತ್

ಪುನೀತ್ ರಾಜ್​ಕುಮಾರ್​ಗೆ ಪುಷ್ಪನಮನ

  • Share this:
    ಅಲ್ಲಿ ನೋಡಿದ್ರೂ ಅಪ್ಪು ಇಲ್ಲಿ ನೋಡಿದ್ರೂ ಅಪ್ಪು…ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುಟ್ಟ ಪುನೀತ್ ರಾಜ್​ಕುಮಾರ್ (Puneeth Rajkumar) ನನ್ನ ಹರಿ ಎಲ್ಲೆಲ್ಲೂ ಇರುವನು ಅಂದಂತೆ ಲಾಲ್​ಬಾಗ್​ನಲ್ಲಿ ಈಗ ಎಲ್ಲೆಲ್ಲೂ ಅಪ್ಪು! ಹೌದು ಬೆಂಗಳೂರಿನ ಲಾಲ್​ಬಾಗ್​ನಲ್ಲಿ ನಡೆಯುತ್ತಿರೊ ಫಲಪುಷ್ಪ ಪ್ರದರ್ಶನದಲ್ಲಿ 500 ಕ್ಕೂ ಹೆಚ್ಚು ಹೂಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅರಳಿ ನಗ್ತಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ (Bengaluru Lalbagh) ಫಲ ಪುಷ್ಪಪ್ರದರ್ಶನ ಮಾಡಲಾಗ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್​ಕುಮಾರ್ (Dr.Rajkumar)​ ಥೀಮ್​ನಲ್ಲಿ ಫಲಪುಷ್ಪ ಪ್ರದರ್ಶನ ಮಾಡಲಾಗ್ತಿದೆ.

    ಒಟ್ಟು 500 ಬಗೆಯ ವಿವಿಧ ಜಾತಿಯ ಹೂವುಗಳಿಂದ ಅರಳಿದೆ ಹೂವಿನ ಲೋಕ. ಆಗಸ್ಟ್ 15 ರವರೆಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿ ಶಾಲಾ ಮಕ್ಕಳ ಆಗಮಿಸುವ ನಿರೀಕ್ಷೆಯಿದೆ.

    ಸಮಯ, ಪ್ರವೇಶ ದರ ವಿವರ ಇಲ್ಲಿದೆ
    ಪ್ರತಿ ದಿನ ಬೆಳಗ್ಗೆ 8 ರಿಂದ ಸಂಜೆ 6:30ರ ವರೆಗೆ ಫ್ಲವರ್ ಶೋ ಓಪನ್ ಇರಲಿದೆ. 1 ರಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ವಯಸ್ಕರಿಗೆ ರಜಾದಿನಗಳಲ್ಲಿ 100, ರೂ., ಸಾಮಾನ್ಯ ದಿನಗಳಲ್ಲಿ 80 ರೂ. ಪ್ರವೇಶದರವಿದೆ.

    Bengaluru Lalbagh
    ಲಾಲ್​ಬಾಗ್​ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಇದನ್ನೂ ಓದಿ: Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

    ಗಾಜನೂರಿನಲ್ಲಿ ಅಣ್ಣಾವ್ರು ಹುಟ್ಟಿದ ಮಾದರಿಯಲ್ಲಿ ಫ್ಲವರ್ ಶೋ ನಿರ್ಮಾಣ ಮಾಡಲಾಗಿದೆ. 30 ಲಕ್ಷ ವೆಚ್ಚದಲ್ಲಿ ಡಾ.ರಾಜ್ ಕುಮಾರ್ ನಟನೆಯ ಬೇಡರ ಕಣ್ಣಪ್ಪ ಚಿತ್ರದ ವಾಲ್ ನಿರ್ಮಾಣ ಮಾಡಲಾಗಿದೆ. ನವೆಂಬರ್ 1 ರಂದು ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಕೊಡಲಿದ್ದೇವೆ ಅಂತಾ ಅಧಿಕೃತವಾಗಿ ಘೋಷಿಸಿದ್ರು.
    ನೀವೂ ಬೆಂಗ್ಳೂರಿನ ಲಾಲ್​ಬಾಗ್ ಬಂದು ಅಪ್ಪುವನ್ನು ಕಣ್ತುಂಬಿಸಿಕೊಳ್ಬಹುದು.

    ಇದನ್ನೂ ಓದಿ: Bengaluru Holige: ಹಬ್ಬ ಮಿಸ್ಸಾದ್ರೂ ಹೋಳಿಗೆ ಮಿಸ್ ಮಾಡ್ಬೇಡಿ! ಈ ಹೋಳಿಗೆ ರುಚಿ ಬೇರೆಲ್ಲೂ ಸಿಗಲ್ಲ!

    ಅಪ್ಪು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ ಅಂತನಿಸೋದು ಸುಳ್ಳಲ್ಲ, ಹಾ..ಸಸ್ಯಕಾಶಿ ಲಾಲ್​ಬಾಗ್ ಫ್ಲವರ್ ಶೋಗೆ ಮರೀದೇ ಬರ್ತೀರಲ್ಲ
    Published by:guruganesh bhat
    First published: