Bengaluru: ನೀವು ಬೆಂಗಳೂರಿಗೆ ಸುತ್ತಾಡೋದಕ್ಕೆ ಪ್ಲ್ಯಾನ್ ಮಾಡ್ತಾ ಇದ್ರೆ ಈ ಸ್ಥಳಗಳನ್ನು ಮಾತ್ರ ಮಿಸ್ ಮಾಡ್ಬೇಡಿ

ಬೆಂಗಳೂರಿನ ಸುತ್ತಮುತ್ತ ಎಷ್ಟೊಂದು ಪ್ರೇಕ್ಷಣೀಯ ಸ್ಥಳಗಳಿವೆ ಎಂದರೆ ವರ್ಷದ ಎಲ್ಲಾ ವಾರಾಂತ್ಯಗಳನ್ನು ಸುತ್ತಾಡಿದರೂ, ಇನ್ನೂ ನೋಡಬೇಕಾದ ಸ್ಥಳಗಳು ಬಾಕಿ ಇರುತ್ತವೆ. ಭಾರತದ ಸಿಲಿಕಾನ್ ವ್ಯಾಲಿ ಅಂತಾನೆ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ನೀವು ಮಿಸ್ ಮಾಡದೆ ನೋಡಲೇಬೇಕಾದ ಕೆಲವು ಸ್ಥಳಗಳಿವೆ. ಅವುಗಳಾವುವು ಇಲ್ಲಿದೆ ನೋಡಿ

ನಂದಿ ಬೆಟ್ಟ

ನಂದಿ ಬೆಟ್ಟ

  • Share this:
ಪ್ರಪಂಚದಾದ್ಯಂತದ ಐಟಿ ಕಂಪನಿಗಳಿಗೆ ಬೆಂಗಳೂರು (Bengaluru) ನಗರ ಅತ್ಯಂತ ಅಚ್ಚುಮೆಚ್ಚಿನ ತಾಣವಾಗಿರುವುದರ ಜೊತೆಗೆ, ಪ್ರವಾಸಿಗರಲ್ಲಿಯೂ (Tourists) ಸಹ ತುಂಬಾನೇ ಜನಪ್ರಿಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಮಹಾ ನಗರವು ಪ್ರವಾಸಿಗರಿಗೆ ಪ್ರಾಚೀನ ಪರಂಪರೆ ಮತ್ತು ಆಧುನಿಕತೆಯ ಒಂದು ಮಿಶ್ರಣವನ್ನು ಒದಗಿಸುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಬೆಂಗಳೂರಿನ ವಾತಾವರಣ ತುಂಬಾನೇ ಹಿತಕರವಾಗಿದೆ. ನೀವು ಸ್ನೇಹಿತರು (Friends) ಅಥವಾ ಕುಟುಂಬದೊಂದಿಗೆ ರಜಾ ದಿನಗಳನ್ನು ಯೋಜಿಸುತ್ತಿದ್ದರೆ, ಬೆಂಗಳೂರು ನಗರಕ್ಕೆ ಭೇಟಿ ನೀಡುವುದು ಉತ್ತಮ ಆಯ್ಕೆಯಾಗಬಹುದು. ಬೆಂಗಳೂರಿನ ಸುತ್ತಮುತ್ತ ಎಷ್ಟೊಂದು ಪ್ರೇಕ್ಷಣೀಯ ಸ್ಥಳಗಳಿವೆ ಎಂದರೆ ವರ್ಷದ ಎಲ್ಲಾ ವಾರಾಂತ್ಯಗಳನ್ನು (Weekends) ಸುತ್ತಾಡಿದರೂ, ಇನ್ನೂ ನೋಡಬೇಕಾದ ಸ್ಥಳಗಳು (Places) ಬಾಕಿ ಇರುತ್ತವೆ.

ಭಾರತದ ಸಿಲಿಕಾನ್ ವ್ಯಾಲಿ ಅಂತಾನೆ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ನೀವು ಮಿಸ್ ಮಾಡದೆ ನೋಡಲೇಬೇಕಾದ ಕೆಲವು ಸ್ಥಳಗಳಿವೆ.

1. ಹಲಸೂರು ಕೆರೆ

ನಗರದಲ್ಲಿನ ಟ್ರಾಫಿಕ್ ಕಿರಿಕಿರಿಯಿಂದ ದೂರವಿರುವ ಹಲಸೂರು ಸರೋವರವು ಶಾಂತತೆಯಿಂದ ವಿಶ್ರಮಿಸಲು ಒಂದು ಪರಿಪೂರ್ಣ ಸ್ಥಳವಾಗಿದೆ. ಈ ಸರೋವರವು ಹಲವಾರು ಚಿಕ್ಕ ಪುಟ್ಟ ದ್ವೀಪಗಳನ್ನು ಸಹ ಹೊಂದಿದೆ, ಇವುಗಳು ಈ ಕೆರೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಂದರ್ಶಕರು ಈ ಕೆರೆಯಲ್ಲಿ ದೋಣಿಯಲ್ಲಿ ಕೂತು ಪರಿಸರವನ್ನು ಆನಂದಿಸಬಹುದು. ಇಷ್ಟೇ ಅಲ್ಲದೆ ಕೆರೆಯಲ್ಲಿರುವ ಪುಟ್ಟ ಪುಟ್ಟ ದ್ವೀಪಗಳಿಗೂ ದೋಣಿಯಲ್ಲಿ ಹೋಗಿ ದ್ವೀಪದಲ್ಲಿ ವಾಕಿಂಗ್ ಮಾಡಿ ಬರಬಹುದು.

2. ನಂದಿ ಬೆಟ್ಟ

ನೀವು ಪರಿಪೂರ್ಣವಾದ ಇನ್‌ಸ್ಟಾಗ್ರಾಮ್ ತಾಣವನ್ನು ಹುಡುಕುತ್ತಿದ್ದರೆ, ನಂದಿ ಬೆಟ್ಟ ಸೂಕ್ತವಾದ ತಾಣವಾಗಿದೆ. ಅಲ್ಲಿರುವ ತಿರುಚುವ ರಸ್ತೆಗಳು ಮತ್ತು ಬಿಗಿಯಾದ ತಿರುವುಗಳ ಮೂಲಕ ಆ ಶಿಖರಕ್ಕೆ ಹೋಗುವುದೇ ಒಂದು ಮಜಾ ಆದರೆ, ಅಲ್ಲಿ ಬೆಟ್ಟದ ಮೇಲೆ ಹೋಗಿ ವಿಶ್ರಮಿಸುವುದು ಇನ್ನೊಂದು ಬೇರೆ ರೀತಿಯ ಮಜಾವನ್ನು ನೀಡುತ್ತದೆ ಎಂದು ಹೇಳಬಹುದು. ನೀವು ಶಿಖರವನ್ನು ತಲುಪಿದಾಗ, ನಂದಿಯ ಶಿಲ್ಪವಿರುವ ಯೋಗ ನಂದೀಶ್ವರ ದೇವಾಲಯವಿದೆ. ನಂದಿ ಬೆಟ್ಟಕ್ಕೆ ಬಂದು ನೀವು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದನ್ನು ತಪ್ಪಿಸಿಕೊಳ್ಳಲೇಬಾರದು.

do-not-miss-these-places-if-you-are-planning-to-visit-bangalore-stg-asp
ನಂದಿ ಬೆಟ್ಟ


ಇದನ್ನೂ ಓದಿ:  National Park: ಬೆಂಗಳೂರಿಗೆ ಹತ್ತಿರವಿರುವ ನ್ಯಾಷನಲ್ ಪಾರ್ಕ್‍ಗಳಿವು, ನೀವೊಮ್ಮೆ ವಿಸಿಟ್​ ಮಾಡಿ

3. ದ್ರಾಕ್ಷಿ ತೋಟದ ಪ್ರವಾಸ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಲವಾರು ಮನ ತಣಿಸುವ ದ್ರಾಕ್ಷಿ ತೋಟಗಳಿಗೆ ನೆಲೆಯಾಗಿವೆ. ಈ ದ್ರಾಕ್ಷಿ ತೋಟಗಳಿಗೆ ಒಂದು ದಿನದ ಪ್ರವಾಸವನ್ನು ನೀವು ಯೋಜಿಸುವ ಮೂಲಕ ಮತ್ತು ವೈನ್ ತಯಾರಿಕೆಯ ಕರಕುಶಲತೆಯ ಬಗ್ಗೆ ಕಲಿಯುವ ಮೂಲಕ ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ನೀವು ವೈನ್ ರುಚಿಯ ಸೆಷನ್ ನಲ್ಲಿಯೂ ಭಾಗವಹಿಸಬಹುದು, ಈ ಸ್ಥಳಗಳಲ್ಲಿ ಕೆಲವು ದ್ರಾಕ್ಷಿ-ಸ್ಟಾಂಪಿಂಗ್ ನಂತಹ ಚಟುವಟಿಕೆಗಳನ್ನು ಸಹ ಒದಗಿಸುತ್ತವೆ.

4. ದಿ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್

ಇದೊಂದುರೋಮಾಂಚಕ ಭಾರತೀಯ ಸಂಗೀತ ಉದ್ಯಮಕ್ಕೆ ಮೀಸಲಾದ ವಸ್ತುಸಂಗ್ರಹಾಲಯವಾಗಿದೆ. ನಾಲ್ಕು ಮಹಡಿಗಳ ಈ ಮ್ಯೂಸಿಯಂನಲ್ಲಿ ಎಂಟು ವಿಷಯಾಧಾರಿತ ಕೊಠಡಿಗಳು, ಧ್ವನಿ ಉದ್ಯಾನ, ಕೆಫೆ, ಸಂಗೀತ ಶಿಲ್ಪಗಳು ಮತ್ತು ಸಂಗೀತ ಪ್ರಿಯರಿಗಾಗಿ ಅಧ್ಯಯನ ಕೇಂದ್ರವಿದೆ. ಸಂದರ್ಶಕರು ರೆಕಾರ್ಡ್ ಮಾಡಬಹುದು, ವಾದ್ಯಗಳನ್ನು ನುಡಿಸಬಹುದು ಮತ್ತು ತಮ್ಮದೇ ಆದ ಹಾಡುಗಳನ್ನು ಸಹ ಹಾಡಬಹುದು.

5. ವಂಡರ್ಲಾ

ಬೆಂಗಳೂರಿನ ಈ ಪ್ರಸಿದ್ಧ ಅಮ್ಯೂಸ್ಮೆಂಟ್ ಪಾರ್ಕ್ ನಿಮ್ಮ ಪ್ರೀತಿಪಾತ್ರರೊಂದಿಗೆ ಆನಂದಿಸಲು ಸೂಕ್ತವಾದ ಸ್ಥಳವಾಗಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗಿನ ಪ್ರವಾಸಕ್ಕೆ ಇದು ನಿಸ್ಸಂದೇಹವಾಗಿ ಅತ್ಯುತ್ತಮ ಆಯ್ಕೆಯಾಗಿದೆ. 50ಕ್ಕೂ ಹೆಚ್ಚು ರೈಡ್ ಗಳು ಮತ್ತು ಸಂಗೀತ ಕಾರಂಜಿಗಳು, ಲೇಸರ್ ಪ್ರದರ್ಶನಗಳು ಮತ್ತು ವರ್ಚುವಲ್ ರಿಯಾಲಿಟಿ ಶೋ ಗಳಂತಹ ಇತರ ಆಕರ್ಷಣೆಗಳಿವೆ.

do-not-miss-these-places-if-you-are-planning-to-visit-bangalore-stg-asp
ದೋಸೆ


ಇದನ್ನೂ ಓದಿ: Water Falls: ಕರ್ನಾಟಕದಲ್ಲಿ ಒಮ್ಮೆಯಾದರೂ ನೀವು ನೋಡಲೇಬೇಕಾದ ಅದ್ಭುತ ಜಲಪಾತಗಳಿವು

ನೀವು ಬೆಂಗಳೂರಿನಲ್ಲಿ ಈ ಎಲ್ಲಾ ಸ್ಥಳಗಳಿಗೆ ಸುತ್ತಾಡಿ ಬಂದ ನಂತರ ವೈವಿಧ್ಯಮಯ ಸ್ವಾದಿಷ್ಟಕರವಾದ ಆಹಾರವನ್ನು ಸೇವಿಸಬೇಕು ಎಂದರೆ ವಿ.ವಿ.ಪುರಂ, ಸಿಟಿಆರ್ ಮಲ್ಲೇಶ್ವರಂ, ಜಯನಗರ ಮುಂತಾದ ಸ್ಥಳಗಳಿಗೆ ನೀವು ಭೇಟಿ ನೀಡಬಹುದು. ಇಲ್ಲಿ ದಕ್ಷಿಣ ಭಾರತದ ಪಾಕಪದ್ಧತಿಗಳಿಂದ ಹಿಡಿದು ಉತ್ತರ ಭಾರತದ ಬೀದಿ ಆಹಾರದವರೆಗೆ ಎಲ್ಲವನ್ನು ಬಡಿಸುವ ಹಲವಾರು ಹೋಟೆಲ್ ಗಳಿವೆ.
Published by:Ashwini Prabhu
First published: